ಇನ್ನಷ್ಟು ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು: ಬಂದಿದೆ ಹೊಸ ಆಯ್ಕೆ..!

By Precilla Dias
|

ಇನ್ನಷ್ಟು ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು: ಬಂದಿದೆ ಹೊಸ ಆಯ್ಕೆ..!

ಸಾರಾಂಶ:

ಸ್ಮಾರ್ಟ್ ಫೋನ್ ಬಳಕೆದಾರರು ಅತೀ ಹೆಚ್ಚಿನ ಸಮಯವನ್ನು ಯೂಟ್ಯೂಬ್ ನಲ್ಲಿಯೇ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ವರದಿಯೊಂದು ಹೊರ ಹಾಕಿದ್ದು, ಇದೇ ಸಂದರ್ಭದಲ್ಲಿ ಯೂಟ್ಯೂಬ್ ತನ್ನ ಮೊಬೈಲ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ. ಯೂಟ್ಯೂಬ್ ಇನ್ನು ಮುಂದೆ ಡಾರ್ಕ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದೆ. ಸದ್ಯ ಮೊದಲಿಗೆ ಇದು ಐಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

ಇನ್ನಷ್ಟು ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು: ಬಂದಿದೆ ಹೊಸ ಆಯ್ಕೆ..!


ಈಗಾಗಲೇ ಡಾರ್ಡ್ ಯೂಟ್ಯೂಬ್ ಪ್ರಾಯೋಗಿಕ ಸೇವೆಯೂ ಆರಂಭವಾಗಿದ್ದು, ಶೀಘ್ರವೇ ಆಪಲ್ ಬಳಕೆದಾರರಿಗೆ ಈ ಸೇವೆಯೂ ದೊರೆಯಲಿದೆ. ಇದಾದ ನಂತರದಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಹೊಸ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ವಿಡಿಯೋ ನೋಡುವ ಅನುಭವನ್ನು ಹೆಚ್ಚು ಮಾಡಲಿದೆ.

ಇದು ಹೆಚ್ಚು ಸಮಯ ಮೊಬೈಲ್ ನಲ್ಲಿ ವಿಡಿಯೋ ನೋಡಿದರು ಕಣ್ಣಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಅಲ್ಲದೆ ವಿಡಿಯೋ ಸುತ್ತಲು ಇರುವ ಆಯ್ಕೆಗಳು ಕಪ್ಪು ಬಣ್ಣದಲ್ಲೇ ಇರುವುದರಿಂದ ವಿಡಿಯೋ ನೋಡುವ ವಿಧಾನವೂ ಬದಲಾಗಲಿದ್ದು, ಹೆಚ್ಚು ಹೊತ್ತು ವಿಡಿಯೋಗಳನ್ನು ನೋಡಬಹುದಾಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: ಫಿಲಿಪ್ಸ್ LED ಬಲ್ಬ್ ಹಾಕಿಕೊಂಡರೆ ಸಾಕು: ವೈ-ಫೈ ಬೇಡ-ಮೊಬೈಲ್ ಡೇಟಾ ಬೇಡ.!

ಮಾರುಕಟ್ಟೆಯಲ್ಲಿ ಡಾರ್ಕ್ ಮೋಡ್ ಆಪ್ ಗಳ ಜನಪ್ರಿಯತೆಯೂ ಹೆಚ್ಚಾಗುತ್ತಿದೆ. ಇದೆ ಕಾರಣಕ್ಕಾಗಿ ಯೂಟ್ಯೂಬ್ ಸಹ ತನ್ನ ಬಳಕೆದಾರರಿಗೆ ಡಾರ್ಕ್ ಆವೃತ್ತಿಯ ಯೂಟ್ಯೂಬ್ ಅನ್ನು ಪರಿಚಯ ಮಾಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಸಮಯವನ್ನು ಯೂಟ್ಯೂಬ್ ನಲ್ಲಿಯೇ ಕಳೆಯುವಂತಾಗಲಿದೆ.

ಈಗಾಗಲೇ ಭಾರತದಲ್ಲಿ ಅತೀ ಹೆಚ್ಚಿನ ಮಂದಿ ಯೂಟ್ಯೂಬ್ ಬಳಕೆದಾರರಿದ್ದು, 4G ವೇಗದ ಇಂಟರ್ನೆಟ್ ಸೇವೆಯೂ ಉಚಿತವಾಗಿ ದೊರೆತ ಹಿನ್ನಲೆಯಲ್ಲಿ ಬಳಕೆದಾರರು ಹೆಚ್ಚಿನ ಸಮಯವನ್ನು ಯೂಟ್ಯೂಬ್ ನಲ್ಲಿಯೇ ಕಳೆಯುತ್ತಿದ್ದಾರೆ ಎನ್ನಲಾಗಿದೆ.

Best Mobiles in India

English summary
YouTube iOS app gets Dark Mode. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X