ಕೊಲಂಬಸ್‌ಗಿಂತ 2,800 ವರ್ಷಗಳ ಹಿಂದೆಯೇ ಚೀನಿಯರಿಂದ ಅಮೆರಿಕ ಅನ್ವೇಷಣೆ

By Suneel
|

ಅನ್ವೇಷಣೆ ಕುರಿತು ಒಂದು ಪ್ರಶ್ನೆ. ಅಮೆರಿಕ ಕಂಡುಹಿಡಿದದ್ದು ಯಾರು? ಉತ್ತರ ಬಹುಸಂಖ್ಯಾತರಿಂದ ಕೊಲಂಬಸ್‌ ಎಂದೇ ಬರುತ್ತದೆ. ಆದರೆ ಬಹುಶಃ ಇನ್ನುಮುಂದೆ ಅಮೆರಿಕ ಕಂಡುಹಿಡಿದವರು ಯಾರು ಎಂದು ಕೇಳಿದರೆ ಉತ್ತರ ಕೊಲಂಬಸ್‌ ಅಲ್ಲಾ, ಚೀನಿಯರು ಎಂದು ಹೇಳಬಹುದೇನೋ! ಈ ಮಾಹಿತಿ ತಿಳಿದು ಇತಿಹಾಸ ತಜ್ಞರು, ಇತಿಹಾಸ ಪುಸ್ತಕಗಳನ್ನು ಓದಿದವರು ಎಲ್ಲರೂ ಗಾಬರಿಯಾಗಬಹುದು ಆದರೆ ಅದಕ್ಕೂ ಮುನ್ನ ನಾವು ಹೇಳುವ ಮಾಹಿತಿಯನ್ನು ಸಂಪೂರ್ಣವಾಗಿ ಒಮ್ಮೆ ಓದಿರಿ.

ಕ್ರಿಸ್ಟಫರ್‌ ಕೊಲಂಬಸ್ ಅಮೆರಿಕವನ್ನು ಅನ್ವೇಷಿಸಿದರು ಎಂದು ಉಲ್ಲೇಖವಿದೆ. ಆದರೆ ಹೊಸ ಆಧಾರವೊಂದು ಚೀನಿಯರು ಅಮೆರಿಕವನ್ನು ಕ್ರಿಸ್ತ ಪೂರ್ವ ಒಂದು ಸಾವಿರ ವರ್ಷಗಳ ಹಿಂದೆಯೇ ಅನ್ವೇಷಿಸಿದ್ದರೂ ಎಂದು ಹೇಳುತ್ತಿದೆ. ಈ ಅಚ್ಚರಿ ಮಾಹಿತಿಯನ್ನು ಸಂಪೂರ್ಣವಾಗಿ ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಗೂಗಲ್ ಅರ್ಥ್‌ನಿಂದ ಬಹಿರಂಗಗೊಂಡ ಪ್ರಪಂಚದ ರಹಸ್ಯ ತಾಣಗಳು

ಅಮೆರಿಕ ಅನ್ವೇಷಣೆ ಮಾಡಿದ್ದು ಚೀನಿಯರು

ಅಮೆರಿಕ ಅನ್ವೇಷಣೆ ಮಾಡಿದ್ದು ಚೀನಿಯರು

ಇತ್ತೀಚೆಗೆ ಪತ್ತೆಯಾದ ಪ್ರಾಚೀನ ಲಿಪಿಗಳು ಯೂರೋಪಿಯನ್ನರು ಅಮೆರಿಕಕ್ಕೆ ಹೋಗುವ ಮುನ್ನ ಚೀನಿಯರು ಅಮೆರಿಕ ಪರಿಶೋಧನೆ ನಡೆಸಿದ್ದರು ಎಂದು ಹೇಳುತ್ತಿವೆ.

ಜಾನ್‌ ರುಸ್ಕಂಪ್‌

ಜಾನ್‌ ರುಸ್ಕಂಪ್‌

ಅಮೆರಿಕದ ಇಲಿನಾಯ್ಸ್‌ನ ನಿವೃತ್ತ ರಸಾಯನಶಾಸ್ತ್ರಜ್ಞ ಮತ್ತು ಹವ್ಯಾಸಿ ಶಿಲಾಶಾಸನ ಸಂಶೋಧಕರಾದ 'ಜಾನ್‌ ರುಸ್ಕಂಪ್‌' ರವರು ನ್ಯೂ ಮೆಕ್ಸಿಕೋದ 'ಪೆಟ್ರೊಗ್ಲಿಫ್ ರಾಷ್ಟ್ರೀಯ ಸ್ಮಾರಕ' ಭವನದಲ್ಲಿ ನಡೆದು ಹೋಗುವ ಸಮಯದಲ್ಲಿ ಅಸಾಮಾನ್ಯ ಗುರುತುಗಳನ್ನು ಕಂಡುಹಿಡಿದಿದ್ದರು.

 ಜಾನ್‌ ರುಸ್ಕಂಪ್‌

ಜಾನ್‌ ರುಸ್ಕಂಪ್‌

ಜಾನ್‌ ರುಸ್ಕಂಪ್'ರವರು ಪತ್ತೆಹಚ್ಚಿದ್ದ ಪ್ರಾಚೀನ ಲಿಪಿಗಳಲ್ಲಿ "ಪ್ರಾಚೀನ ಏಷಿಯಾ ಜನರು ಅಮೆರಿಕದಲ್ಲಿ ಕ್ರಿಸ್ತ ಪೂರ್ವ 1300 ರ ಹಿಂದೆಯೇ ಅಮೆರಿಕದಲ್ಲಿ ಇದ್ದರು. ಅಂದರೆ ಕೊಲಂಬಸ್‌ ಅಮೆರಿಕಕ್ಕೆ ಭೇಟಿ ನೀಡುವ ಸುಮಾರು 2800 ವರ್ಷಗಳ ಹಿಂದೆಯೇ ಚೀನಿಯರು ಅಲ್ಲಿದ್ದರು ಎಂದು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ. ಕೊಲಂಬಸ್‌ 1492 ರಲ್ಲಿ ಅಮೆರಿಕ ಕಂಡುಹಿಡಿದರು ಎಂದು ಇತಿಹಾಸದಲ್ಲಿ ಹೇಳಲಾಗಿದೆ.

ಇದು ಫೇಕ್‌ ಅಲ್ಲ

ಇದು ಫೇಕ್‌ ಅಲ್ಲ

ಉತ್ತರ ಅಮೆರಿಕದಲ್ಲಿ ದೊರೆತಿರುವ ಪ್ರಾಚೀನ ಚೀನಿಯರ ಲಿಪಿಗಳು ಫೇಕ್‌ ಅಲ್ಲ, ಅಸಾಮಾನ್ಯ ಗುರುತುಗಳು ಮತ್ತು ಲಿಪಿಯ ಶೈಲಿ ತುಂಬಾ ಹಳೆಯವಾಗಿವೆ ಎಂದು ರುಸ್ಕಂಪ್ ಹೇಳಿದ್ದಾರೆ.

ವೈಜ್ಞಾನಿಕ ಅಧ್ಯಯನದಿಂದಲೂ ಖಚಿತ

ವೈಜ್ಞಾನಿಕ ಅಧ್ಯಯನದಿಂದಲೂ ಖಚಿತ

ದೊರೆತಿರುವ ಪ್ರಾಚೀನ ಲಿಪಿಗಳನ್ನು ವೈಜ್ಞಾನಿಕ ಅಧ್ಯಯನ ಮಾಡಲಾಗಿದ್ದು, ಅಧ್ಯಯನವು ಸಹ ಪ್ರಾಚೀನ ಚೀನಿಯರು 2500 ವರ್ಷಗಳ ಹಿಂದೆಯೇ ಅಮೆರಿಕ ಅನ್ವೇಷಿಸಿ ಇಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಖಚಿತ ಪಡಿಸಿದೆ ಎಂಬುದನ್ನು ರುಸ್ಕಂಪ್ ಹೇಳಿದ್ದಾರೆ.

ಚಿತ್ರಸಂಕೇತಗಳು

ಚಿತ್ರಸಂಕೇತಗಳು

ರುಸ್ಕಂಪ್‌ರವರು ಅಲ್ಬುಕರ್ಕೆ ಸ್ಮಾರಕ ಭವನದ ಬಂಡೆಮೇಲೆ ಚಿತ್ರಸಂಕೇತಗಳನ್ನು ಪತ್ತೆಹಚ್ಚಿದ್ದು, ಈ ಪ್ರಾಚೀನ ಲಿಪಿಗಳು 'ಶಾಂಗ್‌ ಡಿನ್ಸಾಸ್ಟಿ' ನಂತರ ಚೀನಿಯರಿಂದ ಬಳಸಲ್ಪಟ್ಟಿವೆ ಎನ್ನಲಾಗಿದೆ.

 ಒರಾಕಲ್‌ ಬೋನ್‌ ಚಿತ್ರಸಂಕೇತಗಳು

ಒರಾಕಲ್‌ ಬೋನ್‌ ಚಿತ್ರಸಂಕೇತಗಳು

ರುಸ್ಕಂಪ್‌ ಪತ್ತೆ ಮಾಡಿರುವ ಪ್ರಾಚೀನ ಲಿಪಿಯು 'ಒರಾಕಲ್‌ ಬೋನ್‌ ಚಿತ್ರ ಸಂಕೇತಗಳು' ಎಂದೇ ಪ್ರಖ್ಯಾತವಾಗಿವೆ. ಅಲ್ಲದೇ ಮೂರನೇ 'ಶಾಂಗ್‌ ಡಿನ್ಸಾಸ್ಟಿ ಕಿಂಗ್‌ ಡ ಜಿಯಾ' ರವರು ಒಂದು ಆಚರಣೆಗಾಗಿ ತ್ಯಾಗ ಮಾಡಿದ್ದರು ಎಂದು ದಾಖಲೆ ಹೇಳಲಾಗಿದೆ. ಅಲ್ಲದೇ ಇದು ಹತ್ತು ದಿನಗಳ ಭವಿಷ್ಯಜ್ಞಾನ ಬಗ್ಗೆ ಹೇಳುವ ಲಿಪಿಯಾಗಿದೆ ಎಂದು ಹೇಳಲಾಗಿದೆ.

ಬರೆಯಲಾದ ಲಿಪಿಗಳು

ಬರೆಯಲಾದ ಲಿಪಿಗಳು

ಗಮನಾರ್ಹವಾಗಿ, ಬರೆಯಲಾದ ಸಂಕೇತಗಳು ಶಾಂಗ್‌ ಮತ್ತು ಝೌ ರಾಜಮನೆತನಗಳ ಪ್ರಾಚೀನ ಚೀನಿಯರ ಆಚರಣೆಗಳನ್ನು ದಾಖಲಿಸಿರುವ ಬಗ್ಗೆ ಸೂಚಿಸುತ್ತಿವೆ ಎಂದು ರುಸ್ಕಂಪ್ ಹೇಳಿದ್ದಾರೆ.

ಆನೆಯ ಚಿತ್ರ ಸಂಕೇತಗಳು

ಆನೆಯ ಚಿತ್ರ ಸಂಕೇತಗಳು

ರುಸ್ಕಂಪ್‌ರವರು ಅರಿಜೋನಾದ ರಾಷ್ಟ್ರೀಯ ಅರಣ್ಯದಲ್ಲಿ ಕ್ರಿಸ್ತ ಪೂರ್ವ 500 ಹಿಂದಿನ ಶಿಲಾ ರೂಪದ ಚೀನಿಯರ ಆನೆಗಳ ಚಿತ್ರ ಸಂಕೇತಗಳನ್ನು ಪತ್ತೆಹಚ್ಚಿರುವ ಬಗ್ಗೆ ಹೇಳಿದ್ದಾರೆ. ಈ ಆಧಾರವು ಸಹ ಏಷಿಯಾ ಜನರು ಅಮೆರಿಕವನ್ನು ಪರಿಶೋಧನೆ ನಡೆಸಿರುವ ಬಗ್ಗೆ ಹೇಳುತ್ತದೆ.

ಇತರೆ ಚಿತ್ರ ಸಂಕೇತಗಳು

ಇತರೆ ಚಿತ್ರ ಸಂಕೇತಗಳು

ನೆವಾಡಾದ ಗ್ರೇಪ್‌ವೈನ್‌ ಕಣಿವೆಯು ಸಹ ಒರಾಕಲ್‌ ಬೋನ್‌ ಯುಗದ ಸಂಕೇತವಾಗಿ 1300 ಕ್ರಿ.ಪೂ ಕಾಲವನ್ನು ಪ್ರದರ್ಶಿಸುತ್ತದೆ ಎಂದು ರುಸ್ಕಂಪ್‌ ಹೇಳಿದ್ದಾರೆ.

 ತಜ್ಞರ ಊಹೆ

ತಜ್ಞರ ಊಹೆ

ರುಸ್ಕಂಪ್‌'ರವರು ಮೇಲೆ ತಿಳಿಸಿದ ಎಲ್ಲಾ ಆಧಾರಗಳನ್ನು ಹೇಳಿದರು ಸಹ ಪುರಾತತ್ವ ಸಾಕ್ಷ್ಯಾಧಾರದ ಕೊರತೆಯಿಂದ ಅಮೆರಿಕಾದಲ್ಲಿ ಯಾವುದೇ ಪ್ರಾಚೀನ ಚೀನೀಯರ ಇರುವಿಕೆಯನ್ನು ಖಚಿತಪಡಿಸುವಲ್ಲಿ ತಜ್ಞರು ಊಹೆಯಾಗಿಯೇ ಮಾಹಿತಿಯನ್ನು ಇರಿಸಿದ್ದಾರೆ.

Best Mobiles in India

English summary
Chinese discovered America 2,800 years before Columbus? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X