ಸಾಫ್ಟ್‌ವೇರ್‌ನಂತೆ ಮೀನುಗಳು ಮನುಷ್ಯರ ಮುಖಗಳ ವ್ಯತ್ಯಾಸ ಗುರುತಿಸುತ್ತವೆ!

By Suneel
|

ಇದೇ ಮೊಟ್ಟ ಮೊದಲ ಬಾರಿಗೆ ಉಷ್ಣವಲಯದ ಮೀನು ತಳಿಗಳು ಮಾನವರ ಮುಖಗಳನ್ನು ಗುರುತಿಸಬಲ್ಲವು ಎಂಬುದನ್ನು ವಿಜ್ಞಾನಿಗಳ ತಂಡವೊಂದು ಅಧ್ಯಯನದಿಂದ ಹೇಳಿದೆ.

ಅಂದಹಾಗೆ ವಿಜ್ಞಾನಿಗಳು 'ಆರ್ಛರ್‌ಮೀನು' ಎಂಬ ಮೀನನ್ನು ಬಳಸಿಕೊಂಡು ಮೀನುಗಳಿಗೆ ಮಾನವನ ಮುಖಗಳನ್ನು ಗುರುತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ವಿಶೇಷ ಅಂದ್ರೆ ಮೀನುಗಳು ಇತರೆ ಪ್ರಾಣಿಗಳು ದೃಶ್ಯ ಗುರುತಿಸುವಿಕೆಗೆ ಬಳಸುವ ಮೆದುಳಿನ ನಿರ್ಣಾಯಕ ನಿಯೊಕಾರ್ಟೆಕ್ಸ್‌ ಭಾಗ ಹೊರತಾಗಿಯೂ ಹೆಚ್ಚು ನಿಖರವಾಗಿ ಮಾನವರ ಮುಖಗಳನ್ನು ಗುರುತಿಸುತ್ತವೆ ಎಂದು ಹೇಳಿದ್ದಾರೆ.

ನೀವು ಮುದ್ದಿನ ಮೀನುಗಳನ್ನು ಸಾಕಿದ್ದಲ್ಲಿ, ನಿಮ್ಮ ಪೆಟ್‌ ಮೀನು ನಿಮ್ಮನ್ನು ಎಷ್ಟು ಗುರುತಿಸುತ್ತದೆ ಎಂಬ ಕುತೂಹಲ ಮಾಹಿತಿಗಳನ್ನು ಈ ಅಧ್ಯಯನ ಕೆಲವು ಪ್ರಮುಖ ಅಂಶಗಳಿಂದ ತಿಳಿಯಿರಿ. ಮಾಹಿತಿಗಾಗಿ ಸ್ಲೈಡರ್‌ ಕ್ಲಿಕ್ಕಿಸಿ.

ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!

ಮೀನುಗಳು ಸಾಫ್ಟ್‌ವೇರ್‌ನಂತೆ ಮಾನವನ ಮುಖ ಗುರುತಿಸುತ್ತವೆ

ಮೀನುಗಳು ಸಾಫ್ಟ್‌ವೇರ್‌ನಂತೆ ಮಾನವನ ಮುಖ ಗುರುತಿಸುತ್ತವೆ

ಮೀನುಗಳು ಸಹ ನಿಖರವಾಗಿ ಮಾನವನ ಮುಖವನ್ನು ಗುರುತಿಸಬಲ್ಲವೇ ಎಂಬುದನ್ನು ತಿಳಿಯಲು ಆಕ್ಸ್ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದರು.

ವಿಜ್ಞಾನಿಗಳ ಉದ್ದೇಶ

ವಿಜ್ಞಾನಿಗಳ ಉದ್ದೇಶ

ಹಿಂದಿನ ಕಾಲದಿಂದಲೂ ಮಾನವರ ಮುಖಗಳನ್ನು ಕೆಲವು ಸಸ್ತನಿ ಮತ್ತು ಸಂಕೀರ್ಣ ಪ್ರಾಣಿಗಳು ವ್ಯತ್ಯಾಸ ಕಂಡುಹಿಡಿದು ಗುರುತಿಸಬಲ್ಲವು ಎಂದು ನಂಬಿದ್ದ ಅಂಶವನ್ನು ಆಧಾರವಾಗಿ ಇಟ್ಟುಕೊಂಡು ವಿಜ್ಞಾನಿಗಳು 'ಮೀನುಗಳು ಸಹ ಮನುಷ್ಯರ ಮುಖಗಳ ವ್ಯತ್ಯಾಸವನ್ನು ಗುರುತಿಸಿಬಲ್ಲವೇ' ಎಂಬುದನ್ನು ಪತ್ತೆಹಚ್ಚುವ ಉದ್ದೇಶ ಹೊಂದಿದ್ದರು.

 'ಆರ್ಛರ್‌ಮೀನು'

'ಆರ್ಛರ್‌ಮೀನು'

ಅಂದಹಾಗೆ 'ಆರ್ಛರ್‌ಮೀನು'ಗಳು ಆಸ್ಟ್ರೇಲಿಯ ಮತ್ತು ದಕ್ಷಿಣ ಏಷಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನೀರನ್ನು ಚಿಮ್ಮಿಸುವ ಸಾಮರ್ಥ್ಯವಿರುವ ಆರ್ಛರ್‌ಮೀನುಗಳು, ಕೀಟ ಭೇಟೆಗಾಗಿ ನೀರಿನ ಮಟ್ಟಕ್ಕಿಂತ ಮೇಲೆ ನೀರನ್ನು ಚಿಮ್ಮಿಸುವ ತಂತ್ರ ಬಳಸುತ್ತಿದ್ದವು. ಆದ್ದರಿಂದ ಇವುಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಲ್ಯಾಬ್‌ ಪರೀಕ್ಷೆ

ಲ್ಯಾಬ್‌ ಪರೀಕ್ಷೆ

ಅಂದಹಾಗೆ ಅಧ್ಯಯನಕ್ಕೆ ಒಳಪಡಿಸಿದ್ಧ 'ಆರ್ಛರ್‌ ಮೀನಿ'ಗೆ ಎರಡು ವಿಭಿನ್ನ ಮಾನವ ಮುಖಗಳನ್ನು ಪರಿಚಯಿಸಿ ಒಂದನ್ನು ನೀರನ್ನು ಚಿಮ್ಮಿಸುವ ಮೂಲಕ ಆಯ್ಕೆ ಮಾಡಲು ತರಬೇತಿ ನೀಡಲಾಗಿತ್ತು. ತರಬೇತಿ ಸಮಯದಲ್ಲಿ ವಿವಿಧ ವಸ್ತುಗಳನ್ನು ಅವುಗಳಿಗೆ ಪ್ರಸ್ತುತ ಪಡಿಸಲಾಗುತ್ತಿತ್ತು, ನಂತರ ಆಹಾರ ಪದಾರ್ಥಗಳನ್ನು ಅವುಗಳು ನಿಖರವಾಗಿ ಗುರುತಿಸುವ ಚಟುವಟಿಕೆಗೆ ನೀಡಲಾಗುತ್ತಿದ್ದು, ಇದರಿಂದ ಮೀನುಗಳು ಹಲವು ಮಾಹಿತಿಯನ್ನು ನಮಗೆ ನೀಡುತ್ತಿದ್ದವು ಎಂದು ಅಧ್ಯಯನದ ಪ್ರಧಾನ ಲೇಖಕ ಡಾ|| ಕೇಟ್‌ ನ್ಯೂಪೊರ್ಟ್ ಹೇಳಿದ್ದಾರೆ.

ವಿಜ್ಞಾನಿಗಳು ಆರ್ಛರ್‌ ಮೀನುಗಳನ್ನೇ ಉಪಯೋಗಿಸಿದ್ದು ಏಕೆ?

ವಿಜ್ಞಾನಿಗಳು ಆರ್ಛರ್‌ ಮೀನುಗಳನ್ನೇ ಉಪಯೋಗಿಸಿದ್ದು ಏಕೆ?

ಆರ್ಛರ್‌ ಮೀನುಗಳು ಇತರೆ ಮೀನುಗಳಿಗಿಂತ ನಿಖರವಾಗಿ ನೀರನ್ನು ಚಿಮ್ಮಿಸುವ ಮೂಲಕ ಆಯ್ಕೆಯನ್ನು ಸ್ವಷ್ಟಪಡಿಸುತ್ತಿದ್ದುವು. ಅಲ್ಲದೇ ಯಾವುದೇ ದ್ವಂದ್ವ ಆಯ್ಕೆ ಇರುತ್ತಿರಲಿಲ್ಲ.

ಮುಖಗಳನ್ನು ಗುರುತಿಸುವಿಕೆ ತರಬೇತಿ

ಮುಖಗಳನ್ನು ಗುರುತಿಸುವಿಕೆ ತರಬೇತಿ

ಕೆಲವು ಸಂದರ್ಭಗಳಲ್ಲಿ ಆರ್ಛರ್ ಮೀನುಗಳು ಕೆಲವೇ ದಿನಗಳಲ್ಲಿ ಮಾನವನನ್ನು ಗುರುತಿಸುತ್ತಿದ್ದವು, ಆದರೆ 60-90 ಪ್ರಯತ್ನಗಳು ಮಾತ್ರ ಮುಖಗಳನ್ನು ಗುರುತಿಸುವಿಕೆಗೆ ಬೇಕಿತ್ತು ಎಂದು ನ್ಯೂಪೋರ್ಟ್‌ ಹೇಳಿದ್ದಾರೆ.

ಅಧ್ಯಯನದ ಲೇಖಕರು

ಅಧ್ಯಯನದ ಲೇಖಕರು

ಅಂದಹಾಗೆ ಅಧ್ಯಯನದ 4 ಲೇಖಕರೇ ತಮ್ಮ ಸ್ಮಾರ್ಟ್‌ ಮುಖಗಳನ್ನು ಪ್ರದರ್ಶಿಸುವ ಮೂಲಕ ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಅವರು ಆರ್ಛರ್‌ ಮೀನುಗಳು ಇತರೆ ವಸ್ತುಗಳ ಗುರುತಿಸುವಿಕೆಯನ್ನು ಪರೀಕ್ಷೆ ನಡೆಸುತ್ತಾರೆ.

 ಮಾದರಿಗಳು

ಮಾದರಿಗಳು

ಮನುಷ್ಯರು ಇತರೆ ಜನರನ್ನು ಗುರುತಿಸಲು ಹಲವು ಡಿವೈಸ್‌ಗಳನ್ನು ಬಳಸುತ್ತಾರೆ ಆದರೆ ಆರ್ಛರ್‌ ಮೀನುಗಳು ಕೇವಲ ಮಾದರಿಗಳನ್ನು ನೋಡಿ ಮುಖಗಳನ್ನು ಗುರುತಿಸುತ್ತವೆ ಎಂದು ನ್ಯೂಪೋರ್ಟ್‌ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!

ಮನುಷ್ಯನ ಆರೋಗ್ಯಕ್ಕೆ ಕಂಟಕ ಇಯರ್‌ಫೋನ್‌ ಬಳಕೆಮನುಷ್ಯನ ಆರೋಗ್ಯಕ್ಕೆ ಕಂಟಕ ಇಯರ್‌ಫೋನ್‌ ಬಳಕೆ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Fish can recognise human faces like softwares, study finds. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X