ಬಳಕೆದಾರರಿಗೆ ನಾಲ್ಕು ಹೊಸ ಆಯ್ಕೆಗಳನ್ನು ಪರಿಚಯಿಸಿದ ಯುಟ್ಯೂಬ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಜನಪ್ರಿಯ ವೀಡಿಯೋ ಅಪ್ಲಿಕೇಶನ್‌ ಯುಟ್ಯೂಬ್‌ ಕೂಡ ಒಂದಾಗಿದೆ. ಯುಟ್ಯೂಬ್‌ ಈಗಾಗಲೇ ವಿಶ್ವದಾದ್ಯಂತ ಜನಪ್ರಿಯಗಳಿಸಿರುವ ವೀಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಯೂಟ್ಯೂಬ್ ತನ್ನ ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಆಗಿದ್ದು, ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿದೆ. ಇದೀಗ ಯುಟ್ಯೂಬ್‌ ಬಳಕೆದಾರರಿಗೆ ಹೊಸ ಆಯ್ಕೆಗಳನ್ನು ಪರಿಚಯಿಸಿದೆ.

ಗೂಗಲ್

ಹೌದು, ಗೂಗಲ್ ಒಡೆತನದ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಬಳಕೆದಾರರಿಗೆ ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡಲು ಹೊಸ ಆಯ್ಕೆಗಳನ್ನು ಹೊರತಂದಿದೆ. ಈ ಹೊಸ ಆಯ್ಕೆಗಳು ಬಳಕೆದಾರರಿಗೆ ಯಾವ ಗುಣಮಟ್ಟವನ್ನು ವೀಡಿಯೊ ಸ್ಟ್ರೀಮ್ ಮಾಡಲು ಬಯಸುತ್ತವೆ ಎಂಬುದರ ಕುರಿತು ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ. ಮೊಬೈಲ್ ಅಪ್ಲಿಕೇಶನ್‌ಗೆ ಸರ್ವರ್-ಸೈಡ್ ಅಪ್‌ಡೇಟ್‌ನ ಭಾಗವಾಗಿ ಈ ಹೊಸ ಆಯ್ಕೆಗಳನ್ನು ಹೊರತಂದಿದೆ. ಹಾಗಾದ್ರೆ ಈ ಹೊಸ ಆಯ್ಕೆಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ

ಯುಟ್ಯೂಬ್‌

ಯುಟ್ಯೂಬ್‌ ಬಳಕೆದಾರರಿಗೆ ವೀಡಿಯೋ ಸ್ಟ್ರೀಮಿಂಗ್‌ನಲ್ಲಿ ಹೊಸ ಆಯ್ಕೆಗಳನ್ನು ಣಿಡಿದೆ. ಹೊಸ ಸರ್ವರ್‌ ಅಪ್ಡೇಟ್‌ ಮಾಡಿರುವುದರಿಂದ ಈ ಆಯ್ಕೆಗಳು ಬಳಕೆದಾರರಿಗೆ ದೊರೆಯುತ್ತಿದೆ. ಇದರ ಪರಿಣಾಮವಾಗಿ ಬಳಕೆದಾರರು ವೀಡಿಯೊವನ್ನು ವೀಕ್ಷಿಸಲು ವೀಡಿಯೊ ರೆಸಲ್ಯೂಶನ್ ವಿಷಯದಲ್ಲಿ ಹೆಚ್ಚಿನ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ವೀಡಿಯೋಗಳನ್ನು ಅಪ್ಡೇಟ್‌ ಮಾಡಬಹುದಾಗಿದೆ. ಇನ್ನು ಯುಟ್ಯೂಬ್‌ ಪರಿಚಯಿಸಿರುವ ನಾಲ್ಕು ಆಯ್ಕೆಗಳ ಕಾರ್ಯವನ್ನು ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಟೋ

ಆಟೋ

ಯುಟ್ಯೂಬ್‌ ಪರಿಚಯಿಸಿರುವ ಹೊಸ ಆಯ್ಕೆಗಳಲ್ಲಿ ಆಟೋ ಆಯ್ಕೆ ಕೂಡ ಒಂದು. ಇದು ವೀಡಿಯೋ ಸ್ಟ್ರೀಮಿಂಗ್‌ನಲ್ಲಿ ಮೊದಲಿನಂತೆ, ಬ್ಯಾಂಡ್‌ವಿಡ್ತ್ ವೇಗಕ್ಕೆ ನೇರ ಅನುಪಾತದಲ್ಲಿ ಸ್ಟ್ರೀಮಿಂಗ್‌ನ ಗುಣಮಟ್ಟವನ್ನು ಬದಲಾಯಿಸುವ ಡೀಫಾಲ್ಟ್ ಆಯ್ಕೆಯಾಗಿದೆ.

ಹೈಯರ್ ಪಿಕ್ಚರ್ ಕ್ವಾಲಿಟಿ

ಹೈಯರ್ ಪಿಕ್ಚರ್ ಕ್ವಾಲಿಟಿ

ಯುಟ್ಯೂಬ್‌ ಪರಿಚಯಿಸಿರುವ ಆಯ್ಕೆಗಳಲ್ಲಿ ಉತ್ತಮ ಗುಣಮಟ್ಟ ಕೂಡ ಒಂದು. ಇದು ಹೆಸರೇ ಸೂಚಿಸುವಂತೆ ಸ್ಟ್ರೀಮ್‌ಗಳು ಉತ್ತಮ ರೆಸಲ್ಯೂಶನ್ ಅನ್ನು ನೀಡುವಂತೆ ಮಾಡಲಿದೆ. ಅಲ್ಲದೆ ಇದರಿಂದ ಹೆಚ್ಚಿನ ಡೇಟಾವನ್ನು ಬಳಸಲಿದ್ದು, ಅನಿರ್ದಿಷ್ಟವಾಗಿದೆ.

ಡೇಟಾ ಸೇವರ್

ಡೇಟಾ ಸೇವರ್

ಕಡಿಮೆ ರೆಸಲ್ಯೂಶನ್ ವೀಡಿಯೊವನ್ನು ಸ್ಟ್ರೀಮ್ ಮಾಡುವ ಮತ್ತು ಕಡಿಮೆ ಡೇಟಾವನ್ನು ಬಳಸುವುದರಿಂದ ‘ಡಾಟಾ ಸೇವರ್' ಹಿಂದಿನ ಆಯ್ಕೆಗೆ ವಿರುದ್ಧವಾಗಿರುತ್ತದೆ.

ಅಡ್ವಾನ್ಸ್ಡ್‌

ಅಡ್ವಾನ್ಸ್ಡ್‌

ನೀವು ವೀಡಿಯೊವನ್ನು ಸ್ಟ್ರೀಮ್ ಮಾಡಲು ಬಯಸುವ ರೆಸಲ್ಯೂಶನ್ ಅನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಲು ‘ಸುಧಾರಿತ' ಆಯ್ಕೆಯು ನಿಮಗೆ ಅನುಮತಿಸುತ್ತದೆ. ನೀವು ಇಲ್ಲಿ 4ಕೆ ವರೆಗೆ ಆಯ್ಕೆ ಮಾಡಬಹುದು, ಆದರೆ ನಿಮ್ಮ ಡಿವೈಸ್‌ ಬೆಂಬಲಿಸಿದರೆ ಮಾತ್ರ ಇದನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಯೂಟ್ಯೂಬ್

ಇನ್ನು ಈ ನಾಲ್ಕು ಆಯ್ಕೆಗಳ ಕೆಳಗೆ, ಎಲ್ಲಾ ವೀಡಿಯೊಗಳಿಗೂ ಡೀಫಾಲ್ಟ್ ಸ್ಟ್ರೀಮಿಂಗ್ ಗುಣಮಟ್ಟವನ್ನು ಹೊಂದಿಸಲು ಯೂಟ್ಯೂಬ್ ಲಿಂಕ್ ಅನ್ನು ನೀಡುತ್ತದೆ. ಮೊಬೈಲ್ ಡೇಟಾ ಅಥವಾ ವೈ-ಫೈ ಆಧಾರದ ಮೇಲೆ ಇಲ್ಲಿ ನೀವು ಪ್ರತ್ಯೇಕತೆಯನ್ನು ಕಾಣಬಹುದು. ಪ್ರತಿಯೊಂದು ಸಂದರ್ಭದಲ್ಲಿ, ನೀವು ಆಟೋ, ಹೈಯರ್ ಪಿಕ್ಚರ್ ಕ್ವಾಲಿಟಿ ಮತ್ತು ಡಾಟಾ ಸೇವರ್ ಅನ್ನು ಆಯ್ಕೆಗಳಾಗಿ ಪಡೆಯಬಹುದು. ಆದಾಗ್ಯೂ, ನಿಮ್ಮ ಡೀಫಾಲ್ಟ್ ಆಯ್ಕೆಗಳನ್ನು ಮಾಡಿದರೂ ಸಹ, ಬಳಕೆದಾರರು ಪ್ರತಿ ವೀಡಿಯೊಗೆ ನಿರ್ದಿಷ್ಟ ವೀಡಿಯೊ ಪ್ಲೇಬ್ಯಾಕ್ ರೆಸಲ್ಯೂಶನ್ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

Most Read Articles
Best Mobiles in India

English summary
YouTube has rolled out new options for its users for streaming videos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X