ಯಶಸ್ವಿ ಹಾರಾಟ ನಡೆಸಿದ 'Xpeng X2' ಫ್ಲೈಯಿಂಗ್ ಕಾರ್‌!..ಇದರ ವೇಗ ಎಷ್ಟು ಗೊತ್ತೆ?

|

ಇದು ಟೆಕ್ನಾಲಜಿ ಜಮಾನ, ಟೆಕ್ನಾಲಜಿ ಮುಂದುವರೆದಂತೆ ಎಲ್ಲಾ ವಲಯದಲ್ಲಿಯೂ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಇದಕ್ಕೆ ಆಟೋ ಮೊಬೈಲ್‌ ಕ್ಷೇತ್ರ ಕೂಡ ಹೊರತಾಗಿಲ್ಲ. ಈಗಾಗಲೇ ನವೀನ ತಂತ್ರಜ್ಞಾನದ ಅನೇಕ ವೆಹಿಕಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಮುಂದುವರೆದ ಭಾಗವಾಗಿ ಇತ್ತೀಚಿನ ದಿನಗಳಲ್ಲಿ 'ಫ್ಲೈಯಿಂಗ್‌ ಕಾರ್‌' ಪರಿಕಲ್ಪನೆ ಸಾಕಷ್ಟು ಸದ್ದು ಮಾಡ್ತಿದೆ. ರಸ್ತೆ ಸಂಚಾರ ದಟ್ಟಣೆಯಿಂದ ಪಾರಾಗಲು ಫ್ಲೈಯಿಂಗ್‌ ಕಾರ್‌ ಸೂಕ್ತ ಎನ್ನುವ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಿದೆ.

ಫ್ಲೈಯಿಂಗ್‌ ಕಾರ್‌

ಹೌದು, ಫ್ಲೈಯಿಂಗ್‌ ಕಾರ್‌ ಪರಿಕಲ್ಪನೆ ಇಂದಿನ ಜಮಾನದ ಹೊಸ ಆವಿಷ್ಕಾರವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಚೀನಾದ ಎಲೆಕ್ಟ್ರಾನಿಕ್‌ ವಾಹನ ತಯಾರಕ ಕಂಪೆನಿ ಎಕ್ಸ್‌ಪೆಂಗ್‌ ಹೊಸ ಪ್ಲೈಯಿಂಗ್‌ ಕಾರ್‌ ಅನ್ನು ತಯಾರಿಸಿದೆ. ಈ ಫ್ಲೈಯಿಂಗ್‌ ಕಾರ್‌ನ ಮೊದಲ ಸಾರ್ವಜನಿಕ ಹಾರಾಟವನ್ನು ದುಬೈನಲ್ಲಿ ನಡೆಸಲಾಗಿದೆ. ಹಾಗಾದ್ರೆ ಈ ಹೊಸ ಫ್ಲೈಯಿಂಗ್‌ ಕಾರ್‌ನ ವಿಶೇಷತೆ ಏನಿದೆ? ಇದರ ತೂಕ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲೈಯಿಂಗ್‌

ಎಲೆಕ್ಟ್ರಾನಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ನಿರ್ಮಿಸಿದ "ಫ್ಲೈಯಿಂಗ್‌ ಕಾರ್‌'' ಅನ್ನು ಎಕ್ಸ್‌ಪೆಂಗ್ ಎಕ್ಸ್ 2 'ಫ್ಲೈಯಿಂಗ್ ಕಾರ್' ಎಂದು ಹೆಸರಿಸಲಾಗಿದೆ. ಈ ಫ್ಲೈಯಿಂಗ್‌ ಕಾರ್‌ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ತನ್ನ ಮೊದಲ ಸಾರ್ವಜನಿಕ ಹಾರಾಟವನ್ನು ಮಾಡಿದೆ. ಇದು ಸದ್ಯದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಎಂಟ್ರಿ ನೀಡುವ ಸಾಧ್ಯತೆಯಿದೆ. ಇನ್ನು ಈ ಕಾರ್‌ನಲ್ಲಿ ಎರಡು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನವಾಗಿದೆ.

ಅತ್ಯವಶ್ಯಕ

ಈ ಪ್ಲೈಯಿಂಗ್‌ ಕಾರ್‌ ಪ್ಲೈಯಿಂಗ್‌ ಆಗಬೇಕಾದರೆ ಪ್ರೊಲ್ಲರ್‌ಗಳ ಸಹಾಯ ಅತ್ಯವಶ್ಯಕ. ಇದಕ್ಕಾಗಿ ಇದರಲ್ಲಿ ಒಟ್ಟು ಎಂಟು ಪ್ರೊಪೆಲ್ಲರ್‌ಗಳನ್ನು ಅಳವಡಿಸಲಾಗಿದೆ. ಅಂದರೆ ಈ ಕಾರ್‌ನ ಪ್ರತಿ ಮೂಲೆಯಲ್ಲಿ ಎರಡು ಪ್ರೊಪೆಲ್ಲರ್‌ಗಳನ್ನು ನೀಡಲಾಗಿದೆ. ಇನ್ನು ಈ ಪ್ಲೈಯಿಂಗ್‌ ಕಾರ್‌ ಪ್ರೀಮಿಯಂ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಅಲ್ಲದೆ ಫ್ಲೈಯಿಂಗ್‌ಗೆ ಅನುಕೂಲವಾಗುವಂತೆ ಏರ್‌ಫ್ರೇಮ್ ಪ್ಯಾರಾಚೂಟ್‌ನೊಂದಿಗೆ ಅಳವಡಿಸಲಾಗಿದೆ.

ದುಬೈನಿಂದ

ಸದ್ಯ ಸ್ಕೈಡೈವ್ ದುಬೈನಿಂದ ಟೇಕ್ ಆಫ್ ಆದ ಈ ಪ್ಲೈಯಿಂಗ್‌ ಕಾರ್ ತನ್ನ ಪ್ರಯೋಗಿಕ ಹಾರಾಟವನ್ನು ಈಗಾಗಲೇ ಮುಗಿಸಿದೆ. ಇದು ದುಬೈನಲ್ಲಿ ಸೋಮವಾರ ಮಾನವರಹಿತ, 90 ನಿಮಿಷಗಳ ಪ್ರಯೋಗಿಕ ಹಾರಾಟವನ್ನು ಮಾಡಿದೆ. ಖಲೀಜ್ ಟೈಮ್ಸ್ ವರದಿಯ ಪ್ರಕಾರ ಎಕ್ಸ್‌ಪೆಂಗ್‌ ಈ ವಾರದ ಆರಂಭದಲ್ಲಿ ವಿಶ್ವದ ಮೊದಲ ಪ್ಲೈಯಿಂಗ್‌ ಎಲೆಕ್ಟ್ರಿಕ್ ಟ್ಯಾಕ್ಸಿ ಇದಾಗಿದೆ. ಎರಡು ಆಸನಗಳ ವ್ಯವಸ್ಥೆ ಹೊಂದಿರುವ ಈ ಪ್ಲೈಯಿಂಗ್‌ ಕಾರು ಗರಿಷ್ಠ ಟೇಕ್‌ಆಫ್ ತೂಕ 760kg ಅಷ್ಟಿದೆ. ಅಲ್ಲದೆ ಇದರ ಖಾಲಿ ತೂಕ 560kg ಇರಲಿದೆ.

ಪ್ಲೈಯಿಂಗ್‌

ಎಕ್ಸ್‌ಪೆಂಗ್‌ನ ಪ್ಲೈಯಿಂಗ್‌ ಕಾರ್‌ 130kmph ಟಾಪ್ ಫ್ಲೈಟ್ ವೇಗವನ್ನು ಹೊಂದಿದೆ. ಇದು 35 ನಿಮಿಷಗಳ ಹಾರಾಟದ ಸಮಯವನ್ನು ಹೊಂದಿದ್ದು, ಅಲ್ಪಾವಧಿಯ ಪ್ರವಾಸಗಳಿಗೆ ಸೂಕ್ತವಾಗಿದೆ. ಈ ಪ್ಲೈಯಿಂಗ್‌ ಕಾರ್‌ ಅನ್ನು ಭವಿಷ್ಯದ ಪ್ಲೈಯಿಂಗ್‌ ಕಾರ್‌ಗಳಿಗೆ ಆಧಾರ ಎನ್ನಲಾಗಿದೆ. ವರದಿಯ ಪ್ರಕಾರ, ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಪ್ಲೈಯಿಂಗ್‌ ಕಾರುಗಳು ವಾಣಿಜ್ಯ ಬಳಕೆಗೆ ಲಭ್ಯವಾಗಬಹುದು.

ಫ್ಲೈಯಿಂಗ್

ಇನ್ನು ಫ್ಲೈಯಿಂಗ್ ಕಾರ್‌ಗಳ ಇತ್ತೀಚಿನ ಆವೃತ್ತಿಯೆಂದರೆ ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವೆಹಿಕಲ್ (eVTOL)ಆಗಿದೆ. ಇದು ಸ್ವಾಯತ್ತ ಹಾರಾಟದ ಸಾಮರ್ಥ್ಯಗಳು ಮತ್ತು ಬುದ್ಧಿವಂತ ವಿಮಾನ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. X2 ಅನ್ನು ಕಡಿಮೆ-ಎತ್ತರದ ನಗರಗಳಿಗಾಗಿ ನಿರ್ಮಿಸಲಾಗಿದೆ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಉತ್ಪಾದಿಸುವುದಿಲ್ಲ. ಅಲ್ಲದೆ ಭವಿಷ್ಯದಲ್ಲಿ ಫ್ಲೈಯಿಂಗ್‌ ಕಾರುಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಹೇಳಲಾಗ್ತಿದೆ.

Best Mobiles in India

Read more about:
English summary
Xpeng X2 'Flying Car' Completes First Public Flight in the United Arab Emirates

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X