ಮಕ್ಕಳ ಮೇಲೆ ನಿಗಾವಹಿಸಲು ಹೊಸ ಫೀಚರ್ಸ್‌ ಪರಿಚಯಿಸಿದ ಯುಟ್ಯೂಬ್‌!

|

ಗೂಗಲ್ ಒಡೆತನದ ಯೂಟ್ಯೂಬ್ ವಿಶ್ವದಾದ್ಯಂತ ಜನಪ್ರಿಯಗಳಿಸಿರುವ ವೀಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಕಳೆದ ಕೆಲವು ವರ್ಷಗಳಿಂದ ಯೂಟ್ಯೂಬ್ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿದೆ. ಸದ್ಯ ಇದೀಗ ಯುಟ್ಯೂಬ್‌ ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಮೂಲಕ ಪೋಷಕರು ಯುಟ್ಯೂಬ್‌ನಲ್ಲಿ ತಮ್ಮ ಮಕ್ಕಳು ಯಾವ ಮಾದರಿಯ ವಿಡಿಯೋಗಳನ್ನ ವೀಕ್ಷಣೆ ಮಾಡಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ.

ಯುಟ್ಯೂಬ್‌

ಹೌದು, ಗೂಗಲ್‌ ಸೇವೆಯಾದ ಯುಟ್ಯೂಬ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನು ಯುಟ್ಯೂಬ್‌ನಲ್ಲಿ ಎಲ್ಲಾ ಮಾದರಿಯ ವೀಡಿಯೋಗಳನ್ನ ಹಾಗೂ ಮ್ಯೂಸಿಕ್‌ ಅನ್ನು ವೀಕ್ಷಿಸುವುದರ ಜೊತೆಗೆ ಆನಂದಿಸಬಹುದಾಗಿದೆ.ಇನ್ನು ಯುಟ್ಯೂಬ್‌ನಲ್ಲಿ ಚಿಕ್ಕಮಕ್ಕಳು ಸಹ ವೀಡಿಯೋ ವೀಕ್ಷಣೆ ಮಾಡುವುದರಿಂದ ಅವರ ಮೇಲೆ ಪೋಷಕರು ನಿಯಂತ್ರಣವನ್ನು ಹೊಂದಬಹುದಾದ ಫೀಚರ್ಸ್‌ ಅನ್ನು ಯುಟ್ಯೂಬ್‌ ಪರಿಚಯಿಸಿದೆ. ಇದು ತಮ್ಮ ಮಕ್ಕಳು ಯೂಟ್ಯೂಬ್‌ನಲ್ಲಿ ನೋಡುವುದನ್ನು ನಿಯಂತ್ರಿಸಲು ಪೋಷಕರಿಗೆ ಸಹಾಯ ಮಾಡಲಿದೆ. ಹಾಗಾದ್ರೆ ಈ ಫೀಚರ್ಸ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್

ಯೂಟ್ಯೂಬ್ ಪೋಷಕರಿಗಾಗಿಯೇ ಈ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಯುಟ್ಯೂಬ್ ಕಿಡ್ಸ್ ಅಪ್ಲಿಕೇಶನ್ ಅನ್ನು ಬೆಳೆದಿರುವಂತೆ ಆಸಕ್ತಿದಾಯಕವಾಗಿ ಕಾಣದ ಮಕ್ಕಳಿಗಾಗಿ ಉದ್ದೇಶಿಸಲಾಗಿದೆ ಆದರೆ ವೀಡಿಯೊಗಳ ಕಂಪ್ಲೀಟ್‌ ಯೂಟ್ಯೂಬ್ ಕ್ಯಾಟಲಾಗ್ ಅನ್ನು ಆನಂದಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಪ್ಲಾಟ್‌ಫಾರ್ಮ್‌ನಂತೆ, ಯುಟ್ಯೂಬ್‌ ಅನ್ನು ಯಾರಾದರೂ ಬಳಸಲು ಕನಿಷ್ಠ 13 ವರ್ಷ ವಯಸ್ಸು ಬೇಕಾಗುತ್ತದೆ. ಆ ವಯಸ್ಸಿನೊಳಗಿನ ಜನರಿಗೆ, ಕಂಪನಿಯು ಯೂಟ್ಯೂಬ್ ಕಿಡ್ಸ್ ಬಳಕೆಯನ್ನು ಶಿಫಾರಸು ಮಾಡುತ್ತದೆ. ಇದು ಮಕ್ಕಳಿಗಾಗಿ ಸರಳವಾದ ಕ್ಯುರೇಟೆಡ್ ವಿಷಯದೊಂದಿಗೆ ನಿರ್ಮಿಸಲಾದ ಮೀಸಲಾದ ಅಪ್ಲಿಕೇಶನ್ ಆಗಿದೆ.

ಗೂಗಲ್

ಮುಂಬರುವ ತಿಂಗಳುಗಳಲ್ಲಿ, ಮೇಲ್ವಿಚಾರಣೆಯ ಗೂಗಲ್ ಖಾತೆಯ ಮೂಲಕ ತಮ್ಮ ಮಕ್ಕಳಿಗೆ ಯೂಟ್ಯೂಬ್ ಪ್ರವೇಶಿಸಲು ಪೋಷಕರಿಗೆ ಹೊಸ ಬೆಂಬಲವನ್ನು ಪ್ರಾರಂಭಿಸುವುದಾಗಿ ಯೂಟ್ಯೂಬ್ ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ. ಅವರ ಮಕ್ಕಳು ಮೇಲ್ವಿಚಾರಣೆಯ Google ಖಾತೆಯ ಮೂಲಕ YouTube ಗೆ ಪ್ರವೇಶಿಸಲು ಅವಕಾಶ ನೀಡಲಿದೆ. ಇದನ್ನು ಆಯ್ಕೆ ಮಾಡಲು ಪೋಷಕರಿಗೆ ಯೂಟ್ಯೂಬ್‌ನಲ್ಲಿ ಮೂರು ವಿಭಿನ್ನ ವಿಷಯ ಸೆಟ್ಟಿಂಗ್‌ಗಳನ್ನು ನೀಡಲಾಗುವುದು. ಇದರಿಂದ ಯೂಟ್ಯೂಬ್ ವೀಡಿಯೊಗಳ ವಿಶಾಲ ಬ್ರಹ್ಮಾಂಡವನ್ನು ಅನ್ವೇಷಿಸಲು ತಮ್ಮ ಮಕ್ಕಳು ಸಿದ್ಧರಾಗಿದ್ದಾರೆಂದು ಭಾವಿಸುವ ಪೋಷಕರಿಗೆ ಈ ಬೆಂಬಲವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಯೂಟ್ಯೂಬ್ ಹೇಳುತ್ತದೆ.

ವೀಡಿಯೊ

ಯಾವ ವೀಡಿಯೊಗಳನ್ನು ಸೇರಿಸಲಾಗಿದೆ ಎಂಬುದನ್ನು ನಿರ್ಧರಿಸಲು ನಾವು ಬಳಕೆದಾರರ ಇನ್ಪುಟ್, ಯಂತ್ರ ಕಲಿಕೆ ಮತ್ತು ಮಾನವ ವಿಮರ್ಶೆಯ ಮಿಶ್ರಣವನ್ನು ಬಳಸುತ್ತೇವೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಯೂಟ್ಯೂಬ್ ಹೇಳಿದೆ. ತಮ್ಮ ಮಕ್ಕಳಿಗಾಗಿ ವಿಷಯ ಸೆಟ್ಟಿಂಗ್‌ಗಳನ್ನು ಆರಿಸುವುದರ ಜೊತೆಗೆ, ಪೋಷಕರು ತಮ್ಮ ಮಗುವಿನ ಖಾತೆ ಸೆಟ್ಟಿಂಗ್‌ಗಳಿಂದ ವೀಕ್ಷಣೆ ಮತ್ತು ಹುಡುಕಾಟ ಹಿಸ್ಟರಿಯನ್ನು ಸಹ ನಿರ್ವಹಿಸಲು ಸಾಧ್ಯವಾಗಲಿದೆ. ಇದರಿಂದಾಗಿ ವಯಸ್ಕರ ವವೀಡಿಯೋಗಳು, ಅಸುರಕ್ಷಿತ ವೀಡಿಯೋಗಳನ್ನು ವೀಕ್ಷಿಸುವುದನ್ನು ತಪ್ಪಿಸಬಹುದಾಗಿದೆ.

Best Mobiles in India

English summary
Youtube's new feature allows parents to supervise what their kids watch.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X