ಯೂಟ್ಯೂಬ್‌ನಲ್ಲಿ ಶಾರ್ಟ್‌ ಮತ್ತು ಲಾಂಗ್‌ ವಿಡಿಯೋಗೆ ವಿಶೇಷ ಟ್ಯಾಬ್ಸ್‌!

|

ಯೂಟ್ಯೂಬ್ ಈಗಂತೂ ಎಲ್ಲರ ಅಚ್ಚುಮೆಚ್ಚಿನ ತಾಣವಾಗಿದೆ. ಅದರಲ್ಲೂ ಯೂಟ್ಯೂಬ್‌ ಚಾನಲ್‌ ಮೂಲಕ ಅದೆಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅದರಷ್ಟೇ ಮನರಂಜನೆ ಹಾಗೂ ಮಾಹಿತಿಯನ್ನೂ ಪಡೆಯುತ್ತಿದ್ದಾರೆ. ಇದೆಲ್ಲದರ ಜೊತೆಗೆ ಗೂಗಲ್‌ ಮಾಲೀಕತ್ವದ ಯೂಟ್ಯೂಬ್‌ ಸಾಕಷ್ಟು ಫೀಚರ್ಸ್‌ಗಳನ್ನು ಪರಿಯಿಸುವ ಮೂಲಕ ಹೆಚ್ಚು ಗಮನಸೆಳೆದಿದೆ. ಇದರ ಜೊತೆಗೆ ಈಗ ನೂತನ ಫೀಚರ್ಸ್‌ ಒಂದನ್ನು ಪರಿಚಯಿಸಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್ ತನ್ನ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಲು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಕೆಲವು ನವೀಕರಣಗಳನ್ನು ಮಾಡುತ್ತಾ ಬರುತ್ತಿದೆ. ಉತ್ತಮ ವಿಡಿಯೋ ಕಂಟೆಂಟ್‌ ಜೊತೆಗೆ ವಿಡಿಯೋ ಕ್ರಿಯೇಟರ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ತಲ್ಲೀನರಾಗುವಂತೆ ಮಾಡಲು ಸಾಕಷ್ಟು ಸಹಕಾರ ನೀಡುತ್ತಿದೆ. ಇದರ ಭಾಗವಾಗಿ ಯೂಟ್ಯೂಬ್ ತನ್ನ ಸ್ಟುಡಿಯೋ ಎಡಿಟರ್‌ನಲ್ಲಿ ಕೆಲವು ಆಪ್ಟಿಮೈಸೇಶನ್‌ಗಳೊಂದಿಗೆ ಅಪ್‌ಡೇಟ್‌ ಮಾಡಿತ್ತು. ಈ ಕಾರ್ಯ ಈ ವರ್ಷದ ಫೆಬ್ರವರಿಯಲ್ಲಿ ಜರುಗಿತ್ತು.

ವಿಡಿಯೋ

ಇನ್ನು ಬಳಕೆದಾರರು ಈಗ ತಮ್ಮ ವಿಡಿಯೋಗಳಲ್ಲಿ ವಿಡಿಯೋ ಥಂಬ್‌ನೇಲ್‌ಗಳು, ಎಂಡ್ ಸ್ಕ್ರೀನ್‌ಗಳು, ಆಡಿಯೊ ಟ್ರ್ಯಾಕ್‌ಗಳು ಮತ್ತು ಮಾಹಿತಿ ಕಾರ್ಡ್‌ಗಳನ್ನು ಸುಲಭವಾಗಿ ಆಡ್‌ ಮಾಡಲು ಅನುವು ಮಾಡಿಕೊಟ್ಟಿದೆ. ಹಾಗೆಯೇ ವಿಡಿಯೋಗಳನ್ನು ಟ್ರಿಮ್ ಮಾಡಬಹುದಾದ ಹಾಗೂ ಮತ್ತು ಬ್ಲರ್ ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಿದ್ದು, ಈಗ ಇದರ ಸಾಲಿಗೆ ಹೊಸ ಶಾರ್ಟ್‌ ಹಾಗೂ ಲಾಂಗ್‌ ವಿಡಿಯೋ ಫೀಚರ್ಸ್‌ ಸೇರ್ಪಡೆಗೊಂಡಿದೆ.

ಹೊಸ ಟ್ಯಾಬ್ಸ್‌

ಹೊಸ ಟ್ಯಾಬ್ಸ್‌

ಇತ್ತೀಚಿನ ಅಪ್‌ಡೇಟ್‌ನಲ್ಲಿ ಚಾನಲ್‌ ಪೇಜ್‌ನಲ್ಲಿ ಬಳಕೆದಾರರ ಅನುಕೂಲಕ್ಕೆ ಶಾರ್ಟ್‌ ಹಾಗೂ ಲಾಂಗ್‌ ವಿಡಿಯೋಗಾಗಿ ಹೊಸ ಟ್ಯಾಬ್ಸ್‌ ಆಯ್ಕೆ ನೀಡಿದೆ. ಈ ಮೂಲಕ ವೀಕ್ಷಕರು ತಾವು ಏನನ್ನು ವೀಕ್ಷಿಸಬೇಕು ಎಂಬುದನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ. ಇಷ್ಟವಾಗುವ ಕಂಟೆಂಟ್‌ ಹುಡುಕಲು ವ್ಯಯಿಸುವ ಸಮಯವನ್ನು ಉಳಿಸಬಹುದಾಗಿದೆ.

ಅಪ್‌ಡೇಟ್‌ ಫೀಚರ್‌ ಲಾಭ ಏನು?

ಅಪ್‌ಡೇಟ್‌ ಫೀಚರ್‌ ಲಾಭ ಏನು?

ಮೊದಲೇ ಹೇಳಿದಂತೆ ಚಾನಲ್ ಪುಟದಲ್ಲಿ ಶಾರ್ಟ್‌ ಹಾಗೂ ಲಾಂಗ್ ವಿಡಿಯೋಗಳಿಗೆ ಚಾನಲ್‌ನಲ್ಲಿ ಪ್ರತ್ಯೇಕ ಟ್ಯಾಬ್ಸ್‌ ಡಿಸ್‌ಪ್ಲೇ ಆಗುತ್ತವೆ. ಯಾಕೆಂದರೆ ವಿವಿಧ ಯೂಟ್ಯೂಬರ್‌ಗಳಿಂದ ವಿಡಿಯೋಗಳನ್ನು ಎಕ್ಸ್‌ಪ್ಲೋರ್ ಮಾಡುವಾಗ ವೀಕ್ಷಕರು ತಾವು ಬಯಸುವ ಕಂಟೆಂಟ್ ಪ್ರಕಾರದ ವಿಡಿಯೋವನ್ನು ನೋಡಲು ಇದು ಸಹಾಯಕವಾಗಲಿದೆ.

ಗೊಂದಲ ದೂರ

ಗೊಂದಲ ದೂರ

ಈ ಮೊದಲು ಎಲ್ಲಾ ರೀತಿಯ ವಿಡಿಯೋಗಳು ಒಂದೇ ವಿಡಿಯೋ ವಿಭಾಗದಲ್ಲಿ ಡಿಸ್‌ಪ್ಲೇ ಆಗುತ್ತಿದ್ದವು. ಪರಿಣಾಮ ಯಾವ ವಿಡಿಯೋ ನೋಡಬೇಕು, ಯಾವ ವಿಡಿಯೋ ಕ್ವಿಟ್‌ ಮಾಡಬೇಕು ಎಂಬ ಗೊಂದಲ ನಿಮಗೂ ಸಹ ಕಾಡಿರಬಹುದು. ಈ ಕಾರಣಕ್ಕೆ ಯೂಟ್ಯೂಬ್‌ ಈ ಫೀಚರ್ಸ್‌ ಪರಿಚಯಿಸಿದೆ. ಹೀಗಾಗಿ ಗೊಂದಲದ ಭಾವನೆ ದೂರವಾಗಿ ಇಷ್ಟವಾಗುವ ಕಂಟೆಂಟ್‌ಗಳ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ವಿಡಿಯೋ

ಈ ಬದಲಾವಣೆಯ ಭಾಗವಾಗಿ ಇನ್ಮುಂದೆ ಸಾಮಾನ್ಯ ವಿಡಿಯೋಗಳ ವಿಭಾಗದ ಅಡಿಯಲ್ಲಿ ಶಾರ್ಟ್‌ ಹಾಗೂ ಲಾಂಗ್ ವಿಡಿಯೋಗಳು ಡಿಸ್‌ಪ್ಲೇ ಆಗುವುದಿಲ್ಲ. ಹಾಗೆಯೇ ಆಂಡ್ರಾಯ್ಡ್, ಐಓಎಸ್ ಮತ್ತು ಯೂಟ್ಯೂಬ್‌ ನ ವೆಬ್ ಆವೃತ್ತಿಯಲ್ಲಿ ದೀರ್ಘ ವಿಡಿಯೋ ಟ್ಯಾಬ್‌ ಪಕ್ಕದಲ್ಲಿಯೇ ಈ ಹೊಸ ಚಿಕ್ಕಗಾತ್ರ ವಿಡಿಯೋಗಳ ವಿಭಾಗ ಹಾಗೂ ಮತ್ತು ಲೈವ್ ಟ್ಯಾಬ್‌ಗಳನ್ನು ಡಿಸ್‌ಪ್ಲೇ ಮಾಡಲಾಗುತ್ತದೆ ಎಂದು ಯೂಟ್ಯೂಬ್‌ ತಿಳಿಸಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಇದರ ಜೊತೆಗೆ ಯೂಟ್ಯೂಬ್‌ನ ಪ್ರಮುಖ ಪೇಜ್‌ನಲ್ಲೂ ಕೆಲವು ಬದಲಾವಣೆ ಕಾಣಬಹುದಾಗಿದೆ. ಲೈಕ್‌, ಡಿಸ್‌ಲೈಕ್‌ ಹಾಗೂ ಶೇರ್‌ ಬಟನ್‌ಗಳು ನೂತನ ರೂಪ ಪಡೆದುಕೊಳ್ಳಲಿವೆ. ಇದರ ಜೊತೆಗೆ ಡಾರ್ಕ್ ಮೋಡ್ ಮತ್ತು ಆಂಬಿಯೆಂಟ್ ಮೋಡ್‌ ಯೂಟ್ಯೂಬ್‌ಗೆ ಮತ್ತಷ್ಟು ಮೆರುಗು ನೀಡಲಿದೆ. ಈ ಆಂಬಿಯೆಂಟ್ ಮೋಡ್ ವೀಕ್ಷಣೆ ಮಾಡಲಾಗುವ ವಿಡಿಯೋ ಆಧಾರದ ಮೇಲೆ ಬ್ಯಾಗ್ರೌಂಡ್ ಬಣ್ಣ ಕಾಣಿಸಿಕೊಳ್ಳುತ್ತದೆ.

8x ವರೆಗೆ ಜೂಮ್ ಮಾಡಬಹುದು!

8x ವರೆಗೆ ಜೂಮ್ ಮಾಡಬಹುದು!

ಈ ಎಲ್ಲಾ ಫೀಚರ್ಸ್‌ ಜೊತೆಗೆ ವೀಕ್ಷಣೆ ಮಾಡುವ ವಿಡಿಯೋವನ್ನು 8x ವರೆಗೆ ಜೂಮ್ ಮಾಡುವ ಫೀಚರ್ಸ್‌ ನೀಡಿರುವುದು ಇನ್ನಷ್ಟು ಆಕರ್ಷಕವಾಗಿದೆ. ಈ ಫೀಚರ್ಸ್‌ ಅನ್ನು ಮೊದಲು ಯಟ್ಯೂಬ್‌ ಪ್ರೀಮಿಯಂ ಬಳಕೆದಾರರಿಗೆ ಪರೀಕ್ಷಾರ್ಥವಾಗಿ ನೀಡಲಾಗಿತ್ತು.

Best Mobiles in India

English summary
YouTube is still everyone's favorite site. Meanwhile, YouTube has introduced new features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X