Subscribe to Gizbot

ಶ್ಯೋಮಿಯಿಂದ ಶೀಘ್ರದಲ್ಲೇ ಎರಡು ಅದ್ಭುತ ಫೋನ್‌ಗಳು

Written By:

ಗುರುವಾರ ನವದೆಹಲಿಯಲ್ಲಿ ನಡೆಯಲಿರುವ 'ಗ್ಲೋಬಲ್ ಎಮ್ಐ ಫೋನ್ ಪ್ರೀಮಿಯರ್' ಈವೆಂಟ್‌ನಲ್ಲಿ ಶ್ಯೋಮಿ ಕಂಪೆನಿಯು ತನ್ನ ಎರಡು ಅದ್ಭುತ ಫೋನ್‌ಗಳನ್ನು ಹೊರತರುವ ನಿಟ್ಟಿನಲ್ಲಿದೆ. ಶ್ಯೋಮಿ ಎಮ್ಐ 4i ಅನ್ನು ಈ ಸಂದರ್ಭದಲ್ಲಿ ಕಂಪೆನಿ ಲಾಂಚ್ ಮಾಡಲಿದೆ. [ಓದಿರಿ: ಐದರ ಹರೆಯದ ಶ್ಯೋಮಿ ಮಾಡಿದ್ದಾದರೂ ಏನು?]

ಶ್ಯೋಮಿಯಿಂದ ಶೀಘ್ರದಲ್ಲೇ ಎರಡು ಅದ್ಭುತ ಫೋನ್‌ಗಳು

ಶ್ಯೋಮಿ ಹೊರತರಲಿರುವ ಈ ಎರಡೂ ಫೋನ್‌ಗಳು ದೀರ್ಘ ಬ್ಯಾಟರಿ ಬಾಳ್ವಿಕೆಯನ್ನು ಹೊಂದಲಿದ್ದು ಇದು ದೊಡ್ಡ ಫೋನ್ ಕೂಡ ಆಗಿರಬಹುದು ಎಂಬ ಗಾಳಿ ಸುದ್ದಿಯನ್ನು ಕೂಡ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ.

ಶ್ಯೋಮಿಯಿಂದ ಶೀಘ್ರದಲ್ಲೇ ಎರಡು ಅದ್ಭುತ ಫೋನ್‌ಗಳು

[ಓದಿರಿ: ಜಗತ್ತಿನ ಅತಿ ದುಬಾರಿ ಫೋನ್ ವರ್ಚು ಸಿಗ್ನೇಚರ್]

ಎರಡು ಬೇಯಿಸಿದ ಮೊಟ್ಟೆಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಕಂಪೆನಿ ಟ್ವೀಟ್ ಮಾಡಿದ್ದು ಮೊಟ್ಟೆಯ ಬಿಳಿ ಅಂತೆಯೇ ಹಳದಿಯನ್ನು ಪ್ರತ್ಯೇಕವಾಗಿಸಿದ್ದು ಇದರಿಂದ ಕಂಪೆನಿಯ ಎರಡೂ ಉತ್ಪನ್ನಗಳು ಪ್ರತ್ಯೇಕ ಗಾತ್ರದಲ್ಲಿ ಬರಲಿದೆ ಎಂಬ ಕಲ್ಪನೆಯನ್ನು ಬಳಕೆದಾರರಿಗೆ ನೀಡಿದೆ. [ಓದಿರಿ: ವಾಟ್ಸಾಪ್ ಗ್ರೂಪ್ ಚಾಟ್‌ನಲ್ಲಿ ಅನುಸರಿಸಬೇಕಾದ ನಿಯಮಗಳೇನು?]

ಶ್ಯೋಮಿಯಿಂದ ಶೀಘ್ರದಲ್ಲೇ ಎರಡು ಅದ್ಭುತ ಫೋನ್‌ಗಳು

ಇನ್ನು ಶ್ಯೋಮಿ ಎಮ್ಐ 4i ಆಂಡ್ರಾಯ್ಡ್ ಲಾಲಿಪಪ್ 5.0.2 ಅನ್ನು ಹೊಂದಿದ್ದು, 64 ಬಿಟ್ 1.65GHZ ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್, ಅಡ್ರೆನೊ 405 ಜಿಪಿಯು, 2ಜಿಬಿ RAM, 4.9 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ, 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೆ 4.8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಫೋನ್ 16 ಜಿಬಿ ಆಂತರಿಕ ಸಂಗ್ರಹವನ್ನು ಕೂಡ ಪಡೆದುಕೊಂಡಿದೆ.

English summary
Following its high-resolution display smartphone teaser on Friday, Xiaomi over the weekend posted two more teasers for the device expected to launch at the company's 'Global Mi Phone Premiere' event in New Delhi on Thursday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot