ಸಂಶೋಧನೆ ರಿಜೆಕ್ಟ್ ಆದರೂ, ಅಂತಿಮವಾಗಿ ನೊಬೆಲ್‌ ಪ್ರಶಸ್ತಿ ಪಡೆದವರು ಇವರೇ!

Written By:

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಎಲ್ಲಾ ಹೊಸ ಕಲ್ಪನೆಗಳನ್ನು ಸಹ ವಿಜ್ಞಾನಿಗಳ ಸಮುದಾಯ ನೊಬೆಲ್‌ ಪ್ರಶಸ್ತಿಗಾಗಿ ಸ್ವೀಕರಿಸುವುದಿಲ್ಲ. ಉದಾಹರಣೆಗೆ ಕೋಪರ್ನಿಕಸ್ 'ಭೂಮಿ ವೃತ್ತಾಕಾರದಲ್ಲಿದೆ' ಎಂದು ಹೇಳಿದ್ದನ್ನೇ ನೆನಪಿಸಿಕೊಳ್ಳಬಹುದು.

ನೊಬೆಲ್‌ ಪ್ರಶಸ್ತಿ ಪಡೆಯುವುದು ಒಂದು ರೀತಿಯ ಕ್ರಾಂತಿಕಾರಿಯೇ. ಅಂದಹಾಗೆ ಇಂದಿನ ಲೇಖನದಲ್ಲಿ ನೊಬೆಲ್‌ ಪ್ರಶಸ್ತಿಗಾಗಿ ಸಲ್ಲಿಸಿದ ಕೆಲವು ಸಂಶೋಧಕರ ಕ್ರಾಂತಿಕಾರಿ ಅಧ್ಯಯನದ ಪೇಪರ್‌ಗಳು ಮೊದಲಿಗೆ ತಿರಸ್ಕರಿಸಲ್ಪಟ್ಟು, ಅಂತಿಮವಾಗಿ ನೊಬೆಲ್‌ ಪ್ರಶಸ್ತಿ ಪಡೆದವರ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಈ ನೊಬೆಲ್‌ ಪ್ರಶಸ್ತಿ ಭಾಜನರು ಸ್ಫೂರ್ತಿಯಾಗುವಲ್ಲಿ ಸಂಶಯವಿಲ್ಲ.

ವರ್ಣಚಿತ್ರ ಬಿಡಿಸುವ ಸಣ್ಣ ಡ್ರೋನ್‌ಗಳು; ವಿಜ್ಞಾನಿಗಳಿಂದ ಸಾಫ್ಟ್‌ವೇರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1997

1997

1997 ರಲ್ಲಿ ರಸಾಯನಶಾಸ್ತ್ರ ಅಧ್ಯಯನ "ಐಡೆಂಟಿಫಿಕೇಶನ್‌ ಆಫ್‌ ದಿ ಮೆಕಾನಿಷಮ್ ಫಾರ್‌ ದಿ ಸಿಂಥೆಸಿಸ್‌ ಆಫ್‌ ಅಡೆನೊಸಿನ್‌ ಟ್ರಿಫೊಫಟೆ (ATP)' ವಿಷಯಕ್ಕಾಗಿ 'ಪಾಲ್‌ ಬಾಯರ್' ರವರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿತು. ಅಂದಹಾಗೆ ಇವರ ಮೊದಲ ಕ್ರಾಂತಿಕಾರಿ ಬಯೋರಸಾಯನಶಾಸ್ತ್ರ ಅಧ್ಯಯನ "ಬ್ಯುಟಿಫುಲ್ ಲಿಟ್ಲು ಮಷಿನ್ಸ್" ತಿರಸ್ಕರಿಸಲ್ಪಟ್ಟಿತ್ತು.

 1991

1991

"ದ ಡೆವೆಲಪ್‌ಮೆಂಟ್‌ ಆಫ್‌ ಹೈ ರೆಸಲ್ಯೂಶನ್‌ ನ್ಯೂಕ್ಲಿಯಾರ್‌ ಮ್ಯಾಗ್ನಟಿಕ್ ರೆಸೊನನ್ಸ್‌ (NMR) ಸ್ಪೆಕ್ಟ್ರೋಸ್ಕೋಪಿ" ಸಂಶೋಧನಾ ಅಧ್ಯಯನಕ್ಕೆ ರಸಾಯನ ಶಾಸ್ತ್ರ ವಿಭಾಗದಲ್ಲಿ 'ರಿಚರ್ಡ್‌ ಅರ್ನೆಸ್ಟ್‌'ರವರಿಗೆ ನೊಬೆಲ್‌ ಪ್ರಶಸ್ತಿ ಲಿಭಿಸಿತು. ಪ್ರಶಸ್ತಿ ಸಿಗುವ ಮುನ್ನ ಇವರ ಸಂಶೋಧನಾ ಅಧ್ಯಯನ ಎರಡು ಭಾರಿ ತಿರಸ್ಕರಿಸಲ್ಪಟ್ಟಿತ್ತು.

 1969

1969

ಮುರ್ರೆ ಜೆಲ್-ಮ್ಯಾನ್‌ ಎಂಬುವವರ ಭೌತಶಾಸ್ತ್ರ ವಿಷಯದ ಸಂಶೋಧನೆ ಕೇವಲ ಟೈಟಲ್‌ನಿಂದ ತಿರಸ್ಕರಿಸಲ್ಪಟ್ಟಿತ್ತು. ಇವರು ನಂತರದಲ್ಲಿ "New Unstable Particles" ಎಂಬ ಟೈಟಲ್‌ ನೀಡುವ ಮುಖಾಂತರ ಅಧ್ಯಯನ ಸ್ವೀಕೃತಗೊಂಡು ನೊಬೆಲ್‌ ಪ್ರಶಸ್ತಿ ಲಭಿಸಿತು.

1953

1953

ಹಾನ್ಸ್ ಕ್ರೆಬ್ಸ್'ರವರ " ದಿ ಡಿಸ್ಕವರಿ ಆಫ್‌ ದಿ ಕ್ರೆಬ್ಸ್‌ ಸೈಕಲ್‌ (ಅಕ ದಿ ಸಿಟ್ರಿಕ್‌ ಆಸಿಡ್‌ ಸೈಕಲ್‌)" ಮೆಡಿಸನ್‌ ಕ್ಷೇತ್ರದ ಅಧ್ಯಯನಕ್ಕೆ 1953 ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು. ಇವರ ಸಂಶೋಧನಾ ಅಧ್ಯಯನವು ಸಹ ಮೊದಲಿಗೆ ತಿರಸ್ಕರಿಸಲ್ಪಟ್ಟಿತ್ತು.

2000

2000

2000 ರಲ್ಲಿ ಹರ್ಬರ್ಟ್‌ ಕ್ರೋಯ್‌ಮರ್‌'ರವರ " ಡೆವಲಪಿಂಗ್‌ ಸೆಮಿಕಂಡಕ್ಟರ್ ಹೆಟೆರೊಸ್ಟ್ರಕ್ಚರ್‌ ಯೂಸ್ಡ್ ಇನ್‌ ಹೈ-ಸ್ಪೀಡ್‌ ಅಂಡ್‌ ಆಪ್ಟೋ ಎಲೆಕ್ಟ್ರಾನಿಕ್ಸ್‌" ಎಂಬ ಭೌತಶಾಸ್ತ್ರ ಸಂಶೋಧನಾ ಅಧ್ಯಯನಕ್ಕೆ ನೊಬೆಲ್‌ ಪ್ರಶಸ್ತಿ ಲಭಿಸಿತ್ತು. ಆದರೆ ಇವರ ಮೊದಲ ಪೇಪರ್‌ಗಳು ರಿಜೆಕ್ಟ್‌ ಆಗಿದ್ದವು.

1986

1986

'ಜಾನ್‌ ಪೊಲಾಯಿ' ಎಂಬುವವರ "ಎಕ್ಸ್‌ಪ್ಲೈನಿಂಗ್‌ ದಿ ಡೈನಾಮಿಕ್ಸ್ ಆಫ್‌ ಕೆಮಿಕಲ್ ಅಂಡ್‌ ಎಲಿಮೆಂಟರಿ ಪ್ರೋಸೆಸೆಸ್‌" ಅಧ್ಯಯನಕ್ಕೆ 1986 ರಲ್ಲಿ ನೊಬೆಲ್‌ ಪ್ರಶಸ್ತಿ ಲಭಿಸಿತು . ಆದರೆ ಮೊದಲಿಗೆ ಇವರ ಅಧ್ಯಯನದಲ್ಲಿ ರಸಾಯನಶಾಸ್ತ್ರ ವಿಷಯಕ್ಕಿಂತ ಹೆಚ್ಚಿನದಾಗಿ ವಿಜ್ಞಾನದ ಕುತೂಹಲ ಅಂಶಗಳು ಇದ್ದ ಕಾರಣ ಅಧ್ಯಯನ ಎರಡು ಬಾರಿ ತಿರಸ್ಕರಿಲ್ಪಟ್ಟಿತ್ತು.

 1993

1993

'ಕಾರೆ ಮುಲ್ಲಿಶ್'ರವರು 1993 ರಲ್ಲಿ ಅವರ "ಪಾಲಿಮರೇಸ್ ಚೈನ್ ರಿಯಾಕ್ಷನ್ (PCR) ಮೆಥಾಡ್‌" ಸಂಶೋಧನೆಗಾಗಿ ನೊಬೆಲ್‌ ಪ್ರಶಸ್ತಿ ಪಡೆದರು. ಇವರ ಸಂಶೋಧನೆಯು ಮೂರು ವರ್ಷಗಳ ನಂತರ ಪ್ರಕಟಣೆಗೊಂಡು ನೊಬೆಲ್‌ ಪ್ರಶಸ್ತಿ ಲಭಿಸಿತು.

1977

1977

"Radio-immuno-assay(RIA)" ಸಂಶೋಧನೆಗಾಗಿ ರೊಸಾಲಿ ಯಲೌ'ರವರಿಗೆ ಮೆಡಿಸನ್ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ ಲಭಿಸಿತು. ರೊಸಾಲಿ'ರವರು ಇದೇ ಸಂಶೋಧನಾ ಅಧ್ಯಯನ ಪೇಪರ್‌ ರಿಜೆಕ್ಟ್‌ ಆಗಿದ್ದನ್ನು ನೊಬೆಲ್‌ ಪ್ರಶಸ್ತಿ ಸ್ವೀಕರಿಸುವ ದಿನ ಸಾರ್ವಜನಿಕವಾಗಿ ತೋರಿಸಿದ್ದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
8 Rejected Research Papers That Ultimately Won The Nobel Prize. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot