ನಿಮಗಿದು ಗೊತ್ತಾ? ಬಿತ್ತನೆ ಮಾಡಲು ರೈತನ ಬದಲಿಗೆ ರೊಬೋಟ್ ಬಳಸುವುದು ಹೇಗೆ?

|

ಈ ಯುಗವನ್ನು ಕಲಿಗಾಲ ಎಂದು ಕರೆಯುತ್ತಾರೆ ಏಕೆಂದರೆ ಈ ಯುಗದಲ್ಲಿ ನಮಗೆ ನಂಬಲು ಅಸಾಧ್ಯವಾಗಿರುವ ಸಂಗತಿಗಳು ರೂಪುಗೊಳ್ಳುತ್ತವೆ, ನಮ್ಮನ್ನು ಬೆಕ್ಕಸಬೆರಗಾಗಿಸುವ ಕೆಲವೊಂದು ಕಾರ್ಯಗಳು ನಮ್ಮ ಅರಿವೇ ಇಲ್ಲದಂತೆ ನಡೆದು ಹೋಗುತ್ತದೆ. ಈ ವಿಸ್ಮಯಗಳು ಉಂಟಾಗಲು ಇಂತಹುದೇ ಕ್ಷೇತ್ರ ಎಂಬುದಿಲ್ಲ ನಾವು ಹೆಚ್ಚು ತಿಳಿದಿರುವ ಕೆಲವೊಂದು ಪ್ರದೇಶಗಳೇ ಈ ಆಶ್ಚರ್ಯಗಳಿಗೆ ಕಾರಣವಾಗುತ್ತವೆ.

ಇಂದಿನ ವೈಜ್ಞಾನಿಕ ಯುಗದಲ್ಲಿ ಕೆಲವೊಂದು ಘಟನೆಗಳು ವೈಜ್ಞಾನಿಕವಾಗಿಯೇ ನಡೆಯುತ್ತವೆ. ಇವುಗಳಲ್ಲಿ ಹೆಚ್ಚಿನವು ಸಾಧನೆಯ ಕುರುಹು ಕೂಡ ಆಗಿವೆ. ಮಾನವ ಎಷ್ಟು ಮುಂದುವರಿದಿದ್ದಾನೆ ಎಂದರೆ ತನ್ನದೇ ಆದ ತದ್ರೂಪನ್ನೇ ಸೃಷ್ಟಿಸಿ ಕೆಲವೊಂದು ಪವಾಡಗಳನ್ನೇ ಮಾಡಬಲ್ಲವನಾಗಿದ್ದಾನೆ. ಅಷ್ಟೊಂದು ಕ್ಷಿಪ್ರ ಬೆಳವಣಿಗೆಯನ್ನು ನಾವು ಇಂದಿನ ಆಧುನಿಕ ಯುಗದಲ್ಲಿ ಕಾಣಬಹುದಾಗಿದೆ.

ನಿಮಗಿದು ಗೊತ್ತಾ? ಬಿತ್ತನೆ ಮಾಡಲು ರೈತನ ಬದಲಿಗೆ ರೊಬೋಟ್ ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಆಶ್ಚರ್ಯಕರ ವಿಸ್ಮಯಕಾರಿ ಅಂಶವೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಕೃಷಿಗೂ ಕೂಡ ಆಧುನಿಕತೆಯ ಸ್ಪರ್ಶ ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದುದು. ಕೃಷಿ ಸಂಬಂಧಿತ ಹೆಚ್ಚಿನ ಕೆಲಸಗಳು ಇಂದು ಮಾನ ರಹಿತವಾಗಿದ್ದು ಯಂತ್ರಗಳ ಮೂಲಕ ನಡೆಸಲಾಗುತ್ತದೆ. ಪೈರು ಬಿತ್ತನೆ, ನಾಟಿ, ಕಟಾವು ಹೀಗೆ ಪ್ರತಿಯೊಂದನ್ನು ಕೃಷಿಯ ಕೆಲಸಕ್ಕೂ ಇಂದು ಮಾನವ ಯಂತ್ರಗಳನ್ನು ಆಶ್ರಯಿಸಿದ್ದಾನೆ.

ಅಡಿಗೆ, ತೆಂಗು ಕೊಯ್ಯುವುದರಿಂದ ಹಿಡಿದು ಪೈರು ಕಟಾವು ಮಾಡುವಲ್ಲಿ ಕೂಡ ಯಂತ್ರ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ. ಆದರೆ ಕ್ಯಾಲಿಫೋರ್ನಿಯಾದ ಕೃಷಿ ಸಂಸ್ಥೆಯೊಂದು ರೊಬೋಟ್‌ನಿಂದ ಬೆಳೆಸಿದ ತರಕಾರಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಸನ್ನಾಹದಲ್ಲಿದೆ. ಐರನ್ ಆಕ್ಸ್ ಎಂಬ ಸ್ಟಾರ್ಟಪ್ ಕಂಪನಿಯು ರೊಬೋಟ್ ಬೆಳೆಯಿಸಿದ ಬೆಳೆಯನ್ನು ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಪರಿಚಯಿಸುವ ತಯಾರಿ ನಡೆಸಿದೆ. ಬನ್ನಿ ಈ ಕುರಿತು ವಿವರವಾದ ಮಾಹಿತಿಯನ್ನು ಸ್ಲೈಡ್‌ಗಳ ಮೂಲಕ ತಿಳಿದುಕೊಳ್ಳೋಣ.

ರೈತನ ಬದಲಿಗೆ ರೊಬೋಟ್

ರೈತನ ಬದಲಿಗೆ ರೊಬೋಟ್

ಕ್ಯಾಲಿಫೋರ್ನಿಯ ಮೂಲದ ಐರನ್ ಆಕ್ಸ್ ಸ್ಟಾರ್ಟಪ್ ಕಂಪನಿಯು ರೊಬೋಟಿಕ್ ಮತ್ತು ಹೈಡ್ರೊಪೋನಿಕ್ ಮಾದರಿಯ ವ್ಯವಸಾಯ ಪದ್ಧತಿಯ ಮೂಲಕ ಬೆಳೆಯನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ದ ವರ್ಜ್ ದೈನಿಕಕ್ಕೆ ದೊರಕಿದ ಮಾಹಿತಿಯಂತೆ ಐರನ್ ಆಕ್ಸ್, ರೊಬೋಟ್ ಬೆಳೆದ ಸೊಪ್ಪು ತರಕಾರಿಯನ್ನು ತರಕಾರಿ ಶೆಲ್ಫ್‌ನಲ್ಲಿ ಪರಿಚಯಿಸುತ್ತಿದೆ.

ಮೂರು ವಿಭಿನ್ನ ಮಾದರಿಗಳು

ಮೂರು ವಿಭಿನ್ನ ಮಾದರಿಗಳು

ಇದೀಗ ಐರನ್ ಆಕ್ಸ್ ಮೂರು ವಿಭಿನ್ನ ಮಾದರಿಗಳಲ್ಲಿ ತನ್ನ ಉತ್ಪನ್ನವನ್ನು ಪರಿಚಯಿಸಲಿದೆ ಈ ತರಕಾರಿಗಳು ಇತರ ತರಕಾರಿಗಳ ಬೆಲೆಯನ್ನೇ ಹೊಂದಲಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ರೊಬೋಟ್ ಕೃಷಿ ಪದ್ಧತಿ ಏನು?

ರೊಬೋಟ್ ಕೃಷಿ ಪದ್ಧತಿ ಏನು?

ಈ ರೊಬೋಟ್ ಯಂತ್ರಗಳು ಸಸ್ಯಗಳಿಗೆ ಜೀವ ತುಂಬಲು ಸ್ವಯಂಚಾಲಿತ ಯಂತ್ರ ವಿಧಾನವನ್ನು ಅನುಸರಿಸುತ್ತವೆ. ರೊಬೋಟ್‌ನ ಕೈಗಳು ಸಸ್ಯದ ಬೀಜ ಬಿತ್ತನೆ ಮತ್ತು ಅವುಗಳ ಕೃಷಿಯಲ್ಲಿ ಪರಿಣಿತಿಯನ್ನು ಪಡೆದುಕೊಂಡಿದೆ. ಅಂತೂ ತಾಜಾ ತರಕಾರಿಗಳನ್ನೇ ರೊಬೋಟ್ ಯಂತ್ರಗಳು ಗ್ರಾಹಕರಿಗೆ ತಲುಪಿಸುತ್ತವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಕೃಷಿ ವಿಧಾನದಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನವೇನು?

ಕೃಷಿ ವಿಧಾನದಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನವೇನು?

ಸ್ವಯಂಚಾಲಿತ ಪೋರ್ಟರ್‌ಗಳು ಪ್ಯಾಲೆಟ್‌ಗೆ ಸಸ್ಯಗಳನ್ನು ವಿತರಿಸುತ್ತವೆ, ರೊಬೋಟ್ ಕೈಗಳು ಬೆಳೆಗಳನ್ನು ಬೆಳೆಯಿಸುವಲ್ಲಿ ಪರಿಣಿತಿಯನ್ನು ಪಡೆದುಕೊಂಡಿವೆ. ಕಂಪ್ಯೂಟರ್ ಸ್ವಯಂಚಾಲಿತ ಬೆಳಕು, ನೀರು, ನ್ಯೂಟ್ರಿನ್ ಅಂಶಗಳನ್ನು ನೀಡಿ ಬೀಜ ಸಸ್ಯವಾಗಿ ಬೆಳೆಯುವಲ್ಲಿ ಪೂರಕ ಅಂಶವನ್ನು ಒದಗಿಸುತ್ತವೆ. ಅದಾಗ್ಯೂ ಈ ವ್ಯವಸ್ಥೆಯು ಸ್ವಯಂಚಾಲಿತವಾಗಿದ್ದು ಉತ್ಪನ್ನವನ್ನು ಬೇರ್ಪಡಿಸಿ ಪ್ಯಾಕೇಜ್ ಮಾಡಲು ಮನುಷ್ಯರ ಅವಶ್ಯಕತೆ ಇದೆ.

ಇತರ ಪ್ರಯೋಜನಗಳೇನು

ಇತರ ಪ್ರಯೋಜನಗಳೇನು

ಸಸ್ಯಗಳ ರವಾನೆ ಖರ್ಚು ಮತ್ತು ಇತರ ವೆಚ್ಚಗಳನ್ನು ರೊಬೋಟಿಕ್ ವ್ಯವಸ್ಥೆಯು ನಿಯಂತ್ರಿಸುತ್ತಿದ್ದು ಹಣದ ಉಳಿತಾಯ ಕೂಡ ಆಗುತ್ತಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಕೃಷಿಗೂ ರೊಬೋಟ್ ಪರಿಣಾಮ ಏನು?

ಕೃಷಿಗೂ ರೊಬೋಟ್ ಪರಿಣಾಮ ಏನು?

ಬೆಳೆಯುತ್ತಿರುವ ಜನಸಂಖ್ಯೆ, ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆ ಇದರಿಂದಾಗಿ ರೊಬೋಟಿಕ್ ತಂತ್ರಜ್ಞಾನ ಕೃಷಿಗೆ ಸಹಕಾರವನ್ನು ನೀಡಲಿದೆ. ಸ್ವಯಂಚಾಲಿತ ಟ್ರ್ಯಾಕ್ಟರ್‌ಗಳು, ಏರಿಯಲ್ ವಾಹನಗಳು, ಇರಿಗೇಶನ್ ವ್ಯವಸ್ಥೆಯನ್ನು ಈ ಕೃಷಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

Source: ironox.com

Most Read Articles
Best Mobiles in India

English summary
California farming startup begins selling vegetables grown by a ROBOT machine. Read more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more