ಟ್ರೂಕಾಲರ್‌ ಆಪ್‌ ಬಳಕೆ ಇನ್ಮುಂದೆ ಅನಗತ್ಯ; ಟ್ರಾಯ್‌ ಘೋಷಿಸಿದೆ ಹೊಸ ಯೋಜನೆ

|

ಕೆಲವು ದಿನಗಳ ಹಿಂದಷ್ಟೇ ಟ್ರೂಕಾಲರ್‌ ಬಗ್ಗೆ ಅಪಸ್ವರ ಕೇಳಿ ಬಂದಿದ್ದವು. ಅದರಂತೆ ಆಪ್‌ ಬಳಕೆದಾರರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎನ್ನುವ ಗಂಭೀರ ಆರೋಪ ಸಹ ಇದ್ದು, ಈ ಎಲ್ಲಾ ಬೆಳವಣಿಗೆ ನಡುವೆ ಟ್ರಾಯ್‌ (TRAI) ನೂತನ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆ ಜಾರಿಯಾದರೆ ಟ್ರೂಕಾಲರ್‌ ರೀತಿಯ ಆಪ್‌ಗಳ ಅವಶ್ಯಕತೆ ಇರುವುದಿಲ್ಲ.

ಟ್ರಾಯ್ ಸಂಸ್ಥೆ

ಹೌದು, ಟ್ರಾಯ್ ಸಂಸ್ಥೆಯು ವಿವಿಧ ಹೊಸ ಉಪಕ್ರಮಗಳನ್ನು ನಿರಂತರವಾಗಿ ಪರಿಚಯಿಸಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಶೀಘ್ರದಲ್ಲೇ ಟ್ರೂಕಾಲರ್‌ ಶೈಲಿಯ ಕೆಲಸಕ್ಕೆ ಮುಂದಾಗಲಿದೆ. ಅಂದರೆ, ಕರೆ ಮಾಡಿದವರ ಮಾಹಿತಿಯನ್ನು ಕರೆ ಸ್ವೀಕರಿಸುವವರಿಗೆ ತೋರಿಸಲಾಗುತ್ತದೆ. ಈ ರೀತಿಯ ಫೀಚರ್ಸ್‌ ಟ್ರಾಯ್ ನಿಂದಲೇ ಜಾರಿಯಾದರೆ ಖಂಡಿತಾ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಆಗಲಿದೆ. ಹಾಗಿದ್ರೆ, ಇದರ ಇನ್ನಷ್ಟು ವಿವರವನ್ನು ಇಲ್ಲಿ ನೋಡೋಣ.

ಶೀಘ್ರದಲ್ಲೇ ಜಾರಿ

ಶೀಘ್ರದಲ್ಲೇ ಜಾರಿ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI) ಈ ಸಂಬಂಧ ಚರ್ಚೆ ನಡೆಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ಶೀಘ್ರದಲ್ಲೇ ಫೋನ್‌ನ ಡಿಸ್‌ಪ್ಲೇನಲ್ಲಿ ಕರೆ ಮಾಡುವವರ ಹೆಸರನ್ನು ಪ್ರದರ್ಶಿಸಲಾಗುತ್ತದೆ, ಅದೂ ಸಹ ನಿಖರವಾಗಿ.

ಬೇರೆ ಆಪ್ ಬೇಕಾಗಿಲ್ಲ

ಬೇರೆ ಆಪ್ ಬೇಕಾಗಿಲ್ಲ

ಟ್ರಾಯ್ ನ ಈ ಸೇವೆ ಎಲ್ಲರಿಗೂ ಲಭ್ಯವಾದರೆ ಇನ್ಮುಂದೆ ನಿಮ್ಮ ಫೋನ್‌ನಲ್ಲಿ ಟ್ರೂಕಾಲರ್‌ ಸೇರಿದಂತೆ ಇತರೆ ಯಾವ ಆಪ್‌ಗಳನ್ನೂ ಇನ್‌ಸ್ಟಾಲ್‌ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ನೀವು ಬಳಕೆ ಮಾಡುವ ಸಿಮ್‌ ಮೂಲಕವೇ ಯಾರು ಕರೆ ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ಟ್ರಾಯ್ ಕೇವಲ ಕರೆ ಮಾಡಿದವರ ಮಾಹಿತಿಯನ್ನಷ್ಟೇ ನೀಡದೆ ಬದಲಾಗಿ ಫೋನ್‌ಗೆ ಬರುವ ಅನಗತ್ಯ ಕರೆಗಳು ಹಾಗೂ ವಂಚನೆ ಕರೆಗಳನ್ನು ಸುಲಭವಾಗಿ ಗುರುತಿಸಿ ಅದನ್ನು ನಿಯಂತ್ರಿಸುವ ಕೆಲಸ ಮಾಡುತ್ತದಂತೆ. ಈ ಮೂಲಕ ಬಳಕೆದಾರರು ವಂಚನೆ ಪ್ರಕರಣಕ್ಕೆ ಸಿಲುಕುವುದನ್ನು ತಪ್ಪಿಸುವ ಕೆಲಸವನ್ನೂ ಸಹ ಮಾಡಲಿದೆ.

ನಿಮಗೆ ಸಾಲ ಬೇಕೆ...

ನಿಮಗೆ ಸಾಲ ಬೇಕೆ...

ಬಹುಪಾಲು ಜನರು ನಿಮಗೆ ಸಾಲ ಬೇಕೇ ಎಂಬ ಕರೆಯನ್ನು ಸ್ವೀಕರಿಸಿರುತ್ತಾರೆ. ಈ ಕರೆಗಳು ಗ್ರಾಹಕರನ್ನು ಎಷ್ಟು ಮೋಸಗೊಳಿಸುತ್ತವೆ ಎಂದರೆ ಇದೊಂದು ದೊಡ್ಡ ಜಾಲವಾಗಿ ಮಾರ್ಪಟ್ಟಿದೆ. ಸಾಲ ಏನೋ ಪಡೆದುಕೊಂಡರೂ ಆನಂತರ ನೀಡುವ ಕಿರುಕುಳಕ್ಕೆ ಅದೆಷ್ಟೋ ಜನರು ಬಲಿಯಾಗಿರುವುದು ತಿಳಿದಿರುವ ಸಂಗತಿ. ಈ ಪ್ರಕರಣವನ್ನು ಟ್ರಾಯ್ ವಿಶೇಷವಾಗಿ ಪರಿಶೀಲಿಸಿದ್ದು, ಇಂತಹ ಕರೆಗಳಿಂದ ದೂರ ಇರುವಂತೆ ಸಹಾಯ ಮಾಡಲಿದೆ.

ಟ್ರೂಕಾಲರ್ ಮೇಲಿನ ಆರೋಪ ಏನು?

ಟ್ರೂಕಾಲರ್ ಮೇಲಿನ ಆರೋಪ ಏನು?

ಪ್ರಮುಖವಾಗಿ ಬಹುಪಾಲು ಬಳಕೆದಾರರು ಸದ್ಯಕ್ಕೆ ತಮ್ಮ ಫೋನ್‌ಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟ್ರೂಕಾಲರ್ ಆಪ್‌ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಹಾಗೆಯೇ ಇದೇ ರೀತಿಯ ಸೇವೆಯನ್ನು ಕಾಲ್ ಆಪ್‌, ಶೋ ಕಾಲರ್‌ ಸೇರಿದಂತೆ ಇನ್ನಿತರೆ ಆಪ್‌ಗಳು ಈ ಸೇವೆ ನೀಡುತ್ತಿದೆ. ಆದರೆ, ಟ್ರಾಯ್‌ ಈ ಫೀಚರ್ಸ್‌ ಪರಿಚಯಿಸಿದರೆ ಈ ಎಲ್ಲಾ ಆಪ್‌ಗಳಿಗೂ ಗೇಟ್‌ ಪಾಸ್ ಸಿಗಲಿದೆ.

ಈ ಆಪ್‌ಗಳಲ್ಲಿದೆ ಹಲವು ಸಮಸ್ಯೆ

ಈ ಆಪ್‌ಗಳಲ್ಲಿದೆ ಹಲವು ಸಮಸ್ಯೆ

ಆದಾಗ್ಯೂ, ಈ ರೀತಿಯ ಅಪ್‌ಗಳಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿವೆ. ಈ ಎಲ್ಲಾ ಆಪ್‌ಗಳಲ್ಲಿ ನಿಖರ ಡೇಟಾ ಲಭ್ಯವಾಗುವುದಿಲ್ಲ. ಅದರಲ್ಲೂ ಕೆಲವು ಆಪ್‌ಗಳನ್ನು ನಿಮ್ಮ ಫೋನ್ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡುತ್ತಲೇ ಇರುತ್ತವೆ. ಅದರಲ್ಲಿ ಪ್ರಮುಖವಾದುದು ಟ್ರೂಕಾಲರ್‌ ಎನ್ನಲಾಗಿದೆ. ನಿಮಗೆ ಏನಾದರೂ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡರೆ ಅಥವಾ ಬೇರೆ ಖಾತೆಯಿಂದ ನಿಮ್ಮ ಖಾತೆಗೆ ಹಣ ಬಂದರೆ ಆ ಸಂಬಂಧ ತಕ್ಷಣವೇ ಮೆಸೇಜ್‌ ಬರುತ್ತದೆ.

 ಹಣ ಖಾಲಿ

ಅದಷ್ಟೇ, ಅಲ್ಲ ನಿಮ್ಮ ಬ್ಯಾಂಕ್‌ನಲ್ಲಿ ಹಣ ಖಾಲಿಯಾದರೆ ಒಂದು ಕರೆ ಬರುತ್ತದೆ. ನಿಮಗೆ ಸಾಲ ಬೇಕೆ ಎಂದು. ಅಥವಾ ಹಣ ಹೆಚ್ಚಿದ್ದರೂ ನಿಮ್ಮ ಹಣವನ್ನು ಅಲ್ಲಿ ಡಿಪಾಸಿಟ್‌ ಮಾಡಿ ಇಲ್ಲಿ ಡಿಪಾಸಿಟ್ ಮಾಡಿ ಎಂದು ಕರೆ ಬರುತ್ತವೆ. ಈ ಎಲ್ಲಾ ಪ್ರಕ್ರಿಯೆಗಳು ಜರುಗುತ್ತಿರುವುದಕ್ಕೆ ಈ ರೀತಿಯ ಆಪ್‌ಗಳೇ ಕಾರಣ ಎಂದು ತಿಳಿದುಬಂದಿದೆ.

KYC ಫೀಚರ್ಸ್‌

KYC ಫೀಚರ್ಸ್‌

ಬಳಕೆದಾರರ ನಿಮ್ಮ ಗ್ರಾಹಕರನ್ನು ತಿಳಿಯಿರಿ (Know Your Customer) ಮಾಹಿತಿಯ ಆಧಾರದ ಮೇಲೆ ಈ ಹೊಸ ತಂತ್ರಜ್ಞಾನವು ಟ್ರಾಯ್‌ ಮೂಲಕ ಕಾರ್ಯನಿರ್ವಹಿಸಲಿದೆ. ಅದರಂತೆ ನಿಖರವಾದ ಮಾಹಿತಿ ನಿಮಗೆ ತಿಳಿದುಬರಲಿದೆ. ಈ ಹೊಸ ತಂತ್ರಜ್ಞಾನದೊಂದಿಗೆ, ಹಗರಣ ಸಂಬಂಧದ ಕರೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ಈ ತಂತ್ರಜ್ಞಾನವನ್ನು ಅಳವಡಿಸುವಂತೆ ಟ್ರಾಯ್ ಎಲ್ಲಾ ಕಂಪೆನಿಗಳಿಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

Best Mobiles in India

Read more about:
English summary
A few days ago, there were rumors about social truecaller. Meanwhile, TRAI has announced a new plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X