ಯೂಟ್ಯೂಬ್‌ನಲ್ಲಿ 'ಕ್ಯೂ' ಫೀಚರ್ಸ್‌; ಬಳಕೆದಾರರಿಗೆ ಹೊಸ ಅನುಭವ

|

ಯೂಟ್ಯೂಬ್ ಎಂಬುದು ಆನ್‌ಲೈನ್ ವಿಡಿಯೋ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು, ಅತ್ಯಂತ ಜನಪ್ರಿಯ ಹಾಗೂ ಬಹುಪಾಲು ಜನರ ನೆಚ್ಚಿನ ಪ್ಲಾಟ್‌ಫಾರ್ಮ್‌ ಆಗಿದೆ. ಈ ಮೂಲಕ ಬಳಕೆದಾರರು ಮಾಹಿತಿ ಹಾಗೂ ಮನರಂಜನೆ ಪಡೆದುಕೊಳ್ಳುತ್ತಿದ್ದು, ಹಲವರು ಯೂಟ್ಯೂಬ್‌ ಚಾನಲ್ ಮೂಲಕ ಹಣ ಕೂಡ ಸಂಪಾದನೆ ಮಾಡುತ್ತಿದ್ದಾರೆ. ಅದರಂತೆ ಯೂಟ್ಯೂಬ್‌ ಸಹ ಬಳಕೆದಾರರಿಗೆ ಹಲವಾರು ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಇದೀಗ ಮತ್ತಷ್ಟು ಪ್ರಯೋಜನಕಾರಿ ಫೀಚರ್ಸ್‌ ಒಂದನ್ನು ಪರಿಚಯಿಸಿದೆ.

ಫೀಚರ್ಸ್‌

ಹೌದು, ಕಾಲಕಾಲಕ್ಕೆ ತಕ್ಕಂತೆ ಸುಧಾರಿತ ಫೀಚರ್ಸ್‌ಗಳು ಯೂಟ್ಯೂಬ್ ನಲ್ಲಿ ಕಂಡುಬರುತ್ತಿದ್ದು, ಇದೀಗ ಮತ್ತೆ ಯೂಟ್ಯೂಬ್ ಬಳಕೆದಾರರಿಗೆ ಕ್ಯೂ (Queue) ಎಂಬ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ವಿಡಿಯೋ ವೀಕ್ಷಣೆ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಪ್ಲೇ ಲಿಸ್ಟ್‌ ಹಾಗೂ ನಂತರ ವೀಕ್ಷಿಸಲು ಉಳಿಸಿ ಎಂಬ ಆಯ್ಕೆಗಳು ಇದ್ದವು. ಇದೇ ರೀತಿಯ ಸೌಲಭ್ಯವನ್ನು ಈ ಹೊಸ ಫೀಚರ್ಸ್‌ ನೀಡುತ್ತದೆಯಾದರೂ ಈ ಹಳೆಯ ಫೀಚರ್ಸ್‌ಳಿಗೂ ಇದಕ್ಕೂ ಹಲವು ಭಿನ್ನತೆ ಇದೆ. ಹಾಗಿದ್ರೆ ಇದರ ಬಳಕೆ ಹೇಗೆ?, ಇದರಿಂದ ಪ್ರಯೋಜನ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಭಾರತದ ಬಳಕೆದಾರರಿಗೆ ಕ್ಯೂ

ಭಾರತದ ಬಳಕೆದಾರರಿಗೆ ಕ್ಯೂ

ಇನ್ಮುಂದೆ ಈ ಕ್ಯೂ ಫೀಚರ್ಸ್‌ ಅನ್ನು ಭಾರತೀಯ ಆಂಡ್ರಾಯ್ಡ್‌, ಐಓಎಸ್‌ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಈ ಹೊಸ ಫೀಚರ್ಸ್‌ ಕ್ಯೂಗೆ ಯಾವುದೇ ವಿಡಿಯೋವನ್ನು ಸೇರಿಸಲು, ವಿಡಿಯೋಗಳನ್ನು ಪ್ಲೇ ಮಾಡುವ ಕ್ರಮವನ್ನು ಎಡಿಟ್ ಮಾಡಲು ಅಥವಾ ಸರದಿಯಿಂದ ವಿಡಿಯೋಗಳನ್ನು ತೆಗೆದುಹಾಕಲು, ಅದಲು ಬದಲು ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಈ ಫೀಚರ್ಸ್‌ ಅನ್ನು ಕೆಲವು ದಿನಗಳಿಂದ ಪ್ರೀಮಿಯಂ ಚಂದಾದಾರಿಗೆ ನೀಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಎಲ್ಲಾ ಬಳಕೆದಾರರಿಗೂ ಲಭ್ಯವಾಗಿರುವುದು ವಿಶೇಷ. ಇನ್ನು ಕ್ಯೂ ಫೀಚರ್ಸ್‌ ಈಗಾಗಲೇ ವೆಬ್‌ನಲ್ಲಿ ಅಸ್ತಿತ್ವದಲ್ಲಿದ್ದು, ಇದು ಯೂಟ್ಯೂಬ್ ಮ್ಯೂಸಿಕ್‌ನಲ್ಲಿ ಕಸ್ಟಮ್ ಪ್ಲೇ ಪಟ್ಟಿ ಮಾಡುವಂತೆ ಕೆಲಸ ಮಾಡಲಿದೆ.

ಫೀಚರ್ಸ್‌

ಇದಿಷ್ಟೇ ಅಲ್ಲದೆ ಈ ಫೀಚರ್ಸ್‌ 'ನಂತರ ವೀಕ್ಷಿಸಲು ಉಳಿಸಿ' ಅಥವಾ 'ಪ್ಲೇಪಟ್ಟಿಗೆ ಉಳಿಸಿ' ಶೈಲಿಯಲ್ಲೇ ಕಂಡುಬಂದರೂ ಹಲವು ವಿಭಿನ್ನತೆ ತನ್ನದಾಗಿಸಿಕೊಂಡಿದೆ. ಯಾಕೆಂದರೆ ಇದು ಬಳಕೆದಾರರಿಗೆ ವಿಡಿಯೋಗಳನ್ನು ಶಾಶ್ವತವಾಗಿ ಉಳಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಬೇಕಾದಾಗ ವಿಡಿಯೋ ವೀಕ್ಷಣೆ ಮಾಡಬಹುದು ಅಥವಾ ಅಲ್ಲಿಂದ ಹೊರಹಾಕಬಹುದು.

ಯೂಟ್ಯೂಬ್ ಕ್ಯೂ ಅನ್ನು ಬಳಕೆ ಮಾಡುವುದು ಹೇಗೆ?

ಯೂಟ್ಯೂಬ್ ಕ್ಯೂ ಅನ್ನು ಬಳಕೆ ಮಾಡುವುದು ಹೇಗೆ?

ಹಂತ 1

ಮೊದಲು ನಿಮ್ಮ ಯೂಟ್ಯೂಬ್‌ ವಿಭಾಗದಲ್ಲಿ ಯಾವ ವಿಡಿಯೋ ಬೇಕೋ ಆ ವಿಡಿಯೋ ಮೇಲೆ ಕರ್ಸರ್‌ ಚಲಾಯಿಸಿ, ನಂತರ ಅಲ್ಲಿ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ. ಇದಾದ ಬಳಿಕ ಕ್ಯೂ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2

ಹಂತ 2

ಕ್ಯೂ ಆಯ್ಕೆ ಮೇಲೆ ಕ್ಲಿಕ್‌ ಮಾಡಿದ ನಂತರ ಒಂದು ಲಿಸ್ಟ್‌ ರಚನೆಯಾಗುತ್ತದೆ. ಅದಾದ ಮೇಲೆ ನಿಮಗೆ ಯಾವ ವಿಡಿಯೋವನ್ನು ಆ ವಿಭಾಗಕ್ಕೆ ಸೇರಿಸಬೇಕು ಎಂದುಕೊಳ್ಳುತ್ತೀರೋ ಆ ವಿಡಿಯೋ ಮೇಲೆ ಕಾಣಿಸಿಕೊಳ್ಳುವ ಕ್ಯೂ ಆಯ್ಕೆ ಮೇಲೆ ಕ್ಲಿಕ್‌ ಮಾಡಿದರೆ ಸಾಕು.

ಹಂತ 3

ಹಂತ 3

ಲಿಸ್ಟ್‌ ರಚನೆಯಾದ ನಂತರ ಯಾವ ವಿಡಿಯೋ ಎಷ್ಟನೇ ಸರದಿಯಲ್ಲಿ ಇರಬೇಕು ಎಂಬುದನ್ನೂ ಸಹ ನಿಯೋಜಿಸಿಕೊಳ್ಳಬಹುದು. ಅಂದರೆ ಕ್ರಮಬದ್ಧತೆಯಲ್ಲಿ ವಿಡಿಯೋ ಲಿಸ್ಟ್‌ ರಚಿಸಬಹುದಾಗಿದೆ. ಹಾಗೆಯೇ ಇದೇ ಲಿಸ್ಟ್‌ನಿಂದ ವಿಡಿಯೋಗಳನ್ನು ತೆಗೆದುಹಾಕಲು ಸಹ ಅವಕಾಶ ಇದೆ.

ಯೂಟ್ಯೂಬ್‌ನಲ್ಲಿ ಕಲರ್ ಬಾರ್

ಯೂಟ್ಯೂಬ್‌ನಲ್ಲಿ ಕಲರ್ ಬಾರ್

ಯೂಟ್ಯೂಬ್‌ನಲ್ಲಿ ಸೂಕ್ಷ್ಮ ಪ್ರಗತಿ ಪಟ್ಟಿಯನ್ನು ಪರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. ಅಂದರೆ ಈಗ ಲಭ್ಯ ಇರುವ ಕೆಂಪು ಪಟ್ಟಿ ಬದಲಿಗೆ ಬಿಳಿ ಅಥವಾ ಬೂದು ಬಣ್ಣದ ಪಟ್ಟಿ ನೀಡಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಬಣ್ಣದ ಪಟ್ಟಿಗಳ ಆಯ್ಕೆ ಭಾರತೀಯ ಬಳಕೆದಾರರಿಗೆ ಹಂತಹಂತವಾಗಿ ಲಭ್ಯವಾಗುತ್ತಾ ಬರುತ್ತಿದೆ.

Best Mobiles in India

English summary
YouTube video ‘Queue’ on Android, iOS is now available in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X