ಬಳಕೆದಾರರಿಗೆ ಲೈವ್ ಲೊಕೇಶನ್ ಫೀಚರ್ಸ್‌ ಪರಿಚಯಿಸಿದ ಸ್ನ್ಯಾಪ್‌ಚಾಟ್!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ನ್ಯಾಪ್‌ಚಾಟ್ ಕೂಡ ಒಂದು. ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ತನ್ನ ವೈವಿಧ್ಯಮಯ ಫೀಚರ್ಸ್‌ಗಳ ಮೂಲಕ ಇತರ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತಾತ್ಕಾಲಿಕ ಲೈವ್ ಲೊಕೇಶನ್ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಸ್ನ್ಯಾಪ್‌ಚಾಟ್‌ನಲ್ಲಿ ತಮ್ಮ ಲೈವ್ ಲೊಕೇಶನ್ ಅನ್ನು ಸ್ನೇಹಿತರೊಂದಿಗೆ ಶೇರ್‌ ಮಾಡಲು ಅವಕಾಶ ಸಿಗಲಿದೆ. ಈ ಫೀಚರ್ಸ್‌ ಜಾಗತಿಕವಾಗಿ ಎಲ್ಲಾ ಸ್ನ್ಯಾಪ್‌ಚಾಟ್ ಬಳಕೆದಾರರಿಗೆ ಲಭ್ಯವಾಗಲಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ ಲೋಕೇಶನ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಸ್ನ್ಯಾಪ್‌ಚಾಟ್‌ ಬಳಕೆದಾರರು ತಮ್ಮ ರಿಯಲ್‌-ಟೈಂ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ಲೈವ್ ಲೊಕೇಶನ್‌ ಶೇರ್‌ ಈಗಾಗಲೇ 2017 ರಿಂದ ಲಭ್ಯವಿರುವ ಸ್ನ್ಯಾಪ್‌ ಮ್ಯಾಪ್‌ ಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಪರಿಚಯಿಸಿರುವ ಹೊಸ ಲೈವ್‌ ಲೊಕೇಶನ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಲೈವ್‌ ಲೊಕೇಶನ್‌ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮ ಲೈವ್ ಲೊಕೇಶನ್‌ ಶೇರ್‌ ಮಾಡಬಹುದು. ಲೊಕೇಶನ್‌ ಅಪ್ಡೇಟ್‌ ಅನ್ನು 15 ನಿಮಿಷಗಳಿಂದ ಎಂಟು ಗಂಟೆಗಳವರೆಗೆ ಸ್ನೇಹಿತರೊಂದಿಗೆ ಶೇರ್‌ ಮಾಡಲು ಅವಕಾಶ ನೀಡಿದೆ. ಈ ಫೀಚರ್ಸ್‌ ವೈಯಕ್ತಿಕ ಆಧಾರದ ಮೇಲೆ ಸ್ನೇಹಿತರ ನಡುವೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಲೈವ್ ಲೊಕೇಶನ್‌ ಪ್ಲಾಟ್‌ಫಾರ್ಮ್‌ನಲ್ಲಿ ಇಡೀ ಕಮ್ಯೂನಿಟಿ ಗೋಚರಿಸುವುದಿಲ್ಲ. ಬದಲಿಗೆ ಅಪ್ಲಿಕೇಶನ್‌ನಿಂದ ನೀವು ಆಯ್ಕೆ ಮಾಡಿದ ಸ್ನೇಹಿತರ ಜೊತೆಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ.

ಸ್ನ್ಯಾಪ್‌ಚಾಟ್‌ನಲ್ಲಿ

ಇನ್ನು ನೀವು ಸ್ನ್ಯಾಪ್‌ಚಾಟ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಶೇರ್‌ ಮಾಡುವ ಮೊದಲು ನೀವು ಸ್ನ್ಯಾಪ್‌ಚಾಟ್‌ನಲ್ಲಿ ಸ್ನೇಹಿತರಾಗಿರಬೇಕು. ಇದಲ್ಲದೆ, ಬಳಕೆದಾರರು ಮೊದಲ ಬಾರಿಗೆ ಲೈವ್ ಲೊಕೇಶನ್‌ ಫೀಚರ್ಸ್‌ ಅನ್ನು ಪ್ರವೇಶಿಸಿದಾಗ ಸ್ನ್ಯಾಪ್‌ಚಾಟ್‌ ಪಾಪ್-ಅಪ್ ವಿಂಡೋವನ್ನು ತೋರಿಸುತ್ತದೆ. ಲೈವ್ ಲೊಕೇಶನ್ ನಿರ್ದಿಷ್ಟವಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬಕ್ಕೆ ಮೀಸಲಾಗಿದೆ ಎಂದು ಹೇಳಲಾಗಿದೆ. ರಿಯಲ್‌ ಟೀಂ ಲೊಕೇಶನ್‌ ಶೇರ್‌ನಿಂದಾಗಿದೆ ಉದ್ಭವಿಸಬಹುದಾದ ಗೌಪ್ಯತೆ ಸಮಸ್ಯೆಗಳನ್ನು ತಪ್ಪಿಸುವುದು ಇಲ್ಲಿನ ಉದ್ದೇಶವಾಗಿದೆ.

ಸ್ನ್ಯಾಪ್‌ಚಾಟ್‌ನಲ್ಲಿ ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ಸ್ನ್ಯಾಪ್‌ಚಾಟ್‌ನಲ್ಲಿ ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ಸ್ನ್ಯಾಪ್‌ಚಾಟ್‌ನಲ್ಲಿ ನೀವು ರಿಯಲ್‌ ಟೈಂನಲ್ಲಿ ನಿಮ್ಮ ಲೊಕೇಶನ್‌ ಶೇರ್‌ ಮಾಡಲು ಬಯಸುವ ನಿಮ್ಮ ಸ್ನೇಹಿತರ ಪ್ರೊಫೈಲ್‌ಗೆ ಹೋಗುವ ಮೂಲಕ ಲೈವ್ ಲೊಕೇಶನ್‌ ಶೇರ್‌ ಮಾಡಬಹುದು. ಒಮ್ಮೆ ನೀವು ನಿಮ್ಮ ಸ್ನೇಹಿತರ ಪ್ರೊಫೈಲ್ ಅನ್ನು ತೆರೆದ ನಂತರ, ಮೈ ಲೈವ್ ಲೊಕೇಶನ್‌ ಶೇರ್‌ ಆಯ್ಕೆಯನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ. ಲೊಕೇಶನ್‌ ಶೇರ್‌ ಬಗ್ಗೆ ಸ್ನ್ಯಾಪ್‌ಚಾಟ್‌ ನಿಮಗೆ ಪಾಪ್-ಅಪ್ ಅನ್ನು ತೋರಿಸುತ್ತದೆ. ಇದರಲ್ಲಿ ನೀವು ಸೌಂಡ್ಸ್ ಟ್ಯಾಪ್ ಮಾಡಬಹುದು. ನಂತರ ನಿಮ್ಮ ಲೈವ್ ಸ್ಥಳವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನೀವು ಬಯಸುವ ಸಮಯದ ಚೌಕಟ್ಟನ್ನು ಆಯ್ಕೆಮಾಡಬೇಕಾಗುತ್ತದೆ. ಈ ಫೀಚರ್ಸ್‌ ವೈಯಕ್ತಿಕ ಆಧಾರದ ಮೇಲೆ ಸ್ನೇಹಿತರ ನಡುವೆ ಮಾತ್ರ ಕಾರ್ಯನಿರ್ವಹಿಸುವುದರಿಂದ, ನಿಮ್ಮ ಲೈವ್ ಲೊಕೇಶನ್‌ ಅನ್ನ ಒಂದೇ ಬಾರಿಗೆ ಹಲವು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಿಮಗೆ ಅವಕಾಶವಿರುವುದಿಲ್ಲ.

ಸ್ನ್ಯಾಪ್‌ಚಾಟ್‌

ಸದ್ಯ ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಹೊಸ ತಾತ್ಕಾಲಿಕ ಲೈವ್ ಲೊಕೇಶನ್ ಫೀಚರ್ಸ್‌ ಈಗಾಗಲೇ ಲಭ್ಯವಿರುವ ಸ್ನ್ಯಾಪ್ ಮ್ಯಾಪ್‌ ಫೀಚರ್ಸ್‌ನ ವಿಸ್ತರಣೆಯಾಗಿದೆ. ಸ್ನ್ಯಾಪ್ ಮ್ಯಾಪ್ ಫೀಚರ್ಸ್‌ ಬಳಕೆದಾರರು ಅಪ್ಲಿಕೇಶನ್ ತೆರೆದಾಗ ಮಾತ್ರ ಲೊಕೇಶನ್‌ ಮಾಹಿತಿಯನ್ನು ಅಪ್ಡೇಟ್‌ ಮಾಡಲಿದೆ. ಇದೀಗ ಸ್ನ್ಯಾಪ್‌ಚಾಟ್‌ನಲ್ಲಿನ ತಾತ್ಕಾಲಿಕ ಲೈವ್ ಲೊಕೇಶನ್ ಫೀಚರ್ಸ್‌ ವಾಟ್ಸಾಪ್‌ ಲೊಕೇಶನ್‌ ಫೀಚರ್ಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
you can now share live locations to user on snapchat

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X