ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

By Suneel
|

ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಲು ಡ್ರೋನ್‌ ಮತ್ತು ರೋಬೋಟ್‌ಗಳನ್ನು ಬಳಸಿಕೊಳ್ಳುವಂತಹ ಕಾಲ ಯಾವಾಗಲೋ ಬಂತು. ಆದ್ರೆ ಪ್ರಸ್ತುತ ಸುದ್ದಿಯಲ್ಲಿರುವ ರೋಬೋಟ್‌ಗಳ ಬಗೆಗಿನ ಕುತೂಹಲಕಾರಿ ಸುದ್ದಿಯೆಂದರೆ ಅಧ್ಯಯನ ಒಂದರ ಪ್ರಕಾರ ಮುಂದಿನ ದಿನಗಳಲ್ಲಿ ಲೈಂಗಿಕ ಚಟುವಟಿಕೆಗಳಿಗೆ ರೋಬೋಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆಯಂತೆ.

ತಂತ್ರಜ್ಞಾನ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯ. ಎಲ್ಲವೂ ಟೆಕ್ನಾಲಜಿ ಮಯವಾಗುತ್ತಿದೆ. ಟೆಕ್ನಾಲಜಿ ಅಭಿವೃದ್ದಿಯು ಮಾನವನ ದೈನಂದಿನ ಚಟುವಟಿಕೆಗಳನ್ನು ಅತಿ ಸುಲಭವಾಗಿಯೂ, ಸರಳವಾಗಿಯೂ, ಶೀಘ್ರವಾಗಿಯೂ ಮಾಡುತ್ತಿರುವುದರಲ್ಲಿ ಸಂಶಯವಿಲ್ಲ. ಆದರೆ ಟೆಕ್ನಾಲಜಿ ಅಭಿವೃದ್ದಿ ಎಂಬುದು ಈಗ ರೋಬೋಟ್‌ಗಳನ್ನು ಲೈಂಗಿಕ ಚಟುವಟಿಕೆಗಳಿಗಾಗಿ ಬಳಸುವಷ್ಟು ಮುಂದುವರೆದಿದೆ ಎಂಬುದನ್ನು ಓದಲು ಕುತೂಹಲ ಹೆಚ್ಚಾಗೆ ಇರುತ್ತದೆ. ಅಂದಹಾಗೆ ಒಂದು ಅಧ್ಯಯನವು ರೋಬೋಟ್‌ಗಳನ್ನು ಮುಂದಿನ ದಿನಗಳಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಅಧ್ಯಯನ ಹೇಳಿದ ಕುತೂಹಲಕಾರಿ ಮಾಹಿತಿ ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ವಿಜ್ಞಾನ ಕ್ಷೇತ್ರದಲ್ಲಿನ 15 ಭಯಾನಕ ಪ್ರಯೋಗಗಳು

ಲೈಂಗಿಕ ಚಟುವಟಿಕೆಗೆ ರೋಬೋಟ್

1

ತಜ್ಞರು, ರೋಬೋಟ್‌ಗಳು ಲೈಂಗಿಕ ಚಟುವಟಿಕೆಗಳಿಗಾಗಿ ಬಳಸುವ ಹೊಸ ಮಷಿನ್‌ಗಳಾಗಿವೆ. ಆಂಸ್ಟರ್ಡ್ಯಾಮ್‌ ನಂತಹ ರೆಡ್‌ ಲೈಟ್‌ ಜಿಲ್ಲೆಗಳಲ್ಲಿ "ತಪ್ಪಿತಸ್ಥ ಮುಕ್ತ" ವ್ಯಾಪಾರದಿಂದ ಅಪರಾಧಗಳು ಕೊನೆಗೊಳ್ಳುತ್ತವೆ ಎಂದು ಹೇಳಿದ್ದಾರೆ.

ರೋಬೋಟ್‌ ಲೈಂಗಿಕ ಉದ್ಯೋಗಿಗಳು

2

2050ಕ್ಕೆ ರೆಡ್‌ ಲೈಟ್‌ ಜಿಲ್ಲೆಗಳು ಸಂಪೂರ್ಣ ಲೈಂಗಿಕ ಚಟುವಟಿಕೆಯ ರೋಬೋಟ್‌ಗಳನ್ನು ಹೊಂದಲಿವೆ ಎಂದು ವೆಲಿಗ್ಟನ್‌ ವಿಶ್ವವಿದ್ಯಾಲಯದ ಫ್ಯೂಚರೊಲಾಜಿಸ್ಟ್‌ 'ಐಯಾನ್ ಯಿಯೊಮ್ಯಾನ್‌' ಮತ್ತು ಲೈಂಗಿಕ ವಿಜ್ಞಾನಿ ' ಮೈಕೆಲ್‌ ಮಾರ್ಸ್‌' ಪ್ರಕಾರ ಹೇಳಲಾಗಿದೆ.

Yub-Yum

3

ಆಂಸ್ಟರ್ಡ್ಯಾಮ್‌ನ Yub-Yum ಪ್ರದೇಶದಲ್ಲಿ ಕಾಣಿಸಿಕೊಳ್ಳಲಾದ ರೋಬೋಟ್ ಲೈಂಗಿಕ ಚಟುವಟಿಕೆ ಆಧಾರದಲ್ಲಿ ರೋಬೋಟ್‌ಗಳು ಮುಂದಿನ ದಿನಗಳಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ಬಳಸುವ ಮಷಿನ್‌ಗಳು ಎನ್ನಲಾಗಿದೆ. Yub-Yum ಆಧುನಿಕ ಲೈಂಗಿಕ ಚಟುವಟಿಕೆಯ ಪ್ರದೇಶವಾಗಿದೆ. ಅಲ್ಲಿ 100 ಕ್ಕೂ ಹೆಚ್ಚು ಜಿ-ತಂತಿಗಳನ್ನು ಒಳಗೊಂಡ ರೋಬೋಟ್‌ ಸುಂದರರು ಮತ್ತು ರೋಬೋಟ್‌ ಸುಂದರಿಯರು ಇರುತ್ತಾರೆ. ಅಲ್ಲಿ ಎಲ್ಲಾ ಸೇವೆಗಳ ಸಹಿತ ಪ್ರವೇಶ ಶುಲ್ಕ $10 000 (674,504 ರೂ) ಇರುತ್ತದೆ ಎನ್ನಲಾಗಿದೆ.

Yub-Yum

4

Yub-Yum ಪ್ರದೇಶದ ಚಟುವಟಿಕೆ ಮತ್ತು ಪ್ರವೇಶ ಶುಲ್ಕದ ಪ್ರಕಾರ ರೋಬೋಟ್‌ಗಳ ಲೈಂಗಿಕ ಚಟುವಟಿಕೆ ಜೊತೆಗೆ, ಮಸಾಜ್‌, ಲ್ಯಾಪ್ ಡ್ಯಾನ್ಸಿಂಗ್ ಸೇವೆಗಳನ್ನು Yub-Yum ಪ್ರದೇಶ ಹೊಂದಿದೆ. ಅಲ್ಲದೇ ಕೌನ್ಸಿಲ್‌ ಪರವಾನಗಿ ಸಹ ಹೊಂದಲಾಗಿದೆ. ಆದರೆ ಅಲ್ಲಿ ಸಿಬ್ಬಂದಿಗಳು ಮಾನವರಲ್ಲ ಆಂಡ್ರಾಯ್ಡ್‌ಗಳು ಎನ್ನಲಾಗಿದೆ.

ತಜ್ಞರು  ಹೇಳಿದ್ದೇನು?

5

ಮಾನವ ಕಳ್ಳಸಾಗಣೆ ಮತ್ತು ಅಪರಾಧದ ದೃಷ್ಟಿಯಿಂದ 2040 ರ ಭವಿಷ್ಯದಲ್ಲಿ ಹೇಗೆ ಲೈಂಗಿಕ ಕ್ಷೇತ್ರ ಬದಲಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಎದುರಾಗುವ ಸಮಸ್ಯೆ ಏನು?

6

ವೆಲಿಗ್ಟನ್‌ ವಿಶ್ವವಿದ್ಯಾಲಯದ ಫ್ಯೂಚರೊಲಾಜಿಸ್ಟ್‌ 'ಐಯಾನ್ ಯಿಯೊಮ್ಯಾನ್‌' ಮತ್ತು ಲೈಂಗಿಕ ವಿಜ್ಞಾನಿ ' ಮೈಕೆಲ್‌ ಮಾರ್ಸ್‌' ರವರು ಲೈಂಗಿಕ ಚಟುವಟಿಕೆಗೆ ರೋಬೋಟ್‌ಗಳನ್ನು ಬಳಸುವುದರಿಂದ ಎದುರಾಗುವ ಸಮಸ್ಯೆ ಬಗ್ಗೆ ವಿವರಿಸುತ್ತಾ " ಲೈಂಗಿಕವಾಗಿ ಹರಡುವ ಸೋಂಕು, ಮುಖ್ಯವಾಗಿ 'ಎಚ್‌ಐವಿ' ಸೋಂಕನ್ನು ಊಹಿಸಲು ಸಾಧ್ಯವಾಗುವುದಿಲ್ಲ ಮತ್ತು ರೋಗ ನಿರೋಧಕ ಲಸಿಕೆಯನ್ನು ಹೇಳವಲ್ಲಿ ಸಮಸ್ಯೆ ಎದುರಾಗುತ್ತದೆ" ಎಂದಿದ್ದಾರೆ.

ವಿವಿಧ ರೀತಿಯ ಜನರಿಗೆ ವಿವಿಧ ರೋಬೋಟ್‌ಗಳು

7

Yub-Yum, ಭವಿಷ್ಯದಲ್ಲಿ ಎಲ್ಲಾ ರೀತಿಯ ಜನಾಂಗದ, ದೇಹದ ಆಕಾರ, ವಯಸ್ಸು, ಭಾಷೆ, ಲೈಂಗಿಕ ವೈಶಿಷ್ಟಕ್ಕೆ ತಕ್ಕಂತೆ ರೋಬೋಟ್‌ಗಳನ್ನು ಹೊಂದಲಿದೆ ಎಂದು ಜೋಡಿ ತಜ್ಞರ ಹೇಳಿದ್ದಾರೆ.

ಮಧ್ಯಪ್ರಾಚ್ಯ ಉದ್ಯಮಿಗಳ ನೆಚ್ಚಿನ ಐರಿನಾ

8

ಆದರೆ Yub-Yum ಪ್ರದೇಶ ಹೆಚ್ಚಿನದಾಗಿ ಮಧ್ಯಪ್ರಾಚ್ಯ ಉದ್ಯಮಿಗಳ ಉದ್ದನೆಯ "ಐರಿನಾ" ಆಂಡ್ರಾಯ್ಡ್‌ ರೋಬೋಟ್‌ ಅನ್ನು ಹೊಂದಲಿದೆ ಎನ್ನಲಾಗಿದೆ.

ವರದಿ

9

ವರದಿ ಪ್ರಕಾರ ಲೈಂಗಿಕ ಚಟುವಟಿಕೆಯ ರೋಬೋಟ್‌ಗಳನ್ನು ಆಂಡ್ರಾಯ್ಡ್‌ ಬ್ಯಾಕ್ಟೀರಿಯಾ ನಿರೋಧಕ ಫೈಬರ್‌ನಿಂದ ನಿರ್ಮಿಸಲಿದ್ದು, ಬಳಕೆದಾರರಿಗೆ ಯಾವುದೇ ರೀತಿಯ ಲೈಂಗಿಕ ರೋಗ ಬರುವುದಿಲ್ಲ ಎಂಬುದನ್ನು ಖಚಿತಪಡಿಸಲಾಗಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗೂಗಲ್‌ನಿಂದ 'ಟಿಲ್ಟ್ ಬ್ರಸ್' ಸಾಫ್ಟ್‌ವೇರ್‌: ರಿಯಾಲಿಟಿ ಪೇಯಿಂಟ್!!

ಸಂಶೋಧಕರಿಂದ ವಾಸಿಸಲು ಯೋಗ್ಯವಾದ ಗ್ರಹ ಪತ್ತೆ: 'Kepler 62f'

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
The Prostitutes Of The Future Will Be Robots, According To This Study. Read more about this in kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more