ಶಿಯೋಮಿ ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ವಾಚ್‌ ಬಿಡುಗಡೆ! 12 ದಿನಗಳ ಬ್ಯಾಟರಿ ಬ್ಯಾಕಪ್‌!

|

ಜನಪ್ರಿಯ ಸ್ಮಾರ್ಟ್‌ವಾಚ್‌ ಕಂಪೆನಿಗಳಲ್ಲಿ ಶಿಯೋಮಿ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಗಮನಸೆಳೆದಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ಬಿಡುಗಡೆ ಮಾಡಿದೆ. ಇದು 1.64 ಇಂಚಿನ ಅಮೋಲೆಡ್‌ ಟಚ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಜಿಪಿಎಸ್‌ ಅನ್ನು ಒಳಗೊಂಡಿದ್ದು, ನ್ಯಾವಿಗೇಷನ್‌ ಟ್ರ್ಯಾಕಿಂಗ್‌ ಅನ್ನು ಮಾಡಲಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 235mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 12 ದಿನಗಳ ಬ್ಯಾಕಪ್‌ ನೀಡಲಿದೆ. ಇದು 110ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಈ ವಾಚ್‌ ಹೃದಯ ಬಡಿತ ಮಾನಿಟರಿಂಗ್ ಮತ್ತು ರಕ್ತದ ಆಮ್ಲಜನಕ (SpO2) ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಬ್ಯಾಂಡ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ಫೀಚರ್ಸ್‌ ಹೇಗಿದೆ?

ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ಫೀಚರ್ಸ್‌ ಹೇಗಿದೆ?

ಸ್ಮಾರ್ಟ್‌ಬ್ಯಾಂಡ್‌ 7 ಪ್ರೊ ಸ್ಮಾರ್ಟ್ ವಾಚ್ 1.64 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 150ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಮತ್ತು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇ ಆಟೋಮ್ಯಾಟಿಕ್‌ ಬ್ರೈಟ್‌ನೆಸ್ ಸೆಟ್‌ಮಾಡುವುದಕ್ಕಾಗಿ ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಹೊಂದಿದೆ.

ಮಾನಿಟರಿಂಗ್

ಶಿಯೋಮಿ ಕಂಪೆನಿಯ ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮಾನಿಟರಿಂಗ್ ಮತ್ತು ರಕ್ತದ ಆಮ್ಲಜನಕ (SpO2) ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಹೊಂದಿದೆ. ಇದಲ್ಲದೆ ಸ್ಲೀಪ್‌ ಟ್ರ್ಯಾಕಿಂಗ್, ಮಹಿಳೆಯರ ಆರೋಗ್ಯ ಮೇಲ್ವಿಚಾರಣೆ, ಒತ್ತಡದ ಮೇಲ್ವಿಚಾರಣೆ ಸೇರಿದಂತೆ ಹಲವು ಆರೋಗ್ಯ ಮೇಲ್ವಿಚಾರಣೆ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 5ATM ವಾಟರ್‌ ಪ್ರೂಫ್‌ ಅನ್ನು ಕೂಡ ಹೊಂದಿದೆ. ಇದು ಆಂಡ್ರಾಯ್ಡ್‌ ಮತ್ತು iOS ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

ಶಿಯೋಮಿ

ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 7 ಪ್ರೊ ಸ್ಮಾರ್ಟ್‌ವಾಚ್‌ 235mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 12 ದಿನಗಳ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ನಿಮ್ಮ ರನ್ನಿಂಗ್‌ ಕೋರ್ಸ್ ಅನ್ನು ಟ್ರ್ಯಾಕ್ ಮಾಡಲು ಇಂಟರ್‌ಬಿಲ್ಟ್‌ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (GNSS) ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ ವಿಭಿನ್ನ ತೀವ್ರತೆಯೊಂದಿಗೆ 10 ಪ್ರೀ-ಲೋಡಿಂಗ್ ರನ್ನಿಂಗ್ ಕೋರ್ಸ್‌ಗಳೊಂದಿಗೆ ಬರುತ್ತದೆ. ಇದು 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ.

ಶಿಯೋಮಿ

ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 7 ಪ್ರೊ ಸ್ಮಾರ್ಟ್‌ವಾಚ್‌ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಯುರೋಪ್‌ನಲ್ಲಿ ಅಧಿಕೃತ ಕಂಪನಿ ಚಾನಲ್‌ಗಳ ಮೂಲಕ EUR 99 (ಅಂದಾಜು 8,000ರೂ.) ಆರಂಭಿಕ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ವಾಚ್‌ನ ಡಯಲ್‌ಗಳು ಲೈಟ್ ಗೋಲ್ಡ್ ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣದ ಆಯ್ಕೆಗಳನ್ನು ನೀಡುತ್ತದೆ. ಕಪ್ಪು, ನೀಲಿ, ಆಲಿವ್, ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ದೊರಯಲಿದೆ.

ಶಿಯೋಮಿ

ಇದಲ್ಲದೆ ಶಿಯೋಮಿ ಕಂಪೆನಿ ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಕೂಡ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 6.67 ಇಂಚಿನ ಕ್ರಿಸ್ಟಲ್ ರೆಸ್ (CrystalRes) ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Xiaomi Smart Band 7 Pro With 110+ Sports Modes Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X