ಟಿಕ್‌ಟಾಕ್‌ ಆಪ್‌ಗೆ ಟಾಂಗ್ ಕೊಡಲು ಯೂಟ್ಯೂಬ್‌ನಲ್ಲಿ ಹೊಸ ಫೀಚರ್!

|

ಜನಪ್ರಿಯ ವಿಡಿಯೊ ಪ್ಲಾಟ್‌ಫಾರ್ಮ್ ತಾಣವಾಗಿರುವ ಯೂಟ್ಯೂಬ್ ಇದೀಗ ಹೊಸದೊಂದು ಫೀಚರ್ಸ್‌ ಅಳವಡಿಸಲು ಮುಂದಾಗಿದೆ. ಈ ಫೀಚರ್‌ ಬಳಕೆದಾರರಿಗೆ ವಿಡಿಯೊ ರೆಕಾರ್ಡ್ ಮಾಡಲು ಅನುವು ಮಾಡಿಕೊಡಲಿದೆ. ಈ ಮೂಲಕ ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಸಂಸ್ಥೆಯ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಸೆಡ್ಡು ಹೊಡೆಯಲು ಇದೀಗ ಗೂಗಲ್ ಒಡೆತನದ ಯೂಟ್ಯೂಬ್ ಪಣತೊಟ್ಟಿದೆ.

15 ಸೆಕೆಂಡ್‌ಗಳ

ಹೌದು, ಯೂಟ್ಯೂಬ್ ಇದೀಗ 15 ಸೆಕೆಂಡ್‌ಗಳ ವಿಡಿಯೊ ಕ್ಲಿಪ್‌ ರೆಕಾರ್ಡ್ ಮಾಡಲು ಅನುಕೂಲವಾಗುವಂತೆ ಫೀಚರ್ ಪರಿಚಯಿಸಲಿದೆ. ಈ ಆಯ್ಕೆಯಲ್ಲಿ ವಿಡಿಯೊ ಕ್ರಿಯೆಟರ್ಸ್‌ಗಳಿಗೆ 15 ಸೆಕೆಂಡುಗಳ ವಿಡಿಯೊ ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಬಹುದಾಗಿದೆ ಎಂದು ಯೂಟ್ಯೂಬ್ ಹೇಳಿದೆ. ಹಾಗೆಯೇ AR ಮತ್ತು ಎಡಿಟಿಂಗ್ ಆಯ್ಕೆಗಳು ಸಹ ಲಭ್ಯವಾಗುತ್ತವೆ.

ವಿಡಿಯೊ ಕ್ರಿಯೆಟ

ವಿಡಿಯೊ ಕ್ರಿಯೆಟರ್ಸ್‌ಗಳು ಬೇಕಿದ್ದರೇ ಒಂದೇ ಸಮಯದಲ್ಲಿ ದೀರ್ಘ ವೀಡಿಯೊಗಳನ್ನು ಅಪ್‌ಲೋಡ್ ಸಹ ಮಾಡಬಹುದಾಗಿದೆ. ವಿಡಿಯೊಗಳನ್ನು ನೇರವಾಗಿ ಫೋನ್‌ನ ಗ್ಯಾಲರಿಯಿಂದ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಯೂಟ್ಯೂಬ್ ಹೇಳಿದೆ. ಟಿಕ್‌ಟಾಕ್‌ಗಿಂತ ಹೆಚ್ಚಾಗಿ ಯೂಟ್ಯೂಬ್ ಮೂಲಕ ಕಡಿಮೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಕ್ರಿಯೆಟರ್ಸ್‌ಗಳನ್ನು ಸಂಯೋಜಿಸಲು ಇದು ಕಂಪನಿಯಿಂದ ಕಾರ್ಯತಂತ್ರದ ಬದಲಾವಣೆಯಾಗಿದೆ.

ಗೂಗಲ್ ಸಂಸ್ಥೆಯು

ಹಾಗೆಯೇ ಗೂಗಲ್ ಸಂಸ್ಥೆಯು ಇತ್ತೀಚಿಗೆ ಟಿಕ್‌ಟಾಕ್‌ ನಂತೆಯೆ ಕಾರ್ಯನಿರ್ವಹಿಸುವ ಟ್ಯಾಂಗಿ (Tangi) ಆಪ್‌ ಅನ್ನು ಪರಿಚಯಿಸಿತ್ತು. ಆದರೆ ಈ ಆಪ್‌ ಥೇಟ್‌ ಟಿಕ್‌ಟಾಕ್‌ನಂತೆಯೆ ಕಾರ್ಯನಿರ್ವಹಿಸುತ್ತದೆ. ಈ ಆಪ್‌ನಲ್ಲಿ ಕೂಡ ನೀವು ಕಿರು ವಿಡಿಯೋಗಳನ್ನ ಆಪ್‌ಲೋಡ್‌ ಮಾಡಬಹುದು. ಆಪ್‌ಲೋಡ್‌ ಮಾಡಿದ ವಿಡಿಯೋಗಳಿಗೆ ಲೈಕ್ಸ್‌, ಕಾಮೆಂಟ್‌ ಎಲ್ಲವನ್ನೂ ಮಾಡಬಹುದು, ಅಷ್ಟೇ ಅಲ್ಲ ಇತರರನ್ನ ಫಾಲೊ ಮಾಡುವ ಹಾಗೂ ನಿಮಗಿಷ್ಟವಾದ ಗುಂಪಿನ ಜೊತೆ ಚಾಟ್‌ ಮಾಡುವ ಅವಕಾಶವನ್ನ ನೀಡಲಾಗಿದೆ.

ಟ್ಯಾಂಗಿ ಆಪ್ಲಿಕೇಶನ್‌

ಟ್ಯಾಂಗಿ ಆಪ್ಲಿಕೇಶನ್‌ ಪ್ರಸ್ತುತ ಐಒಎಸ್ ಅಪ್ಲಿಕೇಶನ್‌ನೊಂದಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಹೊಸ ಪ್ಲಾಟ್‌ಫಾರ್ಮ್ ಡು ಇಟ್ ಯುವರ್‌ಸೆಲ್ಫ್ (DIY) ವಿಭಾಗ ಮತ್ತು ಕ್ರಿಯೆಟಿವಿಟಿಯ ಮೇಲೆ ಕೇಂದ್ರೀಕರಿಸಿದೆ ಎಂದು ಗೂಗಲ್ ಬಹಿರಂಗಪಡಿಸಿದೆ. ಕ್ರಾಫ್ಟಿಂಗ್, ಅಡುಗೆ, ಚಿತ್ರಕಲೆ, ಸೌಂದರ್ಯ, ಫ್ಯಾಷನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ DIY ವಿಷಯಗಳ ಕುರಿತು ವಿಡಿಯೊಗಳನ್ನು ಹಂಚಿಕೊಳ್ಳಲು ಕ್ರಿಯೆಟಿವಿಟಿಯುಳ್ಳವರಗೆ ಈ ವೇದಿಕೆ ಅನುಮತಿಸುತ್ತದೆ.

Most Read Articles
Best Mobiles in India

English summary
YouTube said it’s letting some people record short videos with this feature called multi-segment videos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X