ಭಾರತದಲ್ಲಿ ಮತ್ತೆ 1080p ವಿಡಿಯೋ ಸ್ಟ್ರೀಮಿಂಗ್ ಸೇವೆ ಶುರುಮಾಡಿದ ಯುಟ್ಯೂಬ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಯುಟ್ಯೂಬ್‌ ಕೂಡ ಒಂದಾಗಿದ್ದು, ತನ್ನ ವಿಡಿಯೊ ಸ್ಟ್ರೀಮಿಂಗ್‌ ಸೇವೆಯ ಮೂಲಕ ಗುರುತಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಯುಟ್ಯೂಬ್‌ ಬಳಕೆದಾರರ ನೆಚ್ಚಿನ ವಿಡಿಯೊ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಇತ್ತಿಚಿನ ದಿನಗಳಲ್ಲಿ ಯುಟ್ಯೂಬ್‌ ತನ್ನ ವೀಡಿಯೋ ಸ್ಟ್ರೀಮಿಂಗ್‌ ಗರಿಷ್ಟ ಮಟ್ಟವನ್ನ 480p ಗೆ ನಿಗದಿ ಪಡಿಸಿತ್ತು. ಇದೀಗ ಅದನ್ನು 1080pಗೆ ಮತ್ತೆ ಸಕ್ರಿಯಗೊಳಿಸಿದೆ.

ಯುಟ್ಯೂಬ್

ಹೌದು, ಯುಟ್ಯೂಬ್‌ನಲ್ಲಿ ವಿಡಿಯೊ ಸ್ಟ್ರೀಮಿಂಗ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನ ಕಳೆದ ಮಾರ್ಚ್ 2020 ರಲ್ಲಿ, 480pಗೆ ನಿಗದಿ ಪಡಿಸಿತ್ತು. ಕೊರೋನಾ ವೈರಸ್‌ ಪರಿಣಾಮ ದೇಶದಲ್ಲಿ ಮಾರ್ಚ್‌ 21 ರಿಂದ ಲಾಕ್‌ಡೌನ್‌ ಮಾಡಿದ್ದರಿಂದ ಇಂಟರ್ನೆಟ್ ದಟ್ಟಣೆಯ ಹಠಾತ್ ಹೆಚ್ಚಳವನ್ನು ಎದುರಿಸಲು ಯೂಟ್ಯೂಬ್ 480pಗೆ ಸೀಮಿತ ಮಾಡಿತ್ತು. ಈ ಮೂಲಕ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ವೀಡಿಯೊಗಳ ಸ್ಟ್ರೀಮಿಂಗ್ ಗುಣಮಟ್ಟವನ್ನು ಕಡಿಮೆ ಗುಣಮಟ್ಟಕ್ಕೆ ಸೀಮಿತಗೊಳಿಸಿತ್ತು. ಆದರೆ ಇದೀಗ ಅಂತಿಮವಾಗಿ, ಕಂಪನಿಯು ಈ ನಿರ್ಬಂಧವನ್ನು ತೆಗೆದುಹಾಕಿದೆ.

ಯುಟ್ಯೂಬ್‌

ಕಳೆದ ಕೆಲವು ತಿಂಗಳುಗಳಿಂದ ಯುಟ್ಯೂಬ್‌ನ ವೀಡಿಯೋ ಸ್ಟ್ರೀಮಿಂಗ್‌ ರೆಸಲ್ಯೂಶನ್‌ ಅನ್ನು ಕೇವಲ 480pಗೆ ಸೀಮಿತ ಮಾಡಿದ್ದನ್ನು ನೀವು ನಾವೆಲ್ಲಾ ಗಮನಿಸಿದ್ದೇವೆ. ಅದರಲ್ಲೂ ಕಳೆದ ಮಾರ್ಚ್‌ ತಿಂಗಳಲ್ಲಿ ದೇಶದಲ್ಲಿ ಕೊರೊನಾ ವೈರಸ್‌ ಹಾವಳಿ ಪರಿಣಾಮ ಲಾಕ್‌ಡೌನ್‌ ಏರಿಕೆ ಮಾಡಲಾಗಿತ್ತು. ಇದರಿಂದ ದೇಶವಾಸಿಗಳೆಲ್ಲಾ ಮನೆಯಲ್ಲಿಯೇ ಕಾಲ ಕಳೆಯುವಂತಾಗಿತ್ತು. ಇದರ ಪರಿಣಾಮ ಇಂಟರ್‌ನೆಟ್‌ ಬಳಕೆ ಹೆಚ್ಚಾಗಿ ಯುಟ್ಯೂಬ್‌ ಸ್ಟರೀಮಿಂಗ್‌ ಸೇವೆಯನ್ನು ಸಹ ಹೆಚ್ಚಿನ ಜನ ಅವಲಂಬಿಸಿದ್ದರು, ಇದರಿಂದ ನೆಟ್‌ವರ್ಕ್‌ ದಟ್ಟಣೆ ಹೆಚ್ಚಾಗಿ ವೀಡಯೋ ಸ್ಟ್ರೀಮಿಂಗ್‌ ಸೇವೆ ಸರಿಯಾಗಿ ಸಿಗುತ್ತಿರಲಿಲ್ಲ. ಇದರಿಂದ ಯುಟ್ಯೂಬ್‌ ಈ ಮಾದರಿಯ ನಿರ್ಬಂದವನ್ನ ತೆಗೆದುಕೊಂಡಿತ್ತು.

ಯುಟ್ಯೂಬ್

ಯುಟ್ಯೂಬ್‌ನ ಈ ಕ್ರಮದಿಂದಾಗಿ ಒಬ್ಬರು ಯೂಟ್ಯೂಬ್‌ನಲ್ಲಿ 480p ರೆಸೊಲ್ಯೂಶನ್‌ನಲ್ಲಿ ಮಾತ್ರ ವೀಡಿಯೊಗಳನ್ನು ವೀಕ್ಷಿಸಬಹುದಾಗಿತ್ತು. ಇದೀಗ ಯೂಟ್ಯೂಬ್ ಅಂತಿಮವಾಗಿ ಮೂರು ತಿಂಗಳ ನಂತರ 1080p ಆಯ್ಕೆಯನ್ನು ಮತ್ತೆ ಅವಕಾಶ ನೀಡಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿನ ಯೂಟ್ಯೂಬ್ ಅಪ್ಲಿಕೇಶನ್ ಈಗ ಬಳಕೆದಾರರಿಗೆ 1080p ಮತ್ತು 480 ಪಿ ನಡುವೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಆದರೂ ಈ ಸೇವೆ ನಿಮಗೆ ಸಿಗಬೇಕಾದರೆ ಅದು ನಿಮ್ಮ ಡಿವೈಸ್‌ ವೈ-ಫೈ ನೆಟ್‌ವರ್ಕ್‌ ಕನೆಕ್ಟಿವಿಟಿ ಹೊಂದಿದ್ದರೆ ಮಾತ್ರ ಲಭ್ಯವಾಗಲಿದೆ.

ಸ್ಟ್ರೀಮಿಂಗ್

ಹಾಗೇ ನೋಡುವುದಾದರೆ ಮೊಬೈಲ್ ಡೇಟಾದಲ್ಲಿ ಸ್ಟ್ರೀಮಿಂಗ್ ಗುಣಮಟ್ಟ ಇನ್ನೂ 480p ಗೆ ಸೀಮಿತವಾಗಿದೆ. ಈ ಆಪ್ಡೇಟ್‌ ಸರ್ವರ್ ಸ್ವಿಚ್ ರೂಪದಲ್ಲಿ ಬರುತ್ತದೆ, ಆದ್ದರಿಂದ, ನಿಮ್ಮ YouTube ಅಪ್ಲಿಕೇಶನ್ ಅನ್ನು ನೀವು ನವೀಕರಿಸಬೇಕಾಗಿಲ್ಲ. ಸದ್ಯ 480p ಮತ್ತು 1080p ನಡುವಿನ ಗೋಚರ ವ್ಯತ್ಯಾಸಗಳನ್ನು ಗಮನಿಸಬಹುದಾಗಿದ್ದು, ವಿಶೇಷವಾಗಿ 60fps ನಲ್ಲಿ ವಿಷಯವನ್ನು ನೀಡುವ ಗೇಮಿಂಗ್ ವೀಡಿಯೊಗಳಲ್ಲಿ, ಆದರೆ 720p ಅಥವಾ 1080p ನಲ್ಲಿ ಉತ್ತಮವಾಗಿ ವೀಕ್ಷಿಸಬಹುದಾಗಿದೆ.

Best Mobiles in India

English summary
Back in March 2020, YouTube had limited the streaming quality of the videos on its platform to a lower quality to deal with the sudden increase in internet traffic.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X