ZOOM ಮೀಟಿಂಗ್‌ ಇನ್ಮುಂದೆ ಕಿರಿಕಿರಿ ಎನಿಸಬಹುದು!..ಯಾಕೆ ಗೊತ್ತಾ?

|

ಪ್ರಸ್ತುತ ವಿಡಿಯೋ ಕಾನ್ಫರೆನ್ಸ್‍ ಹಾಗೂ ವಿಡಿಯೋ ಕರೆಗಳ ಆಪ್‌ಗಳು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ನಿಟ್ಟಿನಲ್ಲಿ ಹಲವು ಆಪ್‌ಗಳು ಲಭ್ಯ ಇದ್ದು, ಆ ಪೈಕಿ ಜೂಮ್ ZOOM ಆಪ್‌ ಭಾರಿ ಸದ್ದು ಮಾಡಿದೆ. ಹಲವು ಅನುಕೂಲಕರ ಸೇವೆಗಳನ್ನು ಒದಗಿಸಿರುವ ಜೂಮ್‌ ಹೆಚ್ಚು ಜನಪ್ರಿಯತೆ ಗಳಿಸಿದೆ. ಆದರೆ ತನ್ನ ಬಳಕೆದಾರರಿಗೆ ಈಗ ಭರ್ಜರಿ ಶಾಕ್ ಸಮಾಚಾರ ನೀಡಿದೆ.

ಜಾಹೀರಾತುಗಳಿಲ್ಲದೆ

ಹೌದು, ಜೂಮ್‌ ಆಪ್‌ ಯಾವುದೇ ಜಾಹೀರಾತುಗಳಿಲ್ಲದೆ ಉಚಿತ ಅಪ್ಲಿಕೇಶನ್ ಆಗಿದೆ. ಆದರೆ ಈಗ ಉಚಿತ ಬಳಕೆದಾರರಿಗೆ ಜಾಹೀರಾತುಗಳನ್ನು ತೋರಿಸಲು ಪ್ರಾರಂಭಿಸಲು ಕಂಪನಿಯು ಈಗ ಜಾಹೀರಾತು ಕಾರ್ಯಕ್ರಮವನ್ನು ಹೊರತರುತ್ತಿದೆ. ಈ ಆರಂಭಿಕ ಕಾರ್ಯಕ್ರಮಕ್ಕಾಗಿ, ಬಳಕೆದಾರರು ತಮ್ಮ ಮೀಟಿಂಗ್‌ ಕೊನೆಗೊಳಿಸಿದ ನಂತರ ನೋಡುವ ಬ್ರೌಸರ್ ಪುಟದಲ್ಲಿ ಮಾತ್ರ ಜಾಹೀರಾತುಗಳನ್ನು ಹೊರತರಲಾಗುತ್ತದೆ.

ಎಂಬುದನ್ನು

ಇತರ ಉಚಿತ ಮೂಲ ಬಳಕೆದಾರರು ಹೋಸ್ಟ್ ಮಾಡುವ ಮೀಟಿಂಗ್‌ಗಳಿಗೆ ಸೇರಿದರೆ ನಿರ್ದಿಷ್ಟ ದೇಶಗಳಲ್ಲಿನ ಉಚಿತ ಮೂಲ ಬಳಕೆದಾರರು ಮಾತ್ರ ಈ ಜಾಹೀರಾತುಗಳನ್ನು ನೋಡುತ್ತಾರೆ. 'ಈ ಜಾಹೀರಾತು ಪೈಲಟ್ ಪ್ರೋಗ್ರಾಂ ಅನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ನಾವು ಎಚ್ಚರಿಕೆಯಿಂದ ಮತ್ತು ಚಿಂತನಶೀಲವಾಗಿ ಪರಿಗಣಿಸಿದ್ದೇವೆ ಮತ್ತು ಬಳಕೆದಾರರ ಆಯ್ಕೆಯನ್ನು ಖಾತ್ರಿಪಡಿಸುವ ಗುರಿಯೊಂದಿಗೆ ನಾವು ಇದನ್ನು ಮಾಡಿದ್ದೇವೆ' ಎಂದು ಕಂಪನಿಯು ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಮಾರ್ಕೆಟಿಂಗ್

ಹಾಗೆಯೇ ಯಾವುದೇ ಮಾರ್ಕೆಟಿಂಗ್, ಪಬ್ಲಿಕ್‌ಸಿಟಿ ಅಥವಾ ಥರ್ಡ್‌ ಪಾರ್ಟಿ ಜಾಹೀರಾತು ಉದ್ದೇಶಗಳಿಗಾಗಿ ಮೀಟಿಂಗ್, ವೆಬ್ನಾರ್ ಅಥವಾ ಮೆಸೆಜ್‌ ಕಳುಹಿಸುವ ಕಟೆಂಟ್‌ ಅನ್ನು (ಆಡಿಯೋ, ವಿಡಿಯೋ, ಫೈಲ್‌ಗಳು ಮತ್ತು ಮೆಸೆಜ್‌ಗಳು) ಬಳಸುವುದಿಲ್ಲ ಎಂದು ಜೂಮ್ ಹೇಳಿದೆ.

ಜೂಮ್‌ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಚೇಂಜ್ ಮಾಡುವುದು ಹೇಗೆ:

ಜೂಮ್‌ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಚೇಂಜ್ ಮಾಡುವುದು ಹೇಗೆ:

ಜೂಮ್ ಆಪ್ ಮೂಲಕ ವಿಡಿಯೊ ಕರೆ ನಡೆಸುವಾಗ ಕೆಲವೊಮ್ಮೆ ಮನೆಯಲ್ಲಿ ಅಸ್ತವ್ಯಸ್ತ ಉಂಟಾಗಬಹುದು. ಅಥವಾ ವಿಡಿಯೊ ಕರೆ ಮಾಡಲು ಮನೆಯಲ್ಲಿ ಸೂಕ್ತ ಬ್ಯಾಕ್‌ಗ್ರೌಂಡ್ ಸಿಗದಿದ್ದರೇ ಬಳಕೆದಾರರು ಜೂಮ್ ಆಪ್‌ನಲ್ಲಿಯೇ ಲಭ್ಯವಿರುವ ಬ್ಯಾಕ್‌ಗ್ರೌಂಡ್‌ ವಾಲ್‌ಪೇಪರ್ ಬಳಕೆ ಮಾಡಬಹುದು. ಹಲವು ಆಕರ್ಷಕ ಬ್ಯಾಕ್‌ಗ್ರೌಂಡ್ ವಾಲ್‌ಪೇಪರ್ ಆಯ್ಕೆಗಳು ಜೂಮ್‌ ಆಪ್‌ನಲ್ಲಿ ಸಿಗುತ್ತವೆ. ಹಾಗಾದರೇ ಜೂಮ್ ವಿಡಿಯೊ ಕರೆ ಮಾಡುವಾಗ ಬ್ಯಾಕ್‌ಗ್ರೌಂಡ್ ಬದಲಾಯಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜೂಮ್ ಆಪ್‌ನಲ್ಲಿ ಬ್ಯಾಕ್‌ ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಜೂಮ್ ಆಪ್‌ನಲ್ಲಿ ಬ್ಯಾಕ್‌ ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಭಾಗ ದಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ 2: ನಂತರ ಸೆಟ್ಟಿಂಗ್‌ ಮೆನು ಕ್ಲಿಕ್ ಮಾಡಿ.
ಹಂತ 3: ನಿಮ್ಮ ಎಡಭಾಗ ದಲ್ಲಿರುವ ಮೆನು ವಿನಲ್ಲಿರುವ ವರ್ಚುವಲ್ ಹಿನ್ನೆಲೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಆನಂತರ ಜೂಮ್ ಒದಗಿಸಿದ ಡೀಫಾಲ್ಟ್ ಹಿನ್ನೆಲೆ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಆಟೋ ಮ್ಯಾಟಿಕ್ ಆಗಿ ಬದಲಾವಣೆ ಗೊಳ್ಳುತ್ತದೆ.

ಐಕಾನ್

ಹಂತ 5: ಬ್ಯಾಕ್ಗ್ರೌಂಡ್‌ನಲ್ಲಿ ನಿಮ್ಮ ಆಯ್ಕೆಯ ಚಿತ್ರವನ್ನು ಸಹ ನೀವು ಅಪ್‌ಲೋಡ್ ಮಾಡಬಹುದು. ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಗೆ ಹೋಗಿ ಮತ್ತು ‘ವರ್ಚುವಲ್ ಬ್ಯಾಕ್‌ ಗ್ರೌಂಡ್‌ ಆಯ್ಕೆಮಾಡಿ' ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.


ಹಂತ 6: ಈಗ, ನಿಮ್ಮ ಆಯ್ಕೆಯ ಚಿತ್ರವನ್ನು ನೀವು ಅಪ್‌ಲೋಡ್ ಮಾಡು ವಂತಹ ಬಾಕ್ಸ್‌ ಕಾಣಿಸುತ್ತದೆ. ಒಮ್ಮೆ ನೀವು ಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರ, ಜೂಮ್ ಒದಗಿಸಿದ ಇತರ ವಾಲ್‌ ಪೇಪರ್ ಜೊತೆಗೆ ಅದು ಕಾಣಿಸುತ್ತದೆ.

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸಭೆಗೆ/ ಮೀಟಿಂಗ್ ಸೇರಿಕೊಳ್ಳಿ.
ಹಂತ 2: ನಂತರ ಮೆನು ಆಯ್ಕೆಗಾಗಿ, ಅಪ್ಲಿಕೇಶನ್‌ನ ಕೆಳಗಿನ ಬಲ ಭಾಗದಲ್ಲಿ ಕಂಡುಬರುವ ಮೂರು ಡಾಟ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ 3: ಆಗ ವರ್ಚುವಲ್ ಬ್ಯಾಕ್‌ ಗ್ರೌಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 4: ನಂತರ ಜೂಮ್‌ನ ಡೀಫಾಲ್ಟ್ ಚಿತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅಥವಾ ನಿಮ್ಮದೇ ಆದ ಫೋಟೊವನ್ನು ಅಪ್‌ ಲೋಡ್ ಮಾಡಿ.

Best Mobiles in India

Read more about:
English summary
Zoom Video Conferencing App To Start Showing Ads To Free Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X