ಹತ್ತು ಲಕ್ಷ ಫೇಸ್‌ಬುಕ್‌ ಲೈಕ್‌: ಅಳಿಯನಿಗೆ ಮಾವನಿಂದ ಡಿಮ್ಯಾಂಡ್‌

By Ashwath
|

ಮದುವೆಯ ಸಂದರ್ಭದಲ್ಲಿ ವರ ಅಥವಾ ವಧುವಿನ ಕಡೆಯವರು ಪರಸ್ಪರ ತಮಗೆ ನಿಗದಿಪಡಿಸಿದ ಪ್ರಮಾಣದ ಹಣವನ್ನು ನೀಡಿ ಮದುವೆಯಾಗುವುದು ಸಾಮಾನ್ಯ. ಆದರೆ ದೂರದ ಯೆಮೆನ್‌ಲ್ಲಿ ಮಾವನೊಬ್ಬ ತನ್ನ ಮಗಳನ್ನು ಮದುವೆಯಾಗುವ ಅಳಿಯನಿಗೆ ವಧುದಕ್ಷಿಣೆಯ ಬದಲಾಗಿ ತನ್ನ ಫೇಸ್‌ಬುಕ್‌ ಪೇಜ್‌‌ಗೆ ಹತ್ತುಲಕ್ಷ ಲೈಕ್‌ಗಳನ್ನು ಸೃಷ್ಟಿಸಿ ಕೊಡಬೇಕೆಂಬ ವಿಶೇಷವಾದ ಬೇಡಿಕೆಯನ್ನು ಇಟ್ಟಿದ್ದಾನೆ.

ಯೆಮೆನ್‌ನಲ್ಲಿ ವಧು ದಕ್ಷಿಣೆ ಪ್ರಮಾಣ ಹೆಚ್ಚಾಗಿದ್ದು,ಕೆಲವು ಯುವಕರು ಹಣ ಕೊಡಲು ಸಾಧ್ಯವಾಗದೇ ಮದುವೆಯಾಗುತ್ತಿಲ್ಲ.ಈ ಕಾರಣಕ್ಕಾಗಿ ಯೆಮೆನ್‌‌ ಜನರಲ್ಲಿ ವಧು ದಕ್ಷಿಣೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ವಿಶೇಷ ವಧುದಕ್ಷಿಣೆಯ ಬೇಡಿಕೆಯನ್ನು ಸಲ್ಲಿಸಿದ್ದೇನೆ ಮಾವ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಹತ್ತು ಲಕ್ಷ ಫೇಸ್‌ಬುಕ್‌ ಲೈಕ್‌: ಅಳಿಯನಿಗೆ ಮಾವನಿಂದ ಡಿಮ್ಯಾಂಡ್‌
ಮಾವನ ಬೇಡಿಕೆಗೆ ಭಾವೀ ಅಳಿಯ ಒಪ್ಪಿದ್ದು ಮಾವನ ಫೇಸ್‌ಬುಕ್‌ ಪೇಜ್‌ನ್ನು ಶೇರ್‌ ಮಾಡಲು ಆರಂಭಿಸಿದ್ದಾನೆ.ಈಗಾಗಲೇ ಮಾವನ ಫೇಸ್‌ಬುಕ್‌ ಪೇಜ್‌ನ್ನು ಮೂವತ್ತು ಸಾವಿರ ಅಧಿಕ ಮಂದಿ ಲೈಕ್‌ ಮಾಡಿ ಫಾಲೋ ಮಾಡುತ್ತಿದ್ದಾರೆ.

ಈ ಹೊಸ ಸುದ್ದಿ ಈಗ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದು ಅಳಿಯನಿಗೆ ಸಹಾಯ ಮಾಡಿ,ಹೊಸ ಡಿಜಿಟಲ್‌ ವಧು ದಕ್ಷಿಣೆಯ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಜನ ಈಗ ಮಾವನ ಫೇಸ್‌ಬುಕ್‌ ಪೇಜ್‌ನ್ನು ಫಾಲೋ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ ಬಳಕೆ ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X