ಯೂಟ್ಯೂಬ್‌ಗೆ ಆಕರ್ಷಕ ಫೀಚರ್ಸ್‌ ಸೇರ್ಪಡೆ: ಇಲ್ಲಿದೆ ವಿವರ!

|

ಗೂಗಲ್‌ನ ಪ್ರಮುಖ ಜನಪ್ರಿಯ ಆಪ್‌ಗಳಲ್ಲಿ ಯೂಟ್ಯೂಬ್‌ ಪ್ರಮುಖ ಸ್ಥಾನ ಪಡೆದಿದೆ. ಗೂಗಲ್‌ನ ಎಲ್ಲಾ ಆಪ್‌ಗಳು ಕಾಲಕಾಲಕ್ಕೆ ತಕ್ಕಂತೆ ನವೀಕರಣಗೊಂಡು ಹೊಸ ನೋಟ ಪಡೆಯುತ್ತಿವೆ. ಈಗ ಈ ನವೀಕರಣ ಯೂಟ್ಯೂಬ್‌ನಲ್ಲೂ ಕಂಡುಬಂದಿದೆ. ಈ ಮೂಲಕ ಇನ್ಮುಂದೆ ನೀವು ಹೊಸ ರೀತಿಯ ಫೀಚರ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ಪಡೆಯಬಹುದಾಗಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್ ಕೆಲವು ದಿನಗಳಿಂದ ಬಳಕೆದಾರರ ಇಂಟರ್ಫೇಸ್ (UI) ಅನ್ನು ರಿಫ್ರೆಶ್ ಮಾಡುವಲ್ಲಿ ತಲ್ಲೀನವಾಗಿದೆ. ಪರಿಣಾಮ ಯೂಟ್ಯೂಬ್ ನವೀಕರಿಸಿದ ನೋಟದ ಜೊತೆಗೆ ಹೊಸ ಅನುಭವವನ್ನು ನೀಡುತ್ತದೆ. ಈ ಹೊಸ ಫೀಚರ್ಸ್‌ನಲ್ಲಿ ಗಾಢವಾದ 'ಡಾರ್ಕ್ ಥೀಮ್', ವಾಚ್ ಪೇಜ್‌ನಲ್ಲಿ 'ಟ್ವೀಕ್'‌ಗಳು ಮತ್ತು ಜೂಮ್ ಮಾಡಲು 'ಪಿಂಚ್' ಸೇರಿದಂತೆ ಇನ್ನಿತರೆ ಫೀಚರ್ಸ್‌ ಯೂಟ್ಯೂಬ್‌ ಪೇಜ್‌ನಲ್ಲಿ ಕಾಣಸಿಗುತ್ತವೆ.

ಫೀಚರ್ಸ್‌ ಯಾವಾಗ ಲಭ್ಯ?

ಫೀಚರ್ಸ್‌ ಯಾವಾಗ ಲಭ್ಯ?

ಈ ಸಂಬಂಧ ಯೂಟ್ಯೂಬ್‌ ಮಾಹಿತಿ ನೀಡಿದ್ದು, ಹೊಸ ನೋಟ ಮತ್ತು ಹಲವಾರು ಫೀಚರ್ಸ್‌ಗಳು ಹೆಚ್ಚು ಆಧುನಿಕ ಮತ್ತು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದೆ. ಹಾಗೆಯೇ ಗೂಗಲ್‌ ಸಹ ಈ ಬಗ್ಗೆ ತಿಳಿಸಿದ್ದು, ಈ ಬದಲಾವಣೆಗಳು ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ, ಜೊತೆಗೆ ಮುಂದಿನ ಕೆಲವು ವಾರಗಳಲ್ಲಿ ರೋಲ್‌ಔಟ್ ಪೂರ್ಣಗೊಳ್ಳುವುದನ್ನು ನೀವು ನಿರೀಕ್ಷಿಸಬಹುದು. ನಾವು ಪ್ರಪಂಚದಾದ್ಯಂತದ ಹಲವಾರು ವೀಕ್ಷಕರಿಂದ ಇನ್‌ಪುಟ್ ಅನ್ನು ಸಂಗ್ರಹಿಸಿದ್ದೇವೆ, ಹಾಗೆಯೇ ಹೆಚ್ಚು ಉತ್ಸಾಹಭರಿತ ವಿನ್ಯಾಸವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ.

ಏನಿದು ಆಂಬಿಯೆಂಟ್ ಮೋಡ್  ?

ಏನಿದು ಆಂಬಿಯೆಂಟ್ ಮೋಡ್ ?

ಸೂಕ್ಷ್ಮ ಎಫೆಕ್ಟ್‌‌ ಸೃಷ್ಟಿಸಲು ಡೈನಾಮಿಕ್ ಬಣ್ಣದ ಮಾದರಿಯನ್ನು ಬಳಸಲಾಗಿದೆ. ಪರಿಣಾಮ ಅಪ್ಲಿಕೇಶನ್ ಬ್ಯಾಕ್ಗ್ರೌಂಡ್ ಬಣ್ಣವು ಪ್ಲೇ ಮಾಡುವ ವಿಡಿಯೋಗೆ ಹೊಂದಿಕೊಳ್ಳುತ್ತದೆ. ಈ ಫಿಚರ್ಸ್‌ ಬಳಕೆದಾರರ ಗಮನವನ್ನು ಕಂಟೆಂಟ್‌ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಈ ಸೂಕ್ಷ್ಮ ಪರಿಣಾಮವನ್ನು ಹೊಂದಿರುವ ಆಂಬಿಯೆಂಟ್ ಮೋಡ್ ಡಾರ್ಕ್ ಥೀಮ್‌ ವೆಬ್ ಮತ್ತು ಮೊಬೈಲ್‌ ಡಿಸ್‌ಪ್ಲೇನಲ್ಲಿ ಕಾಣಬಹುದು ಎಂದು ಯೂಟ್ಯೂಬ್‌ ಹೇಳಿದೆ.

ಟ್ವೀಕ್ ಫೀಚರ್ಸ್‌!

ಟ್ವೀಕ್ ಫೀಚರ್ಸ್‌!

ಯೂಟ್ಯೂಬ್ ಡಾರ್ಕ್ ಥೀಮ್‌ನಲ್ಲಿ ಟ್ವೀಕ್ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದ್ದು, ನಿಮ್ಮ ಡಿಸ್‌ಪ್ಲೇ ಮೇಲೆ ಪಾಪ್ ಆಗುತ್ತದೆ. ಹಾಗೆಯೇ ಗಾಢವಾದ ಡಾರ್ಕ್ ಥೀಮ್ ವಿಡಿಯೋ ಪ್ಲೇಯರ್‌ನ ಸುತ್ತಲೂ ಮಾತ್ರವಲ್ಲದೆ ವಿಡಿಯೋ ಪ್ಲೇ ಲಿಸ್ಟ್‌ಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ ಮತ್ತು ಪ್ರತಿ ಪ್ಲೇ ಲಿಸ್ಟ್‌ ಕುರಿತು ಹೆಚ್ಚಿನ ವಿವರಗಳನ್ನು ತೋರಿಸುತ್ತದೆ. ಈ ಫೀಚರ್ಸ್‌ ಸಹ ವೆಬ್, ಮೊಬೈಲ್ ಮತ್ತು ಸ್ಮಾರ್ಟ್ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಯೂಟ್ಯೂಬ್‌ ತಿಳಿಸಿದೆ.

ವೀಕ್ಷಣೆ ಪೇಜ್‌ನಲ್ಲಿ ಬದಲಾವಣೆ

ವೀಕ್ಷಣೆ ಪೇಜ್‌ನಲ್ಲಿ ಬದಲಾವಣೆ

ಇನ್ನು ಬಳಕೆದಾರರ ಗಮನವು ಹೆಚ್ಚಾಗಿ ವಿಡಿಯೋದ ಮೇಲೆಯೇ ಇರುವಂತೆ ವೀಕ್ಷಣಾ ಪುಟದ ಇಂಟರ್‌ಫೇಸ್‌ನಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆಯಂತೆ.ಇದರಲ್ಲಿ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಉಲ್ಲೇಖಿಸಲಾದ ಯೂಟ್ಯೂಬ್‌ ಲಿಂಕ್‌ಗಳು ಬಟನ್‌ಗಳಾಗಿ ಕಾಣಿಸಿಕೊಳ್ಳಲಿವೆ. ಇದರೊಂದಿಗೆ ಚಂದಾದಾರಿಕೆ ಬಟನ್ ಸಹ ಹೊಸ ಆಕಾರವನ್ನು ಪಡೆಯುತ್ತಿದ್ದು, ಹೆಚ್ಚಿನ ಕಾಂಟ್ರಾಸ್ಟ್ ಹೊಂದಿರಲಿದೆಯಂತೆ ಪ್ರಮುಖ ವಿಷಯ ಎಂದರೆ ಹೆಚ್ಚು ದಿನಗಳ ಕಾಲ ಕೆಂಪು ಬಣ್ಣದ್ದಾಗಿರುವುದಿಲ್ಲ ಎಂದು ಬಣ್ಣ ಬದಲಾಯಿಸುವ ಸೂಚನೆ ನೀಡಲಾಗಿದೆ.

ಜೂಮ್ ಮಾಡಬಹುದು!

ಜೂಮ್ ಮಾಡಬಹುದು!

ಯೂಟ್ಯೂಬ್‌ನಲ್ಲಿ ಜೂಮ್ ಮಾಡಲು ಪಿಂಚ್ ಫೀಚರ್ಸ್‌ ನೀಡಲಾಗುತ್ತಿದೆ. ಈ ಫೀಚರ್ಸ್‌ ಅನ್ನು ಪ್ರಾಯೋಗಿಕವಾಗಿ ಕೆಲವು ಪ್ರೀಮಿಯಂ ಬಳಕೆದಾರರಿಗೆ ನೀಡಲಾಗಿತ್ತು. ಅದರಂತೆ ಬಳಕೆದಾರರು ಈ ಫೀಚರ್ಸ್‌ ಬಗ್ಗೆ ಯಾವ ರೀತಿಯ ನಿಲುವನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯೂಟ್ಯೂಬ್ ಮುಂದಾಗಿದ್ದು, ಅವರ ಪ್ರತಿಕ್ರಿಯೆಯಂತೆ ಮತ್ತಷ್ಟು ಸುಧಾರಣೆ ತಂದಿದೆ. ಹಾಗೆಯೇ ಈ ಫೀಚರ್ಸ್‌ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯವಿರಲಿದೆ.

ಗೂಗಲ್‌

ವಿಡಿಯೋ ನೋಡುವಾಗ ಅದರಲ್ಲಿ ಏನಾದರೂ ಮಿಸ್‌ ಮಾಡಿಕೊಂಡರೆ ಅದನ್ನು ರಿವೈಂಡ್ ಮಾಡಿ ನೋಡುವುದಕ್ಕೆ ಈ ಫೀಚರ್ಸ್‌ ಸಹಕಾರ ಮಾಡಲಿದೆ. ಹಾಗೆಯೇ ವಿಡಿಯೋ ಪ್ಲೇಯರ್‌ನಲ್ಲಿ ಥಂಬ್‌ನೇಲ್‌ಗಳ ಸಾಲನ್ನು ಪ್ರದರ್ಶಿಸಲಿದ್ದು, ನಿಮಗೆ ಯಾವ ಕಂಟೆಂಟ್‌ ವೀಕ್ಷಣೆ ಮಾಡಬೇಕೋ ಅದನ್ನು ನಿಖರವಾಗಿ ಪತ್ತೆ ಮಾಡಿ ಡಿಸ್‌ಪ್ಲೇ ವಿನ್ಯಾಸಕ್ಕೆ ತಕ್ಕಂತೆ ಜೂಮ್‌ ಮಾಡಿ ನೋಡಬಹುದು. ಈಗಾಗಲೇ ಈ ಫೀಚರ್ಸ್‌ ನ್ಯಾವಿಗೇಷನ್ ಟೂಲ್ಸ್‌ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಸುಧಾರಿತ ಫೀಚರ್ಸ್‌ ಮತ್ತಷ್ಟು ಸಹಾಯ ಮಾಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
YouTube is one of the most popular Google apps. Now many new features have been added in YouTube.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X