ಗರಿಷ್ಠ ವೀಡಿಯೋ ಸ್ಟ್ರೀಮಿಂಗ್‌ ಗುಣಮಟ್ಟವನ್ನು 480Pಕ್ಕೆ ನಿರ್ಬಂಧಿಸಿದ ಯುಟ್ಯೂಬ್!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯುಟ್ಯೂಬ್‌ ಕೂಡ ಒಂದಾಗಿದೆ. ನಿಮಗೆ ಯಾವುದೇ ತರಹದ ಮಾಹಿತಿಯ ವೀಡಿಯೊಗಳು ಬೇಕಿದ್ದರು ಯುಟ್ಯೂಬ್‌ನಲ್ಲಿ ಸಾಕಷ್ಟು ಲಬ್ಯವಿವೆ. ಯುಟ್ಯೂಬ್‌ ತನ್ನ ವೀಡಿಯೋ ಸ್ಟ್ರೀಮಿಂಗ್‌ ಸೇವೆ ಮೂಲಕ ಜನಪ್ರಿಯತೆಯನ್ನ ಗಳಿಸಿಕೊಮಡಿದ್ದು ಗ್ರಾಹಕರ ನೆಚ್ಚಿನ ಸೋಶಿಯಲ್‌ ಮೀಡಿಯಾ ಆಪ್‌ ಆಗಿದೆ. ಅಷ್ಟೇ ಅಲ್ಲ ಯುಟ್ಯೂಬ್‌ನಲ್ಲಿ ಎಲ್ಲಾ ಮಾದರಿಯ ವೀಡಿಯೋಗಳು ಕೂಡ ಲಬ್ಯವಿವೆ. ಸದ್ಯ ಕಾಲಕಾಲಕ್ಕೆ ತಕ್ಕಂತೆ ಯುಟ್ಯೂಬ್‌ ಕೂಡ ತನ್ನ ಗ್ರಾಹಕರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ.

ಹೌದು

ಹೌದು,ಜನಪ್ರಿಯ ಸೊಶೀಯಲ್‌ ಮಿಡಿಯಾ ಆಪ್‌ಗಳಲ್ಲಿ ಒಂದಾದ ಯುಟ್ಯೂಬ್‌ ಇದೀಗ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಅವಕಾಶವನ್ನ ನೀಡಿದೆ. ಯುಟ್ಯೂಬ್‌ ವೀಡಿಯೋ ಸ್ಟ್ರಿಮಿಂಗ್‌ನಲ್ಲಿ ಮಹತ್ತರವಾದ ಬದಲಾವಣೆಯನ್ನ ಮಾಡಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುವತ್ತ ದೃಡ ಹೆಜ್ಜೆಯನ್ನ ಇಟ್ಟಿದೆ. ಅದರಲ್ಲು ಈ ಬದಲಾವನೆ ಆಂಡ್ರಾಯ್ಡ್‌ ಬೆಂಬಲಿತ ಡಿವೈಸ್‌ಗಳಲ್ಲಿ ಯುಟ್ಯೂಬ್‌ ಬಳಸುವ ಬಳಕೆದಾರರಿಗೆ ಅನ್ವಯವಾಗಲಿದೆ. ಅದೆನೆಂದರೆ ಇಷ್ಟು ದಿನ ಯುಟ್ಯೂಬ್‌ ವೀಡಿಯೋ ಸ್ಟ್ರಿಮಿಂಗ್‌ನಲ್ಲಿದ್ದ ಗರಿಷ್ಟ ವೀಡಿಯೋ ಗುಣಮಟ್ಟ 480P ಅನ್ನು ನಿರ್ಬಂಧಿಸಿದೆ. ಅಷ್ಟಕ್ಕೂ ಇದರಿಂದ ಬಳಕೆದಾರರಿಗೆ ಉಂಟಾಗುವ ಬದಲಾವಣೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಸದ್ಯ

ಸದ್ಯ ಇಡೀ ಜಗತ್ತು ಕೊರೊನಾ ವೈರಸ್‌ ಬೀತಿಯಿಂದ ಬಳಲುತ್ತಿದೆ. ಇದರಿಂದಾಗಿ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೊಷಿಸಿವೆ. ಇದರಲ್ಲಿ ಭಾರತವು ಕೂಡ ಒಂದಾಗಿದ್ದ, ತನ್ನ ನಾಗರಿಕರು ಮನೆಯಿಂದ ಹೊರಬಾದರದಂತೆ ಎಚ್ಚರಿಕೆ ವಹಿಸಿದೆ. ಈ ನಿಟ್ಟಿನಲ್ಲಿ ನಾಗರಿಕರು ಮನೆಯಲ್ಲಿಯೇ ಕುಳಿತಿರುವ ಪರಿಣಾಮ ಹೆಚ್ಚಿನ ಜನರು ಇಂಟರ್‌ನೆಟ್‌ ಆಧಾರಿತ ಸೇವೆಗಲತ್ತ ಒಲವು ತೋರುತ್ತಿದ್ದಾರೆ. ಯುಟ್ಯೂಬ್‌ ಮೂಲಕ ವೀಡಿಯೋ ವೀಕ್ಷಣೆ, ಫೇಸ್‌ಬುಕ್‌ ಮೂಲಕ ಚಾಟಿಂಗ್‌, ವಾಟ್ಸಾಪ್‌ ಚಾಟಿಂಗ್‌ಗಳತ್ತ ಗಮನ ನೀಡಿದ್ದಾರೆ. ಈ ಕಾರಣಕ್ಕಾಗಿ ಯುಟ್ಯೂಬ್‌ ಬಳಕೆಯಲ್ಲೂ ದಿಡೀರ್‌ ಏರಿಕೆ ಆಗಿದ್ದು ತನ್ನ ಸ್ಟ್ರೀಮಿಂಗ್ ಸೇವೆಗಳ ಗುಣಮಟ್ಟ ಕುಸಿಯದಂತೆ ತಡೆಯಲು ಯುಟ್ಯೂಬ್‌ ಮುಂದಾಗಿದೆ. ತನ್ನ ಬಳಕೆದಾರರಿಗೆ ಹೆಚ್ಚಿನ ರೆಸಲ್ಯೂಷನ್‌ಗಳಿಗೆ ಬದಲಾಯಿಸಲು ಆಯ್ಕೆಯನ್ನು ನೀಡುವಾಗ 480p ಅನ್ನು ನಿರ್ಬಂಧಿಸುವುದಾಗಿ ಯೂಟ್ಯೂಬ್ ಹೇಳಿಕೊಂಡಿದೆ.

ಆಂಡ್ರಾಯ್ಡ್‌

ಇದೀಗ ಆಂಡ್ರಾಯ್ಡ್‌ ಬಳಕೆದಾರರಿಗೆ ಯೂಟ್ಯೂಬ್ ತನ್ನ ಗರಿಷ್ಠ ವೀಡಿಯೊ ಗುಣಮಟ್ಟವನ್ನು 480Pಗೆ ನಿರ್ಬಂಧಿಸಿದೆ. ಸದ್ಯ ಭಾರತದಲ್ಲಿ ಪ್ಲೇ ಬ್ಯಾಕ್‌ ವೀಡಿಯೊ ಗುಣಮಟ್ಟದಲ್ಲಿ 480P ನಲ್ಲಿ ಕುಡ ಲಭ್ಯವಾಗುತ್ತಿತ್ತು. ಅಲ್ಲದೆ 4K ಯಷ್ಟು ಹೆಚ್ಚಿನ ರೆಸಲ್ಯೂಷನ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋಗಳಿಗೂ ಈ ನಿರ್ಬಂದ ಅನ್ವಯಿಸಲಿದೆ ಎಂದು ಹೇಳಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಕೇಂದ್ರೀಕೃತವಾಗಿದ್ದರೆ, ಬೆಂಗಳೂರಿನಂತಹ ನಗರಗಳು ಮತ್ತು ಗುಜರಾತ್‌ನ ಪ್ರದೇಶಗಳು ಇಲ್ಲಿಯವರೆಗೆ ಈ ನಿರ್ಬಂಧಗಳಿಂದ ಮುಕ್ತವಾಗಿವೆ ಎಂದು ತೋರುತ್ತದೆ .

ಇದಲ್ಲದೆ

ಇದಲ್ಲದೆ ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್‌ನಲ್ಲಿನ ವೀಡಿಯೊಗಳು ಯಾವುದೇ ಬದಲಾವಣೆಯನ್ನ ಹೊಂದಿಲ್ಲ. ಬದಲಿಗೆ ಅದೇ ನೆಟ್‌ವರ್ಕ್‌ನಲ್ಲಿ ಪೂರ್ವನಿಯೋಜಿತವಾಗಿ ಯೋಗ್ಯವಾದ 1080p ಹೊಂದಿರುವ ವೀಡಿಯೋಗಳು ಲಬ್ಯವಾಗಲಿದೆ. ಈ ಹೊಸ ನಿರ್ಬಂಧಗಳ ಕುರಿತು ಯೂಟ್ಯೂಬ್ ಇನ್ನೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೂ 480p ಸ್ಟ್ಯಾಂಡರ್ಡ್ ಡೆಫಿನಿಶನ್‌ನ ಗರಿಷ್ಠ ಸೀಲಿಂಗ್ ತುಂಬಾ ಕಷ್ಟಕರವೆಮದು ಹೇಳಲಾಗ್ತಿದೆ. ಆದರೆ ಈ ಗರಿಷ್ಠ ಗುಣಮಟ್ಟದಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡಲಾಗುವುದಿಲ್ಲ ಎಂಬ ನಿರ್ಣಯಕ್ಕೆ ಯುಟ್ಯೂಬ್‌ ಬಂದಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
YouTube for Android restricts maximum video streaming quality to 480p in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X