ಜೂಮ್‌ ಅಪ್ಲಿಕೇಶನ್‌ ಬಳಸುವವರು ಕೂಡಲೇ ಅಪ್ಡೇಟ್‌ ಮಾಡಿ!

|

ಜೂಮ್‌ ಅಪ್ಲಿಕೇಶನ್‌ ಜನಪ್ರಿಯ ವೀಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುವ ಹೆಚ್ಚಿನ ಬಳಕೆದಾರರನ್ನು ಸೆಳೆದಿದೆ. ಸದ್ಯ ನೀವು ಕೂಡ ವರ್ಚುವಲ್‌ ಮೀಟಿಂಗ್‌ಗೆ ಜೂಮ್‌ ಅಪ್ಲಿಕೇಶನ್‌ ಬಳಸುತ್ತಿದ್ದರೆ ಈ ಸ್ಟೋರಿಯನ್ನು ನೀವು ಗಮನಿಸಲೇಬೇಕು. ಏಕೆಂದರೆ ಜೂಮ್‌ ಅಪ್ಲಿಕೇಶನ್‌ ಮೂಲಕ ವೀಡಿಯೊ ಕಾನ್ಫರೆನ್ಸಿಂಗ್‌ ನಡೆಸುವ ಬಳಕೆದಾರರನ್ನು ಹ್ಯಾಕರ್‌ಗಳು ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ಜೂಮ್‌

ಹೌದು, ಜೂಮ್‌ ಅಪ್ಲಿಕೇಶನ್‌ ಮೂಲಕ ಮೀಟಿಂಗ್‌ ನಡೆಸುವವರು ಶೀಘ್ರದಲ್ಲೇ ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್‌ ಮಾಡುವುದು ಸೂಕ್ತ. ಸದ್ಯ ಜೂಮ್‌ ಅಪ್ಲಿಕೇಶನ್‌ನಲ್ಲಿ ದೋಷ ಪತ್ತೆಯಾಗಿದ್ದು, ಇದರಿಂದ ನಿಮ್ಮ ಕಂಪ್ಯೂಟರ್, ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡಲು ಹ್ಯಾಕರ್‌ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಬಳಕೆದಾರರ ಡೇಟಾವನ್ನು ಹ್ಯಾಕರ್‌ಗಳು ಕದಿಯುವ ಸಾದ್ಯತೆಯಿದೆ. ಹಾಗಾದ್ರೆ ಜೂಮ್‌ ಅಪ್ಲಿಕೇಶನ್‌ನಲ್ಲಿ ಪತ್ತೆಯಾಗಿರುವ ದೋಷ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜೂಮ್‌

ಜೂಮ್‌ ಅಪ್ಲಿಕೇಶನ್‌ನಲ್ಲಿ ಹೊಸ ದೋಷವನ್ನು ಪತ್ತೆ ಹಚ್ಚಲಾಗಿದೆ. ಈ ದೋಷದಿಂದ ಜುಮ್‌ ಮೀಟಿಂಗ್‌ ನಡೆಸುವಾಗಲೇ ಬಳಕೆದಾರರ ಡೆಟಾವನ್ನು ಹ್ಯಾಕ್‌ ಮಾಡಬಹುದು ಎನ್ನಲಾಗಿದೆ. ಜೂಮ್ ಕ್ಲೈಂಟ್ ಆವೃತ್ತಿ 5.10.0ರಲ್ಲಿ ಆಂಡ್ರಾಯ್ಡ್, ಐಒಎಸ್‌, ಲಿನಕ್ಸ್‌, ಮ್ಯಾಕ್‌ಒಎಸ್‌ ಮತ್ತು ವಿಂಡೋಸ್‌ ಸಿಸ್ಟಮ್‌ಗಳಲ್ಲಿ ಇದು ರನ್ ಆಗುತ್ತದೆ. ಆದರೆ ಸರ್ವರ್ ಸ್ವಿಚ್ ರಿಕ್ವೆಸ್ಟ್‌ ಟೈಂನಲ್ಲಿ 5.10.0 ಆವೃತ್ತಿಯ ಮೊದಲು ಮೀಟಿಂಗ್‌ಗಾಗಿ ಜೂಮ್ ಕ್ಲೈಂಟ್ ಹೋಸ್ಟ್ ಹೆಸರನ್ನು ಸರಿಯಾಗಿ ಮೌಲ್ಯೀಕರಿಸಲು ವಿಫಲವಾಗಿದೆ. ಇದರಿಂದ ಹ್ಯಾಕರ್‌ಗಳು ಇಡೀ ಮೀಟಿಂಗ್‌ ಅನ್ನು ಹ್ಯಾಕ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಜೂಮ್

ಇನ್ನು ಜೂಮ್ ಸೇವೆಗಳನ್ನು ಬಳಸಲು ಪ್ರಯತ್ನಿಸುವಾಗ ಈ ದುರುದ್ದೇಶಪೂರಿತ ಸರ್ವರ್‌ಗೆ ಸಂಪರ್ಕಿಸಲು ನಿಮ್ಮನ್ನು ಯಾಮಾರಿಸಬಹುದು. ಈ ಸಮಸ್ಯೆಯನ್ನು ಹೆಚ್ಚು ಅತ್ಯಾಧುನಿಕ ದಾಳಿಯಲ್ಲಿ ಬಳಸಬಹುದು. "XMPP ಪ್ರೋಟೋಕಾಲ್ ಮೂಲಕ ಜೂಮ್ ಚಾಟ್ ಮೂಲಕ ಬಳಕೆದಾರರನ್ನು ಹ್ಯಾಕ್‌ ಮಾಡಬಹುದಾಗಿದೆ. ಇದರಿಂದ ಮುಗ್ಧ ಬಳಕೆದಾರರನ್ನು ಹ್ಯಾಕ್‌ ಮಾಡುವ ಮೂಲಕ ಮೋಸಕ್ಕೆ ಒಳಗಾದ ವ್ಯಕ್ತಿಯ ಡಿವೈಸ್‌ನಲ್ಲಿ ದುರುದ್ದೇಶಪೂರಿತ ಕೋಡ್‌ಗಳನ್ನು ಅಳವಡಿಸಲು ಸಂದೇಶಗಳನ್ನು ವಿಶೇಷ ರೀತಿಯಲ್ಲಿ ರಚಿಸಲಾಗಿದೆ. ಸದ್ಯ ಈ ದೋಷವನ್ನು ಗೂಗಲ್‌ನ ಪ್ರಾಜೆಕ್ಟ್ ಝೀರೋ ಬಗ್ ಹಂಟರ್ ಇವಾನ್ ಫ್ರಾಟ್ರಿಕ್ ಕಂಡುಹಿಡಿದಿದ್ದು, ಜೂಮ್‌ಗೆ ವರದಿ ಮಾಡಿದ್ದಾರೆ.

ಮಾಲ್ವೇರ್

ಇದಲ್ಲದೆ ಈ ಮಾಲ್ವೇರ್ ಅನ್ನು ಬಳಸಿಕೊಂಡು ಆಂಡ್ರಾಯ್ಡ್‌, ಐಫೋನ್‌ ಮತ್ತು ವಿಂಡೋಸ್‌ ಸೇರಿದಂತೆ ಅನೇಕ ಡಿವೈಸ್‌ಗಳನ್ನು ಹ್ಯಾಕ್‌ ಮಾಡಬಹುದಾಗಿದೆ. ಈ ಮಾಲ್‌ವೇರ್‌ ಮೂಲಕ ಜೂಮ್ ಚಾಟ್‌ನಲ್ಲಿ ಇನ್ನೊಬ್ಬ ಬಳಕೆದಾರರಿಗೆ ರಾಜಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಹ್ಯಾಕರ್‌ XMPP ಪ್ರೋಟೋಕಾಲ್ ಮೂಲಕ ಜೂಮ್ ಚಾಟ್ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಲಿದೆ. ಇದೇ ಕಾರಣಕ್ಕೆ ಪ್ರಸ್ತುತ ಜೂಮ್ ಬಳಕೆದಾರರು ಇತ್ತೀಚಿನ ಅಪ್‌ಡೇಟ್ V5.10.0 ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸೂಕ್ತವಾಗಲಿದೆ.

ಜೂಮ್‌

ಜೂಮ್‌ ಅಪ್ಲಿಕೇಶನ್‌ ಇತ್ತೀಚಿಗೆ ತನ್ನ ಹೊಸ ಅಪ್ಡೇಟ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹಲವು ಫೀಚರ್ಸ್‌ಗಳನ್ನು ಬಳಕೆದಾರರ ಗಮನ ಸೆಳೆದಿವೆ. ಇದರಿಂದ ಜೂಮ್‌ ಅಪ್ಲಿಕೇಶನ್‌ ಬಳಸುವವರು ಹೊಸ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಮೀಟಿಂಗ್‌ ಸಮಯದಲ್ಲಿ ನಿಮ್ಮದೇ ಆದ ಅವತಾರ್‌ ಅನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಜೂಮ್‌ ಅಪ್ಲಿಕೇಶನ್‌ನ ಹೊಸ ಅವತಾರ್ ಫೀಚರ್ಸ್‌ ಆಪಲ್‌ನ ಮೆಮೊಜಿ ಫೀಚರ್ಸ್‌ ಮಾದರಿಯಲ್ಲಿರಲಿದೆ. ಇದು ಅನಿಮೇಟೆಡ್ ಅವತಾರ್ ಅನ್ನು ಬಳಸಿಕೊಂಡು ವೀಡಿಯೊ ಕಾಲ್ಸ್‌ ಮತ್ತು ವೆಬ್‌ನಾರ್‌ಗಳನ್ನು ನಡೆಸಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ನಿಮ್ಮ ಮುಖವು ಪರದೆಯ ಮೇಲೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಜೂಮ್‌ನ ಸಾಫ್ಟ್‌ವೇರ್ ಡಿವೈಸ್‌ನ ಕ್ಯಾಮರಾವನ್ನು ಬಳಸುತ್ತದೆ. ಜೊತೆಗೆ ಇದು ನಿಮ್ಮ ಅಭಿವ್ಯಕ್ತಿಗಳು ಮತ್ತು ತಲೆಯ ಚಲನೆಯನ್ನು ಅನುಕರಿಸುವ ವರ್ಚುವಲ್ ಅನಿಮೇಟೆಡ್ ಅವತಾರ್ ಅನ್ನು ಅನ್ವಯಿಸುತ್ತದೆ.

Best Mobiles in India

English summary
Zoom security allowed hackers to install malware on your Android and iOS devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X