2022ರಲ್ಲಿ ಟೆಕ್‌ ವಲಯದಿಂದ ಶಾಶ್ವತವಾಗಿ ಮರೆಯಾಗಿ ಹೋದ ಡಿವೈಸ್‌ಗಳಿವು!

|

ಸದ್ಯ ನಾವೆಲ್ಲರೂ 2022 ರ ಅಂತಿಮಘಟ್ಟದಲ್ಲಿ ನಾವಿದ್ದೇವೆ, ಇನ್ನೇನು ಕೆಲವೇ ದಿನಗಳಲ್ಲಿ 2023ಕ್ಕೆ ಕಾಲಿಡಲಿದ್ದೇವೆ. ಈ ಅವಧಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಏನೆಲ್ಲಾ ನಡೆದಿದೆ ಅನ್ನೊದನ್ನ ನೆನಪು ಮಾಡಿಕೊಳ್ಳುವುದು ಸಾಮಾನ್ಯ. ಎಲ್ಲಾ ವಲಯಗಳಂತೆ ಟೆಕ್‌ ವಲಯದಲ್ಲಿಯೂ ಕೂಡ ಸಾಕಷ್ಟು ಪ್ರಮುಖ ಘಟನೆಗಳು ನಡೆದಿದೆ. ಹೊಸ ಮಾದರಿಯ ಡಿವೈಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿ ಸಾಕಷ್ಟು ಸದ್ದು ಮಾಡಿವೆ. ಹಾಗೆಯೇ ಕೆಲವು ಡಿವೈಸ್‌ಗಳು ಶಾಶ್ವತವಾಗಿ ಬಂದ್‌ ಕೂಡ ಆಗಿವೆ.

ಕೊರೊನಾ

ಹೌದು, ಟೆಕ್‌ ವಲಯದಲ್ಲಿ 2022 ಪ್ರಮುಖ ವರ್ಷ ಅಂತಾನೇ ಹೇಳಬಹುದು. ಕೊರೊನಾ ಸಂಕಷ್ಟದಿಂದ ನಿಧಾನವಾಗಿ ಚೇತರಿಸಿಕೊಂಡ ಟೆಕ್‌ ಮಾರುಕಟ್ಟೆ ಎಂದಿನಂತೆ ತನ್ನ ಟ್ರ್ಯಾಕ್‌ಗೆ ಮರಳಿದೆ. ಇದೇ ಸಮಯದಲ್ಲಿ ಒಂದು ಕಾಲದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ, ಹಾಗೂ ಕಳೆದ ಕೆಲವರ್ಷಗಳಿಂದ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಕೆಲವು ಪ್ರಮುಖ ಡಿವೈಸ್‌ಗಳು ಶಾಶ್ವತವಾಗಿ ಮರೆಯಾಗುವುದಾಗಿ ಘೋಷಿಸಿಕೊಂಡಿವೆ. ಹಾಗಾದ್ರೆ ಟೆಕ್‌ ವಲಯದಿಂದ ಶಾಶ್ವತವಾಗಿ ಮರೆಯಾದ ಪ್ರಮುಖ ಡಿವೈಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಪಾಡ್ ಟಚ್

ಐಪಾಡ್ ಟಚ್

ಒಂದು ಕಾಲದಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಐಪಾಡ್‌ ಟಚ್‌ ಇನ್ಮುಂದೆ ಲಭ್ಯವಾಗುವುದಿಲ್ಲ ಅಂತಾ ಆಪಲ್‌ ಕಂಪೆನಿ ಇದೇ ವರ್ಷ ಘೋಷಣೆ ಮಾಡಿತು. 2001 ರಲ್ಲಿ ಸ್ಟೀವ್ ಜಾಬ್ಸ್ ಪರಿಚಯಿಸಿದ ಐಪಾಡ್ ಐಕಾನಿಕ್ ಮ್ಯೂಸಿಕ್ ಪ್ಲೇಯರ್, ಐಫೋನ್ ಪ್ರಾರಂಭವಾದಾಗ ಜನಪ್ರಿಯತೆಯ ಉತ್ತುಂಗಕ್ಕೇರಿತು. ಆದರೆ ನಂತರದ ದಿನಗಳಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. ಇನ್ನು ಐಪಾಡ್ ಟಚ್ ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಅನುಭವಿಸುವುದಕ್ಕೆ ಅವಕಾಶ ನೀಡುವ ಎಂಟ್ರಿ ಲೆವೆಲ್‌ ಮ್ಯೂಸಿಕ್‌ ಪ್ಲೇಯರ್‌ ಡಿವೈಸ್‌ ಆಗಿದೆ.

ಬ್ಲ್ಯಾಕ್‌ಬೆರಿ

ಬ್ಲ್ಯಾಕ್‌ಬೆರಿ

ಬ್ಲಾಕ್‌ಬೆರಿ ಈ ಹೆಸರನ್ನು ಹೇಳದೆ ಟೆಕ್‌ ವಲಯದ ಬಗ್ಗೆ ಮಾತನಾಡುವುದಕ್ಕೆ ಆಗೋದಿಲ್ಲ. ಒಂದು ಕಾಲದಲ್ಲಿ ಟೆಕ್‌ ಮಾರುಕಟ್ಟೆಯನ್ನು ಆಳಿದ್ದ ಬ್ಲ್ಯಾಕ್‌ಬೆರಿ ಕಂಪೆನಿ 2022ರಲ್ಲಿ ಶಾರ್ಶವತವಾಗಿ ಮಾಯಾವಾದ ಸಂಸ್ಥೆಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ ತನ್ನ ಡಿವೈಸ್‌ಗಳನ್ನು ರನ್‌ ಮಾಡುವ ಯಾವುದೇ ಸಾಫ್ಟ್‌ವೇರ್‌ ಕೂಡ ಲಭ್ಯವಿಲ್ಲ ಎಂದು ಘೊಷಣೆ ಕೂಡ ಮಾಡಿದೆ. ಇದರಿಂದ ಇನ್ಮುದೆ ಬ್ಲ್ಯಾಕ್‌ಬೆರಿ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ನೋಡುವುದಕ್ಕೆ ಸಾಧ್ಯವಾಗಿಲ್ಲ.

ಗೂಗಲ್ ಸ್ಟೇಡಿಯಾ

ಗೂಗಲ್ ಸ್ಟೇಡಿಯಾ

ಗೂಗಲ್‌ ಕಂಪೆನಿ ಇತ್ತೀಚಿಗೆ ಕ್ಲೌಡ್-ಆಧಾರಿತ ಗೇಮಿಂಗ್ ಸೇವೆಗಾಗಿ ಗೂಗಲ್‌ ಸ್ಟೇಡಿಯಾವನ್ನು ಪರಿಚಯಿಸಿತ್ತು. ಅಷ್ಟೇ ವೇಗದಲ್ಲಿ ಅದರ ಅಂತಿಮ ಕ್ರಿಯೆ ಕೂಡ ಆಗಿ ಹೋಗಿದೆ. ಅಂದರೆ ಗೇಮರ್‌ಗಳ ಅನುಕೂಲಕ್ಕಾಗಿ ಸಿದ್ದಪಡಿಸಿದ್ದ ಗೂಗಲ್‌ ಸ್ಟೇಡಿಯಾ ಜನರನ್ನು ಸೆಳೆಯುವಲ್ಲಿ ವಿಫಲವಾದ ಕಾರಣ ಅದನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಇದೇ ವರ್ಷ ಘೋಷಣೆಯನ್ನು ಮಾಡಿದೆ. ಇದರಿಂದ ಇನ್ಮುಂದೆ ಗೂಗಲ್‌ ಸ್ಟೇಡಿಯಾ ಲಭ್ಯವಾಗುವುದಿಲ್ಲ.

ಆಪಲ್ ವಾಚ್ ಸರಣಿ 3

ಆಪಲ್ ವಾಚ್ ಸರಣಿ 3

ಆಪಲ್‌ ಕಂಪೆನಿ ಇದೇ ವರ್ಷ ತನ್ನ ಮತ್ತೊಂದು ಡಿವೈಸ್‌ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿತು. ಅದುವೇ ಆಪಲ್ ವಾಚ್ ಸರಣಿ 3, ಹಾಗಂತ ಈ ಡಿವೈಸ್‌ ಮಾರುಕಟ್ಟೆಯಲ್ಲಿ ವಿಫಲವಾಗಿರಲಿಲ್ಲ. ಆದರೆ ವಾಚ್‌ಓಎಸ್ 9 ಆಪಲ್‌ ವಾಚ್‌ ಸರಣಿ 3 ಗೆ ಬೆಂಬಲ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಸ್ಟಾಪ್‌ ಮಾಡಲು ಮುಂದಾಯಿತು. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಇಂದಿನ ಜಮಾನಕ್ಕೆ ಸೂಕ್ತವಾದ ವಿನ್ಯಾಸವನ್ನು ಪಡೆದಿರಲಿಲ್ಲ ಅನ್ನೊದು ಕೂಡ ಮತ್ತೊಂದು ಕಾರಣವಾಗಿದೆ. ಸದ್ಯ ಆಪಲ್‌ ಕಂಪೆನಿ ತನ್ನ ಬಳಕೆದಾರರಿಗೆ ಹೊಸ ಜಮಾನದ ವಾಚ್‌ ಸರಣಿಯನ್ನು ಪರಿಚಯಿಸುತ್ತಾ ಬಂದಿರುವುದರಿಂದ ಇದು ಅಷ್ಟೇನೂ ಪರಿಣಾಮ ಬೀರಿಲ್ಲ ಎನ್ನಬಹುದಾಗಿದೆ.

Best Mobiles in India

English summary
Year end 2022: we goodbye to many loved gadgets including BlackBerry

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X