10 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವದಲ್ಲೇ ಹೆಚ್ಚು ಪ್ರಬಲ ದೇಶ ಭಾರತ

By Shwetha
|

ಮುಂದುವರಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರೂ ಒಂದಾಗಿದ್ದು ಅಭಿವೃದ್ಧಿ ಮಾರ್ಗದಲ್ಲಿ ನಮ್ಮ ದೇಶವು ಮುಂದಿದೆ ಎಂಬುದಕ್ಕೆ ದಾಖಲೆ ನೀಡುವ ಹಲವಾರು ನಿದರ್ಶನಗಳಿವೆ. ವಿಶ್ವವೇ ಹೆಮ್ಮೆ ಪಡುವ ಬಹಳಷ್ಟು ಸಾಧನೆಗಳನ್ನು ದೇಶವು ಸಾಧಿಸುತ್ತಿದ್ದು ಆ ಸಾಧನೆಗಳೇನು ದೇಶವು ಪ್ರಗತಿ ಪಥದಲ್ಲಿ ಹೇಗೆ ಮುನ್ನುಗ್ಗುತ್ತಿದೆ ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಕರಾಳ ತಾಣದಲ್ಲಿದೆ ನಿಮ್ಮನ್ನು ತಲ್ಲಣಗೊಳಿಸುವ ಸಂಗತಿಗಳು

ಇಂದಿನ ಲೇಖನದಲ್ಲಿ ಇಂತಹುದೇ ಹತ್ತು ಸಾಧನೆಗಳನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದು ಇದು ಏಕೆ ಹೆಮ್ಮೆ ತರುವ ವಿಚಾರವಾಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕವೇ ನಿಮಗೆ ತಿಳಿದುಕೊಳ್ಳಬಹುದಾಗಿದೆ.

#1

#1

ಭಾರತೀಯ ಸೇನಾ ಪಡೆಯು ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದು ಕಾಶ್ಮೀರ ಗುಲ್‌ಮಾರ್ಗ್‌ನಲ್ಲಿ ಸೈನಿಕ ಶಾಲೆಗಳೇ ಇದ್ದು ಇಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ.

#2

#2

ದೇಶದ ಉನ್ನತ ಸೈನಿಕ ತರಬೇತಿ ಕೇಂದ್ರಗಳು ಈ ಶಾಲೆಗೆ ಬಂದು ತರಬೇತಿಯನ್ನು ನೀಡುತ್ತಿವೆ. ಇದರಿಂದ ಪರ್ವತ ಪ್ರದೇಶಗಳಂತಹ ಸಂಕಷ್ಟ ಸ್ಥಿತಿಯಲ್ಲಿ ಕೂಡ ಸೈನಿಕರು ತಮ್ಮ ಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ.

#3

#3

ಹಲವಾರು ವರ್ಷಗಳ ಹಿಂದೆ, ಅಮೇರಿಕಾದಿಂದ ಸ್ಯಾಟಲೈಟ್ ಡೇಟಾವನ್ನೇ ಹೊಂದಿಕೊಂಡಿತ್ತು. ಈ ನಿಧಾನ ಗತಿಯ ಫಲವಾಗಿ 20,000 ಜನ 1999 ರಲ್ಲಿ ನಡೆದ ಒಡಿಶಾ ಸೈಕ್ಲೋನ್‌ನಲ್ಲಿ ಮರಣವನ್ನಪ್ಪಿದರು. ಆದರೆ 2015 ಕ್ಕೆ ನಮ್ಮ ದೇಶದ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯವು ಅಮೇರಿಕಾವನ್ನೇ ಹಿಂದಕ್ಕೆ ಹಾಕಿದೆ.

#4

#4

ಇಂದು ಸ್ಯಾಟಲೈಟ್ ಬ್ಯಾಕಿಂಗ್‌ಗಾಗಿ ನಾವು ಬೇರೆ ಬೇರೆ ಅಪ್ಲಿಕೇಶನ್‌ಗಳನ್ನು ಪಡೆದುಕೊಂಡಿದ್ದು, ಗ್ರೌಂಡ್ ವಾಟರ್ ಪ್ರಾಸ್‌ಪೆಕ್ಟ್ ಮ್ಯಾಪಿಂಗ್, ಕ್ರಾಪ್ ಆಕರೇಜ್, ಪ್ರೊಡಕ್ಶನ್ ಎಸ್ಟಿಮೇಶನ್ ಮೊದಲಾದವುಗಳಾಗಿವೆ.

#5

#5

ನ್ಯೂಕ್ಲಿಯರ್ ಇಂಧನವಾಗಿ ಯುರೇನಿಯಮ್ ಅನ್ನು ಬದಲಾಯಿಸುವ ವಿಷಯವಾಗಿ ದೇಶಗಳು ಶ್ರಮಪಡುತ್ತಿರುವಾಗಲೇ ಭಾರತವು ಥೋರಿಯಮ್ ಅನ್ನು ಬಳಸಿಕೊಂಡು ನ್ಯೂಕ್ಲಿಯರ್ ಪ್ರೊಗ್ರಾಮ್ ಅನ್ನು ನಡೆಸುತ್ತಿದೆ.

#6

#6

ಭಾರತವು ನೈಸರ್ಗಿಕವಾಗಿ ಥೋರಿಯಮ್ ಸಂಗ್ರಹಣೆಯಲ್ಲಿ ಶ್ರೀಮಂತವಾಗಿದ್ದು, ಬುದ್ಧಿವಂತ ವಿಜ್ಞಾನಿಗಳು ಯುರೇನಿಯಮ್ ಬದಲಿಗೆ ಇದನ್ನು ಬಳಸಿಕೊಂಡಿದ್ದಾರೆ. ನಿಜಕ್ಕೂ ಇಡಿಯ ವಿಶ್ವವನ್ನೇ ಇದು ಅಚ್ಚರಿಗೊಳಿಸಿದೆ.

#7

#7

ಭಾರತದ ಮಾರ್ಸ್ ಮಿಶನ್ ಬಗ್ಗೆ ಸಂಪೂರ್ಣ ಜಗತ್ತೇ ಅರಿತಿದೆ. ಇದಕ್ಕೆ ಯಾವುದೇ ಪ್ರಸ್ತುತಿ ಬೇಕಾಗಿಯೇ ಇಲ್ಲ. ಏಷ್ಯಾದ ಪ್ರಥಮ ದೇಶ ಮತ್ತು ನಾಲ್ಕನೇ ದೇಶವಾಗಿ ಮಂಗಳ ಕಕ್ಷೆಯನ್ನು ತಲುಪಿರುವ ಭಾರತ ಇದಕ್ಕೆ ಹೆಚ್ಚುವರಿ ವೆಚ್ಚ ಕೂಡ ತಗಲಿಲ್ಲ. 450 ಕೋಟಿಗಳಲ್ಲಿ, ಇದೊಂದು ಕನಿಷ್ಟ ದರದ ಮಾರ್ಸ್ ಆರ್ಬಿಟಲ್ ಮಿಶನ್ ಯೋಜನೆ ಎಂದೆನಿಸಿದೆ.

#8

#8

ಭಾರತೀಯ ಸೇನೆಯನ್ನು ಹೊಗಳಿದಷ್ಟು, ಅದು ಕಡಿಮೆಯೇ. 1,129,900 ಆಕ್ಟೀವ್ ಟ್ರೂಪ್ಸ್‌ಗಳೊಂದಿಗೆ 960,000 ರಿಸರ್ವ್ ಟ್ರೂಪ್‌ಗಳೊಂದಿಗೆ ಭಾರತದ ಸೇನೆಯು 3 ನೆಯ ಅತಿದೊಡ್ಡ ಸೇನೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ.

#9

#9

ಚೀನಾದ ನಂತರ ಭೂಮಿಯಲ್ಲಿ ಹೆಚ್ಚು ಇಂಟರ್ನೆಟ್ ಬಳಸುವವರು ಎಂಬ ಹೆಸರು ಭಾರತಕ್ಕಿದ್ದು ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ.

#10

#10

29% ಪೆನಟ್ರೇಶನ್‌ನಲ್ಲಿ ಭಾರತವು 354,000,000 ಜನರು ಇಂಟರ್ನೆಟ್ ಅನ್ನು ಬಳಸುತ್ತಿದ್ದಾರೆ. ಅಮೇರಿಕಾ, ಜಪಾನ್ ಮತ್ತು ರಷ್ಯಾದ ಪೆನಟ್ರೇಶನ್ ದರ ಅತ್ಯಧಿಕವಾಗಿದೆ.

#11

#11

66 ವರ್ಷಗಳ ಅತಿ ಕಡಿಮೆ ಅವಧಿಯಲ್ಲಿ, ಭಾರತದ ನ್ಯೂಕ್ಲಿಯರ್ ಸಾಮರ್ಥ್ಯವು ಅದ್ಭುತ ಬೆಳವಣಿಗೆಯನ್ನು ಕಂಡಿದೆ. ಥೋರಿಯಮ್ ಆಧಾರಿತ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ನಲ್ಲಿ ನಾವು ಒಂದನೇ ಸ್ಥಾನವನ್ನು ಪಡೆದುಕೊಂಡಿದ್ದು 21 ನ್ಯೂಕ್ಲಿಯರ್ ರಿಯಾಕ್ಟರ್ಸ್ ಮತ್ತು 7 ಪವರ್ ಪ್ಲಾಂಟ್‌ಗಳನ್ನು ಹೊಂದಿದ್ದೇವೆ.

#12

#12

1,820 ಏರ್‌ಕ್ರಾಫ್ಟ್ ಸೇವೆಗಳು ಸೇರಿದಂತೆ 905 ಕೊಂಬಾಟ್ ಪ್ಲೇನ್ಸ್, 595 ಫೈಟರ್ಸ್ ಮತ್ತು 310 ಅಟ್ಯಾಕರ್ಸ್ ಅನ್ನು ಒಳಗೊಂಡಿದ್ದು IAF ವಿಶ್ವದಲ್ಲೇ ನಾಲ್ಕನೆಯ ಅತಿದೊಡ್ಡ ಪಡೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

#13

#13

ಭಾರತದ ಐಟಿ ಉದ್ಯಮವು ಶೀಘ್ರದಲ್ಲೇ ಹೆಚ್ಚಿನ ಪ್ರಗತಿಯನ್ನು ಕಂಡುಕೊಂಡಿದೆ. ಇದರ ಬೆಳವಣಿಗೆಗೆ ಖಂಡಿತ ಶ್ಲಾಘನೆಯನ್ನು ನಾವು ಮಾಡಬೇಕಾಗಿದ್ದು, ಐಟಿ ಸಂಸ್ಥೆಯು ವಿಶ್ವದಲ್ಲೇ 2 ನೆಯದ್ದು ಎಂಬ ಸ್ಥಾನವನ್ನು ಪಡೆದಿದೆ.

#14

#14

ಇನ್ನೊಂದು ಐದು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ನಂಬರ್ ಒಂದನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಲಿರುವೆವು.

Best Mobiles in India

English summary
While we are still largely a developing country, there are certain areas where we stand far above the developed nations. Here are 10 things that will make you proud.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X