ಯೂಟ್ಯೂಬ್ ಶಾರ್ಟ್ಸ್‌ನಲ್ಲಿ 'ಶಾಪಿಂಗ್‌' ಫೀಚರ್ಸ್‌; ಕ್ರಿಯೇಟರ್ಸ್‌ಗೆ ಭಾರೀ ಲಾಭ

|

ಗೂಗಲ್‌ ತನ್ನ ಎಲ್ಲಾ ಸೇವಾ ಆಪ್‌ಗಳಿಗೂ ವಿವಿಧ ಫೀಚರ್ಸ್‌ ನೀಡುತ್ತಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿದೆ. ಹಾಗೆಯೇ ಯೂಟ್ಯೂಬ್‌ನಲ್ಲೂ ಸಹ ಆಕರ್ಷಕ ಫೀಚರ್ಸ್‌ಗಳನ್ನು ತರುತ್ತಿದ್ದು, ಅದರಲ್ಲೂ ಆಂಬಿಯಂಟ್‌ ಮೋಡ್‌ ಸೇರಿದಂತೆ ಇನ್ನಿತರೆ ಫೀಚರ್ಸ್‌ ಸದ್ಯಕ್ಕೆ ಆಕರ್ಷಕವಾಗಿವೆ. ಇದರ ನಡುವೆ ಈಗ ಯೂಟ್ಯೂಬ್‌ ಶಾರ್ಟ್ಸ್‌ನಲ್ಲಿ ಮತ್ತೊಂದು ಫೀಚರ್ಸ್‌ ಬಗ್ಗೆ ಘೋ‍ಷಣೆ ಮಾಡಲಾಗಿದೆ.

ಯೂಟ್ಯೂಬ್‌

ಹೌದು, ಇನ್ಮುಂದೆ ನೀವು ಯೂಟ್ಯೂಬ್‌ನಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಯೂಟ್ಯೂಬ್‌ನ ಶಾರ್ಟ್ಸ್‌ ವಿಭಾಗಕ್ಕೆ ಈಗ ಶಾಪಿಂಗ್‌ ಫೀಚರ್ಸ್‌ ಪರಿಚಯಿಸಲಾಗುತ್ತಿದ್ದು, ಈ ಮೂಲಕ ಬಳಕೆದಾರರು ಶೀಘ್ರದಲ್ಲಿಯೇ ವಿಭಿನ್ನ ಅನುಭವ ನೀಡುವ ಹೊಸ ಫೀಚರ್ಸ ಬಳಕೆ ಮಾಡಬಹುದಾಗಿದೆ. ಶಾರ್ಟ್ಸ್ ಅನ್ನು ಸ್ಕ್ರೋಲ್ ಮಾಡುವಾಗ ಈ ಶಾಪಿಂಗ್‌ ಫೀಚರ್ಸ್‌ ಕಾಣಿಸಿಕೊಳ್ಳುತ್ತದೆ.

ಈ ದೇಶಗಳಲ್ಲಿ ಲಭ್ಯ

ಈ ದೇಶಗಳಲ್ಲಿ ಲಭ್ಯ

ಈ ಹೊಸ ಫೀಚರ್ಸ್‌ ಅನ್ನು ಅನಾವರಣ ಮಾಡಲು ಯೂಟ್ಯೂಬ್‌ ಸಿದ್ಧಗೊಂಡಿದ್ದು, ಪ್ರಸ್ತುತ ಯುಎಸ್, ಭಾರತ, ಬ್ರೆಜಿಲ್, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿ ವೀಕ್ಷಕರಿಗೆ ಲಭ್ಯವಾಗುವಂತೆ ಮಾಡಲು ಕಂಪೆನಿ ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ಯುಎಸ್‌ನಿಂದ ಹೊರಗಿರುವ ಅರ್ಹ ಕ್ರಿಯೇಟರ್ಸ್‌ಗಳು ಈ ಫೀಚರ್ಸ್‌ ಅನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ತಾವು ಮಾರಲು ಬಯಸುವ ಪ್ರೊಡಕ್ಟ್‌ಗಳನ್ನು ಟ್ಯಾಗ್ ಮಾಡಬಹುದಾಗಿದೆ.

ಭಾರತದಲ್ಲಿ ಎಲ್ಲಾ ಕ್ರಿಯೇಟರ್ಸ್‌ ಈ ಫೀಚರ್ಸ್‌ ಬಳಸಬಹುದೇ?

ಭಾರತದಲ್ಲಿ ಎಲ್ಲಾ ಕ್ರಿಯೇಟರ್ಸ್‌ ಈ ಫೀಚರ್ಸ್‌ ಬಳಸಬಹುದೇ?

ಪ್ರಮುಖ ವಿಷಯ ಎಂದರೆ ವಿಡಿಯೋದಲ್ಲಿ ಶಾಪಿಂಗ್ ಫೀಚರ್ಸ್‌ ಅನ್ನು ಬಳಸಲು ಯಾವುದೇ ಕ್ರಿಯೇಟರ್ಸ್‌ ಸಹ ಅನುಮತಿ ಪಡೆಯಬಹುದು ಎಂದು ತಿಳದುಬಂದಿದೆ. ಹಾಗೆಯೇ ಕ್ರಿಯೇಟರ್ಸ್‌ಗೆ ಈ ಸಂಬಂಧ ಯಾವುದೇ ಅರ್ಹತೆಯ ಮಾನದಂಡಗಳ ಕುರಿತು ಯೂಟ್ಯೂಬ್‌ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಹೆಚ್ಚಿನ ಕ್ರಿಯೇಟರ್ಸ್‌ ಹಾಗೂ ಪ್ರದೇಶಗಳಿಗೆ ಈ ಫೀಚರ್ಸ್‌ ಅನ್ನು ವಿಸ್ತರಿಸುವುದಾಗಿ ಯೂಟ್ಯೂಬ್ ತಿಳಿಸಿದೆ.

ಉದ್ಯಮ

ಈ ರೀತಿಯ ಉದ್ಯಮವನ್ನು ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿಗೆ ಸಕ್ರಿಯವಾಗಲು ವಿಡಿಯೋ ಕ್ರಿಯೇಟರ್ಸ್‌ಗೆ ಯೂಟ್ಯೂಬ್‌ ಅತ್ಯುತ್ತಮ ಸ್ಥಳವಾಗಿದೆ ಎಂದು ನಾವು ದೃಢವಾಗಿ ನಂಬುತ್ತೇವೆ ಮತ್ತು ಶಾಪಿಂಗ್ ಅದರ ಒಂದು ಭಾಗವಾಗಿದೆ ಎಂದು ಯೂಟ್ಯೂಬ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

ಟಿಕ್‌ಟಾಕ್‌ಗೆ ಪೈಪೋಟಿ

ಟಿಕ್‌ಟಾಕ್‌ಗೆ ಪೈಪೋಟಿ

ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗಿದ್ದರೂ ಸಹ ಅದರ ಪ್ರಭಾವ ಮಾತ್ರ ಇನ್ನೂ ನಿಂತಿಲ್ಲ. ಜಗತ್ತಿನಾದ್ಯಂತ ತನ್ನ ಫೀಚರ್ಸ್‌ನಿಂದ ಹೆಚ್ಚಿನ ಗಮನ ಸೆಳೆಯುತ್ತದೆ. ಇದಕ್ಕೆ ಪೈಪೋಟಿ ನೀಡಲೆಂದೇ ಯೂಟ್ಯೂಬ್‌ ಈ ಫೀಚರ್ಸ್‌ ಪರಿಚಯಿಸಿದೆ. ಅದರಲ್ಲೂ ಪ್ರಮುಖವಾಗಿ ಟಿಕ್‌ಟಾಕ್ ಯುಎಸ್‌ನಲ್ಲಿ ಶಾಪಿಂಗ್‌ ಫೀಚರ್ಸ್‌ ಪರಿಚಯಿಸಿದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ ಈ ನಿರ್ಧಾರ ಮಾಡಿದೆ.

ಟಿಕ್‌ಟಾಕ್‌

ಈಗಾಗಲೇ ಈ ಫೀಚರ್ಸ್‌ ಅನ್ನು ಟಿಕ್‌ಟಾಕ್‌ನಲ್ಲಿ ಬಳಕೆ ಮಾಡಲಾಗುತ್ತಿದ್ದು, ವಿಡಿಯೋ ವೀಕ್ಷಕರಿಗೆ ಆಪ್‌ನಲ್ಲಿಯೇ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಈ ಫೀಚರ್ಸ್‌ ಅನ್ನು ಯುಕೆ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ದೀರ್ಘಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಾರ್ಟ್ಸ‌ನಿಂದ ಹಣ ಗಳಿಕೆ

ಶಾರ್ಟ್ಸ‌ನಿಂದ ಹಣ ಗಳಿಕೆ

ಯೂಟ್ಯೂಬ್‌ ಪರಿಚಯಿಸಿದ ಶಾರ್ಟ್ಸ್‌ ಮೂಲಕ ಮುಂದಿನ ವರ್ಷದಿಂದ ಕ್ರಿಯೇಟರ್ಸ್‌ಗಳು ಜಾಹೀರಾತು ಆದಾಯದ 45% ಪಾಲನ್ನು ತೆಗೆದುಕೊಳ್ಳುತ್ತಾರೆ ಎಂದು ಯೂಟ್ಯೂಬ್ ಘೋಷಣೆ ಮಾಡಿದೆ. ಜೊತೆಗೆ ಕ್ರಿಯೇಟರ್ಸ್‌ 1,000 ಚಂದಾದಾರರು ಹಾಗೂ 90 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದರೆ ಹಣಗಳಿಕೆ ಮಾಡಲು ಅರ್ಹತೆ ಪಡೆಯಲಿದ್ದಾರೆ ಎಂದು ಯೂಟ್ಯೂಬ್‌ ತಿಳಿಸಿದೆ.

ಬಿಲಿಯನ್

ಇನ್ನು ಮಾಸಿಕವಾಗಿ 1.5 ಬಿಲಿಯನ್ ಬಳಕೆದಾರರನ್ನು ಪಡೆಯುತ್ತಿದ್ದು, ಅದಾಗ್ಯೂ ತ್ರೈಮಾಸಿಕ ಜಾಹೀರಾತು ಆದಾಯವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆಯಂತೆ. ಅದರಲ್ಲೂ ಪ್ರತಿವರ್ಷ 1.9% ರಷ್ಟು ಆದಾಯ ಕಡಿಮೆಯಾಗುತ್ತಿದೆ ಎನ್ನುವುದರ ಬಗ್ಗೆ ವರದಿಯಾಗಿದೆ. ಈ ಮೂಲಕ ಯೂಟ್ಯೂಬ್‌ನ ಲಾಭದ ನಿರೀಕ್ಷೆ ವಿಫಲವಾಗಿದ್ದು, ಇದನ್ನು ಸರಿದೂಗಿಸಲು ಈಗ ಶಾರ್ಟ್ಸ್‌ನಲ್ಲಿ ಈ ಹೊಸ ಫೀಚರ್ಸ್‌ ನೀಡಲು ಯೂಟ್ಯೂಬ್‌ ಮುಂದಾಗಿದೆ.

Best Mobiles in India

English summary
Google is offering various features to all its service apps and accordingly YouTube is offering shopping features in shorts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X