''ಕೆಪ್ಲರ್ 90 ಸೌರಮಂಡಲ'' ಪತ್ತೆಯಾಗಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಾಗಿದ್ದು ಹೀಗೆ!!

ನಮ್ಮಿಂದ 2545 ಜ್ಯೋತಿರ್ವರ್ಷ ದೂರದಲ್ಲಿ ಎಂಟು ಗ್ರಹಗಳನ್ನು ಹೊಂದಿರುವ ಮತ್ತೊಂದು ಸೌರಮಂಡಲ ಪತ್ತೆಯಾಗಿದ್ದು ವಿಶೆಷವೇ ಸರಿ.ಆದರೆ, ಸೌರಮಂಡಲವನ್ನು ಪತ್ತೆ ಮಾಡಲು ಸಹಾಯಕವಾಗಿದ್ದು ಗೂಗಲ್‌ನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ!!

|

ಇದೇ ಮೊದಲ ಭಾರಿಗೆ ನಮ್ಮ ಸೌರಮಂಡಲದ ರೀತಿಯ ಎಂಟು ಗ್ರಹಗಳನ್ನು ಹೊಂದಿರುವ ಮತ್ತೊಂದು ಸೌರಮಂಡಲ ಪತ್ತೆಯಾಗಿರುವ ಸುದ್ದಿ ನಿಮಗೆಲ್ಲಾ ತಿಳಿದಿರಬಹುದು.! ಈ ಹೊಸ ಸೌರಮಂಡಲವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪತ್ತೆ ಹಚ್ಚಿದ್ದು, ಇದಕ್ಕೆ 'ಕೆಪ್ಲರ್ 90 ಸೌರಮಂಡಲ' ಎಂದು ಹೆಸರಿಸಲಾಗಿದೆ.!!

ನಮ್ಮಿಂದ 2545 ಜ್ಯೋತಿರ್ವರ್ಷ ದೂರದಲ್ಲಿ ಎಂಟು ಗ್ರಹಗಳನ್ನು ಹೊಂದಿರುವ ಮತ್ತೊಂದು ಸೌರಮಂಡಲ ಪತ್ತೆಯಾಗಿದ್ದು ವಿಶೆಷವೇ ಸರಿ. ಆದರೆ, ಬಹಳ ಕ್ಲಿಷ್ಟ ಪರಿಸ್ಥಿತಿಯಲ್ಲಿ ಈ ಸೌರಮಂಡಲವನ್ನು ಪತ್ತೆ ಮಾಡಲು ಸಹಾಯಕವಾಗಿದ್ದು ಗೂಗಲ್‌ನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ!! ಹಾಗಾದರೆ, ಈ ಒಂದು ಸಾಧನೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹೇಗೆ ಸಹಕಾರಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

‘ಕೆಪ್ಲರ್ 90 ಸೌರಮಂಡಲ’ !!

‘ಕೆಪ್ಲರ್ 90 ಸೌರಮಂಡಲ’ !!

ನಮ್ಮಿಂದ 2545 ಜ್ಯೋತಿರ್ವರ್ಷ ದೂರದಲ್ಲಿರುವ ಇದನ್ನು ‘ಕೆಪ್ಲರ್ 90 ಸೌರಮಂಡಲ' ಒಂದು ಚಿಕ್ಕ ಸೌರಮಂಡಲವಾಗಿದ್ದು, ಚಿಕ್ಕ ಗ್ರಹಗಳು ಒಳಭಾಗದಲ್ಲಿ ಹಾಗೂ ದೊಡ್ಡ ಗ್ರಹಗಳು ಹೊರಭಾಗದಲ್ಲಿ ಸುತ್ತುತ್ತಿವೆ. ನಾಸಾದ ಕೆಪ್ಲರ್ ಟೆಲಿಸ್ಕೋಪ್ ಇದನ್ನು ಪತ್ತೆಹಚ್ಚಿದ್ದು, ಬಿಸಿಯಾದ ಹಾಗೂ ಕಲ್ಲಿನಿಂದ ಕೂಡಿರುವ ಗ್ರಹಕ್ಕೆ ‘ಕೆಪ್ಲರ್-90ಐ' ಎಂದು ಹೆಸರಿಡಲಾಗಿದೆ.!!

ಗೂಗಲ್‌ನ ‘ಮಷಿನ್ ಲರ್ನಿಂಗ್ ಸಹಾಯ!!

ಗೂಗಲ್‌ನ ‘ಮಷಿನ್ ಲರ್ನಿಂಗ್ ಸಹಾಯ!!

‘ಕೆಪ್ಲರ್ 90 ಸೌರಮಂಡಲವನ್ನು ಗೂಗಲ್‌ನ ‘ಮಷಿನ್ ಲರ್ನಿಂಗ್' ಮೂಲಕ ಪತ್ತೆಹಚ್ಚಲಾಗಿದೆ.ಕೆಪ್ಲರ್ ಟೆಲಿಸ್ಕೋಪ್ ಪತ್ತೆಹಚ್ಚಿದ್ದ ಸುಮಾರು 35 ಸಾವಿರ ಸಂಜ್ಞೆಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್‌ಗೆ ಅಳವಡಿಸಿ, ಈ ಸಂಜ್ಞೆಗಳನ್ನು ಆಧರಿಸಿ ಗ್ರಹಗಳ ಇರುವಿಕೆಯನ್ನು ಪತ್ತೆ ಹಚ್ಚುವ ತರಬೇತಿಯನ್ನು ಕಂಪ್ಯೂಟರ್‌ಗೆ ನೀಡಲಾಗಿತ್ತು.!!

ಕೃತಕ ಬುದ್ಧಿಮತ್ತೆ  ಕಂಡುಹಿಡಿದದ್ದು ಹೇಗೆ?

ಕೃತಕ ಬುದ್ಧಿಮತ್ತೆ ಕಂಡುಹಿಡಿದದ್ದು ಹೇಗೆ?

ನಕ್ಷತ್ರವೊಂದರ ಮುಂದೆ ಗ್ರಹವೊಂದು ಹಾದುಹೋದಾಗ ಆ ಗ್ರಹದಿಂದ ಬೆಳಕು ಪ್ರತಿಫಲನವಾಗುತ್ತದೆ. ಇಂತಹ ಸಂಜ್ಞೆಗಳು ಗ್ರಹಗಳ ಚಲನೆಯನ್ನು ಸೂಚಿಸುತ್ತವೆ. 2009ರಿಂದ ಕೆಪ್ಲರ್ ಟೆಲಿಸ್ಕೋಪ್ ಸುಮಾರು 1.50 ಲಕ್ಷ ನಕ್ಷತ್ರಗಳನ್ನು ಸ್ಕ್ಯಾನ್ ಮಾಡಿದೆ. ಈ ಮಾಹಿತಿಯಿಂದ ಸುಮಾರು 2500 ಸೌರಮಂಡಲಗಳ ಇರುವಿಕೆ ಗುರುತಿಸಲಾಗಿದೆ.!!

ಗೂಗಲ್‌ ಸಂಶೋಧಕರು ಹೇಳಿದ್ದೇನು?

ಗೂಗಲ್‌ ಸಂಶೋಧಕರು ಹೇಳಿದ್ದೇನು?

ಬಣವೆಯಲ್ಲಿ ಸೂಜಿ ಹುಡುಕಿದಂತೆ ಕೆಪ್ಲರ್ ನೀಡಿರುವ ಈ ಅಗಾಧ ಮಾಹಿತಿಯನ್ನು ಪರಿಶೀಲಿಸುವುದು ವಿಜ್ಞಾನಿಗಳ ಕೈಯಿಂದ ಆಗದು.!!ಆದರೆ ಮನುಷ್ಯರಿಂದ ಆಗದ ಕೆಲಸವನ್ನು ಮಷಿನ್ ಲರ್ನಿಂಗ್ ಸಾಧ್ಯವಾಗಿಸಿದೆ' ಎಂದು ಗೂಗಲ್‌ ಸಂಶೋಧಕರ ತಂಡದ ಹಿರಿಯ ಎಂಜಿನಿಯರ್ ಕ್ರಿಸ್ಟೋಫರ್ ಶಾಲ್ಲು ಹೇಳಿದ್ದಾರೆ.!!

ಜೀವಿಗಳಿರಲು ಸಾಧ್ಯವಿಲ್ಲ!!

ಜೀವಿಗಳಿರಲು ಸಾಧ್ಯವಿಲ್ಲ!!

ಗ್ರಹಕ್ಕೆ ‘ಕೆಪ್ಲರ್-90ಐ' ಒಂದು ಚಿಕ್ಕ ಸೌರಮಂಡಲವಾಗಿದ್ದು, ಅಲ್ಲನ ಪ್ರತಿಯೊಂದು ಗ್ರಹಗಳ ನಡುವಿನ ಅಂತರ ತೀರಾ ಕಡಿಮೆಯಿದೆ ಮತ್ತು ಈ ಸೌರಮಂಡಲ ಬಿಸಿಯಾದ ಹಾಗೂ ಕಲ್ಲಿನಿಂದ ಕೂಡಿರುವುದರಿಂದ ಅಲ್ಲಿ ಜೀವಿಗಳಿರಲು ಸಾಧ್ಯವಿಲ್ಲ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಆಂಡ್ರ್ಯೂ ವಂಡರ್‌ಬರ್ಗ್ ಹೇಳಿದ್ದಾರೆ.

ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!

Best Mobiles in India

English summary
Our solar system now is tied for most number of planets around a single star. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X