ದೇಶದಲ್ಲಿ ನೋಟ್ ಬ್ಯಾನ್ ನಂತರ ಪರಿಸ್ಥಿತಿಗಳು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಆಧ್ಯತೆ ದೊರೆತಿದೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಕೆರೆನ್ಸಿ ಜಪ ಜೋರಾಗಿದ್ದು, ಇದೇ ಮಾದರಿಯಲ್ಲಿ ATM ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ATM ಬಳಕೆದಾರರಿಗೆ ಶೀಘ್ರವೇ ಹೊಸ ಮಾದರಿಯ ಸೇವೆಯೂ ಲಭ್ಯವಿರಲಿದೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಎಂಡ್ ಸೇಲ್: ಟಿವಿ, ಪೋನ್ ಭಾರೀ ಕಡಿಮೆ ಬೆಲೆಗೆ..!
ಸದ್ಯ ದೇಶದ ಎಲ್ಲಾರ ಬಳಿಯೂ ATM ಕಾರ್ಡ್‌ಗಳನ್ನು ನೋಡಬಹುದಾಗಿದೆ. ಈ ಹಿನ್ನಲೆಯಲ್ಲಿ ದೇಶದ ಜನರಿಗೆ ಇನ್ಶೂರೆನ್ಸ್ ಸೇವೆಯನ್ನು ಮತ್ತಷ್ಟು ಸುಲಭವಾಗಿ ದೊರೆಕಿಸುವ ಸಲುವಾಗಿ ATM ಗಳಲ್ಲೇ ಇನ್ಸೂರೆನ್ಸ್ ಲಭ್ಯವಿರಲಿದೆ ಎನ್ನಲಾಗಿದೆ. ಇದಕ್ಕಾಗಿ ATM ಮಿಷನ್‌ಗಳು ಬದಲಾಗಲಿವೆ.
ಪ್ರತಿ ಬ್ಯಾಂಕ್‌ನಿಂದಲೂ ಇನ್ಸೂರೆನ್ಸ್:
ಈಗಾಗಲೇ ಎಲ್ಲಾ ಬ್ಯಾಂಕ್‌ಗಳು ಇನ್ಸೂರೆನ್ಸ್ ಸೇವೆಯನ್ನು ನೀಡುತ್ತಿದೆ. ಇದರಲ್ಲಿಯೂ ರುಪೇ ಕಾರ್ಡ್ ಬಳಕೆದಾರರಿಗೆ ಶೀಘ್ರವೇ ATM ಗಳಲ್ಲೇ ಇನ್ಸೂರೆನ್ಸ್ ಲಭ್ಯವಿರಲಿದೆ ಎನ್ನಲಾಗಿದೆ. ಇದರಿಂದಾಗಿ ದೇಶದಲ್ಲಿ ಇನ್ಸೂರೆನ್ಸ್ ಸೇವೆಯೂ ಮತ್ತಷ್ಟು ಸುಲಭವಾಗಲಿದೆ.
ಸೇವಿಂಗ್ಸ್ ಆಕೌಂಟ್ ಒಪನ್ ಮಾಡಬಹುದು:
ಇದಲ್ಲದೇ ಶೀಘ್ರವೇ ಕೆಲವು ಬ್ಯಾಂಕ್‌ಗಳು ಎಟಿಎಂ ನಲ್ಲಿಯೇ ಸೇವಿಂಗ್ಸ್ ಆಕೌಂಟ್ ಅನ್ನು ತೆರೆಯಬಹುದಾಗಿದೆ. ಈಗಾಗಲೇ ಸೇವೆಯೂ ಲಭ್ಯವಿದೆ ಎನ್ನಲಾಗಿದೆ. ಇದರಿಂದ ಬ್ಯಾಂಕಿಂಗ್ ವ್ಯವಹಾರ ಮತ್ತಷ್ಟು ಸುಲಭವಾಗಲಿದೆ.
ಕೆಲವು ಬ್ಯಾಂಕ್‌ಗಳಿಂದ ಲೋನ್:
ಇದಲ್ಲದೇ ಕೆಲವು ಬ್ಯಾಂಕ್‌ಗಳು ತಮ್ಮ ಎಟಿಎಂ ಮಿಷನ್‌ಗಳಲ್ಲಿ ಲೋನ್ ನೀಡುವ ಆಲೋಚನೆಯೂ ಮಾಡಿವೆ. ಇದಕ್ಕಾಗಿ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಶೀಘ್ರವೇ ಎಟಿಎಂಗಳಲ್ಲೇ ಲೋನ್ ದೊರೆಯಲಿದೆ.
ಡಿಜಿಟಲ್ ವ್ಯವಹಾರಕ್ಕೆ ವೇಗ:
ದೇಶದಲ್ಲಿ ಡಿಜಿಟಲ್ ವ್ಯವಹಾರವೂ ದಿನೇ ದಿನೇ ಹೆಚ್ಚಿನ ವೇಗವನ್ನು ಪಡೆದುಕೊಳ್ಳಲಿದ್ದು, ಈ ಹೊಸ ಸೇವೆಗಳು ಡಿಜಿಟಲ್ ವ್ಯವಹಾರಕ್ಕೆ ವೇಗವನ್ನು ನೀಡಲಿದೆ ಎನ್ನಲಾಗಿದೆ. ಮತ್ತಷ್ಟು ಹೊಸ ಸೇವೆಗಳು ಬ್ಯಾಂಕ್‌ಗಳಿಂದ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.