Subscribe to Gizbot

ಗರ್ಭಿಣಿ ಶಾರ್ಕ್‌ನ ಹೊಟ್ಟೆಯೊಳಗೆ ಪತ್ತೆಯಾಯಿತು ಶಾಕಿಂಗ್ ನ್ಯೂಸ್

Written By:

ಕಡಲ ವಿಜ್ಞಾನಿಗಳು ಇದುವರೆಗೆ ಯಾರೂ ಮಾಡದೇ ಇರುವ ಸಾಹಸವೊಂದಕ್ಕೆ ಕೈಹಾಕಿದ್ದು 12.5 ಫೀಟ್ ಉದ್ದದ ಟೈಗರ್ ಶಾರ್ಕ್‌ನ ಸೊನೊಗ್ರಾಮ್ ಅನ್ನು ಮಾಡಿದ್ದು ವೈಜ್ಞಾನಿಕ ಸಾಹಸವಾಗಿ ಅಂಗೀಕೃತವಾಗಿದೆ.

ಓದಿರಿ: ಮಾರ್ಸ್‌ನಲ್ಲಿ ಪತ್ತೆಯಾದ ಆರು ಇಂಚಿನ ಏಲಿಯನ್

ನ್ಯೂ ಇಂಗ್ಲೇಂಡ್‌ನ ಜೇಮ್ಸ್ ಸುಲುಕೊವಿಸ್ಕಿ ಮತ್ತು ಮಿಯಾಮಿ ಯೂನಿವರರ್ಸಿಟಿಯ ನೇಲ್ ಹ್ಯಾಮರ್ ಶ್ಲಾಗ್ ಇಮಿಲಿ ಹೆಸರಿನ ಶಾರ್ಕ್ ಮೇಲೆ ಈ ಪ್ರಯೋಗವನ್ನು ನಡೆಸಿದ್ದು, ಈ ತಳಿಗಳು ಸಾಮಾನ್ಯವಾಗಿರುವ ಬಹಾಮಾದಲ್ಲಿ ಪ್ರಯೋಗ ನಡೆಸಲಾಗಿದೆ. ಸೊನೊಗ್ರಾಮ್‌ನಲ್ಲಿ ಪತ್ತೆಯಾಗಿರುವ ಸಂಗತಿ ಎಂದರೆ ಶಾರ್ಕ್ 20 ಮರಿಗಳನ್ನು ತನ್ನಲ್ಲಿ ಹೊಂದಿದ್ದು ಇದು ಬಾಯಿ ತುಂಬಾ ಹಲ್ಲುಗಳನ್ನು ಪಡೆದುಕೊಂಡಿದೆ ಎಂದಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೊನೊಗ್ರಾಮ್

ಸೊನೊಗ್ರಾಮ್

ಗರ್ಭಿಣಿ ಶಾರ್ಕ್ ಮೇಲೆ ಸೊನೊಗ್ರಾಮ್ ನಡೆಸಿರುವ ವಿಜ್ಞಾನಿಗಳು ಅಪರೂಪದ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ. ಅದೂ ಜೀವಂತವಾಗಿರುವ ಶಾರ್ಕ್ ಮೇಲೆ ಈ ಪ್ರಯೋಗವನ್ನು ನಡೆಸಿ ಇವರುಗಳು ಅದರಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಹೊಟ್ಟೆಯ ಭಾಗವನ್ನು ಸೀಳಿ

ಹೊಟ್ಟೆಯ ಭಾಗವನ್ನು ಸೀಳಿ

ಇದುವರೆಗೆ, ಗರ್ಭಿಣಿ ಶಾರ್ಕ್‌ನ ಹೊಟ್ಟೆಯ ಭಾಗವನ್ನು ಸೀಳಿ ಅದನ್ನು ಕೊಂದು ಪ್ರಯೋಗವನ್ನು ನಡೆಸಲಾಗುತ್ತಿತ್ತು.

ಟೈಗರ್ ಶಾರ್ಕ್

ಟೈಗರ್ ಶಾರ್ಕ್

ಐತಿಹಾಸಿಕವಾಗಿ ಟೈಗರ್ ಶಾರ್ಕ್ ಗರ್ಭಿಣಿಯಾಗಿದೆ ಎಂಬುದನ್ನು ಕಂಡುಕೊಳ್ಳಲು ಅದರ ಹೊಟ್ಟೆಯನ್ನು ಸೀಳಲಾಗುತ್ತಿತ್ತು ಎಂಬುದಾಗಿ ಹ್ಯಾಮರ್ ಶ್ಲಾಗ್ ತಿಳಿಸಿದ್ದಾರೆ. ಇದರ ಜೊತೆಗೆ ಸೊನೊಗ್ರಾಮ್ ವೀಡಿಯೊವನ್ನು ಇವರು ಪ್ರಸ್ತುತಪಡಿಸಿದ್ದಾರೆ.

ಪೈಶಾಚಿಕತೆ

ಪೈಶಾಚಿಕತೆ

ಮನುಷ್ಯರಲ್ಲೇ ಹೊಟ್ಟೆಯನ್ನು ಸೀಳಿ ಅವರು ಗರ್ಭವತಿ ಅಲ್ಲವೇ ಹೌದೇ ಎಂಬುದನ್ನು ನಾವು ಪರಿಶೀಲಿಸುವುದಿಲ್ಲ ಅಂತಹದ್ದರಲ್ಲಿ ಶಾರ್ಕ್‌ಗಳ ಮೇಲೆ ಏಕೆ ಈ ರೀತಿಯ ಪೈಶಾಚಿಕತೆಯನ್ನು ನಡೆಸಬೇಕು ಎಂಬುದು ಹ್ಯಾಮರ್ ಶ್ಲಾಗ್ ಪ್ರಶ್ನೆಯಾಗಿದೆ.

ಮರಿ ಶಾರ್ಕ್‌

ಮರಿ ಶಾರ್ಕ್‌

ಶಾರ್ಕ್ ಹೊಟ್ಟೆಯೊಳಗೆ ಮರಿ ಶಾರ್ಕ್‌ಗಳನ್ನು ಸ್ಪಷ್ಟವಾಗಿ ಈ ಪರೀಕ್ಷೆಯು ತೋರಿಸಿದ್ದು, ಅವುಗಳು ಹೊಟ್ಟೆಯಲ್ಲಿ ಯಾವ ರೀತಿಯಲ್ಲಿ ಚಲಿಸುತ್ತಿವೆ ಎಂಬುದರ ವೀಡಿಯೊ ಪ್ರಕಟವಾಗಿದೆ.

ಮರಿಗಳ ಜನನ

ಮರಿಗಳ ಜನನ

ಶಾರ್ಕ್‌ಗಳು ತಮ್ಮ ಮರಿಗಳ ಜನನವನ್ನು ಬೇರೆ ಬೇರೆ ವಿಧಾನಗಳಲ್ಲಿ ನಡೆಸುತ್ತವೆ. ಟೈಗರ್ ಶಾರ್ಕ್‌ಗಳು ಸೇರಿದಂತೆ, ಅಂಡಜೋತ್ಪಾದಕಗಳಾಗಿರುತ್ತವೆ.

ಗೆಸ್ಟಾಟಿಂಗ್‌ಗೆ ಸಂಪರ್ಕ

ಗೆಸ್ಟಾಟಿಂಗ್‌ಗೆ ಸಂಪರ್ಕ

ಗರ್ಭದಲ್ಲಿ ಮೊಟ್ಟೆಯೊಡೆದು ಮರಿಗಳು ಕಾಣಿಸಿಕೊಳ್ಳುತ್ತವೆ. ಕೆಲವು ಬಾಹ್ಯವಾಗಿ ಮೊಟ್ಟೆಯನ್ನಿಟ್ಟರೆ, ಇತರವುಗಳು ಜರಾಯು ಮೂಲಕ ಗೆಸ್ಟಾಟಿಂಗ್‌ಗೆ ಸಂಪರ್ಕವನ್ನು ಕಲ್ಪಿಸಿಕೊಳ್ಳುತ್ತವೆ. ಸಸ್ತನಿಗಳಲ್ಲಿ ಗರ್ಭಧಾರಣೆ ಆಗುವಂತೆ ಎಂಬುದಾಗಿ ಹೋಲಿಸಬಹುದಾಗಿದೆ.

ಸ್ಯಾಟಲೈಟ್ ಟ್ಯಾಗ್

ಸ್ಯಾಟಲೈಟ್ ಟ್ಯಾಗ್

ಈ ವಿಜ್ಞಾನಿಗಳು ಎಮಿಲಿಯನ್ನು ಇದಕ್ಕೆ ಮಾತ್ರವೇ ಬಳಸಿಕೊಳ್ಳದೇ ಇನ್ನಷ್ಟು ಶೋಧನೆಗಳನ್ನು ಇದನ್ನು ಬಳಸಿ ಮಾಡಲಿದ್ದಾರೆ. ಇದನ್ನು ಮಾನಿಟರ್ ಮಾಡಲು ಮತ್ತು ಟ್ರ್ಯಾಕ್ ಮಾಡುವುದಕ್ಕಾಗಿ ಧ್ವನಿತರಂಗಗಳು ಹಾಗೂ ಸ್ಯಾಟಲೈಟ್ ಟ್ಯಾಗ್ ಅನ್ನು ವಿಜ್ಞಾನಿಗಳು ಲಗತ್ತಿಸಿದ್ದಾರೆ.

ಸಂಶೋಧನೆ

ಸಂಶೋಧನೆ

ಅದು ಮರಿ ಹಾಕುವ ಸಂದರ್ಭವನ್ನು ಇದು ಕವರ್ ಮಾಡಲಿದ್ದು ಇವರುಗಳ ಸಂಶೋಧನೆಗೆ ಇನ್ನಷ್ಟು ಪೂರಕವಾಗಲಿದೆ. ವರ್ಷದೊಳಗೆ ಈ ಟ್ಯಾಗ್ ಬಿದ್ದು ಬಿಡುತ್ತದೆ

ಶಾರ್ಕ್ ಸೊನೊಗ್ರಾಮ್ ವೀಡಿಯೊ

ಕೆಳಗಿನ ಸ್ಲೈಡರ್‌ನಲ್ಲಿ ಶಾರ್ಕ್ ಸೊನೊಗ್ರಾಮ್ ವೀಡಿಯೊವನ್ನು ಲಗತ್ತಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Marine scientists just carried out what may be the bravest obstetrical exam ever, taking a sonogram of a 12.5 foot tiger shark. We first spotted this news over at Popular Science.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot