ಕೇವಲ 2 ದಿನದಲ್ಲಿ ಮಾರಾಟವಾದ ಶಿಯೋಮಿ ಫೋನ್‌ಗಳು ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!

ಆನ್‌ಲೈನ್ ಸೇಲ್‌ನಲ್ಲಿ ಪ್ರತಿನಿಮಿಷಕ್ಕೆ ಶಿಯೋಮಿಯ 300 ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ.!

|

ಭಾರತದಲ್ಲಿ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬಿಸಿತುಪ್ಪಂದತೆ ಖರ್ಚಾಗುತ್ತಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಮ್ಮಿಕೊಂಡಿರುವ ಆಫರ್ ಸೇಲ್‌ಗಳಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ದಾಖಲೆ ಸೃಷ್ಟಿಸಿವೆ.!! ಹೌದು, ಭಾರತದಲ್ಲಿ ಇದೀಗ ಶಿಯೋಮಿ ನಂಬರ್ ಕಂಪೆನಿಯಾಗಿ ಹೊರಹೊಮ್ಮಿದ್ದು, ಇತರ ಮೊಬೈಲ್ ಕಂಪೆನಿಗಳು ಪೆಚ್ಚಾಗಿವೆ.!

ಫ್ಲಿಪ್‌ಕಾರ್ಟ್‌ನ ಬಿಗ್‌ಬಿಲಿಯನ್ ಡೇ ಹಾಗೂ ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್ ಆಫರ್‌ಗಳಲ್ಲಿ ಕೇವಲ ಎರಡು ದಿನಗಳಲ್ಲಿ ಶಿಯೋಮಿ ಇತಿಹಾಸದ ದಾಖಲೆ ಸೃಷ್ಟಿಸಿದ್ದು, ಈ ಆನ್‌ಲೈನ್ ಸೇಲ್‌ನಲ್ಲಿ ಪ್ರತಿನಿಮಿಷಕ್ಕೆ ಶಿಯೋಮಿಯ 300 ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ.!

ಚೀನಾ ಸ್ಮಾರ್ಟ್‌ಪೊನ್‌ಗಳ ಖರೀದಿ ಬೇಡ ಡನ್ನು ಸ್ಲೋಗನ್ ಎಲ್ಲೆಡೆ ಕೇಳಿಬರುತ್ತಿದ್ದರೆ, ಇತ್ತ ಶಿಯೋಮಿ ಮಾರಾಟ ಇನ್ನು ಹೆಚ್ಚಾಗುತ್ತಿದೆ.!!ಹಾಗಾದರೆ, ಎಷ್ಟು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ? ಅತಿ ಹೆಚ್ಚು ಮಾರಾಟವಾದ ಫೋನ್ ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1 ಮಿಲಿಯನ್ ಸ್ಮಾರ್ಟ್‌ಫೋನ್

1 ಮಿಲಿಯನ್ ಸ್ಮಾರ್ಟ್‌ಫೋನ್

ಫ್ಲಿಪ್‌ಕಾರ್ಟ್‌ನ ಬಿಗ್‌ಬಿಲಿಯನ್ ಡೇ ಹಾಗೂ ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್ ಆಫರ್‌ಗಳಲ್ಲಿ ಕೇವಲ ಎರಡು ದಿನಗಳಲ್ಲಿ ಶಿಯೋಮಿಯ 1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ.!! ಅಂದರೆ ಎರಡು ದಿನಗನಳಲ್ಲಿ 10 ಲಕ್ಷ ಶಿಯೋಮಿ ಫೋನ್‌ಗಳು ಮಾರಾಟವಾಗಿವೆ.!!

ಅತಿ ಹೆಚ್ಚು ಮಾರಾಟವಾದ ಫೋನ್?

ಅತಿ ಹೆಚ್ಚು ಮಾರಾಟವಾದ ಫೋನ್?

ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸೇಲ್‌ನಲ್ಲಿ ದಾಖಲೆ ನಿರ್ಮಾಣ ಮಾಡಿದ್ದು, ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿದೆ.!!

9 ರಲ್ಲಿ 8 ಶಿಯೋಮಿ!!

9 ರಲ್ಲಿ 8 ಶಿಯೋಮಿ!!

ಶಿಯೋಮಿ ಹೇಳಿದಹಾಗೆ ಅಮೆಜಾನ್‌ನಲ್ಲಿ ನಡೆದ ಸ್ಮಾರ್ಟ್‌ಫೋನ್‌ ಸೇಲ್‌ನಲ್ಲಿ, 9 ಸ್ಮಾರ್ಟ್‌ಫೋನ್ ಮಾರಾಟವಾದರೆ ಅದರಲ್ಲಿ 8 ಶಿಯೋಮಿ ಫೋನ್‌ಗಳು ಇದ್ದವು. ಇನ್ನು ಪ್ಲೀಪ್‌ಕಾರ್ಟ್‌ನಲ್ಲಿಯೂ ಸಹ ಶಿಯೋಮಿ ಮೊದಲನೇ ಸ್ಥಾನದಲ್ಲಿಯೇ ಮುಂದುವರೆದಿತ್ತು.!!

ಶೀಯೋಮಿ ಕೃತಜ್ಞತೆ!!

ಶೀಯೋಮಿ ಕೃತಜ್ಞತೆ!!

ಈ ಬಗ್ಗೆ ಶಿಯೋಮಿ ಆನ್‌ಲೈನ್ ಮಾರಾಟ ಮುಖ್ಯಸ್ಥ ಪ್ರತಿಕ್ರಿಯಿಸಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಶೀಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯರು ಒಪ್ಪಿದ್ದಾರೆ.!! ಶೀಯೋಮಿ ಅಭಿಮಾನಿಗಳಿಂದ ಸಿಕ್ಕಿರುವ ಅದ್ಭುತ ಬೆಂಬಲಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.!!

ಓದಿರಿ:ಪ್ಲೇಸ್ಟೋರ್‌ಗೆ ಬಂತು 'ಟೈಗರ್‌' ಆಪ್!.ನವರಾತ್ರಿಗೆ ಕ್ಯಾಬ್ ಸೇವೆ ಪಕ್ಕಾ!!

Best Mobiles in India

English summary
For two days, Xiaomi has been selling 300 smartphones every minute.to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X