ಇನ್ನು ಯೂಟ್ಯೂಬ್ ವೀಡಿಯೊಗಳನ್ನು ಆಫ್‌ಲೈನ್‌ನಲ್ಲೂ ವೀಕ್ಷಿಸಿ

By Shwetha
|

ಆಫ್‌ಲೈನ್‌ನಲ್ಲಿದ್ದಾಗಲೂ ವೀಡಿಯೊಗಳನ್ನು ವೀಕ್ಷಿಸುವ ಆಯ್ಕೆಯನ್ನು ಭಾರತೀಯ ಬಳಕೆದಾರರಿಗೆ ಯೂಟ್ಯೂಬ್ ನೀಡುತ್ತಿದೆ. ಗೂಗಲ್ ಮಾಲೀಕತ್ವದಲ್ಲಿರುವ ವೀಡಿಯೊ ಸೇವೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಬಳಕೆದಾರರು ಆಫ್‌ಲೈನ್‌ನಲ್ಲಿದ್ದಾಗ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:ಫೋನ್ ಚಾರ್ಜಿಂಗ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಯೂಟ್ಯೂಬ್ ಅಪ್ಲಿಕೇಶನ್‌ಗಾಗಿ ಹೊಸ ಆಫ್‌ಲೈನ್ ಫೀಚರ್ ಆಫ್‌ಲೈನ್‌ನಲ್ಲಿದ್ದಾಗ ವೀಡಿಯೊಗಳನ್ನು ಪಡೆಯಲು ಅನುಮತಿಸುತ್ತದೆ, ಈ ವಿಡಿಯೊಗಳನ್ನು ಪಡೆದುಕೊಳ್ಳಲು ವೈಫೈ ಅಥವಾ ಮೊಬೈಲ್ ಡೇಟಾ ಯೋಜನೆಗಳನ್ನು ಬಳಸಬೇಕು. ಬಳಕೆದಾರರು ಆಫ್‌ಲೈನ್‌ಗೆ ಹೋದ ನಂತರ 48 ಗಂಟೆಗಳವರೆಗೆ ಇಂಟರ್ನೆಟ್ ಸಂಪರ್ಕ ಇಲ್ಲದೆ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ.

ಯೂಟ್ಯೂಬ್ ವೀಡಿಯೊಗಳು ಇನ್ನು ಆಫ್‌ಲೈನ್‌ನಲ್ಲೂ!!!

ಭಾರತದಲ್ಲಿ 40% ದಷ್ಟು ಟ್ರಾಫಿಕ್ ಮೊಬೈಲ್‌ನಿಂದ ಬರುತ್ತಿದೆ. ಯೂಟ್ಯೂಬ್‌ನಲ್ಲಿ ಈ ಆಫ್‌ಲೈನ್ ಅನುಭವವನ್ನು ಲಾಂಚ್ ಮಾಡುವ ಮೂಲಕ, ಜನರು ಯೂಟ್ಯೂಬ್ ಅನ್ನು ಇನ್ನಷ್ಟು ಇಷ್ಟಪಡಲಿದ್ದಾರೆ. ಮತ್ತು ಅವರ ವೀಡಿಯೊ ನೋಡುವಿಕೆಯ ಸಂಖ್ಯೆ ಹೆಚ್ಚಲಿದೆ ಎಂದು ಯೂಟ್ಯೂಬ್‌ನ ಇಂಜಿನಿಯರಿಂಗ್ ವಿಭಾಗದ ವೈಸ್ ಪ್ರೆಸಿಡೆಂಟ್ ಜಾನ್ ಹಾರ್ಡಿಂಗ್ ತಿಳಿಸಿದ್ದಾರೆ. ಈ ಸೇವೆಯನ್ನು ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್‌ಗಳಲ್ಲಿ ಕೂಡ ಲಾಂಚ್ ಮಾಡಲಾಗಿದೆ.

ಡೇಟಾ ಯೋಜನೆಗಳು ಗರಿಷ್ಟವಾಗಿರುವ ಮತ್ತು ಮೊಬೈಲ್ ಡೇಟಾ ನೆಟ್‌ವರ್ಕ್‌ಗಳು ತುಂಬಾ ಕನಿಷ್ಟವಾಗಿರುವ ಭಾರತದಂತಹ ದೇಶದಲ್ಲಿ ವೀಕ್ಷಕರ ಅನುಭವವನ್ನು ಸುಧಾರಿಸಲು ಯೂಟ್ಯೂಬ್ ಇತರ ಯೋಜನೆಗಳನ್ನು ಕೂ ಹಮ್ಮಿಕೊಂಡಿದೆ.

Best Mobiles in India

English summary
This article tells about YouTube on Thursday said it was giving Indian users the option to watch videos even when they are offline through its mobile application, as the video service owned by Google looks to boost its usage in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X