ಯೂಟ್ಯೂಬ್ ಚಾಟ್ ಇಂಟರ್ಫೇಸ್ ಮೂಲಕ ವಿಡಿಯೋ ಶೇರ್ ಮಾಡಿ!!

ಯೂಟ್ಯೂಬ್ನಲ್ಲಿ ವಿಡಿಯೋ ಶೇರ್ ಮಾಡಲು ಚಾಟ್ ಇಂಟರ್ಫೇಸ್ ಹೊಸ ಆಪ್ ಪರಿಚಯಿಸಿದೆ. ಇದರಲ್ಲಿ ಪಠ್ಯ, ಎಮೊಜಿಗಳು, ವೀಡಿಯೊ ಲಿಂಕ್ಗಳನ್ನು ಹಂಚಿಕೊಳ್ಳಬಹುದಾಗಿದೆ. ಮಾತ್ರವಲ್ಲದೇ, ಗರಿಷ್ಠ 30 ಮಂದಿ ಗ್ರೂಪ್ ಮಾಡಿ ಚಾಟ್ ಮಾಡಬಹುದಾಗಿದೆ.

By Prathap T
|

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಮನ್ನಣೆ ಪಡೆದಿರುವ ಯೂಟ್ಯೂಬ್ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ. ಯೂಟ್ಯೂಬ್ ನಲ್ಲಿ ಸ್ನೇಹಿತರಿಗೆ ಅಥವಾ ಹಿತೈಷಿಗಳಿಗೆ ವಿಡಿಯೋ ಶೇರ್ ಮಾಡಲು ಚಾಟ್ ಇಂಟರ್ಫೇಸ್ ಎಂಬ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದೆ. ಇನ್ಸ್ಟಗ್ರಾಂ ಮಾದರಿಯಲ್ಲಿ ಈ ಚಾಟ್ ಇಂಟರ್ಫೇಸ್ ಕಾರ್ಯನಿರ್ವಹಿಸಲಿದೆ. ವಿಡಿಯೋ ಗಳ ಬಗ್ಗೆ ಮೆಸೆಜ್ ಚರ್ಚೆ, ಮಾತುಕತೆಯನ್ನು ಇಲ್ಲಿ ಮಾಡಬಹುದಾಗಿದೆ.

ಯೂಟ್ಯೂಬ್ ಚಾಟ್ ಇಂಟರ್ಫೇಸ್ ಮೂಲಕ ವಿಡಿಯೋ ಶೇರ್ ಮಾಡಿ!!

ಫೋನ್ ಕಾಂಟ್ಯಾಕ್ಟ್ನಲ್ಲಿ ಸೇವ್ ಆಗಿರುವ ನಂಬರ್ಗಳಿಗೆ ಯೂಟ್ಯೂಬ್ ಚಾಟ್ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳಬುದು.ಈ ವೈಶಿಷ್ಟ್ಯವನ್ನು ಬಳಸಿಕೊಂಡು ಅವುಗಳನ್ನು ಪ್ರೇರೇಪಿಸುವಂತೆ ಬಳಕೆದಾರರನ್ನು ಆಹ್ವಾನಿಸುವ ಒಂದು ಆಯ್ಕೆಯನ್ನು ಇದು ಒದಗಿಸುತ್ತದೆ. ಈ ಹೊಸ ವೈಶಿಷ್ಟ್ಯವು ಒಂದೇ ಗುಂಪಿನಲ್ಲಿ ಗರಿಷ್ಠ 30 ಮಂದಿ ಸದಸ್ಯರನ್ನು ಒಳಗೊಂಡ ಗ್ರೂಪ್ ರಚಿಸಿ ಚಾಟ್ ಮಾಡಬಹುದು.

ಇಲ್ಲಿ ಪಠ್ಯ ಸಂದೇಶಗಳು, ಎಮೊಜಿಗಳು, ವೀಡಿಯೊಗಳ ಲಿಂಕ್ ಮತ್ತು ಇಂಟರ್ಫೇಸ್ ಮೂಲಕ ಹಂಚಿಕೊಳ್ಳಬಹುದಾದ ಕ್ಲಿಪ್ ರಚಿಸುವ ಆಯ್ಕೆಗಳ ಬೆಂಬಲವನ್ನೂ ಸಹ ಇಲ್ಲಿ ಪಡೆಯಬಹುದಾಗಿದೆ. ಪ್ರಸಕ್ತ ವರ್ಷದಲ್ಲಿ ಈ ವೈಶಿಷ್ಟ್ಯವನ್ನು ಕೆನಡಾ ದೇಶದಲ್ಲಿ ಪರಿಚಯಿಸಲಾಗಿತ್ತು. ಇದೀಗ ಪ್ರಪಂಚದಾದ್ಯಂತ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಯೂಟ್ಯೂಬ್ ಮ್ಯೂಸಿಕ್ನಲ್ಲಿ ಈಗ ಬಂದಿದೆ ಆಫ್ಲೈನ್ ಸೇವ್ ಆಯ್ಕೆ!ಯೂಟ್ಯೂಬ್ ಮ್ಯೂಸಿಕ್ನಲ್ಲಿ ಈಗ ಬಂದಿದೆ ಆಫ್ಲೈನ್ ಸೇವ್ ಆಯ್ಕೆ!

ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಸಹ ಬಳಕೆದಾರರೊಂದಿಗೆ ವೀಡಿಯೊಗಳನ್ನು ಹಂಚಿಕೊಳ್ಳಲು ಸುಲಭಗೊಳಿಸುತ್ತದೆ.

ಯೂಟ್ಯೂಬ್ ವೀಡಿಯೋಗಳನ್ನು ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರ್ಯಾಮ್, ಮತ್ತು ವಾಟ್ಸಪ್ ಸೇರಿದಂತೆ ಮುಂತಾದ ವಿವಿಧ ಪ್ಲಾಟ್ಫಾರ್ಮ್ಗಳ ಮೂಲಕ ಹಂಚಿಕೊಳ್ಳಲು ಯೂಟ್ಯೂಬ್ ಅಪ್ಲಿಕೇಶನ್ನಲ್ಲಿ ವೈಶಿಷ್ಟ್ಯವನ್ನು ಪರಿಚಯಿಸಿರುವುದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಿದೆ. ಬಳಕೆದಾರರಿಗೆ ಆನ್ಲೈನ್ನಲ್ಲಿ ವೀಡಿಯೋಗಳನ್ನು ಸುಲಭವಾಗಿ ವೀಕ್ಷಿಸಬಹುದಾದ ವೇದಿಕೆಯ ಉದ್ದೇಶಕ್ಕಾಗಿ ಯೂಟ್ಯೂಬ್ನ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ.

ಯೂಟ್ಯೂಬ್ ಈ ವೈಶಿಷ್ಟ್ಯವನ್ನು ತುಂಬಾ ತಡವಾಗಿ ಪರಿಚಯಿಸಿದೆ. ಆದರೆ ಈ ವೈಶಿಷ್ಠ್ಯತೆಯು ವಿಡಿಯೋಗಳನ್ನು ಶೇರ್ ಮಾಡಲು ಸುಲಭವಾಗಿ ಹಂಚಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಯೂಟ್ಯೂಬ್ನಲ್ಲಿ ಗಂಟೆಗಳಷ್ಟು ಕಾಲ ಕಳೆಯುವ ಜನರು ಈ ವೈಶಿಷ್ಟ್ಯವನ್ನು ಹೆಚ್ಚು ಬಳಕೆಗೆ ಒಡ್ಡಿಕೊಳ್ಳುವುದಂತೂ ಗ್ಯಾರಂಟಿ.

Best Mobiles in India

Read more about:
English summary
YouTube has introduced a new feature for its mobile app that allows users to share videos and chat on the app itself.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X