ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!

By Suneel
|

ಹಲವು ಪುರುಷರು ಮಕ್ಕಳ ಭಾಗ್ಯ ಕೊರತೆಯಿಂದ ಆಗಾಗ ತಮ್ಮ ವೀರ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗುವುದುಂಟು. ಅಲ್ಲದೇ ಆಯುರ್ವೇದ ಚಿಕಿತ್ಸೆಗಳನ್ನು ಪಡೆಯುವುದುಂಟು. ಆದ್ರೆ ಟೆಕ್‌ ಜಗತ್ತಿನಲ್ಲಿರುವ ಜನರು ತಮ್ಮ ವೀರ್ಯದ ಆರೋಗ್ಯ ಮಟ್ಟವನ್ನು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ಹಲವು ಪುರುಷರಿಗೆ ತಿಳಿದಿಲ್ಲ ಅನಿಸುತ್ತೆ.

ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!

ಹೌದು, ಅಂದಹಾಗೆ ಹೊಸ ಸ್ಮಾರ್ಟ್‌ಫೋನ್‌ ಒಂದು ಪುರುಷರು ತಮ್ಮ ವೀರ್ಯದ ಆರೋಗ್ಯ ಪರೀಕ್ಷಿಸಿಕೊಳ್ಳಲು ಅನುಮತಿಸುವ ಟೆಕ್‌ ಆಧಾರದೊಂದಿಗೆ ಅಭಿವೃದ್ದಿಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಸಹಾಯದಿಂದ ಪುರುಷರು ಮನೆಯಲ್ಲೇ ವೀರ್ಯ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ಗೆ ಮನೆಯಲ್ಲೇ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ?

ಕಡಿಮೆ ಬೆಲೆಯ ಲೆನ್ಸ್‌ಗಳನ್ನು ಬಳಸಿಕೊಂಡು ಜಾಪನ್‌ನ ಡೊಕ್ಕ್ಯೋ ಮೆಡಿಕಲ್‌ ಯುನಿವರ್ಸಿಟಿಯ 'ಯೊಶಿಟೊಮೊ ಕೊಬೊರಿ' ಮತ್ತು ಚಿಕಾಗೋದ ಇಲ್ಲಿನೊಯಿಸ್ ಯುನಿವರ್ಸಿಟಿಯ ಸಹೋದ್ಯೋಗಿಗಳು 'ಸ್ಮಾರ್ಟ್‌ಫೋನ್‌ ಮೈಕ್ರೋಸ್ಕೋಪ್‌' ಅನ್ನು ತಯಾರಿಸಿದ್ದು, ಇದು ಪುರುಷರು ಮನೆಯಲ್ಲೇ ತಮ್ಮ ವೀರ್ಯದ ಆರೋಗ್ಯ ಗುಣಮಟ್ಟ ಪರೀಕ್ಷೆಗೆ ಸಹಾಯಕವಾಗುತ್ತದೆ. ಆದರೆ ಇದಕ್ಕೆ ಒಂದು ಆಪ್‌ನ ಸಹಾಯ ಬೇಕಿದ್ದು, ಅಪ್‌ ಅನ್ನು ಅಭಿವೃದ್ದಿಪಡಿಸಲಾಗುತ್ತಿದೆಯಂತೆ.

ಸ್ಮಾರ್ಟ್‌ಫೋನ್‌ನಿಂದ ಪುರುಷರ ವೀರ್ಯ ಆರೋಗ್ಯ ಪರೀಕ್ಷಿಸಬಹುದು!

ಸ್ಮಾರ್ಟ್‌ಫೋನ್‌ನಿಂದ ಕ್ಲಿಪ್‌ ಮಾಡಿದಾದ ಲೆನ್ಸ್‌ಗಳು ಇಮೇಜ್ ಅನ್ನು 555 ಪಟ್ಟು ದೊಡ್ಡದಾಗಿ ಮಾಡಿ ವೀರ್ಯಾಣು ಜೀವಕೋಶಗಳನ್ನು ಪರಿಪೂರ್ಣವಾಗಿ ಪರಿಶೀಲನೆ ಮಾಡಲು ಸಹಾಯವಾಗುತ್ತದೆ ಎನ್ನಲಾಗಿದೆ. ಜಪಾನ್‌ನಲ್ಲಿ ಈಗಾಗಲೇ ಸ್ಮಾರ್ಟ್‌ಫೋನ್‌ ಮೈಕ್ರೋಸ್ಕೋಪ್‌ ವಾಣಿಜ್ಯವಾಗಿ ದೊರೆಯುತ್ತಿದ್ದು, ಶೀಘ್ರದಲ್ಲಿ ಇತರೆ ದೇಶಗಳಲ್ಲಿ ಖರೀದಿಸಲು ಲಭ್ಯವಾಗುವ ಭರವಸೆ ನೀಡಿದ್ದಾರೆ.

5 ಅಡಿ ಎತ್ತರದಿಂದ ಬಿದ್ದರೂ ಫೋನ್‌ ಸುರಕ್ಷೆ ಗೊಳಿಸುವ 'ಗೊರಿಲ್ಲಾ ಗ್ಲಾಸ್‌ 5'

Best Mobiles in India

English summary
Now smartphone can help men test sperm health at home. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X