ಮತ್ತೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾದ Youtube!..ಏನದು ಗೊತ್ತಾ?

|

ಜನಪ್ರಿಯ ವಿಡಿಯೊ ಪ್ಲಾಟ್‌ಫಾರ್ಮ್ ಆಗಿರುವ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಈಗಾಗಲೇ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದಾ ಅಪ್‌ಡೇಟ್‌ನಲ್ಲಿರುವ ಯೂಟ್ಯೂಬ್ ಇದೀಗ ಹೊಸದೊಂದು ಫೀಚರ್ಸ್‌ ಅಳವಡಿಸಲು ಮುಂದಾಗಿದೆ. ಅದುವೇ New to you ಆಯ್ಕೆ. ಯೂಟ್ಯೂಬ್‌ನ ಈ ಹೊಸ ಟ್ಯಾಬ್ ಸ್ಮಾರ್ಟ್‌ಫೋನ್, ಡೆಸ್ಕ್‌ಟಾಪ್ ಮತ್ತು ಸ್ಮಾರ್ಟ್‌ ಟಿವಿ ಡಿವೈಸ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.

ಮತ್ತೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾದ Youtube!..ಏನದು ಗೊತ್ತಾ?

ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ಈಗ 'New to you' ಎಂಬ ಹೊಸ ಟ್ಯಾಬ್‌ ಅನ್ನು ಪರಿಚಯಿಸಲಿದೆ. ಈ ಫೀಚರ್ ಬಳಕೆದಾರರು ರೆಕಮೆಂಡ್‌ ಮಾಡಿದ ವಿಡಿಯೋ ಗಳನ್ನು ಮೀರಿ ಹೊಸ ಕ್ರಿಯೆಟ್‌ಗಳು ಹಾಗೂ ತಾಜಾ ಕಂಟೆಂಟ್‌ ಮಾಹಿತಿಗಳನ್ನು ಸರ್ಚ್ ಮಾಡಲು ನೆರವಾಗಲಿದೆ. ಯೂಟ್ಯೂಬ್‌ನ ಈ ಹೊಸ ಟ್ಯಾಬ್ ಮುಖ್ಯ ಪುಟದಲ್ಲಿ ಕಾಣಿಸಿಕೊಳ್ಳಲಿದೆ.

ಮತ್ತೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾದ Youtube!..ಏನದು ಗೊತ್ತಾ?

ಯೂಟ್ಯೂಬ್‌ ಕ್ರಿಯೆಟರ್ಸ್‌ ತಮ್ಮ ಕಂಟೆಂಟ್‌ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ, ಆದರೆ ಅದನ್ನು ಕಂಡುಹಿಡಿಯದೇ ಇರುವವರನ್ನು ಗುರಿಯಾಗಿಸಿಕೊಂಡು ಹೊಸ ಪ್ರೇಕ್ಷಕರನ್ನು ತಲುಪಲು ಈ ಫೀಚರ್ಸ್‌ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯೂಟ್ಯೂಬ್‌ನ ಹೊಸ ಟ್ಯಾಬ್ ಟಾಪಿಕ್ ಬಾರ್‌ನಲ್ಲಿ 'New to you' ಆಯ್ಕೆ ಕಾಣಿಸಿಕೊಳ್ಳಲಿದೆ. ಬಳಕೆದಾರರು ಯೂಟ್ಯೂಬ್ ಮುಖಪುಟವನ್ನು (ಮೊಬೈಲ್‌ ನಲ್ಲಿ) ರಿಫ್ರೆಶ್ ಮಾಡಿದಾಗ ಈ ಆಯ್ಕೆ ಸುಲಭವಾಗಿ ಕಂಡುಬರುತ್ತದೆ ಎನ್ನಲಾಗಿದೆ. ಬಳಕೆದಾರರು 'New to you' ಪ್ರಾಂಪ್ಟ್ ಅನ್ನು ಸಹ ನೋಡಬಹುದು, ನಿಮ್ಮ ಫೀಡ್ ಮೂಲಕ ನೀವು ಸ್ಕ್ರಾಲ್ ಮಾಡುತ್ತೀರಿ ಎಂದಿದೆ ಕಂಪನಿ.

ಯೂಟ್ಯೂಬ್ ವಿಡಿಯೋ ಸುಲಭವಾಗಿ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ:
ಯೂಟ್ಯೂಬ್ ತಾಣವು ವಿಡಿಯೊಗಳನ್ನು ಡೌನ್‌ ಲೋಡ್ ಮಾಡುವ ಆಯ್ಕೆ ನೀಡಿದ್ದು, ಅದು ಆಫ್‌ಲೈನ್ ವೀಕ್ಷಣೆಗೆ ಅನುಕೂಲವಾಗಿದೆ. ಆದರೆ ವಿಡಿಯೊ ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ ಗ್ಯಾಲರಿಗೆ ಡೌನ್‌ಲೋಡ್ ಮಾಡಿಕೊಳ್ಳಲು ನೇರವಾಗಿ ಅವಕಾಶ ಹೊಂದಿಲ್ಲ. ಆದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಗಳು ಮೂಲಕ ವಿಡಿಯೊಗಳನ್ನು ನೇರವಾಗಿ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಫೋರ್ಟ್‌ ಮಾಡುವ ಕೆಲವು ಅತ್ಯುತ್ತಮ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ವಿಡಿಯೋಡರ್-Videoder
ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Videoder ಅಪ್ಲಿಕೇಶನ್‌ ಒಂದು ಉತ್ತಮ ತಾಣವಾಗಿದೆ. ಹಾಗೆಯೇ ಈ ಆಪ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸೇರಿದಂತೆ ಇತರೆ ಸೋಶಿಯಲದ ತಾಣ ಗಳಲ್ಲಿನ ವಿಡಿಯೊ ಗಳನ್ನು ಡೌನ್‌ಲೋಡ್ ಮಾಡಲು ಸಹಕಾರಿಯಾಗಿದೆ.

ಮತ್ತೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾದ Youtube!..ಏನದು ಗೊತ್ತಾ?

ಟ್ಯೂಬ್‌ಮೇಟ್-TubeMate
ಟ್ಯೂಬ್‌ಮೇಟ್ ಆಪ್‌ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಫೋರ್ಟ್ ಮಾಡುತ್ತದೆ. ಡೌನ್‌ಲೋಡ್ ಮಾಡುವಾಗ ವಿಡಿಯೊ ಕ್ವಾಲಿಟಿ ಮತ್ತು ಯಾವ ಫಾರ್ಮೇಟ್‌ನಲ್ಲಿ ಬೇಕು ಎನ್ನುವ ಆಯ್ಕೆಗಳು ಕಾಣಿಸುತ್ತವೆ.

ಕೀಪ್ವಿಡ್‌-KeepVid
ಈ ಆಪ್‌ ಸಹ ವಿಡಿಯೊ ಡೌನ್‌ಲೋಡ್ ಮಾಡಲು ಬೆಸ್ಟ್ ಆಗಿದ್ದು, ವಿಡಿಯೊಗಳನ್ನು ವೇಗವಾಗಿ ಡೌನ್‌ಲೋಡ್ ಮಾಡಲು ಬೆಂಬಲ ನೀಡುತ್ತದೆ. ಇತರೆ ಸಾಮಾಜಿಕ ತಾಣಗಳ ವಿಡಿಯೊ ಗಳನ್ನು ಸಹ ಡೌನ್‌ಲೋಡ್ ಮಾಡಲು ಈ ಆಪ್ ಸಫೋರ್ಟ್ ಮಾಡುತ್ತದೆ. ಎಂಪಿ3, ಎಂಪಿ4 ಫಾರ್ಮೇಟ್‌ ಆಯ್ಕೆಗಳು ಸಹ ಇವೆ.

ಸ್ನ್ಯಾಪ್‌ಟ್ಯೂಬ್-Snaptube
ಸ್ನ್ಯಾಪ್‌ಟ್ಯೂಬ್ ಆಪ್‌ ಬಳಕೆದಾರ ಸ್ನೇಹಿ ಅನಿಸಲಿದ್ದು, ಯೂಟ್ಯೂಬ್ ವಿಡಿಯೊ ಗಳನ್ನು ಡೌನ್‌ಲೋಡ್ ಮಾಡಲು ಸಹ ಉತ್ತಮ ಅನಿಸಲಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಜನಪ್ರಿಯ ಸಾಮಾಜಿಕ ಜಾಲತಾಣಗಳ ವಿಡಿಯೊಗಳನ್ನು ಸಹ ಡೌನ್‌ಲೋಡ್ ಮಾಡಲು ನೆರವು ನೀಡಲಿದೆ.

ಇನ್ಸ್‌ಟ್ಯೂಬ್‌-InsTube
ಇನ್ಸ್‌ಟ್ಯೂಬ್‌ ಸಹ ಯೂಟ್ಯೂಬ್ ವಿಡಿಯೊ ಗಳನ್ನು ಡೌನ್‌ಲೋಡ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಫಾಸ್ಟ್‌ ಡೌನ್‌ಲೋಡ್ ಆಯ್ಕೆಯು ಈ ಆಪ್‌ನಲ್ಲಿ ಕಾಣಿಸಿಲಿದೆ. ಅದರೊಂದಿಗೆ ಸಾಕಷ್ಟು ಹೊಸ ಆಯ್ಕೆಗಳು ಸಹ ಈ ಆಪ್‌ನಲ್ಲಿ ಕಾಣಬಹುದಾಗಿದೆ.

YT3 ಯೂಟ್ಯೂಬ್ ಡೌನ್‌ಲೋಡರ್-YT3 Youtube Downloader
ಆಂಡ್ರಾಯ್ಡ್‌ ಬಳಕೆದಾರರು ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳಲು ಈ ಆಪ್ ಉತ್ತಮ ಆಯ್ಕೆ ಆಗಿದೆ. ಈ ಆಪ್‌ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ಎಂಪಿ 3 ಮತ್ತು ಎಂಪಿ 4 ಫಾರ್ಮೇಟ್‌ಗಳ ಆಯ್ಕೆಗಳು ಲಭ್ಯವಾಗಲಿವೆ.

Best Mobiles in India

English summary
Google has been working on a new YouTube feature called 'New to you' which will offer better content discovery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X