Just In
Don't Miss
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕುತೂಹಲಕಾರಿಯಾಗಿ ವಿಫಲವಾದ ಹಿಂದಿನ ಟಾಪ್ 5 ಅನ್ವೇಷಣೆಗಳು
ತಂತ್ರಜ್ಞಾನ ಬೆಳವಣಿಗೆ ಮತ್ತು ಅಭಿವೃದ್ದಿ ಎಂಬುದು ನಿರಂತರ ಚಟುವಟಿಕೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ತಂತ್ರಜ್ಞಾನ ಹುಟ್ಟಿನ ಬಗ್ಗೆ ಇತಿಹಾಸವನ್ನು ಕೆದಕುತ್ತಾ ಹೋದಂತೆಲ್ಲಾ ಹೊಸ ಹೊಸ ಕುತೂಹಲಕಾರಿ ವಿಷಯಗಳು ದೊರೆಯುತ್ತವೆ ಎಂಬುದನ್ನು ಮರೆಯುವ ಹಾಗಿಲ್ಲ. ಅದಕ್ಕೆ ನಿದರ್ಶನವು ಉಂಟು.
ಅಂದಹಾಗೆ ಇಂದಿನ ಲೇಖನದಲ್ಲಿ ಹಲವು ಅನ್ವೇಷಕರು ಸಂಶೋಧಿಸಿದ ಹಲವು ತಂತ್ರಜ್ಞಾನಗಳು ಕುತೂಹಲಕಾರಿಯಾಗಿ ವಿಫಲಗೊಂಡ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಕುತೂಹಲಕಾರಿಯಾಗಿ ವಿಫಲಗೊಂಡ ಟೆಕ್ನಾಲಜಿಗಳು ಯಾವುವು ಎಂಬುದನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳು

ಫ್ಲೈಯಿಂಗ್ ಟ್ಯಾಂಕ್‌ಗಳು
ವಿಜ್ಞಾನಿಗಳ ತಂಡವೊಂದು ವಾಯುಪಡೆಗಾಗಿ ಫ್ಲೈಯಿಂಗ್ ಟ್ಯಾಂಕ್‌ಗಳನ್ನು ಅಭಿವೃದ್ದಿಪಡಿಸಿದ್ದರು. ಯುದ್ಧದಲ್ಲಿ ಪದಾತಿ ಪಡೆಗಳ ಸಹಾಯಕ್ಕಾಗಿ ನಿರ್ಮಿಸಿದ್ದ ಫ್ಲೈಯಿಂಗ್ ಟ್ಯಾಂಕ್ ಹಾರಾಡುವಾಗ ಸಮಸ್ಯೆ ಇರಲಿಲ್ಲ. ಆದರೆ ಅದನ್ನು ಮರಳಿ ಲ್ಯಾಂಡ್ ಮಾಡುವಾಗ ಸಮಸ್ಯೆ ಎದುರಾಗುತ್ತಿತ್ತು. ಆದ್ದರಿಂದ ಈ ಪ್ರಾಜೆಕ್ಟ್ ಅನ್ನು ಕೈಬಿಡಲಾಯಿತು.

ಫ್ಲೈಯಿಂಗ್ ಟ್ಯಾಂಕ್
ಫ್ಲೈಯಿಂಗ್ ಟ್ಯಾಂಕ್ ಹಾರಾಟ ಮಾಡುವ ಪ್ರಯೋಗ.

ಬೋಟ್ ಕಾರು ಅಥವಾ ಕಾರ್ ಬೋಟ್
ಬೋಟ್ ಕಾರುಗಳು ಇಂದಿಗೂ ಸಹ ಬಳಕೆಯಲ್ಲಿವೆ. 19೦೦ ಅಭಿವೃದ್ದಿಗೊಳಿಸಿದ್ದ ಬೋಟ್ ಕಾರಿನ ಸಂಶೋಧಕರು 20 ನೇ ಶತಮಾನದ ಬಗ್ಗೆ ಆಲೋಚಿಸಿರಲಿಲ್ಲ.

ಬೋಟ್ ಕಾರು
ಪ್ರಸ್ತುತದಲ್ಲಿ ಇಂದು ಬೋಟ್ ಕಾರನ್ನು ನವೀನ ಸಂಗ್ರಹಗಾರರು ಮಾತ್ರ ಹೆಚ್ಚು ಹಣ ಕೊಟ್ಟು ಖರೀದಿಸಬಲ್ಲರು. ಆದ್ದರಿಂದ ತೇಲುವ ಕಾರುಗಳ ಪ್ರಾಜೆಕ್ಟ್ ನಿಂತಿತು.

ಸಿನೆರಮ ಚಲನಚಿತ್ರಗಳು
ಸಿನೆರಮ ಚಲನಚಿತ್ರಗಳು ಆಧುನಿಕ ಜಗತ್ತಿನ ಐಮ್ಯಾಕ್ಸ್ ಸ್ಕ್ರೀನ್ ನಂತಹ ಅಲೋಚನೆಗಳನ್ನು ಹೊಂದಬಹುದಿತ್ತು, ಆದರೆ ಅಂದು ಹೆಚ್ಚಿನ ಸಂಕೀರ್ಣತೆ ಇತ್ತು. ಐಮ್ಯಾಕ್ಸ್ ಸ್ಕ್ರೀನ್‌ನ ಸಿನಿಮಾ ಮಾಡಲು ಮೂರು ಸಂಪೂರ್ಣವಾಗಿ ಸಿಂಕ್ರೊನೈಸ್ ಆದ ಪ್ರೊಜೆಕ್ಟರ್‌ಗಳು ಪರಸ್ಪರ ಸಾಲಿನಲ್ಲಿ ಅಗತ್ಯವಾಗಿತ್ತು. ಆದರೆ ಅಂದು ಡಿಜಿಟಲ್ ಟೆಕ್ನಾಲಜಿ ಕಲ್ಪನೆ ಇರಲಿಲ್ಲವಾದ್ದರಿಂದ ಈ ಪ್ರಾಜೆಕ್ಟ್ ಉತ್ತೀರ್ಣವಾಗಲಿಲ್ಲ.

ಸಿನೆರಮ ಚಲನಚಿತ್ರಗಳು
ಸಿನೆರಮ ಚಲನಚಿತ್ರಗಳಿಗೆ ಸಿನಿಮಾ ಮನೆ ಯಂತ್ರಾಂಶ ಪರಿಷ್ಕರಣೆಗಳಿಗೂ ಸಹ ವೆಚ್ಚವನ್ನು ಬರಿಸುವುದು ಅಂದಿನ ದಿನಗಳಲ್ಲಿ ಕಷ್ಟವಾಗಿತ್ತು. ಅಲ್ಲದೇ ಸಿನಿಮಾ ತೋರಿಸಲು ಹೆಚ್ಚಿನ ಸಿಬ್ಬಂದಿಗಳು ಬೇಕಾಗಿದ್ದರಿಂದ ವೈಭವತ್ಮಕ ಹಿಂದಿನ ಸಿನೆರಮ ಮೂವೀಸ್ ಪ್ರಾಜೆಕ್ಟ್‌ಗಳು ಅಂತ್ಯಗೊಂಡವು.

ಪೋರ್ಟೆಬಲ್ ರೆಕಾರ್ಡ್ ಪ್ಲೇಯರ್‌ಗಳು
ಪೋರ್ಟೆಬಲ್ ರೆಕಾರ್ಡ್ ಪ್ಲೇಯರ್ ಅನ್ನು ಅಂದಿನ ದಿನಗಳಲ್ಲೇ ಹೋದಲೆಲ್ಲಾ ರೆಕಾರ್ಡ್ ಮಾಡುವ ಹಾಗೆ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಟ್ರ್ಯಾಕ್‌ಗಳನ್ನು ಬಂಪ್ ಮಾಡುವುದು ಹೆಚ್ಚು ಕಷ್ಟದ ಕೆಲಸವಾಗಿ ಈ ಆವಿಷ್ಕಾರವನ್ನು ಕೈಬಿಡಲಾಯಿತು.

ಫ್ಲಿಜ್ (ಕಾಲಿನಿಂದ ಪವರ್ ಬೇಡುವ ಬೈಸಿಕಲ್)
ಅಂದಹಾಗೆ ಈ ಪ್ರಾಜೆಕ್ಟ್ ಎಲ್ಲರಿಗೂ ವಿಚಿತ್ರವೆನಿಸಬಹುದು. ಕಾರಣ ಜರ್ಮನ್‌ನ ವಿನ್ಯಾಸಕಾರ 'ಟಾಮ್ ಹ್ಯಾಂಬ್ರಾಕ್ ಮತ್ತು ಜುರಿ ಸ್ಪೆಟರ್' ಚಿತ್ರದಲ್ಲಿ ನೀವು ನೋಡುತ್ತಿರುವ ಬೈಸಿಕಲ್ ಅನ್ನು ಅನ್ವೇಷಣೆ ಮಾಡಿದ್ದರು. ಬೈಸಿಕಲ್ ಪೆಡಲ್, ಗೇರ್ ಮತ್ತು ಸೀಟ್ ಸಹ ಇಲ್ಲದೇ ಇದ್ದುದರಿಂದ ಕಾರಣವನ್ನು ನೀಡದೇ ಈ ಅನ್ವೇಷಣೆಯನ್ನು ಕೊನೆಗೊಳಿಸಲಾಯಿತು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470