ಭಾರತದಲ್ಲಿ ಝೆಬ್ರೋನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್ ಲಾಂಚ್‌; ಬೆಲೆ ಎಷ್ಟು ಗೊತ್ತಾ!?

|

ಝೆಬ್ರಾನಿಕ್ಸ್ ಬ್ರ್ಯಾಂಡ್‌ ಎಂದರೆ ಅದೊಂದು ಉತ್ತಮ ಕ್ವಾಲಿಟಿಯ ಸ್ಪೀಕರ್‌, ಹೆಡ್‌ಫೋನ್‌, ಸ್ಮಾರ್ಟ್‌ಸ್ಪೀಕರ್‌, ಇಯರ್‌ಫೋನ್‌ ವಿಚಾರದಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಹೆಸರು. ಈ ಕಂಪೆನಿಯ ಆಡಿಯೋ ಡಿವೈಸ್‌ಗಳಿಗೆ ಇಂದಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಈಗ ಝೆಬ್ರೋನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ವಾಚ್‌ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಪಡೆದುಕೊಂಡಿದ್ದು, ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆಯ ಮೂಲಕ ತುಂಬಾ ಆಕರ್ಷಕವಾಗಿದೆ.

ಝೆಬ್ರಾನಿಕ್ಸ್

ಹೌದು, ಝೆಬ್ರಾನಿಕ್ಸ್ ಭಾರತದಲ್ಲಿ ಐಕಾನಿಕ್ ಲೈಟ್ (Zebronics Iconic Lite Smartwatch) ಎಂಬ ಹೊಸ ಸ್ಮಾರ್ಟ್ ವಾಚ್ ಅನ್ನು ಅನಾವರಣ ಮಾಡಿದೆ. ಬ್ಲೂಟೂತ್ ಕಾಲ್‌ ಅನ್ನು ಆಕ್ಟಿವ್‌ ಮಾಡಲು ಇನ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಸೌಲಭ್ಯವನ್ನು ಹೊಂದಿದೆ. ಇದಿಷ್ಟೇ ಅಲ್ಲದೆ ಡಯಲ್-ಪ್ಯಾಡ್ ಮೂಲಕ ಕಾಲ್‌ ಮಾಡಲು ಸಂಪರ್ಕಗಳನ್ನು ಸ್ಟೋರೇಜ್‌ ಮಾಡಲು ಹಾಗೂ ಇತ್ತೀಚಿನ ಸಂಪರ್ಕಗಳಿಂದ ಆಯ್ಕೆ ಬೇಕಾದವರಿಗೆ ಸುಲಭವಾಗಿ ಕರೆ ಮಾಡಲು ಅನುವು ಮಾಡಿಕೊಡಲಾಗಿದೆ. ಹಾಗಿದ್ರೆ, ಇದರ ಮತ್ತಷ್ಟು ಫೀಚರ್ಸ್‌ ಮತ್ತು ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಹೊಸ ಝೆಬ್ರಾನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲೆಡ್‌2.5D ಬಾಗಿದ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಆಲ್‌ವೇಸ್‌ ಆನ್‌ ಫೀಚರ್ಸ್‌ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ 10 ಇನ್‌ಬಿಲ್ಟ್‌ ಗ್ರಾಹಕೀಯಗೊಳಿಸಬಹುದಾದ ಹಾಗೂ 100+ ವಾಚ್ ಫೇಸ್‌ಗಳನ್ನು ಹೊಂದಿದ್ದು, ಹೃದಯ ಬಡಿತ ಮಾನಿಟರ್, SpO2 ಮಾನಿಟರ್, ರಕ್ತದೊತ್ತಡ ಮಾನಿಟರ್ ಮತ್ತು ನಿದ್ರೆ ಮಾನಿಟರ್ ಮಾಡಲಿದೆ.

ಕ್ಯಾಲೊರಿ

ಇದರೊಂದಿಗೆ ನಿಮ್ಮ ಕ್ಯಾಲೊರಿ ವಿವರ ಮತ್ತು ನೀವು ಸಂಚರಿಸುವ ಅಂತರವನ್ನು ಟ್ರ್ಯಾಕ್ ಮಾಡಬಹುದು. ಜೊತೆಗೆ, ಧ್ಯಾನದ ಉಸಿರಾಟಕ್ಕೂ ಇದು ಅನುಕೂಲ ಮಾಡಿಕೊಡುವ ಸೌಲಭ್ಯ ಹೊಂದಿದೆ. ಜೊತೆಗೆ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, ಝೆಬ್‌ ಫಿಟ್‌ 20 ಆಪ್‌ ಮೂಲಕ ಇವೆಲ್ಲವನ್ನೂ ಟ್ರ್ಯಾಕ್ ಮಾಡಬಹುದಾಗಿದೆ. ಇದರೊಂದಿಗೆ ಪ್ರಮುಖ ಫೀಚರ್ಸ್‌ ಆದ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಸಿರಿಗೆ ಬೆಂಬಲ ಸಹ ನೀಡಲಿದ್ದು, IP67 ರೇಟಿಂಗ್ ಅನ್ನು ಹೊಂದಿರುವುದು ಮತ್ತಷ್ಟು ವಿಶೇಷ.

ಸ್ಮಾರ್ಟ್

ಹೆಚ್ಚುವರಿಯಾಗಿ, ಡ್ಯುಯಲ್ ಮೆನು ಆಯ್ಕೆಯನ್ನೂ ಹೊಂದಿದ್ದು, ಮ್ಯೂಸಿಕ್‌ , ಕ್ಯಾಮೆರಾ ಕಂಟ್ರೋಲ್‌, ಕ್ಯಾಲ್ಕುಲೇಟರ್, ಸ್ಮಾರ್ಟ್ ನೋಟಿಫಿಕೇಶನ್‌, ಅಲಾರಾಂ ಗಡಿಯಾರ ಹಾಗೂ 2 ಇನ್‌ಬಿಲ್ಟ್‌ ಆಗಿ ಎರಡು ಗೇಮ್‌ಗಳಿದ್ದು, ಈ ವಾಚ್‌ ಬಳಕೆ ಇನ್ನಷ್ಟು ಹೆಚ್ಚಿನ ಅನುಕೂಲ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಹೊಸ ಸ್ಮಾರ್ಟ್‌‌ವಾಚ್‌ 250mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 5 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಈ ಬ್ಯಾಟರಿ ವಿಷಯದಲ್ಲಿ ಈ ವಾಚ್‌ ಬೋಟ್‌ ವೇವ್‌ ಎಲೆಕ್ರ್ಟಾ ಅಥವಾ ನಾಯ್ಸ್‌ ಐಕಾನ್‌ 2 ಅನ್ನು ಹೋಲಿಕೆ ಮಾಡಿದರೆ ಇವು 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿವೆ. ಈ ಮೂಲಕ ಪೆಬಲ್ ಫ್ರಾಸ್ಟ್, ಬೋಟ್ ವೇವ್ ಎಲೆಕ್ಟ್ರಾ ಸೇರಿದಂತೆ ಇನ್ನಿತರೆ ವಾಚ್‌ಗಳ ವಿರುದ್ಧ ಈ ವಾಚ್‌ ಸ್ಪರ್ಧಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಝೆಬ್ರಾನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 2,999 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಈ ಸ್ಮಾರ್ಟ್‌ವಾಚ್‌ ಬೇಕಾದವರು ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ವಾಚ್‌, ಚಿನ್ನದ ಬಣ್ಣ, ನೀಲಿ, ಕಪ್ಪು ಮತ್ತು ಬೆಳ್ಳಿ ಬಣ್ಣದ ಆಯ್ಕೆಯಲ್ಲಿ ನಿಮಗೆ ಲಭ್ಯ.

Best Mobiles in India

English summary
Zebronics Iconic Lite Smartwatch launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X