ಯುಟ್ಯೂಬ್ ಮಕ್ಕಳಿಗೆ ಸುರಕ್ಷಿತವಾಗಿರಬೇಕೆಂದು ಒಂದು ಹೆಜ್ಜೆ ಮುಂದೆ ಇಟ್ಟ ಗೂಗಲ್

By Gizbot Bureau
|

ಗೂಗಲ್ ವೀಡಿಯೋ ಫ್ಲ್ಯಾಟ್ ಫಾರ್ಮ್ ಯುಟ್ಯೂಬ್ ಮಕ್ಕಳಿಗಾಗಿ ಸಪರೇಟ್ ಆಗಿರುವ ವೆಬ್ ಸೈಟ್ ನ್ನು ಬಿಡುಗಡೆಗೊಳಿಸುವುದಕ್ಕೆ ಸಿದ್ಧತೆ ನಡೆಸಿದೆ. 2016 ರಲ್ಲಿ ಮಕ್ಕಳನ್ನು ಕೇಂದ್ರೀಕರಿಸಿದ ಯುಟ್ಯೂಬ್ ವರ್ಷನ್ ಯುಟ್ಯೂಬ್ ಕಿಡ್ಸ್ ಆಪ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಆಪ್ ಫ್ಯಾಮಿಲಿ ಫ್ರೆಂಡ್ಸಿ ಆಪ್ ಆಗಿ ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ಬಳಕೆದಾರರಿಗಾಗಿ ಬಿಡುಗಡೆಗೊಂಡಿತ್ತು.

ಬ್ಲಾಗ್ ಪೋಸ್ಟ್:

ಇದೀಗ ಗೂಗಲ್ ಹೊಸದಾಗಿ ಸಪರೇಟ್ ಆಗಿರುವ ವೆಬ್ ಸೈಟ್ ನ್ನು ಬಿಡುಗಡೆಗೊಳಿಸಲಿದ್ದು ಅದನ್ನು ತನ್ನ ಯುಟ್ಯೂಬ್ ಫೋರಂ ಸಪೋರ್ಟ್ ಪೇಜಿನಲ್ಲಿ ಪ್ರಕಟಿಸಿದೆ. "ಈ ವಾರಾಂತ್ಯದಲ್ಲಿ ನಾವು ಯುಟ್ಯೂಬ್ ಕಿಡ್ಸ್ ನ್ನು ವೆಬ್ ನಲ್ಲಿ ಬಿಡುಗಡೆಗೊಳಿಸಲಿದ್ದೇವೆ!ಈ ಥ್ರೆಡ್ ಬಗ್ಗೆ ನಾವು ನಿಮಗೆ ಅಪ್ ಡೇಟ್ ನೀಡಲಿದ್ದು ಹೊಸ ಸೈಟ್ ಲೈನ್ ಆದಷ್ಟು ಬೇಗನೆ ಲೈವ್ ಆಗಲಿದೆ" ಎಂದು ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಮೂರು ವಿಭಿನ್ನ ಗುಂಪು:

ಪೋಸ್ಟ್ ನಲ್ಲಿ ಯುಟ್ಯೂಬ್ ಕಿಡ್ಸ್ ಆಪ್ ಗೆ ಹೊಸ ಅಪ್ ಡೇಟ್ ಬರುವ ಬಗ್ಗೆಯೂ ಕೂಡ ಪ್ರಕಟಿಸಲಾಗಿದೆ. ಯುಟ್ಯೂಬ್ ಕಿಡ್ಸ್ ಆಪ್ ಪೋಷಕರಿಗೆ ಮೂರು ವಿಭಿನ್ನ ರೀತಿಯ ವಯಸ್ಸನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡುತ್ತದೆ-ಪ್ರೀಸ್ಕೂಲ್, ಯಂಗರ್ ಮತ್ತು ವೋಲ್ಡರ್ ಎಂಬುದು ಇದರ ಆಯ್ಕೆಗಳು. ಆ ಮೂಲಕ ಸರಿಯಾದ ಕಟೆಂಟ್ ನ್ನು ನೀವು ನಿಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಬಹುದು.

ಪ್ರೀಸ್ಕೂಲ್ ಗುಂಪು:

ಪ್ರೀಸ್ಕೂಲ್ ವಯಸ್ಸಿನ ಗುಂಪಿನಲ್ಲಿ ನಾಲ್ಕು ವರ್ಷ ಮತ್ತು ಅದಕ್ಕಿಂತ ಚಿಕ್ಕ ಮಕ್ಕಳಿಗೆ ತೋರಿಸಬಹುದಾದ ವೀಡಿಯೋಗಳಿರುತ್ತದೆ. ಇದರಲ್ಲಿ ಕ್ರಿಯೇಟಿವಿಟಿ. ಪ್ಲೇಫುಲ್ ನೆಸ್, ತಿಳುವಳಿಕೆ ನೀಡುವ ಮತ್ತು ಸಂಶೋಧಿಸುವಂತಹ ಅಥವಾ ಹುಡುಕಾಟಕ್ಕೆ(ಎಕ್ಸ್ ಪ್ಲೋರಿಂಗ್) ಕೆಲವು ವೀಡಿಯೋಗಳು ಇರುತ್ತದೆ ಎಂದು ಯುಟ್ಯೂಬ್ ಹೇಳಿದೆ.

ಯಂಗರ್ ಗುಂಪು:

"ಯಂಗರ್" ವಯಸ್ಸಿನ ಗುಂಪನ್ನು 5 ರಿಂದ 7 ವರ್ಷದ ಮಕ್ಕಳಿಗಾಗಿ ಡಿಸೈನ್ ಮಾಡಲಾಗಿರುತ್ತದೆ. ಇದರಲ್ಲಿ ಹಾಡುಗಳು, ಕಾರ್ಟೂನ್ ಗಳು, ಕ್ರಾಫ್ಟ್ ಮತ್ತು ಇತ್ಯಾದಿಗಳಿಗೆ ಸಂಬಂಧಿಸಿದ ವೀಡಿಯೋಗಳಿರುತ್ತದೆ.

ಓಲ್ಡರ್ ಗುಂಪು:

ಕೊನೆಯದಾಗಿ "ಓಲ್ಡರ್" ವಯಸ್ಸಿನ ಗುಂಪಿನಲ್ಲಿ ಹೆಚ್ಚುವರಿ ಮ್ಯೂಸಿಕ್ ವೀಡಿಯೋಗಳು, ಗೇಮಿಂಗ್ ಗಳು, ಫ್ಯಾಮಿಲಿ ವಿಲಾಗ್ಸ್ ಗಳು, ವಿಜ್ಞಾನ ಮತ್ತು ಇತ್ಯಾದಿಗಳಿಗೆ ಸಂಬಂಧಿಸಿದ 8 ರಿಂದ 12 ನೇ ವಯಸ್ಸಿನ ಮಕ್ಕಳಿಗೆ ಹೊಂದಿಕೆಯಾಗುವಂತಹ ವೀಡಿಯೋಗಳನ್ನು ಸೇರಿಸಿ ವಿಂಗಡನೆ ಮಾಡಲಾಗಿರುತ್ತದೆ.

ಪೋಷಕರಿಗೆ ಚಿಂತೆಯಾಗಬಾರದು!

ಈ ಹಿಂದೆ ಗೂಗಲ್ ನ ಸಿಇಓ ಸುಂದರ್ ಪಿಚೈ ಯುಟ್ಯೂಬ್ ಮೂಲಕ ಎಜುಕೇಷನಲ್ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯ ನಿರ್ವಹಿಸಿ ಕಿಡ್ಸ್ ಆಪ್ ನ ಅಭಿವೃದ್ಧಿಯೆಡೆಗೆ ಗಮನ ಹರಿಸಿದ್ದರು. "ಈ ಪ್ರೊಡಕ್ಟ್ ಮೂಲಕ ನಾವು ವಿಕಾಸವನ್ನು ಮುಂದುವರಿಸಲು,ಹೆಚ್ಚು ಆಸಕ್ತಿದಾಯಕವಾಗಿರುವ ವಿಚಾರವನ್ನು ಸೇರಿಸಲು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರಲು ಜೊತೆಗೆ ಪೋಷಕರಿಗೆ ಮನಸ್ಸಿನ ಶಾಂತಿಯನ್ನು ನೀಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ" ಎಂದು ಪಿಚೈ ಹೇಳಿದ್ದಾರೆ.

ದಂಡ ನೀಡಿದ ಯುಟ್ಯೂಬ್:

ಜುಲೈ ನಲ್ಲಿ ಗೂಗಲ್ ಮಕ್ಕಳ ಡೇಟಾ ಗೌಪ್ಯತೆ ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ಜೊತೆಗೆ ಬಹು ಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿತ್ತು ಎಂಬ ಬಗ್ಗೆ ವರದಿಯಾಗಿತ್ತು. ಇನ್ನು ಜೂನ್ ನಲ್ಲಿ ಮಕ್ಕಳ ವೀಡಿಯೋಗಳನ್ನು ಯುಟ್ಯೂಬ್ ನಿರ್ವಹಿಸುತ್ತಿರುವುದರ ಬಗ್ಗೆ ತನಿಖೆ ಕೈಗೊಂಡಿದ್ದ ಯುಸ್ ಫೆಡರರ್ ಸರ್ಕಾರಕ್ಕೆ ದಂಡವನ್ನು ಕೂಡ ತೆತ್ತಿತ್ತು. ನಂತರ ಗೂಗಲ್ ನ ಯುಟ್ಯೂಬ್ ಫ್ಲ್ಯಾಟ್ ಫಾರ್ಮ್ ನೋಡುಗರಿಗೆ, ಮಕ್ಕಳಿಗೆ ಎಲ್ಲಾ ರೀತಿಯಲ್ಲೂ ಸುರಕ್ಷಿತವಾಗಿರುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಅದೇ ಕಾರಣಕ್ಕೆ ಹಲವು ಬದಲಾವಣೆಗಳನ್ನು ಫ್ಲ್ಯಾಟ್ ಫಾರ್ಮ್ ನಲ್ಲಿ ಮಾಡಲಾಗುತ್ತಿದೆ.

Best Mobiles in India

English summary
YouTube Might Get Much Safer For Kids

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X