ಬಳಕೆದಾರರಿಗೆ ಉಪಯುಕ್ತ ಫೀಚರ್ಸ್‌ ಪರಿಚಯಿಸಿದ ಯೂಟ್ಯೂಬ್‌!

|

ಗೂಗಲ್‌ ಒಡೆತನದ ಯೂಟ್ಯೂಬ್‌ ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್‌ ಆಗಿದೆ. ಮ್ಯೂಸಿಕ್‌ ಮತ್ತು ವಿಡಿಯೋ ಎರಡನ್ನೂ ಒಳಗೊಂಡಿರುವುದರಿಂದ ಬಳಕೆದಾರರ ನೆಚ್ಚಿನ ವೀಡಿಯೋ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಸದ್ಯ ಇದೀಗ ಯೂಟ್ಯೂಬ್‌ 'ಕಂಟಿನ್ಯೂ ವಾಚಿಂಗ್' ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಯೂಟ್ಯೂಬ್ ಮೊಬೈಲ್ ಆಪ್‌ ನಲ್ಲಿ ನೀವು ನೋಡಲು ಆರಂಭಿಸಿದ ವೀಡಿಯೋವನ್ನು ಮಧ್ಯದಲ್ಲಿ ಸ್ಟಾಪ್‌ ಮಾಡಿ ಹೋಗಿದ್ದರೆ ಹೊಸ ಮಿನಿ-ಪ್ಲೇಯರ್ ಅನ್ನು ತೋರಿಸುವ ಫೀಚರ್ಸ್‌ ಇದಾಗಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಬಳಕೆದಾರರರಿಗೆ ಕಂಟಿನ್ಯೂ ವಾಚಿಂಗ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಒಂದು ನಿಫ್ಟಿ ಫೀಚರ್‌ ಆಗಿದೆ. ನೀವು ಅರ್ಧಕ್ಕೆ ನಿಲ್ಲಿಸಿರುವ ವೀಡಿಯೋವನ್ನು ಮಿನಿ ಪ್ಲೇಯರ್‌ನಲ್ಲಿ ತೋರಿಸುವ ಕೆಲಸವನ್ನು ಇದು ಮಾಡಲಿದೆ. ವೀಡಿಯೋ ವೀಕ್ಷಣೆ ನಂತರ ಪಟ್ಟಿಗೆ ಹಸ್ತಚಾಲಿತವಾಗಿ ವೀಡಿಯೊವನ್ನು ಸೇರಿಸುವುದಕ್ಕಿಂತ ಅಥವಾ YouTube ವೆಬ್‌ಸೈಟ್‌ನಲ್ಲಿ ಇತಿಹಾಸ ವಿಭಾಗಕ್ಕೆ ಹೋಗುವುದಕ್ಕಿಂತ ಇದು ಉತ್ತಮವಾಗಿದೆ. ಹಾಗಾದ್ರೆ ಯೂಟ್ಯೂಬ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್

ಯೂಟ್ಯೂಬ್ ಈಗಾಗಲೇ ಉತ್ತಮ ವೀಡಿಯೋ ಅನ್ವೇಷಣೆ ಮತ್ತು ಸುಧಾರಿತ ಸಂವಹನಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಪರಿಚಯಿಸಿರುವ ಹೊಸ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ನೀವು ವೀಕ್ಷಿಸಲು ಆರಂಭಿಸಿದ ಯೂಟ್ಯೂಬ್‌ನ ವೆಬ್‌ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋವನ್ನು ವೀಕ್ಷಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಈ ಫೀಚರ್ಸ್‌ ಅನ್ನು ಬೀಟಾ ವರ್ಷನ್‌ನಲ್ಲಿ ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಯೂಟ್ಯೂಬ್

ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ 'ಕಂಟಿನ್ಯೂ ವೀಕ್ಷಣೆ' ಫೀಚರ್ಸ್‌ ಅನ್ನು ಹೊರತರಲು ಆರಂಭಿಸಿದೆ. ಇದು ಯೂಟ್ಯೂಬ್ ಮೊಬೈಲ್ ಆಪ್ ನಲ್ಲಿ ನೀವು ನೋಡಲು ಆರಂಭಿಸಿದ ಆದರೆ ಅದನ್ನು ಮಧ್ಯದಲ್ಲಿ ಬಿಟ್ಟಿರುವ ವೀಡಿಯೋಗಾಗಿ ಮಿನಿ-ಪ್ಲೇಯರ್ ತೋರಿಸಲಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಯೂಟ್ಯೂಬ್ ಆಪ್ ಸಾಧನಗಳ ನಡುವೆ ನೀವು ವೀಕ್ಷಿಸಿದ ವೀಡಿಯೋಗಳನ್ನು ಸಿಂಕ್ ಮಾಡಲು, ನಿಮ್ಮ ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ನೀವು ಒಂದೇ Google ಖಾತೆಗೆ ಲಾಗ್ ಇನ್ ಆಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಕಂಟಿನ್ಯೂ ವಾಚಿಂಗ್‌ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ?

ಕಂಟಿನ್ಯೂ ವಾಚಿಂಗ್‌ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ?

ಈ ಹೊಸ ಫಿಚರ್ಸ್‌ ಕಾರ್ಯನಿರ್ವಹಣೆ ಬಗ್ಗೆ ತಿಳಿಯಲು ನಿಮ್ಮ ಐಒಎಸ್ ಅಥವಾ ಆಂಡ್ರಾಯ್ಡ್ ಸಾಧನದಲ್ಲಿ ನೀವು ವೀಡಿಯೊವನ್ನು ವೀಕ್ಷಿಸುತ್ತಿರುವಾಗಲೇ ಅರ್ಧಕ್ಕೆ ನಿಲ್ಲಿಸಬೇಕು, ನಂತರ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಯೂಟ್ಯೂಬ್ ವೆಬ್‌ಸೈಟ್ ಅನ್ನು ತೆರೆದಾಗ, ಅದೇ ವೀಡಿಯೊದ ಹೊಸ ಮಿನಿ-ಪ್ಲೇಯರ್ "ಕಂಟಿನ್ಯೂ ವಾಚಿಂಗ್‌" ಲೇಬಲ್ ಕೆಳಗೆ ಬಲ ಮೂಲೆಯಲ್ಲಿ ತೋರಿಸುತ್ತದೆ. ಅದನ್ನು ಕ್ಲಿಕ್ ಮಾಡುವುದರಿಂದ ನೀವು ನಿಲ್ಲಿಸಿದ ಸ್ಥಳದಿಂದ ಕೆಲವು ಸೆಕೆಂಡುಗಳ ಮುಂಚಿತವಾಗಿ ನಿಮ್ಮ ಮೊಬೈಲ್‌ನಲ್ಲಿ ವೀಕ್ಷಿಸಲು ಪ್ರಾರಂಭಿಸಿದ ವೀಡಿಯೊವನ್ನು ಪ್ಲೇ ಮಾಡಲು ಪ್ರಾರಂಭಿಸುತ್ತದೆ. ಇದು ಮಿನಿಮೈಸ್ಡ್ ವೀಕ್ಷಣೆಯಲ್ಲಿ ಪ್ಲೇ ಆಗಲಿದೆ.

ಯೂಟ್ಯೂಬ್

ಯೂಟ್ಯೂಬ್ "ವೀಕ್ಷಣೆಯನ್ನು ಮುಂದುವರಿಸಿ" ಫೀಚರ್ಸ್‌ ಅನ್ನು ಪ್ರಾರಂಭಿಸಿದ ನಂತರ, ಬಳಕೆದಾರರು ವಿವಿಧ ಸಾಧನಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ಸುವ್ಯವಸ್ಥಿತ ವೀಕ್ಷಣೆಯ ಅನುಭವವನ್ನು ಪಡೆಯಲು ಅನುಮತಿಸುತ್ತದೆ. ಎಲ್ಲಾ ಬಳಕೆದಾರರಿಗೆ ಯಾವಾಗ ಫೀಚರ್ ಲಭ್ಯವಿರುತ್ತದೆ ಎಂಬುದನ್ನು ಯೂಟ್ಯೂಬ್‌ ಇನ್ನೂ ದೃಡಪಡಿಸಿಲ್ಲ. ಆದರೆ, ಮೊಬೈಲ್‌ನಲ್ಲಿ ಈ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ಹೊಂದಿರುವ ಜನಪ್ರಿಯ ಫೀಚರ್ಸ್‌ಗಳಲ್ಲಿ ವೈಯಕ್ತೀಕರಿಸಿದ ಜಾಹೀರಾತುಗಳಿಗಾಗಿ ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುವುದು ಕೂಡ ಒಂದಾಗಿದೆ. ಇದಕ್ಕಾಗಿ ನೀವು ಯೂಟ್ಯೂಬ್‌ನಲ್ಲಿ ಗೂಗಲ್‌ನ ಪ್ರೈವೆಸಿ ಡ್ಯಾಶ್‌ಬೋರ್ಡ್‌ನಿಂದ, ಬಳಕೆದಾರರು ತಮ್ಮ ಯೂಟ್ಯೂಬ್ ವೀಕ್ಷಣೆಯ ಹಿಸ್ಟರಿಯನ್ನು ಪರಿಶೀಲಿಸಬಹುದು. ತದನಂತರ ಯೂಟ್ಯೂಬ್ ತಮ್ಮ ಹಿಸ್ಟರಿಯನ್ನು ಮುಂದುವರಿಸುವುದನ್ನು ಅವರು ಬಯಸುತ್ತಾರೆಯೇ ಎಂದು ನಿರ್ಧರಿಸಬಹುದು. ಇದರರ್ಥ ನೀವು ವೀಕ್ಷಿಸಿದ ಎಲ್ಲಾ ವೀಡಿಯೊಗಳ ಲಾಗ್ ಅನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸಲು ನೀವು ಸೇವೆಯನ್ನು ಸೂಚಿಸಬಹುದು. ನೀವು ವೀಕ್ಷಿಸಿದ ವೀಡಿಯೊಗಳನ್ನು ಟ್ರ್ಯಾಕ್ ಮಾಡುವ ಸೇವೆಯನ್ನು ನಿಲ್ಲಿಸುವ "ಸ್ಟಾಪ್‌" ಆಯ್ಕೆಯನ್ನು ಬಳಕೆದಾರರು ಆಯ್ಕೆ ಮಾಡಬೇಕು. ಯೂಟ್ಯೂಬ್‌ನಲ್ಲಿ ತಮ್ಮ ವೀಕ್ಷಣೆಯ ಇತಿಹಾಸವನ್ನು ಆಫ್ ಮಾಡಲು ಇಚ್ಛಿಸದವರು ಮೂರು ತಿಂಗಳು, 1.5 ವರ್ಷ ಮತ್ತು 3 ವರ್ಷಗಳ ನಂತರ ನಿಮ್ಮ ವೀಕ್ಷಣೆಯ ಇತಿಹಾಸವನ್ನು ಸ್ವಯಂಚಾಲಿತವಾಗಿ ಅಳಿಸುವಂತೆ ಕಂಪನಿಗೆ ಸೂಚಿಸಲು ಡ್ಯಾಶ್‌ಬೋರ್ಡ್ ಬಳಸಬಹುದು

Best Mobiles in India

English summary
youtube now supports continue watching feature for unfinished videos on smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X