ಯೂಟ್ಯೂಬ್‌ನಿಂದ ಹೊಸ ಫೀಚರ್ಸ್‌: ಏನದು ಗೊತ್ತಾ?

|

ಯೂಟ್ಯೂಬ್‌ನ ಬಳಕೆ ದಿನದಿನಕ್ಕೆ ಭಾರೀ ಹೆಚ್ಚಾಗುತ್ತಿದೆ. ಅದರಲ್ಲೂ ಏನೇ ಮಾಹಿತಿ ಬೇಕೆಂದರೂ ತಕ್ಷಣಕ್ಕೆ ಯೂಟ್ಯೂಬ್‌ ತೆರೆದು ಮಾಹಿತಿ ಪಡೆದುಕೊಳ್ಳುತ್ತೇವೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಯೂಟ್ಯೂಬ್‌ ಶಾರ್ಟ್‌ ವಿಡಿಯೋ ಮೂಲಕ ಮಾಹಿತಿ, ಮನರಂಜನೆ ನೀಡುತ್ತಿದೆ. ಈಗ ಶಾರ್ಟ್‌ ವಿಡಿಯೋ ಕ್ರಿಯೇಟರ್ಸ್‌ಗಳಿಗೆ ಅನುಕೂಲ ಆಗುವ ಆಯ್ಕೆಯೊಂದನ್ನು ಯೂಟ್ಯೂಬ್‌ ನೀಡಿದೆ. ಅದುವೇ ಪ್ರೇಕ್ಷಕರ ಕಮೆಂಟ್‌ಗೆ ಪ್ರತಿಕ್ರಿಯಿಸುವ ಹಾಗೂ ಅವರ ಜೊತೆ ಸಂಪರ್ಕದಲ್ಲಿರುವ ಫೀಚರ್ಸ್‌. ಕ್ರಿಯೇಟರ್ಸ್‌ಗಳು ತಾವು ಮಾಡುವ ಸರಿತಪ್ಪುಗಳನ್ನು ಕಂಡುಕೊಳ್ಳುವ ಮೂಲಕ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ವಿಡಿಯೋ ವೀಕ್ಷಕರಿಗೆ ಹಾಗೂ ಕ್ರಿಯೇಟರ್ಸ್‌ಗೆ ಇದು ಭಾರೀ ಉಪಯೋಗ ಆಗಲಿದೆ. ಶಾರ್ಟ್‌ ವಿಡಿಯೋ ವಿಭಾಗದಲ್ಲಿ ತಮ್ಮ ಚಾನಲ್‌ಗೆ ಪ್ರೇಕ್ಷಕರು ಪೋಸ್ಟ್‌ ಮಾಡಿದ ಕಾಮೆಂಟ್‌ಗಳನ್ನು ವೈಶಿಷ್ಟಗೊಳಿಸುವ ಬಗ್ಗೆ ಕಂಪನಿ ಮಾಹಿತಿ ನೀಡಿದೆ.ಗೂಗಲ್‌ ಮಾಲೀಕತ್ವದ ಯೂಟ್ಯೂಬ್‌ ಈ ಹೊಸ ಫೀಚರ್ಸ್‌ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲಿದೆ. ಹಾಗೆಯೇ ಯೂಟ್ಯೂಬ್‌ ಕ್ರಿಯೇಟರ್ಸ್‌ಗಳು ಕಾಮೆಂಟ್‌ಗಳಲ್ಲಿ ಪ್ರೇಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಮಾಡುತ್ತದೆ.

ವಿಡಿಯೋ

ಈ ಹೊಸ ಶಾರ್ಟ್‌ ವಿಡಿಯೋ ವಿಭಾಗದ ಫೀಚರ್ಸ್‌ನಲ್ಲಿ ವಿಭಿನ್ನ ಅನುಭವವನ್ನು ಪಡೆಯಬಹುದು. ನಿಮ್ಮ ಪ್ರೇಕ್ಷಕರ ಜೊತೆ ಆಲೋಚನೆಗಳಿಗೆ ಸ್ಪಂಧಿಸಬಹುದು. ಅದು ಹೇಗೆಂದರೆ ನಿಮ್ಮ ಪ್ರೇಕ್ಷಕರು ನಿಮ್ಮ ಶಾರ್ಟ್‌ ವಿಡಿಯೋಗಳಿಗೆ ಮಾಡುವ ಕಾಮೆಂಟ್‌ ಗೆ ನೀವು ಪ್ರತಿಕ್ರಿಯೆ ನೀಡುವ ಮೂಲಕ. ನೀವು ಅಪ್‌ಲೋಡ್‌ ಮಾಡಲಾದ ವಿಡಿಯೋಗೆ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗೆ ಉತ್ತರಿಸುವ ಮೂಲಕ ಅವರ ಜೊತೆ ಸಂಪರ್ಕದಲ್ಲಿರಬಹುದು ಎಂದು ಯೂಟ್ಯೂಬ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವೈಶಿಷ್ಟ್ಯ

ಈ ನೂತನ ವೈಶಿಷ್ಟ್ಯವು ಇನ್ನೇನು ಕೆಲವೇ ದಿನಗಳಲ್ಲಿ ಅದರಲ್ಲೂ ಮುಂಬರುವ ವಾರಗಳಲ್ಲಿ iOS ನ ಎಲ್ಲಾ ಬಳಕೆದಾರರಿಗೆ ಲಭ್ಯ ಇರಲಿದೆ. ಮುಂದಿನ ದಿನಗಳಲ್ಲಿ ಉಳಿದ ಅಂಡ್ರಾಯ್ಡ್‌ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

 ಶಾರ್ಟ್‌ ವಿಡಿಯೋ

ಇನ್ನು ಶಾರ್ಟ್‌ ವಿಡಿಯೋಗಳಿಗೆ ಹಲವಾರು ಕಮೆಂಟ್‌ಗಳು ಬರುತ್ತವೆ. ಅಂತಹ ಕಮೆಂಟ್‌ಗಳಲ್ಲಿ ಏನಾದರೂ ಒಂದು ಮಹತ್ವದ ಕಾಮೆಂಟ್‌ ಇದ್ದರೆ ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಮುಖವಾದ ಕಾಮೆಂಟ್‌ಗಳನ್ನು ಕ್ರಿಯೇಟರ್ಸ್‌ ಗುರುತಿಸಲು ಸಾಧ್ಯವಾಗುವ ಫೀಚರ್ಸ್‌ನ್ನು ತರಲು ಕಂಪೆನಿ ಯೋಚಿಸುತ್ತಿದೆ ಎಂದು ಹೇಳಿದೆ.

ಶತಕೋಟಿ

ಇನ್ನು ಯೂಟ್ಯೂಬ್‌ ಶಾರ್ಟ್‌ ಪ್ರತಿದಿನ ಬರೋಬ್ಬರಿ 30 ಶತಕೋಟಿ ದೈನಂದಿನ ವೀಕ್ಷಣೆಗಳನ್ನು ಪಡೆಯುತ್ತಿದೆ. ಅಷ್ಟೇ ಅಲ್ಲದೆ ಇನ್ನೂ ದೊಡ್ಡಮಟ್ಟದಲ್ಲಿ ವೀಕ್ಷಣೆಯಾಗುತ್ತಾ ಮುನ್ನುಗ್ಗುತ್ತಿದೆ. ಈ ಕಾರಣಕ್ಕೆ ಇನ್ನಷ್ಟು ಪ್ರೇಕ್ಷಕರು ಹಾಗೂ ಕ್ರಿಯೇಟರ್ಸ್ಗಳಿಗೆ ಹತ್ತಿರವಾಗಲು ಈ ಕಂಪೆನಿ ಹೊಸ ಈ ರೀತಿಯ ಫೀಚರ್ಸ್‌ಗಳನ್ನು ನಿರಂತರವಾಗಿ ನೀಡುತ್ತಲೇ ಬರುತ್ತಿದೆ.

ಯೂಟ್ಯೂಬ್‌ ಸಂಸ್ಥೆ

ಈ ಫೀಚರ್ಸ್‌ ಅಷ್ಟೇ ಅಲ್ಲದೆ ಯೂಟ್ಯೂಬ್‌ ಸಂಸ್ಥೆಯು ತನ್ನ ಕಿರುಚಿತ್ರಗಳನ್ನು ಯೂಟ್ಯೂಬ್ ಟಿವಿ ಎಂಬ ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಮಾಡಲು ಯೋಜನೆ ರೂಪಿಸಿಕೊಂಡಿದೆ. ಯೂಟ್ಯೂಬ್ ಟಿವಿಯು ಮೊಸಾಯಿಕ್ ಮೋಡ್ (Mosaic Mode) ಎಂಬ ಹೊಸ ವೈಶಿಷ್ಟ್ಯದ ಮೂಲಕ ವೀಕ್ಷಣೆ ಮಾಡುವವರಿಗೆ ಅದರಲ್ಲೂ ಏಕಕಾಲದಲ್ಲಿ ನಾಲ್ಕು ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಲು ಸಹಾಯಕವಾಗುವಂತೆ ಅವಕಾಶ ಮಾಡಿಕೊಡುವ ಆಯ್ಕೆಯನ್ನು ತರಲು ಮುಂದಾಗಿದೆ.

ವೀಕ್ಷಕರ ಅನುಭವ

ಬಳಕೆದಾರರು ಹಾಗೂ ವೀಕ್ಷಕರ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ಮಗದೊಂದು ವೈಶಿಷ್ಟ್ಯದ ಗುರಿಯನ್ನು ಈ ಯೂಟ್ಯೂಬ್‌ ಇಟ್ಟುಕೊಂಡಿದೆ. ಇತ್ತೀಚೆಗೆ ಈ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್ ಚಿಕ್ಕದಾಗಿ ಎಡಿಟ್‌ ಮಾಡುವ 'Edit into a Short' ಟೂಲ್ ಆಯ್ಕೆ ಅನ್ನು iOS ಮತ್ತು ಆಂಡ್ರಾಯ್ಡ್‌ ಅಪ್ಲಿಕೇಶನ್‌ಗೆ ಸೇರಿಸುವ ಮೂಲಕ ಬಳಕೆದಾರರು ತಮ್ಮ ಉದ್ದದ ವಿಡಿಯೋಗಳನ್ನು ಚಿಕ್ಕದಾಗಿ ಮಾಡಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಮಾಡುವ ಆಯ್ಕೆಯನ್ನು ನೀಡಿತ್ತು. ಇದು ಬೇರೆ ಆಪ್‌ಗಳ ಬಳಕೆಯನ್ನು ಬಳಕೆದಾರಿಗೆ ಕಡಿಮೆ ಮಾಡುವಂತೆ ಪ್ರೇರೇಪಿಸಿತ್ತು.

ಕ್ರಿಯೇಟರ್ಸ್‌ಗೆ ಹಣ

ಶಾರ್ಟ್‌ ವಿಡಿಯೋ ಕ್ರಿಯೇಟರ್ಸ್‌ ಇನ್ನು ಮುಂದೆ ಈ ವಿಡಿಯೋಗಳ ಮೂಲಕ ಹಣ ಗಳಿಸುವ ಆಯ್ಕೆಯನ್ನೂ ಸಹ ನೀಡಲು ಮುಂದಾಗಿದೆ. ಅದು ಹೇಗೆಂದರೆ ಯೂಟ್ಯೂಬ್‌ನ ಶಾರ್ಟ್‌ ವಿಡಿಯೋಗಳಲ್ಲಿ ಜಾಹೀರಾತುಗಳನ್ನು ಪ್ರಾರಂಭಿಸುವ ಮೂಲಕ. ಈ ಬಗ್ಗೆ ಯೂಟ್ಯೂಬ್‌ ಚಿಂತನೆ ನಡೆಸುತ್ತಿದೆ.

ಯೂಟ್ಯೂಬ್

ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನ ಶಾರ್ಟ್ಸ್‌ನಿಂದ ಬರುವ ಜಾಹೀರಾತು ಹಣದ 45% ರಷ್ಟನ್ನು ಕ್ರಿಯೇಟರ್ಸ್‌ಗೆ ಪಾವತಿಸಲು ಕಂಪೆನಿ ಮುಂದಾಗಿದೆ. ಈ ಹಿಂದೆ ಯೂಟ್ಯೂಬ್‌ ವಿಡಿಯೋಗಳಿಗೆ ಮಾತ್ರ ಹಣ ನೀಡಲಾಗುತ್ತಿತ್ತು. ಈಗ ಶಾರ್ಟ್‌ ವಿಡಿಯೋಗಳಿಗೂ ಹಣ ನೀಡಿದರೆ ಹಲವಾರು ಕ್ರಿಯೇಟರ್ಸ್‌ಗಳು ಭಾರೀ ಸಂಪಾದನೆಯನ್ನೇ ಮಾಡಬಹುದಾಗಿದೆ.

Best Mobiles in India

English summary
Good news to short video creator. YouTube allows creators to reply to fan comments.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X