ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತೆಯೇ ಯೂಟ್ಯೂಬ್‌ನಲ್ಲಿ ಈಗ 'ಹ್ಯಾಂಡಲ್‌' ಆಯ್ಕೆ!

|

ಜನಪ್ರಿಯ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‌ ಆಗಾಗ್ಗೆ ಹಲವು ಅಪ್‌ಡೇಟ್‌ಗಳನ್ನು ನೀಡುತ್ತಾ ಬರುತ್ತಿದೆ. ಈ ಹಿಂದೆ ಯೂಟ್ಯೂಬ್ ರೀಲ್ಸ್‌ನಲ್ಲಿ ನೀಡಲಾಗುವ ಜಾಹೀರಾತಿನ ಬಗ್ಗೆಯೂ ಮಾಹಿತಿ ನೀಡಿತ್ತು. ಹಾಗೆಯೇ ಈಗ ಜಾಹೀರಾತು ಮುಕ್ತ ವಿಡಿಯೋ ನೋಡಲು ಮೂರು ತಿಂಗಳಿಗೆ ಕೇವಲ 10 ರೂ. ಗಳನ್ನು ಪಾವತಿ ಮಾಡುವ ಸೌಲಭ್ಯವನ್ನೂ ಕಲ್ಪಿಸಿದೆ. ಈಗ ಮತ್ತೇ ಬಳಕೆದಾರರಿಗೆ ಹಾಗೂ ಕ್ರಿಯೇಟರ್ಸ್‌ಗೆ ಸೇತುವೆಯಂತಾಗುವ ಒಂದು ಫೀಚರ್‌ ಅನ್ನು ಕಲ್ಪಿಸಿಕೊಟ್ಟಿದ್ದು, ಈ ಮೂಲಕ ಯೂಟ್ಯೂಬ್‌ ವೇದಿಕೆಯಲ್ಲಿ ಇಬ್ಬರೂ ಸಹ ಪರಸ್ಪರ ಪರಿಚಿತರಾಗಬಹುದಾಗಿದೆ.

ಯೂಟ್ಯೂಬ್‌

ಹೌದು, ಈಗ ಯೂಟ್ಯೂಬ್‌ ತಾಣವು ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ ರೀತಿಯಲ್ಲಿ ವಿಶಿಷ್ಟ ಹ್ಯಾಂಡಲ್‌ಗಳನ್ನು(Handles) ಪಡೆದುಕೊಳ್ಳಲಿದೆ. ಈ ಮೂಲಕ ಚಾನಲ್‌ ಜೊತೆಗೆ ಮತ್ತೊಂದು ಅನನ್ಯ ಹೆಸರನ್ನು ನಮೂದು ಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಚಾನಲ್‌ ಹೆಸರು Alex ಎಂದು ಇದ್ದರೆ ಹ್ಯಾಂಡಲ್‌ನಲ್ಲಿ Alexblog1 ನಂತಹ ಹೆಸರನ್ನು ನಮೂದಿಸಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಒಂದೇ ರೀತಿಯ ಹೆಸರುಳ್ಳ ಚಾನಲ್‌ಗಳಿಂದ ಗೊಂದಲಕ್ಕೆ ಒಳಗಾಗುವುದು ತಪ್ಪುತ್ತದೆ ಹಾಗೂ ನಿಖರವಾಗಿ ಕಂಟೆಂಟ್‌ ಕ್ರಿಯೇಟರ್ಸ್‌ಗಳನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ.

ಫೀಚರ್ಸ್‌

ಈ ಫೀಚರ್ಸ್‌ ಚಾನಲ್‌ನ ಪೇಜ್‌ ಹಾಗೂ ಶಾರ್ಟ್‌ ವಿಡಿಯೋ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ ಬಳಕೆದಾರರು ಯೂಟ್ಯೂಬ್‌ ಚಾನಲ್ ಕ್ರಿಯೇಟರ್ಸ್‌ಗಳನ್ನು ಸುಲಭವಾಗಿ ಪತ್ತೆಮಾಡಲು ಅನುವು ಮಾಡಿಕೊಡಲಾಗಿದೆ. ಇದಿಷ್ಟೇ ಅಲ್ಲದೆ, ಕಮೆಂಟ್, ಕಮ್ಯೂನಿಟಿ ಪೋಸ್ಟ್‌, ವಿಡಿಯೋ ಡಿಸ್ಕ್ರಿಪ್ಶನ್ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಬಳಕೆದಾರರ ಸಂವಹನಕ್ಕೆ ಈ ಹ್ಯಾಂಡಲ್‌ ಸಹಾಯಕವಾಗಲಿದೆ ಎಂದು ಯೂಟ್ಯೂಬ್‌ ಮಾಹಿತಿ ನೀಡಿದೆ.

ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತಹ ಫೀಚರ್‌

ಇನ್‌ಸ್ಟಾಗ್ರಾಮ್, ಟಿಕ್‌ಟಾಕ್‌ನಂತಹ ಫೀಚರ್‌

ಯೂಟ್ಯೂಬ್ ಚಾನಲ್ ಅಥವಾ ಕ್ರಿಯೇಟರ್ಸ್‌ಗಳನ್ನು ಪತ್ತೆ ಮಾಡಲು ಈ ಹಿಂದೆ ಚಾನಲ್‌ ಹೆಸರನ್ನು ಮಾತ್ರ ಸರ್ಚ್ ಮಾಡಬೇಕಾದ ಸ್ಥಿತಿ ಇತ್ತು. ಆದರೆ, ಈಗ ಈ ಹ್ಯಾಂಡಲ್‌ ಆಯ್ಕೆ ನೀಡಲಾಗಿದ್ದು, ಚಾನಲ್‌ಗಳ ಹೆಸರಿನ ಜೊತೆಗೆಯೇ ಈ ಹ್ಯಾಂಡಲ್‌ಗಳು ಕಾಣಿಸಿಕೊಳ್ಳಲಿವೆ ಎಂದು ಯೂಟ್ಯೂಬ್‌ ತಿಳಿಸಿದೆ. ಈಗಾಗಲೇ ಸಾಂಪ್ರದಾಯಿಕವಾಗಿ ಇದ್ದ ಚಾನಲ್ ಹೆಸರುಗಳಿಗಿಂತ ಭಿನ್ನವಾಗಿ ಈ ಫೀಚರ್ಸ್‌ನಲ್ಲಿ ವಿಶಿಷ್ಟ ಹೆಸರಿನ ಆಯ್ಕೆ ಇರಲಿದೆ ಎನ್ನಲಾಗಿದೆ. ಈ ಮೂಲಕ ಕ್ರಿಯೇಟರ್ಸ್‌ ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಬ್ರಾಂಡ್‌ ಸೃಷ್ಟಿ ಮಾಡಿಕೊಳ್ಳಬಹುದಾಗಿದೆ.

ನೆಚ್ಚಿನ ಕ್ರಿಯೇಟರ್ಸ್‌ ಜೊತೆ ಕನೆಕ್ಟ್‌ ಆಗಿರಬಹುದು

ನೆಚ್ಚಿನ ಕ್ರಿಯೇಟರ್ಸ್‌ ಜೊತೆ ಕನೆಕ್ಟ್‌ ಆಗಿರಬಹುದು

ಈ ಆಯ್ಕೆಯಲ್ಲಿ ವೀಕ್ಷಕರು ತಮ್ಮ ನೆಚ್ಚಿನ ಕ್ರಿಯೇಟರ್ಸ್‌ಗಳ ಜೊತೆ ಸಂವಹನ ನಡೆಸಬಹುದು ಎಂಬ ವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ರಚನೆಕಾರರು ಸಹ ತಮ್ಮ ಕಂಟೆಂಟ್‌ನಂತೆಯೇ ವಿಶಿಷ್ಟವಾದ ಗುರುತನ್ನು ಸೃಷ್ಟಿಮಾಡಿಕೊಳ್ಳಬಹುದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ ಎಂದು ಯೂಟ್ಯೂಬ್‌ ಉಲ್ಲೇಖಿಸಿದೆ. ಈ ಫೀಚರ್ ಈಗಾಗಲೇ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇರುವುದನ್ನು ನಾವು ಗಮನಿಸಬಹುದು.

ಪ್ರತಿ ಹ್ಯಾಂಡಲ್‌ ಅನನ್ಯವಾಗಿರುತ್ತವೆ

ಪ್ರತಿ ಹ್ಯಾಂಡಲ್‌ ಅನನ್ಯವಾಗಿರುತ್ತವೆ

ಯೂಟ್ಯೂಬ್‌ನ ಬ್ಲಾಗ್‌ಪೋಸ್ಟ್ ಪ್ರಕಾರ, ಈ ವಾರದಿಂದ ಯೂಟ್ಯೂಬ್ ಬಳಕೆದಾರರಿಗೆ ಹಂತ ಹಂತವಾಗಿ ಈ ಹ್ಯಾಂಡಲ್‌ಗಳನ್ನು ಪರಿಚಯಿಸಲಾಗುತ್ತದಂತೆ. ನಂತರ ಈ ಫೀಚರ್‌ಗೆ ಬೆಂಬಲವನ್ನು ನೀಡಲಾಗುವುದು ಎಂದಿರುವ ಯೂಟ್ಯೂಬ್‌, ಈ ಹ್ಯಾಂಡಲ್‌ ಅನನ್ಯವಾಗಿರುತ್ತವೆ ಹಾಗೆಯೇ ಯೂಟ್ಯೂಬ್‌ ನಲ್ಲಿ ಎಲ್ಲಾ ಆಯ್ದ ಚಾನಲ್ ಈ ಆಯ್ಕೆ ಹೊಂದಿರಲಿವೆ ಎಂದು ತನ್ನ ಬ್ಲಾಗ್‌ನಲ್ಲಿ ಉಲ್ಲೇಖಿಸಿದೆ.

ಈ ನಿಯಮ ಕಡ್ಡಾಯ

ಈ ನಿಯಮ ಕಡ್ಡಾಯ

ಬಳಕೆದಾರರು ಹ್ಯಾಂಡಲ್ ಹೆಸರನ್ನು ಪಡೆಯಬೇಕೆಂದರೆ ಕೆಲವು ಮಾಹಿತಿಯನ್ನು ತಿಳಿಯಲೇಬೇಕಿದ್ದು, ಯಾವಾಗ ಬಳಕೆದಾರರಿಗೆ ಈ ಹ್ಯಾಂಡಲ್‌ ಆಯ್ಕೆ ಲಭ್ಯವಾಗಲಿದೆಯೋ ಆಗ ಅವರು ಯೂಟ್ಯೂಬ್‌ನಿಂದ ನೋಟಿಫಿಕೇಶನ್‌ ಒಂದನ್ನು ಪಡೆಯುತ್ತಾರೆ. ಈ ಹ್ಯಾಂಡಲ್‌ ಆಯ್ಕೆಯನ್ನು ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಲಾದ ಒಟ್ಟಾರೆ ಕಾರ್ಯಚಟುವಟಿಕೆ, ಚಂದಾದಾರರ ಸಂಖ್ಯೆ ಮತ್ತು ಚಾನಲ್ ಸಕ್ರಿಯವಾಗಿದೆಯೇ? ಇಲ್ಲವೇ ಎಂಬುದನ್ನು ಆಧರಿಸಿಕೊಂಡು ನೀಡಲಾಗುತ್ತದಂತೆ.

URLಗೆ ಸಮಸ್ಯೆ ಇಲ್ಲ

URLಗೆ ಸಮಸ್ಯೆ ಇಲ್ಲ

ಇನ್ನು ಈಗಾಗಲೇ ವೈಯಕ್ತೀಕರಿಸಿದ URLಗೆ ಯಾವುದೇ ಸಮಸ್ಯೆ ಆಗದಂತೆ ಈ ಹ್ಯಾಂಡಲ್‌ ಫೀಚರ್ಸ್‌ ನೀಡಲಾಗುತ್ತಿದೆ. ಬಳಕೆದಾರರು ತಮಗೆ ಬೇಕಿರುವ ಹ್ಯಾಂಡಲ್ ಹೆಸರನ್ನು URLನಲ್ಲಿ ಪಡೆಯಲು ಅರ್ಹರಾದಾಗ ಅದಕ್ಕೆ ಸಂಬಂಧಿಸಿದಂತೆ ಅವರಿಗೆ ಒಂದು ನೋಟಿಫಿಕೇಶನ್ ರವಾನೆ ಆಗುತ್ತದೆ. ಆಗ ಡಿಫಾಲ್ಟ್‌ ಆಗಿ URL ಬದಲಾಗುತ್ತದೆ.

Best Mobiles in India

English summary
YouTube the popular social media platform, keeps coming up with many updates. Now handle option is also given on YouTube.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X