ಯೂಟ್ಯೂಬರ್ಸ್‌ಗೆ ಶಾಕಿಂಗ್‌!...ಮಿಲಿಯನ್‌ಗಟ್ಟಲೆ ವಿಡಿಯೋಗಳನ್ನು ಹೊರದಬ್ಬಿದ ಯೂಟ್ಯೂಬ್‌!

|

ಈಗಂತೂ ಯೂಟ್ಯೂಬ್‌ ವೀಕ್ಷಣೆಯ ಜೊತೆಗೆ ಯೂಟ್ಯೂಬರ್‌ ಸಹ ಹೆಚ್ಚಾಗಿದ್ದಾರೆ. ಅದರಲ್ಲೂ ಈ ಪ್ಲಾಟ್‌ಫಾರ್ಮ್‌ ಕೇವಲ ಮಾಹಿತಿ, ಮನರಂಜನೆ ನೀಡುವುದಕಷ್ಟೇ ಅಲ್ಲದೆ, ಕೆಲವರ ಜೀವನ ನಿರ್ವಹಣೆಗೂ ಸಹಕಾರಿಯಾಗಿದೆ. ಅಂದರೆ, ಯೂಟ್ಯೂಬ್‌ ಮೂಲಕವೇ ಹಣ ಸಂಪಾದಿಸಿ ಜೀವನ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಯೂಟ್ಯೂಬ್ ಕೆಲವರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಬಳಕೆದಾರರ ಹಾಗೂ ವೀಕ್ಷಕರ ಭದ್ರತೆ ದೃಷ್ಟಿಯಿಂದ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಬರುತ್ತಿರುತ್ತದೆ. ಇದರ ಭಾಗವಾಗಿಯೇ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 1.7 ಮಿಲಿಯನ್ ವಿಡಿಯೋಗಳನ್ನು ಯೂಟ್ಯೂಬ್‌ ತೆಗೆದುಹಾಕಿದೆ. ಈ ವಿಷಯ ನಿಮಗೆ ಅಚ್ಚರಿ ಎನಿಸಿದರು ಸತ್ಯ. ಯೂಟ್ಯೂಬ್ ಸಮುದಾಯ ಮಾರ್ಗಸೂಚಿಗಳ ಜಾರಿ ವರದಿಯ ಪ್ರಕಾರ ಈ ವಿಷಯ ತಿಳಿದುಬಂದಿದೆ.

10 ಜನ ನೋಡುವ ಮೊದಲೇ ರಿಮೂವ್‌

10 ಜನ ನೋಡುವ ಮೊದಲೇ ರಿಮೂವ್‌

ಈ ಪ್ಲಾಟ್‌ಫಾರ್ಮ್‌ನಲ್ಲಿ ಯಾರೇ ವಿಡಿಯೋ ಹಾಕಿದರು ಕೆಲವು ನೀತಿ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ. ಇಲ್ಲವಾದರೆ ಆ ವಿಡಿಯೋಗಳಿಗೆ ಭವಿಷ್ಯ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲೂ ಯೂಟ್ಯೂಬ್‌ ವೀಕ್ಷಕರು ಯಾವುದೇ ವಿಡಿಯೋದಲ್ಲಿ ಏನಾದರೂ ಸಮುದಾಯದ ವಿರುದ್ಧದ ವಿಷಯ ಇದ್ದರೆ ರಿಪೋರ್ಟ್‌ ಮಾಡುವ ಅವಕಾಶ ಪಡೆದಿದ್ದಾರೆ. ಅದಾಗ್ಯೂ ಈಗ ರಿಮೂವ್‌ ಮಾಡಲಾದ ವಿಡಿಯೋಗಳಲ್ಲಿ ಸಮುದಾಯದ ವಿರುದ್ಧದ ವಿಷಯ ಇದೆ ಎಂದು ಯೂಟೂಬ್‌ ತಂತ್ರಾಂಶವೇ ಮೊದಲು ಪತ್ತೆ ಮಾಡಿದೆ. ಹಾಗೆಯೇ ಯೂಟ್ಯೂಬ್‌ನ ಶೇಕಡ 67 ಕ್ಕಿಂತ ಹೆಚ್ಚು ವಿಡಿಯೋಗಳನ್ನು ಕೇವಲ 10 ಕ್ಕಿಂತ ಹೆಚ್ಚು ವೀಕ್ಷಣೆ ಪಡೆಯುವ ಮೊದಲೇ ತೆಗೆದುಹಾಕಲಾಗಿದೆ.

1.7 ಮಿಲಿಯನ್ ವಿಡಿಯೋಗಳನ್ನು ಹೊರದಬ್ಬಿದ ಯೂಟ್ಯೂಬ್‌

1.7 ಮಿಲಿಯನ್ ವಿಡಿಯೋಗಳನ್ನು ಹೊರದಬ್ಬಿದ ಯೂಟ್ಯೂಬ್‌

ಹೌದು, ಗೂಗಲ್‌ ಮಾಲೀಕತ್ವದ ಈ ಯೂಟ್ಯೂಬ್‌ ಮೊದಲೇ ತಿಳಿಸಿದಂತೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದವರಿಗೆ ಸರಿಯಾಗಿಯೇ ಬದ್ದಿ ಕಲಿಸಿದೆ. ಅಂದರೆ ಭಾರತದಲ್ಲಿ ಸುಮಾರು 1.7 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಭಾರತಕ್ಕೆ ಮಾತ್ರ ಸೀಮಿತವೇ..

ಭಾರತಕ್ಕೆ ಮಾತ್ರ ಸೀಮಿತವೇ..

ಯೂಟ್ಯೂಬ್ ಭಾರತದಲ್ಲಿ ಅಪ್‌ಲೋಡ್‌ ಆದ ವಿಡಿಯೋ ಅಷ್ಟೇ ಅಲ್ಲದೆ ಜಾಗತಿಕವಾಗಿಯೂ ಈ ಕ್ರಮ ಜರುಗಿಸಿದೆ. ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಪ್ರಪಂಚದಾದ್ಯಂತ ಸುಮಾರು 5.6 ಮಿಲಿಯನ್ ವಿಡಿಯೋಗಳನ್ನು ಈ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದ್ದು, ಈ ಉಲ್ಲಂಘನೆಯ ವಿಡಿಯೋಗಳಲ್ಲಿಯೂ ಶೇಕಡಾ 94 ಕ್ಕಿಂತ ಹೆಚ್ಚು ವಿಡಿಯೋಗಳನ್ನು ಫ್ಲ್ಯಾಗ್ ಮಾಡಿದ್ದು ಯೂಟ್ಯೂಬ್‌ ತಂತ್ರಾಂಶ.

ಯೂಟ್ಯೂಬ್‌

ಹಾಗೆಯೇ, ಯೂಟ್ಯೂಬ್‌ ತಂತ್ರಾಂಶದಿಂದ ಪತ್ತೆಯಾದ ವಿಡಿಯೋಗಳಲ್ಲಿ ಶೇ.36 ರಷ್ಟು ಒಂದು ವೀಕ್ಷಣೆ ಪಡೆಯುವ ಮೊದಲು ಹೊರಬಿದ್ದಿವೆ. ಶೇ. 31 ರಷ್ಟು ವಿಡಿಯೋಗಳು ಒಂದರಿಂದ ಹತ್ತು ವೀಕ್ಷಣೆ ಪಡೆಯುವ ಮೊದಲು ಯೂಟ್ಯೂಬ್‌ನಿಂದ ರಿಮೂವ್‌ ಆಗಿವೆ ಮತ್ತು ಶೇ. 67 ಕ್ಕಿಂತ ಹೆಚ್ಚಿನ ವಿಡಿಯೋಗಳು 10 ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೊದಲು ಯೂಟ್ಯೂಬ್‌ನಿಂದ ಕಣ್ಮರೆಯಾಗಿವೆ.

5 ಮಿಲಿಯನ್ ಚಾನಲ್‌ಗಳಿಗೆ ಗೇಟ್‌ ಪಾಸ್‌

5 ಮಿಲಿಯನ್ ಚಾನಲ್‌ಗಳಿಗೆ ಗೇಟ್‌ ಪಾಸ್‌

ಯೂಟ್ಯೂಬ್‌ ಮಾರ್ಗಸೂಚಿಗಳನ್ನು ಈ ವರ್ಷದ ತ್ರೈಮಾಸಿಕದಲ್ಲಿ ಉಲ್ಲಂಘನೆ ಮಾಡಿದ್ದಕ್ಕೆ ವಿಡಿಯೋಗಳನ್ನು ಮಾತ್ರವಲ್ಲದೇ ಬರೋಬ್ಬರಿ 5 ಮಿಲಿಯನ್ ಚಾನಲ್‌ಗಳನ್ನು ಸಹ ರಿಮೂವ್‌ ಮಾಡಲಾಗಿದೆ.

ಏನೋನೋ ಬರೆದು ಥಂಬ್‌ನೇಲ್‌ ಹಾಕುವವರಿಗೆ ಎಚ್ಚರಿಕೆ

ಏನೋನೋ ಬರೆದು ಥಂಬ್‌ನೇಲ್‌ ಹಾಕುವವರಿಗೆ ಎಚ್ಚರಿಕೆ

ಸಾಮಾನ್ಯವಾಗಿ ವೀಕ್ಷಕರನ್ನು ಸೆಳೆಯಲು ಹಾಗೂ ವೀಕ್ಷಣೆ ಹೆಚ್ಚು ಮಾಡಿಕೊಳ್ಳಲು ವಿಡಿಯೋಗೆ ಸಂಬಂಧವಿಲ್ಲದ ಥಂಬ್‌ನೇಲ್‌ ಹಾಕುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಕಾಮೆಂಟ್‌ಗಳ ಸ್ಪ್ಯಾಮ್ ಅನ್ನು ಸಹ ಯೂಟ್ಯೂಬ್‌ ಕಂಡುಕೊಂಡಿದ್ದು, ಇದೆಲ್ಲವನ್ನೂ ಉಲ್ಲಂಘನೆ ಮಾಡಿದ್ದಕ್ಕಾಗಿ 5 ಮಿಲಿಯನ್ ಚಾನಲ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆಯಲಾಗಿದೆ.

ಕಾಮೆಂಟ್‌ ವಿರುದ್ಧವೂ ಸಮರ

ಕಾಮೆಂಟ್‌ ವಿರುದ್ಧವೂ ಸಮರ

ಇದಿಷ್ಟೇ ಅಲ್ಲದೆ, ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮೂರನೇ ತ್ರೈಮಾಸಿಕದಲ್ಲಿ 728 ಮಿಲಿಯನ್‌ಗಿಂತಲೂ ಹೆಚ್ಚಿನ ಕಾಮೆಂಟ್‌ಗಳನ್ನು ತೆಗೆದುಹಾಕಿದೆ. ಯಾಕೆಂದರೆ ಇವೆಲ್ಲಾ ಸ್ಪ್ಯಾಮ್ ಎಂದು ಕಂಡುಕೊಂಡಿದೆ. ಹಾಗೆಯೇ 99 ರಷ್ಟು ತೆಗೆದುಹಾಕಲಾದ ಕಾಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಲಾಗಿದೆ ಎಂದು ಯೂಟ್ಯೂಬ್‌ ಮಾಹಿತಿ ನೀಡಿದೆ. ಮೆಶಿನ್ ಲರ್ನಿಂಗ್‌ ಹಾಗೂ ಮಾನವ ವಿಮರ್ಷಕರ ಸಹಾಯದಿಂದ ಯೂಟ್ಯೂಬ್‌ ಈ ಎಲ್ಲಾ ಕ್ರಮಗಳನ್ನು ತೆಗೆದು ಕೊಳ್ಳುತ್ತಿರುವುದು ವಿಶೇಷ.

Best Mobiles in India

English summary
YouTube removes 1.7 million videos in India for violating its norms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X