Just In
Don't Miss
- Lifestyle
ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್ಗೂ ಸಂಬಂಧವಿದೆ ಗೊತ್ತೆ?
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಈ ವರ್ಷ ಏನೆಲ್ಲಾ ತಂತ್ರಜ್ಞಾನ ಅಭಿವೃದ್ಧಿಯಾಗಿವೆ?... ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
2022 ನೇ ವರ್ಷ ಅಂತ್ಯಗೊಂಡು ಇನ್ನೇನು ಕೆಲವೇ ದಿನಗಳಲ್ಲಿ 2023 ಕ್ಕೆ ನಾವೆಲ್ಲರೂ ಕಾಲಿಡಲು ಸಿದ್ಧವಾಗುತ್ತಿದ್ದೇವೆ. ಆದರೆ, ಈ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದ್ದು, ಜನರಿಗೆ ಹಲವಾರು ಪ್ರಯೋಜನ ನೀಡಿವೆ. ಅದರಲ್ಲೂ ಕೊರೊನಾ ಸಂಕ್ರಾಮಿಕವು ಜನರನ್ನು ಹೆಚ್ಚು ತಂತ್ರಜ್ಞಾನದ ಕಡೆ ಮುಖ ಮಾಡುವಂತೆ ಮಾಡಿದೆ. ಈ ವರ್ಷದಲ್ಲಿ ಪ್ರಮುಖವಾಗಿ ಸದ್ದು ಮಾಡಿದ ವಿಷಯಗಳಲ್ಲಿ 5G ಸೇವೆ ಸಹ ಒಂದು.

ಹೌದು, ನಾವೆಲ್ಲರೂ ವರ್ಷಾಂತ್ಯದಲ್ಲಿದ್ದು, ಈ ವರ್ಷ ಘಟಿಸಿದ ಪ್ರಮುಖ ವಿಷಯಗಳ ಕಡೆ ಕಣ್ಣಾಡಿಸಿದರೆ ಸಾಕಷ್ಟು ಅಭಿವೃದ್ಧಿ ವಿಷಯಗಳು ನಮ್ಮ ಮುಂದೆ ಬರುತ್ತವೆ. ಈ ವರ್ಷ, ಫಾಕ್ಸ್‌ಕಾನ್ ಮತ್ತು ವೇದಾಂತದಂತಹ ತಯಾರಕರಿಂದ ಪ್ರಮುಖ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಭಾರತವು ತನ್ನ ‘ಮೇಕ್ ಇನ್ ಇಂಡಿಯಾ' ಕನಸಿನತ್ತ ಪ್ರಮುಖ ಹೆಜ್ಜೆ ಇರಿಸಿದೆ. ಆಪಲ್ ತನ್ನ ಐಫೋನ್ 14 ಸರಣಿಯ ಉತ್ಪಾದನಾ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಭಾರತದಲ್ಲಿ ತನ್ನದೇ ಆದ ಸೇವೆ ನೀಡಲು ಮುಂದಾಗಿದೆ. ಇದರ ಜೊತೆಗೆ ಟೆಲಿಕಾಂ ಆಪರೇಟರ್‌ಗಳಾದ ಜಿಯೋ ಮತ್ತು ಏರ್‌ಟೆಲ್ 5G ಸೇವೆ ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ರೆ ಇವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಭಾರತಕ್ಕೆ 5G ಪದಾರ್ಪಣೆ
5G ಸೇವೆ ಎಂಬುದು 2022 ರಲ್ಲಿ ಭಾರತ ಸಾಧಿಸಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ರ ಆರಂಭಿಕ ದಿನದಂದು 5G ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ಇದಾದ ನಂತರ ಜಿಯೋ ಹಾಗೂ ಏರ್‌ಟೆಲ್ ವಿವಿಧ ಮೆಟ್ರೋ ನಗರಗಳಲ್ಲಿ ಈ 5G ಸೇವೆ ನೀಡುತ್ತಿವೆ. ಹಾಗೆಯೇ ಮಾರ್ಚ್ 2024 ರ ವೇಳೆಗೆ ಏರ್‌ಟೆಲ್ ಎಲ್ಲಾ ಕಡೆ ವಿಸ್ತರಣೆ ಮಾಡಲು ಸಜ್ಜಾಗಿದೆ.

ಡಿಜಿಟಲ್ ರೂಪಾಯಿ
ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತೀಯ ರೂಪಾಯಿಯ ಡಿಜಿಟಲ್ ಪ್ರತಿರೂಪವಾಗಿ ಇ-ರೂಪಾಯಿ ಅಥವಾ ಡಿಜಿಟಲ್ ರೂಪಾಯಿಯನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಇ-ರೂಪಾಯಿಯು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯಾಗಿದ್ದು, ಇದನ್ನು ಆರ್‌ಬಿಐ ನಿರ್ವಹಿಸುತ್ತದೆ. ಇದು ಫಿಯೆಟ್ ಕರೆನ್ಸಿಯಂತೆಯೇ ವ್ಯಾಪಾರ ಮೌಲ್ಯವನ್ನು ಹೊಂದಿರುವುದು ವಿಶೇಷ. ಆದರೆ, ಇದು ರೂಪಾಯಿಯಿಂದ ಬೆಂಬಲಿತವಾಗಿರುವುದರಿಂದ, ಬಿಟ್‌ಕಾಯಿನ್ ಅಥವಾ ಡಾಗ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳಂತೆ ಅಸ್ಥಿರವಾಗಿಲ್ಲ.

ಡಿಜಿಟಲ್ ರೂಪಾಯಿಯಲ್ಲಿ ಎರಡು ವಿಧವಿದ್ದು, ಇ-ರೂಪಾಯಿಯು ಚಿಲ್ಲರೆ ವ್ಯಾಪಾರವನ್ನು ಎಲ್ಲಾ ಖಾಸಗಿ ವಲಯದ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವ್ಯವಹಾರಗಳು ಬಳಸಬಹುದಾಗಿದೆ. ಇ-ರೂಪಾಯಿ ಹೋಲ್ಸೇಲ್ ಅನ್ನು ಹಣಕಾಸು ಸಂಸ್ಥೆಗಳು ಮಾತ್ರ ಬಳಸಬಹುದಾಗಿದೆ.

ಜಾಗತಿಕ ಸ್ಥಾನದಲ್ಲಿ ಯುಪಿಐ
ಅಕ್ಟೋಬರ್ 2022 ರಲ್ಲಿ, ಯುಪಿಐ ಭಾರತದಲ್ಲಿ 12.11 ಟ್ರಿಲಿಯನ್ ಮೌಲ್ಯದ 7.3 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ವಿಸ್ತರಿಸುವುದರ ಜೊತೆಗೆ, ನೇಪಾಳ, ಭೂತಾನ್, ಯುಎಇ, ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಮತ್ತು ಲಕ್ಸೆಂಬರ್ಗ್, ಸ್ವಿಟ್ಜರ್ಲೆಂಡ್ ಮತ್ತು ಯುಕೆ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಯುಪಿಐ ಸೇವೆಯು ಜಾಗತಿಕವಾಗಿ ಲಭ್ಯವಾಗಿಸಿರುವುದು ವಿಶೇಷ.

ಐಫೋನ್ ಉತ್ಪಾದನೆ
ಭಾರತ ಸರ್ಕಾರವು 2020 ರಲ್ಲಿ PLI, SPECS ಮತ್ತು EMC 2.0 ಅನ್ನು ಒಳಗೊಂಡಿರುವ ವಿವಿಧ ಸಬ್ಸಿಡಿ ಯೋಜನೆಗಳನ್ನು ಪರಿಚಯಿಸಿದ್ದು, ಇದಾದ ನಂತರ ಭಾರತವು ತನ್ನ ಅರೆವಾಹಕ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಅಂದಿನಿಂದ, ಹಲವಾರು ಟೆಕ್ ಕಂಪನಿಗಳು ಭಾರತದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ. ಈ ಮೂಲಕ ಅಗತ್ಯ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಿವೆ. ಅದರಲ್ಲೂ ವೇದಾಂತ ಗ್ರೂಪ್‌ನಂತಹ ಸ್ಥಳೀಯ ತಯಾರಕರು ತಮ್ಮ ಸಾಮರ್ಥ್ಯಗಳನ್ನು ಮತ್ತಷ್ಟು ಅಪ್‌ಗ್ರೇಡ್ ಮಾಡಲು ಮತ್ತು ವಿಸ್ತರಿಸಲು ಪ್ರೇರೇಪಿಸಿದೆ.

ಅಂತೆಯೇ ಭಾರತದ ವೇದಾಂತ ಗ್ರೂಪ್ ತೈವಾನ್‌ನ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ಅರೆವಾಹಕಗಳನ್ನು ತಯಾರಿಸಲು ಜಂಟಿ ಉದ್ಯಮವನ್ನು ರಚಿಸಿದೆ. ನಂತರ, ಎರಡು ಕಂಪನಿಗಳು ಭಾರತದಲ್ಲಿ ಎರಡು ವರ್ಷಗಳಲ್ಲಿ ಡಿಸ್‌ಪ್ಲೇ ಮತ್ತು ಚಿಪ್ ಉತ್ಪನ್ನಗಳನ್ನು ತಯಾರಿಸಲು ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು $19.5 ಬಿಲಿಯನ್ ಹೂಡಿಕೆ ಮಾಡಿದೆ.

ಇದರ ಜೊತೆಗೆ ಆಪಲ್ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಅದರ ಉತ್ಪಾದನಾ ಸಾಮರ್ಥ್ಯಗಳನ್ನು ವೈವಿಧ್ಯಗೊಳಿಸಲು ಮುಂದಾಗಿದ್ದು, ಈ ಮೂಲಕ ಭಾರತದಲ್ಲೂ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದೆ. ಅಂತೆಯೇ ಫಾಕ್ಸ್‌ಕಾನ್ ಭಾರತದಲ್ಲಿ ಹೆಚ್ಚುವರಿ $500 ಮಿಲಿಯನ್ ಹೂಡಿಕೆ ಮಾಡಿದೆ.

ಭಾರತದ ಟೆಕ್ ಕಾನೂನುಗಳು
ಇದೆಲ್ಲದರ ಜೊತೆಗೆ ಭಾರತವು ತನ್ನ ಟೆಕ್ ಕಾನೂನುಗಳನ್ನು ನವೀಕರಿಸುವ ಕೆಲಸಕ್ಕೆ ಮುಂದಾಗಿದೆ. ಈ ವರ್ಷದ ಆರಂಭದಲ್ಲಿ ಭಾರತ ಸರ್ಕಾರವು ಸಂಸತ್ತಿನಲ್ಲಿ ಡೇಟಾ ಸಂರಕ್ಷಣಾ ಮಸೂದೆಯನ್ನು ಮಂಡಿಸಿತ್ತು. ಆದರೆ ಕೆಲವು ಕಾರಣಗಳಿಂದ ಅದನ್ನು ಹಿಂತೆಗೆದುಕೊಂಡಿತು. ಎಲ್ಲ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ತಿಂಗಳು ಮಸೂದೆಯನ್ನು ಮರು ಮಂಡಿಸಲಾಗಿದೆ. ಮರುಪರಿಚಯಿಸಲಾದ ಕರಡು ಮಸೂದೆಯು ಕಂಪೆನಿಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ವಿದೇಶದಲ್ಲಿರುವ ಕೆಲವು ದೇಶಗಳಿಗೆ ವರ್ಗಾಯಿಸಲು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಹೊಸ ಕರಡು ಮಸೂದೆಯು ಡೇಟಾ ಉಲ್ಲಂಘನೆಗೆ ಸಂಬಂಧಿಸಿದ ಘಟನೆಗಳಿಗೆ ಕಂಪೆನಿಗಳ ಮೇಲೆ ಹಣಕಾಸಿನ ದಂಡವನ್ನು ಸಹ ಹಾಕಲು ಮುಂದಾಗಿದೆ.

ಏಕರೂಪದ ಚಾರ್ಜಿಂಗ್
ಕಳೆದ ತಿಂಗಳು ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್‌ಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಕೇಂದ್ರ ಅಂತರ ಸಚಿವಾಲಯದ ಕಾರ್ಯಪಡೆ ಒಮ್ಮತಕ್ಕೆ ಬಂದಿದೆ. ಈ ಮೂಲಕ ಯುಎಸ್‌ಬಿ ಟೈಪ್-ಸಿ ಅನ್ನು ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಸಾರ್ವತ್ರಿಕ ಚಾರ್ಜಿಂಗ್ ಪೋರ್ಟ್ ಆಗಿ ಅಳವಡಿಸಿಕೊಳ್ಳುವ ಬಗ್ಗೆ ತೀರ್ಮಾನಿಸಿದೆ. ಈ ರೀತಿಯ ಕ್ರಮವನ್ನು ಈ ವರ್ಷದ ಆರಂಭದಲ್ಲಿ ಯುರೋಪಿಯನ್ ಯೂನಿಯನ್ ಪರಿಚಯಿಸಿತ್ತು. ಇನ್ನು ಈ ಹೊಸ ನಿಯಮದ ಪ್ರಕಾರ ಆಪಲ್‌ನಂತಹ ಕಂಪೆನಿಗಳಿಗೆ ಸಾರ್ವತ್ರಿಕ ಚಾರ್ಜಿಂಗ್‌ಗೆ ಬದಲಾಗುವಂತೆ ತಿಳಿಸಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470