ಭಾರತದಲ್ಲಿ ಸಧ್ಯದಲ್ಲೇ ಲಾಂಚ್ ಆಗಲಿದೆ ZTE ಯ 5 ಬಜೆಟ್ ಸ್ಮಾರ್ಟ್ಫೋನ್ಗಳು!

ಚೀನಾದ ZTE ಕಂಪೆನಿಯು ಇದೇ ಸೆಪ್ಟಂಬರ್ ಅಥವ ಅಕ್ಟೋಬರ್ ತಿಂಗಳೊಳಗೆ ಭಾರತದಲ್ಲಿ 5 ಹೊಸ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದೆ.

By Tejaswini P G
|

ಚೀನಾದ ಕಂಪೆನಿಯಾದ ZTE ಯುಎಸ್ ಮೊದಲಾದ ದೇಶಗಳಲ್ಲಿ ಈಗಾಗಲಲೇ ಪ್ರಸಿದ್ಧಿಯನ್ನು ಪಡೆದಿದ್ದರೂ, ಭಾರತದಲ್ಲಿ ಇನ್ನೂ ಅಷ್ಟಾಗಿ ಖ್ಯಾತಿಯನ್ನು ಪಡೆದಿಲ್ಲ.ಆದರೆ ಈಗ ಇದನ್ನು ಬದಲಾಯಿಸಲು ಹೊರಟಿರುವ ZTE , ಭಾರತದಲ್ಲಿ 5 ಹೊಸ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಸಧ್ಯದಲ್ಲೇ ಲಾಂಚ್ ಆಗಲಿದೆ ZTE ಯ 5 ಬಜೆಟ್ ಸ್ಮಾರ್ಟ್ಫೋನ್ಗಳು!


ಗಿಝ್ಬಾಟ್ ಗೆ ನೀಡಿದ ಸಂದರ್ಶನವೊಂದರಲ್ಲಿ ZTE ಯ CMO ಆದ ಸಚಿನ್ ಬಾತ್ರಾ ಅವರು, ZTE ಭಾರತದಲ್ಲಿ 5 ಹೊಸ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿರುವ ವಿಷಯ ತಿಳಿಸಿದ್ದಾರೆ.ಈ ಸಂದರ್ಶನದಲ್ಲಿ ಅವರಾಡಿದ ಮಾತುಗಳ ಅನುಸಾರ, ಈ ಹೊಸ ಸ್ಮಾರ್ಟ್ಫೋನ್ಗಳು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆಯಾಗಲಿವೆ.

ಇದುವರೆಗೆ ಸಚಿನ್ ಬಾತ್ರಾ ಅವರು ಹೊಸ ಸ್ಮಾರ್ಟ್ಫೋನ್ಗಳ ಮಾಡೆಲ್ಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ.ಆದರೆ, ಅದರ ಬೆಲೆಗಳ ಕುರಿತಾಗಿ ಮಾತನಾಡಿದ ಅವರು ಎಲ್ಲಾ ಮೊಬೈಲ್ಗಳು ಆರಂಭಿಕ ಶ್ರೇಣಿಯ ಮೊಬೈಲ್ಗಳಾಗಿದ್ದು ಬೆಲೆ ರೂ 6000 ರಿಂದ ರೂ 15000 ದೊಳಗೆ ಇರಲಿದೆ ಎಂದು ಹೇಳಿದರು.

ಶಿಯೋಮಿ ರೆಡ್ಮಿ 4A ನಲ್ಲಿದೆ 3GB RAM/32GB ಸ್ಟೋರೇಜ್, ಬೆಲೆ ರೂ 6999 ಮಾತ್ರ!ಶಿಯೋಮಿ ರೆಡ್ಮಿ 4A ನಲ್ಲಿದೆ 3GB RAM/32GB ಸ್ಟೋರೇಜ್, ಬೆಲೆ ರೂ 6999 ಮಾತ್ರ!

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!

ZTE ತನ್ನ ಹೊಸ ಮೊಬೈಲ್ಗಳನ್ನು ನಿರ್ದಿಷ್ಟ ಇ-ಕಾಮರ್ಸ್ ರೀಟೈಲರ್ ವೆಬ್ಸೈಟ್ ಒಂದರ ಮೂಲಕ ಮಾರಾಟ ಮಾಡಲಿದ್ದು, ಆ ಇ-ಕಾಮರ್ಸ್ ಕಂಪೆನಿ ಯಾವುದೆಂದು ಅವರು ಬಹಿರಂಗಪಡಿಸಿಲ್ಲ. ಅಲ್ಲದೆ ZTE ಫೋನ್ಗಳು ಆನ್ಲೈನ್ ಮಾತ್ರವಲ್ಲದೆ ಬೇರೆ ಮಾಧ್ಯಮಗಳ ಮೂಲಕವೂ ಖರೀದಿಗೆ ಸಿಗಲಿದೆ ಎಂದು ಸಚಿನ್ ಹೇಳಿದ್ದಾರೆ.

ಇದುವರೆಗೆ ZTE ಸ್ಮಾರ್ಟ್ಫೋನ್ಗಳ ಫೀಚರ್ಗಳ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಕೇಳಿಬರುತ್ತಿರುವ ಊಹಾಪೋಹಗಳ ಅನುಸಾರ ಈ ಫೋನ್ಗಳು ಶೀಘ್ರವೇ ಜನರ ಕೈ ಸೇರಲಿದೆ.

ಸಚಿನ್ ಬಾತ್ರಾ ಅವರ ಪ್ರಕಾರ ZTE ಸರಿಯಾದ ದರದಲ್ಲಿ ಸರಿಯಾದ ಉತ್ಪನ್ನಗಳನ್ನೇ ಜನರಿಗೆ ನೀಡಲಿದೆ. ಭಾರತದ ಅತ್ಯಂತ ಸ್ಪರ್ಧಾತ್ಮಕ ಮೊಬೈಲ್ ಮಾರುಕಟ್ಟೆಯಲ್ಲಿ ZTE ಹೇಗೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ZTE "ನವೀನ ತಂತ್ರಜ್ಞಾನಕ್ಕೆ" ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂದರು. ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಅವರು ಉತ್ಸುಕರಾಗಿರಲಿಲ್ಲ. ಇನ್ನೊಂದು ವರ್ಷ ಕಳೆಯುವುದರೊಳಗಾಗಿ ZTE ಫೋನ್ಗಳು ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ZTE ಶಿಯೋಮಿ,ಒಪ್ಪೋ, ವಿವೋ ಮೊದಲಾದ ಚೈನೀಸ್ ಕಂಪೆನಿಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಆದರೆ ಅಲ್ಪ ಸಮಯದಲ್ಲೇ ಭಾರತದಲ್ಲಿ ಬಜೆಟ್ ಸಾರ್ಟ್ಫೋನ್ಗಳ ಮಾರುಕಟ್ಟೆಯಲ್ಲಿ ZTE ಜನಪ್ರಿಯತೆ ಗಳಿಸಲಿದೆ.

Best Mobiles in India

Read more about:
English summary
The ZTE smartphones will fall in the price range between Rs. 6,000-15,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X