ಜಲಪಾತದಿಂದ ಬಿದ್ದು ದುರಂತ ಅಂತ್ಯ ಕಂಡ ಮೂವರು ಯೂಟ್ಯೂಬ್ ಸ್ಟಾರ್‌ಗಳು

By Avinash
|

ಜಲಪಾತದಿಂದ ಬಿದ್ದು ಮೂವರು ಯೂಟ್ಯೂಬ್ ಸ್ಟಾರ್‌ಗಳು ಸಾವಿಗೀಡಾದ ದುರಂತ ಘಟನೆ ಕೆನಡಾದ ಬ್ರಿಟಿಷ್ ಕೋಲಂಬಿಯಾದ ಶಾನನ್ ಜಲಪಾತದಲ್ಲಿ ಸಂಭವಿಸಿದೆ. ಹೈ ಆನ್ ಲೈಫ್ ಎಂಬ ಯೂಟ್ಯೂಬ್ ಪೇಜ್‌ನ ಸ್ಟಾರ್‌ಗಳಾದ ರೈಕರ್ ಗಾಂಬ್ಲೆ (30), ಅಲೆಕ್ಸಿ ಲೈಖ್‌ (30) ಮತ್ತು ಮೆಗಾನ್ ಸ್ಕ್ರಾಪರ್ (29) ಸಾವಿಗೀಡಾಗಿದ್ದಾರೆ.

ಜಲಪಾತದಿಂದ ಬಿದ್ದು ದುರಂತ ಅಂತ್ಯ ಕಂಡ ಮೂವರು ಯೂಟ್ಯೂಬ್ ಸ್ಟಾರ್‌ಗಳು

ಸಾಹಸ ಮತ್ತು ಪ್ರಯಾಣಕ್ಕೆ ಹೆಸರಾಗಿದ್ದ ಈ ಮೂವರು ಸಾಹಸದಲ್ಲಿಯೇ ದುರಂತ ಅಂತ್ಯ ಕಂಡಿರುವುದು ನೆಟ್ಟಿಗರನ್ನು ಬೆಚ್ಚಿಬಿಳಿಸಿದೆ. ಹೈ ಆನ್‌ ಲೈಫ್ ಯೂಟ್ಯೂಬ್ ಚಾನಲ್ ಮೂಲಕ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದ ಇವರು ಗುರುವಾರ ಸಾವಿಗೀಡಾಗಿದ್ದನ್ನು ಫೆಡರಲ್ ಪೊಲೀಸರು ಖಚಿತ ಪಡಿಸಿದ್ದಾರೆ.

ಜಲಪಾತದ ತುದಿಯಲ್ಲಿ 100 ಅಡಿ ದೂರ ಪ್ರಯಾಣ

ಜಲಪಾತದ ತುದಿಯಲ್ಲಿ 100 ಅಡಿ ದೂರ ಪ್ರಯಾಣ

ಬ್ರಿಟಿಷ್ ಕೋಲಂಬಿಯಾದ ಮೂರನೇ ಅತಿ ಎತ್ತರದ ಜಲಪಾತವಾಗಿರುವ ಶಾನನ್ ಜಲಪಾತದ ಮೇಲಿನಿಂದ ಬಿಳುವುದಕ್ಕಿಂತ ಮುನ್ನ ಮೇಲಿನ ಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ನಂತರ ಸುಮಾರು 100 ಅಡಿ ಜಲಪಾತದ ತುದಿಯಲ್ಲಿ ನಡೆದಿದ್ದರು ಎಂದು ವರದಿಯಾಗಿದೆ.

5 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳು

5 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳು

ಈ ಮೂವರ ಹೈ ಆನ್ ಲೈಫ್ ಯೂಟ್ಯೂಬ್ ಚಾನಲ್ 5 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹಾಗೂ 1.1 ಮಿಲಿಯನ್ ಇನ್‌ಸ್ಟಾಗ್ರಾಂ ಫಾಲೋವರ್‌ಗಳನ್ನು ಹೊಂದಿತ್ತು. ಹೈ ಆನ್ ಲೈಫ್ ರೈಕರ್ ಗಾಂಬ್ಲೆ ಮತ್ತು ಅವರ ತಂಡದ ಪಾರ್ಕರ್, ಕ್ಲಿಪ್ ಜಂಪಿಂಗ್, ರೋಪ್‌ ಸ್ವಿಂಗ್ಸ್‌, ಜಲಪಾತದಲ್ಲಿ ಸಾಹಸ ಮತ್ತೀತರ ಸಾಹಸಮಯ ಚಟುವಟಿಕೆಗಳಿಗೆ ವಿಶ್ವದಾದ್ಯಂತ ಹೆಸರಾಗಿತ್ತು.

ವೈವಿಧ್ಯತೆಯ ಹುಡುಕಾಟಕ್ಕೆ ಪ್ರೇರಣೆ

ವೈವಿಧ್ಯತೆಯ ಹುಡುಕಾಟಕ್ಕೆ ಪ್ರೇರಣೆ

ಜಗತ್ತಿನ ಅನೇಕ ವೈವಿಧ್ಯಗಳನ್ನು ಹುಡುಕಲು ನಮ್ಮ ವೀಕ್ಷಕರಿಗೆ ನಾವೂ ವಾರಕ್ಕೊಮ್ಮೆ ವಿಡಿಯೋಗಳನ್ನು ಪೋಸ್ಟ್‌ ಮಾಡಿ ಉತ್ತೇಜನ ನೀಡುತ್ತೇವೆ ಎಂದು ಹೈ ಆನ್ ಲೈಫ್ ಯೂಟ್ಯೂಬ್ ಚಾನಲ್‌ ತನ್ನ ವಿವರಣೆಯಲ್ಲಿ ಬರೆದುಕೊಂಡಿದೆ.

ನೈಸರ್ಗಿಕ ಹೆಗ್ಗುರುತುಗಳ ದರ್ಶನ

ನೈಸರ್ಗಿಕ ಹೆಗ್ಗುರುತುಗಳ ದರ್ಶನ

ಹೈ ಆನ್ ಲೈಫ್ ಯೂಟ್ಯೂಬ್ ಚಾನಲ್ ಭಾರತ, ಥೈಲ್ಯಾಂಡ್, ನೇಪಾಳ ಹಾಗೂ ಗ್ರೀಸ್‌ವರೆಗಿನ ಅದ್ಭುತ ರಾಷ್ಟ್ರೀಯ ಉದ್ಯಾನವನಗಳು ಮತ್ತು ನೈಸರ್ಗಿಕ ಹೆಗ್ಗುರುತುಗಳ ಅನೇಕ ವಿಡಿಯೋಗಳನ್ನು ಒಳಗೊಂಡು ಸಾಹಸ ಪ್ರಿಯರನ್ನು ರಂಜಿಸುತ್ತಿತ್ತು.

ಅಲೀಸಾ ಹ್ಯಾನ್ಸೆನ್ ಭಾವನಾತ್ಮಕ ಪೋಸ್ಟ್‌

ಅಲೀಸಾ ಹ್ಯಾನ್ಸೆನ್ ಭಾವನಾತ್ಮಕ ಪೋಸ್ಟ್‌

ದುಃಖವು ಎಲ್ಲವನ್ನೂ ನಿಲ್ಲಿಸುವ ರೀತಿ ಕಾಣುತ್ತದೆ. ಏನು ಒಂದು ಬಾರಿ ಸಾಧ್ಯವಾಗುತ್ತದೆಯೋ ಅದು ಅಪ್ರಸ್ತುತದಂತೆ ತೋರುತ್ತದೆ. ಸಾವು ವೇಳಾಪಟ್ಟಿಯನ್ನು ನಿಲ್ಲಿಸಿ ಲೌಕಿಕತೆಯನ್ನು ಕಡೆಗಣಿಸುತ್ತದೆ. ಸಾವು ದುರಂತ ಭಾವನೆಗಳ ಅಲೆ, ಶೂನ್ಯತೆ ಮುಂದಿನ ಗುಡಿಸಲಾಗಿ ಕಾಣುತ್ತದೆ. ಬದುಕನ್ನು ನಿಲ್ಲಿಸುವ ಸಾವು ಸಾವಲ್ಲ, ಅದು ಪ್ರೀತಿಯ ಕೋರಿಕೆ. ಇದು ನಮ್ಮ ಮುಂದಿರುವ ಎಲ್ಲದನ್ನೂ ನೋಡಲು ಹೇಳುತ್ತದೆ ಎಂದು ರೈಕರ್ ಗಾಂಬ್ಲೆಯ ಸಂಗಾತಿಯಾಗಿರುವ ಅಲೀಸಾ ಹ್ಯಾನ್ಸೆನ್ ಇನ್ಸ್ಟಾಗ್ರಾಂ ಪುಟದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

Grief seems to bring everything to a halt. What was once possible seems irrelevant. The schedule is cleared, the mundane ignored. One moment a wave of catastrophic emotions, the next a cavern of emptiness. Death is not a request to stop living, it is a request for loving. It calls us to see fully what is in front of us. To see what needs healing. To see those for whom our hearts would break if we did not speak the words that need speaking. It asks us to tend to one another. To value this moment here and now. To face our own ephemerality. Death violently shakes us awake, time and time again. Words by @heyheatherobscura. . The only words I have right now to share are from my dear soul sister Heather. May we all send prayers to their souls as they transition.

A post shared by Alissa Hansen (@alissa.hansen) on

Most Read Articles
Best Mobiles in India

English summary
YouTube star Ryker Gamble,from High On Life, dies afterfalling from waterfall. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more