'ಎಲಾನ್ ಮಸ್ಕ್' 2024ಕ್ಕೆ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸುತ್ತಾರಂತೆ!

By Suneel
|

'ಎಲಾನ್‌ ರೀವ್‌ ಮಸ್ಕ್(Elon Musk )'ರವರು ಟೆಕ್ನಾಲಜಿ ನ್ಯೂಸ್‌ಗಳನ್ನ ಓದುವವರಿಗೆ ಹೆಚ್ಚು ಪರಿಚಿತರು. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಇವರು ಪ್ರಸ್ತುತ ಕೆನೆಡಿಯನ್‌-ಅಮೆರಿಕನ್‌ ಬ್ಯುಸಿನೆಸ್‌ ಉದ್ಯಮಿ, ಇಂಜಿನಿಯರ್‌, ಸಂಶೋಧಕ. ಬಾಹ್ಯಾಕಾಶ ಸಾರಿಗೆ ಸೇವೆ 'ಸ್ಪೇಸ್‌ಎಕ್ಸ್‌ (Spacex)' ಕಂಪನಿಯ ಸಂಸ್ಥಾಪಕ, ಸಿಇಓ, ಸಿಟಿಓ ಸಹ ಹೌದು. ವಿಶೇಷ ಅಂದ್ರೆ ತೆಸ್ಲಾ ಮೋಟಾರ್ಸ್ ಪ್ರಾಡಕ್ಟ್‌ ವಿನ್ಯಾಸಕಾರರು ಹೌದು.

ಇತ್ತೀಚೆಗೆ 'ಎಲಾನ್ ಮಸ್ಕ್‌'ರವರು ಮರುಬಳಕೆಯ ಸ್ಪೇಸ್‌ ವಾಹನವನ್ನು 'ಸ್ಪೇಶ್‌ಎಕ್ಸ್‌' ಕಂಪನಿಯಿಂದ ಲ್ಯಾಂಡ್‌ ಮಾಡುವ ಉದ್ದೇಶ ಹೊಂದಿದ್ದಾರೆ. ಈಗ ಮತ್ತೊಂದು ಹೊಸ ಯೋಜನೆಗೆ ಕೈಗೊಂಡಿದ್ದು 2024 ನೇ ಇಸವಿಯೊಳಗೆ ಮಂಗಳ ಗ್ರಹಕ್ಕೆ ಜನರನ್ನು ಸರಕುಗಳ ಸಹಿತ ಕರೆದೊಯ್ಯುತ್ತಾರಂತೆ. ಈ ಬಗ್ಗೆ ಇನ್ನಷ್ಟು ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.

ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

1

1

ಸ್ಪೇಸ್‌ಎಕ್ಸ್‌ ಕಂಪನಿ ಮಾನವ ರಹಿತ ಮಿಷನ್‌ ಅನ್ನು 2018ಕ್ಕೆ ಮಂಗಳ ಗ್ರಹಕ್ಕೆ ಕಳುಹಿಸಲು ಸಿದ್ಧತೆಗೊಳಿಸಿದೆ. ಇಂದಿನಿಂದ 9 ವರ್ಷದೊಳಗೆ ಮಾನವನನ್ನು ಸಹ ರೆಡ್‌ ಪ್ಲಾನೆಟ್‌( ಮಂಗಳ ಗ್ರಹ) ಕ್ಕೆ ಕರೆದೊಯ್ಯುವ ಯೋಜನೆಯನ್ನು ಕೈಗೊಂಡಿದೆ.

2

2

ಸ್ಪೇಸ್‌ಎಕ್ಸ್‌ 'ಫ್ಲೇಯಿಂಗ್‌ ಡ್ರ್ಯಾಗನ್‌ ವರ್ಸನ್‌ 2' ರಾಕೆಟ್‌ ಅನ್ನು ಅಭಿವೃದ್ದಿಪಡಿಸುತ್ತಿದ್ದು, ಇದು ಸೌರಮಂಡಲದಲ್ಲಿ ಯಾವುದೇ ಸ್ಥಾನವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆಯಂತೆ. " ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುವ ಉದ್ದೇಶವನ್ನು ಸಹ ಫ್ಲೇಯಿಂಗ್‌ ಡ್ರ್ಯಾಗನ್‌ ಹೊಂದಿದೆ", ಎಂದು 'ಎಲಾನ್‌ ಮಸ್ಕ್' ಸಂದರ್ಶನದಲ್ಲಿ ಹೇಳಿದ್ದಾರೆ.

3

3

'ಫ್ಲೇಯಿಂಗ್ ಡ್ರ್ಯಾಗನ್ ವರ್ಷನ್‌ 2' ಅನ್ನು 2018'ಕ್ಕೆ ಮಂಗಳ ಗ್ರಹಕ್ಕೆ ಕಳುಹಿಸಲಾಗುತ್ತದೆ. 18 ತಿಂಗಳ ಪ್ರಯಾಣದಲ್ಲಿ 7 ಜನರನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

4

4

ಸಂದರ್ಶನ ವೇಳೆಯಲ್ಲಿ 'ಎಲಾನ್‌ ಮಸ್ಕ್‌' ರವುರು ಸ್ಪೇಸ್‌ಎಕ್ಸ್‌ ಅಭಿವೃದ್ದಿ ಪಡಿಸುತ್ತಿರುವ ಹೊಸ ರಾಕೆಟ್‌ ಪ್ರಮುಖ ಫೀಚರ್‌ ಅನ್ನು ಹೊಂದಿಲ್ಲ. ಅದೇನೆಂದರೆ ಭೂಮಿಗೆ ವಾಪಸ್ಸು ಹೋಗುವ ಸಾಮರ್ಥ್ಯ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಫೋಟೋ ಕೃಪೆ:Roberto Gonzalez/Getty Images

5

5

"2018 ಕ್ಕೆ ಮಾನವ ರಹಿತ ಮಿಷನ್‌ ಅನ್ನು ಮಂಗಳ ಗ್ರಹಕ್ಕೆ ಕಳುಹಿಸುವುದು ಖಚಿತ ಮತ್ತು 2024ನೇ ಇಸವಿಗೆ ರೆಡ್‌ ಪ್ಲಾನೆಟ್‌ (ಮಂಗಳ ಗ್ರಹಕ್ಕೆ) ಮಾನವರನ್ನು ಲ್ಯಾಂಡ್‌ ಮಾಡುವುದು ಖಚಿತ" ಎಂದು 'ಎಲಾನ್‌ ಮಸ್ಕ್' ತಮ್ಮ ಟಾರ್ಗೆಟ್‌ ಅನ್ನು ವಿಶ್ವಾಸನೀಯವಾಗಿ ಹೇಳಿದ್ದಾರೆ.

6

6

ಮಾರ್ಸ್‌ ಟೈಮ್‌ಲೈನ್‌ "ಕೋಡ್‌ ಕಾನ್ಫರೆನ್ಸ್‌"ನಲ್ಲಿ ಎಲಾನ್‌'ರವರು ಮಂಗಳ ಗ್ರಹದಲ್ಲಿ ವಸಾಹತುಗಾರಿಗೆ ಮಾಡುವ ಯೋಜನೆಯನ್ನು ಹೊಂದಿರುವ ಬಗ್ಗೆ ಸಹ ಹೇಳಿದ್ದಾರೆ. ಆದರೆ ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀಡಿಲ್ಲ.

7

7

ಎಲಾನ್‌ ಮಸ್ಕ್‌ ಮಂಗಳ ಗ್ರಹದ ಬಗ್ಗೆ ಹೊಂದಿರುವ ಯೋಜನೆಗಳ ಕುರಿತು ಸ್ವತಃ ಒಂದು ಹೇಳಿಕೆಯನ್ನು ಹೇಳಿಕೊಂಡಿದ್ದಾರೆ. ಅದೇನೆಂದರೆ " ಮಂಗಳ ಗ್ರಹದಲ್ಲಿನ 'ಸಾವಿನ ಶುಭಾಷಯ' ಹೊಂದಿಲ್ಲ, ಅಲ್ಲದೇ ಮಂಗಳ ಗ್ರಹದಲ್ಲಿ ಸಾಯುವುದು ಎಂದಿಗೂ ಕೆಟ್ಟ ಯೋಜನೆ ಅಲ್ಲ". ಎಂದಿದ್ದಾರೆ.

8

8

ಸ್ಪೇಸ್‌ಎಕ್ಸ್‌ ಬರುವ ಜುಲೈ ವೇಳೆಗೆ 'ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ' ರಿಸಪ್ಲೇ ಮಿಷನ್‌ ಅನ್ನು ಕಳುಹಿಸುವ ಯೋಜನೆ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ.

rn

9

'ಎಲಾನ್‌ ಮಸ್ಕ್‌' ರವರು ಕೋಡ್‌ ಕಾನ್ಫೆರೆನ್ಸ್ ವೇಳೆ ನೀಡಿದ ಸಂದರ್ಶನ ವೀಡಿಯೋ ನೋಡಿ.
ವೀಡಿಯೊ ಕೃಪೆ:Recode

ಗಿಜ್‌ಬಾಟ್‌

ಗಿಜ್‌ಬಾಟ್‌

ಭೂಮಿಗೆ ನಮ್ಮಿಂದ ಆಗುತ್ತಿರುವ ಹಾನಿ; ನಾಸಾ ತೋರಿಸಿದ್ದು ಹೇಗೆ ಗೊತ್ತೇ?ಭೂಮಿಗೆ ನಮ್ಮಿಂದ ಆಗುತ್ತಿರುವ ಹಾನಿ; ನಾಸಾ ತೋರಿಸಿದ್ದು ಹೇಗೆ ಗೊತ್ತೇ?

ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!! ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Elon Musk to Send People to Mars in 2024. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X