ಬಿಸಿ ದೋಸೆಯಂತೆ ಬೇಡಿಕೆಯಲ್ಲಿರುವ ಮೈಕ್ರೋಮ್ಯಾಕ್ಸ್‌ನ ಯುರೇಕಾ 2 ಬಜೆಟ್ ಫೋನ್‌

ಯುರೇಕಾ ಬ್ಲ್ಯಾಕ್ ಮಾರುಕಟ್ಟೆಗೆ ಯಶಸ್ವಿಯಾಗಿ ಕಾಲಿಟ್ಟ ನಂತರ ಮೈಕ್ರೋಮ್ಯಾಕ್ಸ್ ಇದೀಗ ಇನ್ನೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ್ದು ಯುರೇಕಾ ಸಿರೀಸ್‌ಗಳ ಸಾಲಿಗೆ ಈ ಡಿವೈಸ್ ಕೂಡ ಸೇರಲಿದೆ.

By Shwetha Ps
|

ಯುರೇಕಾ ಬ್ಲ್ಯಾಕ್ ಮಾರುಕಟ್ಟೆಗೆ ಯಶಸ್ವಿಯಾಗಿ ಕಾಲಿಟ್ಟ ನಂತರ ಮೈಕ್ರೋಮ್ಯಾಕ್ಸ್ ಇದೀಗ ಇನ್ನೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ್ದು ಯುರೇಕಾ ಸಿರೀಸ್‌ಗಳ ಸಾಲಿಗೆ ಈ ಡಿವೈಸ್ ಕೂಡ ಸೇರಲಿದೆ. ಯುರೇಕಾ 2 ಎಂಬುದಾಗಿ ಈ ಡಿವೈಸ್ ಹೆಸರನ್ನು ಹೊಂದಿದ್ದು ಬೆಲೆ 11,999 ಆಗಿದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

ಬಿಸಿ ದೋಸೆಯಂತೆ ಬೇಡಿಕೆಯಲ್ಲಿರುವ ಮೈಕ್ರೋಮ್ಯಾಕ್ಸ್‌ನ ಯುರೇಕಾ 2 ಬಜೆಟ್ ಫೋನ್‌

ಇದು ಉತ್ತಮ ವಿಶೇಷತೆಗಳನ್ನು ಹೊಂದಿದ್ದು ಬಜೆಟ್ ಡಿವೈಸ್‌ಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ. ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ಈ ಡಿವೈಸ್ ನೀಡಲಿದ್ದು ಉತ್ತಮ ಫೋನ್ ವಿಶೇಷತೆಗಳೊಂದಿಗೆ ಡಿವೈಸ್ ಬಳಕೆದಾರರ ಕೈ ಸೇರಲಿದೆ.

ಡಿವೈಸ್ ಕುರಿತು ಮತ್ತಷ್ಟು ವಿವರವಾದ ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದು ಫೋನ್ ಇತರ ಬಜೆಟ್ ಡಿವೈಸ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಅರಿತುಕೊಳ್ಳೋಣ.

ಡಿಸ್‌ಪ್ಲೇ, ಪ್ರೊಸೆಸರ್, RAM

ಡಿಸ್‌ಪ್ಲೇ, ಪ್ರೊಸೆಸರ್, RAM

ಈ ಡಿವೈಸ್ ಮೆಟಲ್ ಬಾಡಿಯನ್ನು ಹೊಂದಿದ್ದು 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು 2.5 ಡಿ ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ ಇದರಲ್ಲಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ತಾಗನ್ 625 ಓಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ 4ಜಿಬಿ RAM ಡಿವೈಸ್‌ನಲ್ಲಿದೆ. 64 ಜಿಬಿ ಸಂಗ್ರಹಣೆಯನ್ನು ಡಿವೈಸ್ ಒದಗಿಸಲಿದೆ.

ಕ್ಯಾಮರಾಗಳು

ಕ್ಯಾಮರಾಗಳು

ಸ್ಮಾರ್ಟ್‌ಫೋನ್ 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 8 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ನೈಟ್ ಮೋಡ್, ಬ್ಯೂಟಿ ಮೋಡ್ ಮತ್ತು ಮಲ್ಟಿ ಶಾಟ್‌ಗಳು ಹಾಗೂ ಇನ್ನಷ್ಟು ವೈಶಿಷ್ಟ್ಯಗಳನ್ನು ಡಿವೈಸ್ ಪಡೆದುಕೊಂಡಿದೆ.

ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?

ಬ್ಯಾಟರಿ ಮತ್ತು ಸಾಫ್ಟ್‌ವೇರ್

ಬ್ಯಾಟರಿ ಮತ್ತು ಸಾಫ್ಟ್‌ವೇರ್

3930 mAh ಬ್ಯಾಟರಿಯನ್ನು ಡಿವೈಸ್ ಹೊಂದಿದ್ದು, ಇದರ ಮ್ಯೂಸಿಕ್ ಪ್ಲೇಬ್ಯಾಕ್ 24 ಗಂಟೆಗಳಿಗಿಂತಲೂ ಹೆಚ್ಚಿನ ಸಂಗೀತ ಸುಧೆಯನ್ನು ನಿಮಗೆ ನೀಡಲಿದೆ. ಇದು ತ್ವರಿತ ಚಾರ್ಜಿಂಗ್‌ಗೆ ಅನುಕೂಲಕರವಾಗಿದ್ದು ಯುರೇಕಾ 2 ಆಂಡ್ರಾಯ್ಡ್ ಮಾರ್ಶ್‌ಮಲ್ಲೊ ಓಎಸ್ ಅನ್ನು ಹೊಂದಿದೆ. ಯುರೇಕಾ ಸಿರೀಸ್‌ನಲ್ಲಿ ಬಂದಿರುವ ಆರನೆಯ ಸ್ಮಾರ್ಟ್‌ಫೋನ್ ಇದಾಗಿದ್ದು ಈ ಮುಂಚೆ ಕಂಪನಿಯು ಯುರೇಕಾ, ಯುರೇಕಾ ಪ್ಲಸ್, ಯುರೇಕಾ ನೋಟ್, ಯುರೇಕಾ ಎಸ್ ಮತ್ತು ಯುರೇಕಾ ಬ್ಲ್ಯಾಕ್ ಅನ್ನು ಲಾಂಚ್ ಮಾಡಿತ್ತು.

ಅಂತೂ ಈ ಡಿವೈಸ್ ಮಾರುಕಟ್ಟೆಯಲ್ಲಿರುವ ಶ್ಯೋಮಿ ರೆಡ್ಮೀ ನೋಟ್ 4 ಮತ್ತು ಲೆನೊವೊ ಕೆ8 ನೋಟ್‌ಗೆ ಪ್ರತಿಸ್ಪರ್ಧಿಯಾಗುವುದಂತೂ ಖಂಡಿತ.

Best Mobiles in India

Read more about:
English summary
Yu Mobiles, a subsidiary of Micromax Informatics, today has yet again announced a new smartphone that will be an addition to the iconic Yureka series.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X