ಯುಟ್ಯೂಬ್‌ನಲ್ಲಿ ವೀಡಿಯೊ ಅಪ್‌ಲೋಡ್‌ ಮಾಡುವುದು ಇದೀಗ ಇನ್ನಷ್ಟು ಸುಲಭ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಯುಟ್ಯೂಬ್‌ ಸೇವೆ ಕೂಡ ಒಂದಾಗಿದೆ. ಇನ್ನು ಗೂಗಲ್ ಮಾಲೀಕತ್ವದ ಯೂಟ್ಯೂಬ್‌ ಒಂದು ಜನಪ್ರಿಯ ವಿಡಿಯೊ ತಾಣ ಆಗಿದೆ. ಈ ತಾಣದಲ್ಲಿ ಬಳಕೆದಾರರು ಯಾವುದೇ ವಿಷಯದ ಕುರಿತು ವಿಡಿಯೊ ರೂಪದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇದರೊಂದಿಗೆ ಬಳಕೆದಾರರು ಲೈವ್‌ ನ್ಯೂಸ್‌, ವೀಡಿಯೊ ಕ್ರಿಯೆಟರ್ಸ್‌ಗಳ ಯೂಟ್ಯೂಬ್ ಚಾನೆಲ್ಸ್, ಸೇರಿದಂತೆ ಹಲವು ಬಗೆಯ ವಿಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಸದ್ಯ ಇದೀಗ ವೀಡಿಯೊ ಕ್ರಿಯೆಟರ್ಸ್‌ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ವೀಡಿಯೊ

ಹೌದು, ಜನಪ್ರಿಯ ವೀಡಿಯೊ ತಾಣವಾಗಿರುವ ಯುಟ್ಯೂಬ್‌ನಲ್ಲಿ ವೀಡಿಯೊ ಕ್ರಿಯಟರ್ಸ್‌ಗಳು ತಮ್ಮದೇ ಆ ವೀಡಿಯೊಗಳನ್ನ ಅಪ್‌ಲೋಡ್‌ ಮಾಡಬಹುದು. ಅಲ್ಲದೆ ಈ ವೀಡಿಯೊ ಅಪ್‌ಲೋಡ್‌ಗಳ ಮೂಲಕ ಹಣಗಳಿಸುವುದಕ್ಕೆ ಸಹ ಅವಕಾಶವಿದೆ. ಇದೇ ಕಾರಣಕ್ಕೆ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮತ್ತು ಜಾಹೀರಾತು ಆದಾಯವನ್ನು ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪ್ರಯತ್ನದಲ್ಲಿ, ಯೂಟ್ಯೂಬ್ "ಚೆಕ್ಸ್" ಎಂಬ ಹೊಸ ಡಿವೈಸ್‌ ಅನ್ನು ಹೊರತರುತ್ತಿದೆ. ಅದು ವೀಡಿಯೊ ಕ್ರಿಯೆಟರ್ಸ್‌ಗಳ ವೀಡಿಯೊದಲ್ಲಿ ಹಕ್ಕುಸ್ವಾಮ್ಯದ ವಿಷಯವನ್ನು ಹೊಂದಿದ್ದರೆ ಮಾಹಿತಿ ನೀಡಲಿದೆ. ಹಾಗಾದ್ರೆ ಈ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ ಪರಿಚಯಿಸಿರುವ ಚೆಕ್ಸ್‌ ಡಿವೈಸ್‌ ವೀಡಿಯೋ ಹಕ್ಕುಸ್ವಾಮ್ಯದ ವಿಷಯ ಮತ್ತು ಜಾಹೀರಾತು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದರೆ ವೀಡಿಯೊ ಕ್ರಿಯೆಟರ್ಸ್‌ಗೆ ಸಮಯಕ್ಕಿಂತ ಮುಂಚಿತವಾಗಿ ತಿಳಿಸಲಿದೆ. ಕ್ರಿಯೆಟರ್ಸ್‌ ತಮ್ಮ ವೀಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವಾಗ ಹಕ್ಕುಸ್ವಾಮ್ಯದಂತಹ ವಿಚಾರಗಳಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇದೇ ಕಾರಣಕ್ಕೆ ಈ ಹೊಸ ಫೀಚರ್ಸ್‌ ಹಕ್ಕುಸ್ವಾಮ್ಯದ ವಿಚಾರವಾಗಿ ವೀಡಿಯೊ ಅಪ್‌ಲೋಡ್‌ ಮೊದಲೇ ಸಮಸ್ಯೆಗಳ ವಿಚಾರವಾಗಿ ಮಾಹಿತಿ ನೀಡಲಿದೆ.

ಯುಟ್ಯೂಬ್‌

ಯುಟ್ಯೂಬ್‌ ನಲ್ಲಿ ಅಪ್‌ಲೋಡ್‌ ಮಾಡುವ ಯಾವುದಾದರೂ ಜಾಹೀರಾತು ಮಾರ್ಗಸೂಚಿ ಸಮಸ್ಯೆಯನ್ನು ಹೊಂದಿದೆಯಾ ಎನ್ನುವುದನ್ನು ಸೂಚಿಸಲಿದೆ. ಕೃತಿಸ್ವಾಮ್ಯದ ಬಗ್ಗೆ ಸೂಚಿಸುವ "ಹಳದಿ ಐಕಾನ್‌ಗಳ" ಪ್ರಮಾಣವನ್ನು ಪರಿಣಾಮಕಾರಿಯಾಗಿ ಕಡಿತಗೊಳಿಸುವುದು YouTube ನ ಗುರಿಯಾಗಿದೆ. ಈ ಹೊಸ ವ್ಯವಸ್ಥೆಯು ವಿಷಯ ID ಯನ್ನು ಅವಲಂಬಿಸಿದೆ. ವೀಡಿಯೊವನ್ನು ಸ್ಕ್ಯಾನ್ ಮಾಡಿದ ನಂತರ YouTube ನ ಹಕ್ಕುಸ್ವಾಮ್ಯ ಗುರುತಿನ ವ್ಯವಸ್ಥೆಯು ಉಲ್ಲಂಘನೆಯನ್ನು ಕಂಡುಕೊಂಡರೆ, ಹಕ್ಕು ಹೊಂದಿರುವವರ ನೀತಿಯನ್ನು ಸ್ವಯಂಚಾಲಿತವಾಗಿ ವೀಡಿಯೊಗೆ ಅನ್ವಯಿಸಲಾಗುತ್ತದೆ ಎಂದು ಹೇಳಲಾಗಿದೆ.

ವೀಡಿಯೊ

ವೀಡಿಯೊ ಕ್ರಿಯೆಟರ್‌ ಅಪ್‌ಲೋಡ್‌ ಮಾಡಿರುವ ವೀಡಿಯೋದಲ್ಲಿರುವ ವಿಷಯ ಮತ್ತೊಂದು ವೀಡಿಯೊ ಹಕ್ಕುದಾರರ ವಿಷಯದೊಂದಿಗೆ ಹೊಂದಿಕೆಯಾದರೆ, ವೀಡಿಯೊದ ಆ ಭಾಗವನ್ನು ಸಮಯಕ್ಕೆ ಮುಂಚಿತವಾಗಿ ತೆಗೆದುಹಾಕಲು ವೀಡಿಯೊ ಚೆಕ್‌ಗಳ ಮೂಲಕ ನೋಟಿಸ್ ಸ್ವೀಕರಿಸುತ್ತದೆ ಎಂದು ಯೂಟ್ಯೂಬರ್ ಅಪ್‌ಲೋಡ್ ಹೇಳುತ್ತದೆ. ಈ ಮೂಲಕ ಮೂಲ ಹಕ್ಕುದಾರರ ಬದಲು ಎರಡನೇ ವೀಡಿಯೊ ಹಕ್ಕು ಗಳಿಸಬಹುದು. ಇದು ಕ್ರಿಯೆಟರ್ಸ್‌ ಗಳಿಸುವ ಒಟ್ಟಾರೆ ಜಾಹೀರಾತು ಆದಾಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಕೃತಿಸ್ವಾಮ್ಯ ಹಕ್ಕು ಕಂಡುಬಂದಲ್ಲಿ ಏನಾಗುತ್ತದೆ, ಎಂಬುದರ ಬಗ್ಗೆ ಇತರರಿಗೆ ಯಾವುದೇ ಮಾಹಿತಿ ಇರುವುದಿಲ್ಲ.

ಅಪ್‌ಲೋಡ್‌

ಇದೇ ಕಾರಣಕ್ಕೆ ಅಪ್‌ಲೋಡ್‌ ಮಾಡಿರುವ ವೀಡಿಯೊ ಹಕ್ಕುಸ್ವಾಮ್ಯ ಪ್ರಕಟಣೆಗೆ ಮುಂಚಿತವಾಗಿ ಹಕ್ಕುವಿವಾದಗಳ ಬಗ್ಗೆ ಮೊದಲೇ ತಿಳಿಸಲಿದೆ. ಈ ಹಕ್ಕುಗಳನ್ನು ಪ್ರಕ್ರಿಯೆಗೊಳಿಸಲು ಕೆಲವು ದಿನಗಳು ಬೇಕಾಗುವುದರಿಂದ, ಯೂಟ್ಯೂಬರ್‌ಗಳು ಪ್ರಕಟಿಸುವ ಮೊದಲು ವಿವಾದ ಇತ್ಯರ್ಥವಾಗುವವರೆಗೆ ಕಾಯಲು ಆಯ್ಕೆ ಮಾಡಬಹುದು. ವೀಡಿಯೊ ಕ್ರಿಯೆಟರ್ಸ್‌ ಹಕ್ಕುಸ್ವಾಮ್ಯದ ವಿಷಯವನ್ನು ಬಳಸಲಿಲ್ಲ ಎಂದು ವಿವಾದವು ಕಂಡುಕೊಂಡರೆ, ಆ ಸಮಯದಲ್ಲಿ ಗಳಿಸಿದ ಜಾಹೀರಾತು ಆದಾಯವನ್ನು ಹೇಳಿದ ವ್ಯಕ್ತಿಗೆ ಪಾವತಿಸಲಾಗುತ್ತದೆ. ಆದರಿಂದ ಹಕ್ಕುಸ್ವಾಮ್ಯ ಉಲ್ಲಂಘಿಸುವ ವೀಡಿಯೊಗಳನ್ನು ಚೆಕ್‌ ಪತ್ತೆ ಹಚ್ಚಲಿದೆ.

Best Mobiles in India

English summary
YouTube now warns creators about copyright issues before posting.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X