ಆನ್ ಲೈನ್ ವ್ಯವಹಾರದಲ್ಲಿ ತಪ್ಪು ಆಧಾರ್ ಸಂಖ್ಯೆ ಬಳಕೆಗೆ 10,000 ರುಪಾಯಿ ದಂಡ

By Gizbot Bureau
|

ಈ ಬಾರಿಯ ಬಜೆಟ್ ಘೋಷಣೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಖಡಕ್ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಹೆಚ್ಚಿನ ಮೊತ್ತದ ಆನ್ ಲೈನ್ ಟ್ರಾನ್ಸ್ಯಾಕ್ಷನ್ ನಡೆಸುವ ಸಂದರ್ಬದಲ್ಲಿ ಬೇಕಂತಲೆ ತಪ್ಪಾಗಿ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಿದರೆ ಅಂತಹವರಿಗೆ 10,000 ರುಪಾಯಿವರೆಗೆ ದಂಡವನ್ನು ಹೇರಲಾಗುತ್ತದೆ.

ತೆರಿಗೆ ಮೋಸಕ್ಕೆ ಕಡಿವಾಣ:

ತೆರಿಗೆ ಮೋಸಕ್ಕೆ ಕಡಿವಾಣ:

ಹೌದು, ಪ್ಯಾನ್ ಮತ್ತು ಆಧಾರ್ ಕಾರ್ಡ್ ಗಳಿಗೆ ಪರಸ್ಪರ ಲಿಂಕ್ ಇರುವುದರಿಂದಾಗಿ ಕೆಲವರು ತೆರಿಗೆ ಮೋಸಗೊಳಿಸುವ ಕಾರಣಕ್ಕಾಗಿ ತಪ್ಪು ಆಧಾರ್ ಸಂಖ್ಯೆಯನ್ನು ಆನ್ ಲೈನ್ ವ್ಯವಹಾರದಲ್ಲಿ ಬಳಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸೆಪ್ಟೆಂಬರ್ 1 ರಿಂದ ಜಾರಿ:

ಸೆಪ್ಟೆಂಬರ್ 1 ರಿಂದ ಜಾರಿ:

ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಾನೂನು ಚಟುವಟಿಕೆಗಳು ಪೂರ್ಣಗೊಂಡ ನಂತರ ಸೆಪ್ಟೆಂಬರ್ 1 ರಿಂದ ದಂಡ ವಿಧಿಸುವಿಕೆಯು ಅನ್ವಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 272ಬಿ( 139ಎ ಸೆಕ್ಷನ್ನಿನ ನಿಯಮಗಳನ್ನು ಪಾಲಿಸಲು ವಿಫಲವಾದಲ್ಲಿ) ದಂಡವನ್ನು ವಿಧಿಸುವುದಕ್ಕೆ ತಿದ್ದುಪಡಿ ಮಾಡಬೇಕೆಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

ಬಜೆಟ್ ನ ಸಂದರ್ಬದಲ್ಲಿ ನಿರ್ಮಲಾ ಸೀತಾರಾಮನ್ ಆಧಾರ್ ಕಾರ್ಡ್ ನ್ನು ಐಟಿ ರಿಟರ್ನ್ಸ್ ಮಾಡುವಾಗ ಪಾನ್ ಕಾರ್ಡ್ ಬದಲಾಗಿ ಬಳಕೆ ಮಾಡುವುದಕ್ಕೆ ಅವಕಾಶ ನೀಡಲಾಗುವ ಬಗ್ಗೆ ತಿಳಿಸಿದ್ದಾರೆ ಅಥವಾ ಎಲ್ಲೆಲ್ಲಿ ಪಾನ್ ಕಾರ್ಡ್ ನ್ನು ಕೇಳಲಾಗುತ್ತದೆಯೋ ಅಲ್ಲಿ ನೀವು ಪಾನ್ ಬದಲಾಗಿ ಆಧಾರ್ ಕಾರ್ಡ್ ನೀಡುವುದಕ್ಕೆ ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್:

ಪಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್:

ಯುಐಡಿಎಐ ಜನಸಂಖ್ಯಾ ಡೇಟಾವನ್ನು ಪಡೆದ ನಂತರ ಆದಾಯ ತೆರಿಗೆ ಇಲಾಖೆಯು ಅಂತಹ ವ್ಯಕ್ತಿಗಳಿಗೆ ಆಧಾರ್ ಕಾರ್ಡಿನ ಆಧಾರದಲ್ಲಿ ಪಾನ್ ಕಾರ್ಡ್ ನ್ನು ಹಂಚಿಕೆ ಮಾಡುತ್ತದೆ. ಈ ಆಕ್ಟ್ ನ ಅಡಿಯಲ್ಲಿ ಯಾರು ಈಗಾಗಲೇ ಪಾನ್ ಕಾರ್ಡ್ ನ್ನು ತಮ್ಮ ಆಧಾರ್ ಕಾರ್ಡಿಗೆ ಲಿಂಕ್ ಮಾಡಿದ್ದಾರೋ ಅಂತಹ ವ್ಯಕ್ತಿಗಳು ಪಾನ್ ಬದಲಾಗಿ ಎಲ್ಲಾ ಕಡೆಗಳಲ್ಲೂ ಆಧಾರ್ ಬಳಕೆ ಮಾಡಲು ಅವಕಾಶವಿರುತ್ತದೆ ಎಂದು ಬಜೆಟ್ ಭಾಷಣದ ಅನುಬಂಧದಲ್ಲಿ ನಿರ್ಮಲಾ ಸೀತಾರಾಮನ್ ಓದಿದ್ದಾರೆ.

ಬ್ಯಾಂಕ್ ಗಳಲ್ಲೂ ಕೂಡ ಅಪ್ ಡೇಟ್:

ಬ್ಯಾಂಕ್ ಗಳಲ್ಲೂ ಕೂಡ ಅಪ್ ಡೇಟ್:

ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳು ಎಲ್ಲೆಲ್ಲಿ ಪಾನ್ ಕಾರ್ಡ್ ಕಡ್ಡಾಯ ಎಂದು ಹೇಳಿವೆಯೋ ಅಲ್ಲಿ ಇನ್ನು ಮುಂದೆ ಆಧಾರ್ ಕಾರ್ಡ್ ಕೂಡ ಪಡೆಯಲಾಗುತ್ತದೆ ಎಂಬ ಬಗ್ಗೆ ಅಪ್ ಗ್ರೇಡ್ ಮಾಡಿಕೊಳ್ಳಲಿವೆ ಎಂ ರೆವೆನ್ಯೂ ಸೆಕ್ರೆಟರಿ ಆಗಿರುವ ಅಜಯ್ ಭೂಷಣ್ ಪಾಂಡೇ ತಿಳಿಸಿದ್ದಾರೆ.

22 ಕೋಟಿ ಪಾನ್ ಕಾರ್ಡ್ ಲಿಂಕ್:

22 ಕೋಟಿ ಪಾನ್ ಕಾರ್ಡ್ ಲಿಂಕ್:

ಸದ್ಯ 22 ಕೋಟಿ ಪಾನ್ ಕಾರ್ಡ್ ಗಳು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿವೆ. 120 ಕೋಟಿಗೂ ಅಧಿಕ ಮಂದಿಯ ಬಳಿ ಆಧಾರ್ ಕಾರ್ಡ್ ಇದೆ. ಯಾವುದೇ ವ್ಯಕ್ತಿ ಪಾನ್ ಕಾರ್ಡ್ ಬಯಸಿದರೆ ಆತ ಮೊದಲು ಆಧಾರ್ ಮಾಡಿಸಿಕೊಂಡಿರಬೇಕಾಗುತ್ತದೆ. ನಂತರ ಪಾನ್ ನಂಬರ್ ಲಭ್ಯವಾಗಿ ಬಳಕೆ ಮಾಡಲು ಅವಕಾಶವಿದೆ. ಆಧಾರ್ ಕಾರ್ಡ್ ನ್ನು ಪಾನ್ ಬದಲಾಗಿ ಬಳಕೆ ಮಾಡುವುದರಿಂದಾಗಿ ಹೊಸದಾಗಿ ಪಾನ್ ಮಾಡಿಸಿಕೊಂಡೇ ತೆರಿಗೆ ಪಾವತಿ ಮಾಡಬೇಕಾದ ಅಗತ್ಯವಿರುವುದಿಲ್ಲ. ಇದು ಸಾಕಷ್ಟು ಮಂದಿಗೆ ಅನುಕೂಲ ಮಾಡಿಕೊಡುತ್ತದೆ.

ಆಧಾರ್ ನಿಂದಲೇ ಬ್ಯಾಂಕಿಂಗ್ ವ್ಯವಹಾರ:

ಆಧಾರ್ ನಿಂದಲೇ ಬ್ಯಾಂಕಿಂಗ್ ವ್ಯವಹಾರ:

ಒಂದು ವೇಳೆ 50,000 ಕ್ಕೂ ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದು ಅಥವಾ ಬ್ಯಾಂಕ್ ಖಾತೆಯಿಂದ ತೆಗೆಯುವ ಪ್ರಕ್ರಿಯೆಗೆ ನಾವು ಆಧಾರ್ ಬಳಕೆ ಮಾಡಿದರೆ ಸಾಕಾಗುತ್ತದೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಹೌದು ಎಂದು ಉತ್ತರಿಸಿದ್ದಾರೆ. ಹೀಗೆ ಒಂದೇ ಕಾರ್ಡ್ ಬಳಕೆಯನ್ನು ಮಾಡುವುದರಿಂದಾಗಿ ಜನರಿಗೂ ಅನುಕೂಲವಾಗುತ್ತದೆ. ಸರ್ಕಾರದ ಬೇರೆಬೇರೆ ಕಾರ್ಡ್ ಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಓಡಾಡುವ ಪ್ರಮೇಯವೂ ಇರುವುದಿಲ್ಲ.

Best Mobiles in India

Read more about:
English summary
You Might Soon Have To Pay A Hefty Fine of Rs. 10,000 If You Enter A Wrong Aadhaar Number

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X