ಅಮೆರಿಕಾದಲ್ಲಿ ಫೇಸ್‌ಬುಕ್ ಸ್ಥಾನವನ್ನು ಕಿತ್ತುಕೊಂಡಿತು 'ಯೂಟ್ಯೂಬ್'!!

|

ಅಂತರ್ಜಾಲ ಪ್ರಪಂಚದಲ್ಲಿ ಗೂಗಲ್‌ಗೆ ಭಾರೀ ಪೈಪೋಟಿ ನೀಡುತ್ತಿರುವ ಮಾರ್ಕ್​ ಜುಕರ್​ಬರ್ಗ್​ ಒಡೆತನದ ಸಾಮಾಜಿಕ ಜಾಲತಾಣ 'ಫೇಸ್​ಬುಕ್' ಅಮೆರಿಕಾದಲ್ಲಿ ಹಿಂದೆ ಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಸುಮಾರು ಎರಡು ವರ್ಷದ ಬಳಿಕ ಫೇಸ್​ಬುಕ್​ ಅಮೆರಿಕಾದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಗೂಗಲ್​ ಒಡೆತನದ ಯೂಟ್ಯೂಬ್‌ಗೆ ತನ್ನ ಸ್ಥಾನವನ್ನು ಬಿಡ್ಡುಕೊಟ್ಟಿದೆ.

ಅಮೆರಿಕದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ವೆಬ್​ಸೈಟ್​ಗಳ ಎರಡನೇ ಸ್ಥಾನದಲ್ಲಿದ್ದ ಫೇಸ್‌ಬುಕ್ ಸರಿಸುಮಾರು 4 ಬಿಲಿಯನ್ ಪೇಜ್​ ವಿಸಿಟರ್​ಗಳನ್ನು ಕಳೆದುಕೊಳ್ಳುವ ಮೂಲಕ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಮೊದಲು 8.5 ಬಿಲಿಯನ್​ ಪೇಜ್​ ವಿಸಿಟರ್​ಗಳನ್ನು ಹೊಂದಿದ್ದ ಪೇಸ್‌ಬುಕ್, ಕಳೆದ ಈಗ ಕೇವಲ 4.7 ಬಿಲಿಯನ್ ಪೇಜ್​ ವಿಸಿಟರ್​ಗಳನ್ನು ಹೊಂದಿದೆ.

ಅಮೆರಿಕಾದಲ್ಲಿ ಫೇಸ್‌ಬುಕ್ ಸ್ಥಾನವನ್ನು ಕಿತ್ತುಕೊಂಡಿತು 'ಯೂಟ್ಯೂಬ್'!!

ಸಿಮಿಲರ್​ವೆಬ್​ ಎಂಬ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯನ್ನು ಸಿಎನ್​ಬಿಸಿ ಪ್ರಕಟಿಸಿ ಈ ಮಾಹಿತಿಯನ್ನು ಹೊರಹಾಕಿದ್ದು, ಗೂಗಲ್​ನ ಆಲ್ಫಬೆಟ್​ ಸಂಸ್ಥೆಯ ಯೂಟ್ಯೂಬ್​ ದಿನದಿಂದ ದಿನಕ್ಕೆ ತನ್ನ ಬಳಕೇದಾರರ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದೆ, ಕಳೆದ ಎರಡು ವರ್ಷದಿಂದ ತನ್ನ ವೀಕ್ಷಕರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ ಎಂದು ಸಿಮಿಲರ್​ವೆಬ್​ ವರದಿ ಮಾಡಿದೆ.

ಇನ್ನು ಗೂಗಲ್ ನೀಡಿರುವ ಒಂದು ವರದಿ ಪ್ರಕಾರ ಭಾರತದ ಶೇ.80 ಇಂಟರ್ನೆಟ್ ಬಳಕೆದಾರರು ಯೂಟ್ಯೂಬ್ ವೀಕ್ಷಿಸುತ್ತಿದ್ದಾರೆ. ಭಾರತದಲ್ಲಿ 2014ರಲ್ಲಿ 10 ಲಕ್ಷಕ್ಕಿಂತ ಸಬ್​ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್​ಗಳ ಸಂಖ್ಯೆ ಕೇವಲ 16 ಇತ್ತು. ಆದರೆ, 10 ಲಕ್ಷಕ್ಕಿಂತ ಸಬ್​ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್​ಗಳು ಈಗ 300 ಸಂಖ್ಯೆಯನ್ನು ಮೀರಿದೆ.

ಅಮೆರಿಕಾದಲ್ಲಿ ಫೇಸ್‌ಬುಕ್ ಸ್ಥಾನವನ್ನು ಕಿತ್ತುಕೊಂಡಿತು 'ಯೂಟ್ಯೂಬ್'!!

ಯೂಟ್ಯೂಬ್​ನಂಥ ವಿಡಿಯೋ ಪ್ಲಾಟ್​ಫಾರ್ಮ್​ ಬಗ್ಗೆ ಜನರಿಗೆ ಈಗೀಗ ಆಸಕ್ತಿ ಹೆಚ್ಚಾಗುತ್ತಿದೆಯಂತೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಸಕ್ರಿಯ ಇಂಟರ್‌ನೆಟ್ ಬಳಕೆದಾರರ ಪೈಕಿ ಶೇ.85ರಷ್ಟು ಜನರು ಯೂಟ್ಯೂಬ್ ತೆರೆದು ವೀಕ್ಷಿಸುತ್ತಾರಂತೆ ಮತ್ತು 2020ರ ವೇಳೆಗೆ ಇಂಟರ್ನೆಟ್​ನಲ್ಲಿ ವಿಡಿಯೋ ವೀಕ್ಷಿಸಲಿರುವ ಜನರ ಪ್ರಮಾಣ 50 ಕೋಟಿ ಮೀರಲಿದೆಯಂತೆ.

ಓದಿರಿ: ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

Best Mobiles in India

English summary
Owing to severe decline in monthly page visits, from 8.5 billion to 4.7 billion in the last two years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X