ಯೂಟ್ಯೂಬ್‌ನಿಂದ ಹೊಸ ಫೀಚರ್ಸ್‌; ಯಾವುದೇ ವಿಡಿಯೋವನ್ನು ನಿಮ್ಮದೇ ಭಾಷೆಯಲ್ಲಿ ವೀಕ್ಷಿಸಿ!

|

ಯೂಟ್ಯೂಬ್ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದೆ. ಅದೆಲ್ಲಕ್ಕೂ ಮಿಗಿಲಾಗಿ ಭಾರತದಲ್ಲಿ ಬಹುಪಾಲು ಮಂದಿ ಇದರಿಂದ ಮಾಹಿತಿ ಹಾಗೂ ಮನರಂಜನೆ ಪಡೆದುಕೊಳ್ಳುತ್ತಾರೆ. ಇದೊಂದು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಆಗಿದ್ದು, ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬರುತ್ತಿದೆ. ಭಾರತವು ಬಹು ಸಂಸ್ಕೃತಿ ಹಾಗೂ ಬಹು ಭಾಷೆಯನ್ನು ಒಳಗೊಂಡಿದ್ದು, ಇದೆಲ್ಲದರ ನಡುವೆ ಭಾರತೀಯರಿಗೆ ಯೂಟ್ಯೂಬ್‌ ಇದಕ್ಕೆ ಸಹಕಾರ ಆಗುವ ಹಾಗೆ ಹೊಸ ಸೌಲಭ್ಯ ನೀಡಲು ಮುಂದಾಗಿದೆ.

ಯೂಟ್ಯೂಬ್

ಹೌದು, 2017 ರಲ್ಲಿ ಯೂಟ್ಯೂಬ್ ಭಾರತದಲ್ಲಿ 122 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಹಾಗೆಯೇ 2022 ರ ವೇಳೆಗೆ ಯೂಟ್ಯೂಬ್ ವೀಕ್ಷಿಸುವ ಭಾರತೀಯರ ಸಂಖ್ಯೆ 567 ಮಿಲಿಯನ್‌ಗೆ ಏರಿದೆ. 2025 ರ ವೇಳೆಗೆ, ವೀಕ್ಷಕರ ಸಂಖ್ಯೆ 833 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ. ಯಾರೇ ಆದರೂ ಏನಾದರೂ ಮಾಹಿತಿ ಬೇಕು ಎಂದಾದರೆ ಮೊದಲು ಯೂಟ್ಯೂಬ್‌ ಕಡೆ ಕಣ್ಣಾಯಿಸುತ್ತಾರೆ. ಇದರಲ್ಲಿ ಅಡುಗೆ, ಆರೋಗ್ಯ, ಕೃಷಿ ಮತ್ತು ಇತರ ಹಲವು ವಿಷಯಗಳು ಅಗಾದವಾಗಿ ಲಭ್ಯವಾಗುತ್ತಿವೆ. ಮೊದಲೇ ತಿಳಿಸಿದಂತೆ ಭಾರತ ಬಹುಭಾಷೆಯ ನಾಡಾಗಿದ್ದು, ಇವೆಲ್ಲವೂ ಒಂದೇ ಭಾಷೆಯಲ್ಲಿ ಲಭ್ಯವಾಗದೆ ಹಲವು ಭಾಷೆಗಳ ವಿಡಿಯೋಗಳು ಇಲ್ಲಿ ಕಂಡು ಬರುತ್ತವೆ.

ವಿವಿಧತೆಯಲ್ಲಿ ಏಕತೆ

ವಿವಿಧತೆಯಲ್ಲಿ ಏಕತೆ

ವಿವಿಧತೆಯಲ್ಲಿ ಏಕತೆಯೇ ಭಾರತದ ವಿಶಿಷ್ಟತೆ. ಅದರಂತೆ ಭಾರತ ಅನೇಕ ಲಿಪಿ ಮತ್ತು ಲಿಪಿಯಿಲ್ಲದ ಭಾಷೆಗಳನ್ನು ಹೊಂದಿದೆ. ಅದರಲ್ಲೂ ಎಲ್ಲಾ ಭಾಷೆಗಳು ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದಿಲ್ಲ. ಇದಕ್ಕಾಗಿಯೇ ಯೂಟ್ಯೂಬ್‌ ಭಾರತೀಯರ ಮನಸ್ಥಿತಿ ಅರ್ಥ ಮಾಡಿಕೊಂಡಿದ್ದ, ಬೇಕಾದ ಭಾಷೆಯಲ್ಲಿ ಬೇಕಾದ ಮಾಹಿತಿಯನ್ನು ನೀಡಲು ಅನುವು ಮಾಡಿಕೊಡಲಿದೆ. ಇದಕ್ಕಾಗಿ ವಿಶೇಷ ಫೀಚರ್ಸ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಆದ್ಯತೆಯ ಭಾಷೆಯಲ್ಲಿ ಮಾಹಿತಿ ಪಡೆಯಿರಿ

ಆದ್ಯತೆಯ ಭಾಷೆಯಲ್ಲಿ ಮಾಹಿತಿ ಪಡೆಯಿರಿ

ನೀವು ಸದ್ಯಕ್ಕೆ ಈ ಫೀಚರ್ಸ್‌ ಅನ್ನು ಸಿನಿಮಾಗಳನ್ನು ನಿಮ್ಮ ಫೋನ್‌ನಲ್ಲಿ ನೋಡುವಾಗ ಗಮನಿಸಿರಬಹುದು. ಒಂದೇ ವಿಡಿಯೋ ಹಲವಾರು ಭಾಷೆಗಳ ಆಯ್ಕೆಯನ್ನು ಹೊಂದಿರುತ್ತದೆ. ಇದರಲ್ಲಿ ನಿಮಗೆ ಯಾವ ಭಾಷೆ ಬೇಕೋ ಆ ಭಾಷೆಯನ್ನು ನೀಡಲಾಗಿರುವ ಆಯ್ಕೆಯಲ್ಲಿ ಗುರುತು ಮಾಡಿದರೆ ಆ ಭಾಷೆಯಲ್ಲಿಯೇ ವಿಡಿಯೋ ಪ್ಲೇ ಆಗುತ್ತದೆ. ಅದೇ ರೀತಿ ಯೂಟ್ಯೂಬ್‌ನಲ್ಲೂ ಈ ಸೌಕರ್ಯ ಲಭ್ಯವಾಗಲಿದೆ.

ವಿಡಿಯೋ

ವಿಡಿಯೋ

ಯೂಟ್ಯೂಬ್ ವಿಡಿಯೋಗಳ ಭಾಷೆಯನ್ನು ತಮ್ಮ ಆಯ್ಕೆಯ ಭಾಷೆಗೆ ಬದಲಾಯಿಸಲ ಗೂಗಲ್ ಫೀಚರ್ಸ್‌ ಅನ್ನು ಸಿದ್ಧಪಡಿಸುತ್ತಿವೆ. ಗೂಗಲ್ ಫಾರ್ ಇಂಡಿಯಾ ಸಮ್ಮೇಳನದಲ್ಲಿ ಗೂಗಲ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಫೀಚರ್ಸ್‌ ಅನ್ನು ಮೊದಲ ಹಂತದಲ್ಲಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಚಯಿಸಲಾಗುತ್ತದಂತೆ. ಯಾಕೆಂದರೆ ಈ ವಿಷಯಗಳು ಎಲ್ಲರಿಗೂ ಅವಶ್ಯಕವಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದುಕೊಂಡು ಎಲ್ಲರೂ ಆರೋಗ್ಯವಾಗಿರಬಹುದು ಹಾಗೂ ವೈದ್ಯಕೀಯ ವಿಷಯಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಬಾರದು ಎಂಬುದು ಗೂಗಲ್‌ ನಿಲುವು.

ಈ ಫೀಚರ್ಸ್‌ ಎಲ್ಲರಿಗೂ ಲಭ್ಯವೇ?

ಈ ಫೀಚರ್ಸ್‌ ಎಲ್ಲರಿಗೂ ಲಭ್ಯವೇ?

ಈ ಹೊಸ ಫೀಚರ್ಸ್‌ ವೃತ್ತಿಪರರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಲು ಯೂಟ್ಯೂಬ್‌ ಮುಂದಾಗಿದೆ. ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳಲು ವಿಡಿಯೋ ಅತ್ಯಂತ ಪರಿಣಾಮಕಾರಿ ಸ್ವರೂಪವಾಗಿದೆ. ನಾವು ಸಾಮಾನ್ಯ ಜನರಿಗೆ ಸಹಾಯ ಮಾಡಲು ಬಯಸುತ್ತೇವೆ. ಪ್ರಮುಖ ಆರೋಗ್ಯ ಮಾಹಿತಿಯು ಎಲ್ಲರಿಗೂ ಲಭ್ಯವಾಗಬೇಕು ಮತ್ತು ಹೊಸ ಕ್ರಮದ ಬಗ್ಗೆ ಬಹಿರಂಗಪಡಿಸಬೇಕು ಎಂದು ಗೂಗಲ್ ಈ ವೇಳೆ ತಿಳಿಸಿದೆ.

ತಜ್ಞರೊಂದಿಗೆ ಕೆಲಸ

ತಜ್ಞರೊಂದಿಗೆ ಕೆಲಸ

ಗೂಗಲ್ ಇಂಡಿಯಾ ಅಧಿಕಾರಿಗಳು ವಿವಿಧ ಭಾಷೆಗಳಲ್ಲಿ ವಿಡಿಯೋಗಳನ್ನು ರಚಿಸಲು ಆರೋಗ್ಯ ತಜ್ಞರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಎಲ್ಲಾ ಜನರು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ ಎನ್ನಲಾಗಿದೆ. ಅದರಲ್ಲೂ ಸದ್ಯಕ್ಕೆ ಕೆಲವು ವಿಡಿಯೋಗಳು ಲಭ್ಯವಿದ್ದು, ಇವು ಇಂಗ್ಲಿಷ್, ಹಿಂದಿ, ಪಂಜಾಬಿ, ಮರಾಠಿ ಭಾಷೆಯ ಆಯ್ಕೆಗಳನ್ನು ಹೊಂದಿವೆ.

ಆಡಿಯೋ ಕ್ಲಿಪ್ ಆಯ್ಕೆ ಸಹ ಲಭ್ಯ

ಆಡಿಯೋ ಕ್ಲಿಪ್ ಆಯ್ಕೆ ಸಹ ಲಭ್ಯ

ವಿಡಿಯೋಗಳನ್ನು ಡಬ್ ಮಾಡುವ ಕೆಲಸದ ಜೊತೆಗೆ ವಿವಿಧ ಭಾಷೆಗಳಲ್ಲಿ ಆಡಿಯೊ ಕ್ಲಿಪ್ ಅನ್ನು ಆಯ್ಕೆ ಮಾಡಲು ಭಾಷೆಗಳ ಪಟ್ಟಿಯೊಂದಿಗೆ ಬಟನ್ ಆಯ್ಕೆ ನೀಡಲಾಗುತ್ತದೆ. ಬಹುಭಾಷಾ ಆಡಿಯೋ ಹೊಂದಿರುವ ವಿಡಿಯೋಗಳ ಈ ಸೆಟ್ಟಿಂಗ್‌ಗಳ ಬಟನ್‌ನಲ್ಲಿ 'ಆಡಿಯೋ ಟ್ರ್ಯಾಕ್' ಆಯ್ಕೆ ಇರಲಿದೆ ಎಂದು ತಿಳಿದುಬಂದಿದೆ.

ಎಲೌಡ್

ಎಲೌಡ್ ಮೂಲ ವಿಷಯವನ್ನು ಬಹು ಭಾಷೆಗಳಿಗೆ ಲಿಪ್ಯಂತರ, ಭಾಷಾಂತರಿಸಲು ಮತ್ತು ಡಬ್ ಮಾಡಲು ಸಹಾಯ ಮಾಡಲಿದೆ. ಈ ಡಿವೈಸ್‌ ಆರಂಭದಲ್ಲಿ 'ಆರೋಗ್ಯ ಪೂರೈಕೆದಾರರ ಸಣ್ಣ ಗುಂಪಿಗೆ' ಮಾತ್ರ ಲಭ್ಯವಿರುತ್ತದೆ ಎಂದು ಕಂಪೆನಿ ಹೇಳಿದ್ದು, ಆದಾಗ್ಯೂ, ಈ ಡಬ್ಬಿಂಗ್ ಡಿವೈಸ್‌ ಕಾರ್ಯನಿರ್ವಹಿಸುವ ಭಾಷೆಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಎಲೌಡ್ ಮೂಲಕ ಯೂಟ್ಯೂಬ್ ವಿಡಿಯೋಗಳನ್ನು ವಿಶ್ವದಾದ್ಯಂತ ಜನರು ಯಾವುದೇ ಭಾಷೆಯ ಹೊರತಾಗಿಯೂ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
YouTube video may soon available in multiple languages in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X