ಕುಸಿದುಬಿತ್ತು ಗೂಗಲ್‌ನ ಇಂಟರ್‌ನೆಟ್ ಬಲೂನ್!!..ಭವಿಷ್ಯದ "ಪ್ರಾಜೆಕ್ಟ್ ಲೂನ್' ಕಥೆಯೇನು?

ಪ್ರಾಜೆಕ್ಟ್ ಲೂನ್" ಅಡಿಯಲ್ಲಿ ಗೂಗಲ್‌ನಿಂದ ಪ್ರಾರಂಭಿಸಲಾದ ಬಲೂನ್ ಒಂದು ಕೀನ್ಯಾ ಫಾರ್ಮ್‌ನಲ್ಲಿ ಕುಸಿದುಬಿದ್ದಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.!!

|

ಭೂಮಿಯ ಪ್ರತಿಯೊಂದು ಸ್ಥಳದಲ್ಲಿಯೂ ಹೈ-ಸ್ಪೀಡ್ ಇಂಟರ್‌ನೆಟ್ ಅನ್ನು ಒದಗಿಸುವ ಗೂಗಲ್‌ನ ಭವಿಷ್ಯದ "ಪ್ರಾಜೆಕ್ಟ್ ಲೂನ್' ಯೋಜನೆಗೆ ಹಲವು ಅಡ್ಡಿಗಳು ಎದುರಾಗುತ್ತಿವೆ.! "ಪ್ರಾಜೆಕ್ಟ್ ಲೂನ್" ಅಡಿಯಲ್ಲಿ ಗೂಗಲ್‌ನಿಂದ ಪ್ರಾರಂಭಿಸಲಾದ ಬಲೂನ್ ಒಂದು ಕೀನ್ಯಾ ಫಾರ್ಮ್‌ನಲ್ಲಿ ಕುಸಿದುಬಿದ್ದಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.!!

ಕಳೆದ ಶುಕ್ರವಾರ ರಾತ್ರಿ ಕೀನ್ಯಾದ ಮೆರು ನಾಂಬಿರೊ ಎಂಬ ಪ್ರದೇಶದಲ್ಲಿ ಬಲೂನ್ ನೆಲಕ್ಕಪ್ಪಳಿಸಿದ್ದು, ಗೂಗಲ್‌ನ "ಪ್ರಾಜೆಕ್ಟ್ ಲೂನ್' ಯೋಜನೆಗೆ ಬಹುದೊಡ್ಡ ಹೊಡೆತ ಇದು ಎನ್ನಲಾಗಿದೆ.!! ಹಾಗಾದರೆ, ಏನಿದು "ಪ್ರಾಜೆಕ್ಟ್ ಲೂನ್' ಯೋಜನೆ? ಗೂಗಲ್‌ಗೆ ಆಗಿರುವ ಹೊಸ ತೊಂದರೆ ಏನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಪ್ರಾಜೆಕ್ಟ್ ಲೂನ್?

ಏನಿದು ಪ್ರಾಜೆಕ್ಟ್ ಲೂನ್?

ಭೂಮಿಯಿಂದ ಸುಮಾರು 20 ಕಿ.ಮೀ ಎತ್ತರದಲ್ಲಿ ವಾಯುಮಂಡಲಕ್ಕೆ ಹಾರಿ ಬಿಡುವ ಬಲೂನ್‌ಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಉಪಕರಣಗಳನ್ನು ಇಡಲಾಗಿರುತ್ತದೆ. ಗೂಗಲ್‌ ಎಕ್ಸ್‌ನ ಸಂಶೋಧನಾ ಮತ್ತು ಅಭಿವೃದ್ಧಿಯ ಯೋಜನೆಯಾದ ಇದು ಗ್ರಾಮೀಣ ಮತ್ತು ಕುಗ್ರಾಮಗಳಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ.

4ಜಿ ಇಂಟರ್‌ನೆಟ್‌ ಸೌಲಭ್ಯ

4ಜಿ ಇಂಟರ್‌ನೆಟ್‌ ಸೌಲಭ್ಯ

ಆಕಾಶಕ್ಕೆ ಹಾರಿಬಿಡುವ ಬಲೂನ್‌ ಗಳಿಂದ ಸುಮಾರು 80 ಕಿ.ಮೀ ಸುತ್ತಳತೆ ವರೆಗೆ 4ಜಿ ಇಂಟರ್‌ನೆಟ್‌ ಸೌಲಭ್ಯ ಪಡೆಯಬಹುದಾಗಿದೆ. ಈ ಬಲೂನ್‌ಗಳನ್ನು ಪಾಲಿಥಿನ್ ಪ್ಲಾಸ್ಟಿಕ್‌ನಿಂದ ಮಾಡಲಾಗಿರುತ್ತದೆ. 15 ಮೀಟರ್ ಅಗಲ ಮತ್ತು 12 ಮೀಟರ್‌ ಎತ್ತರದ ಇವುಗಳು 100 ದಿನಗಳ ಕಾಲ ಕಾರ್ಯನಿರ್ವಹಿಸಿದ ನಂತರ ಭೂಮಿಗೆ ಬೀಳಿಸಲಾಗುತ್ತದೆ.

Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?
ನೆಲಕ್ಕೆ ಬಿತ್ತು ಬಲೂನ್!!

ನೆಲಕ್ಕೆ ಬಿತ್ತು ಬಲೂನ್!!

ಗೂಗಲ್‌ನ ಕನಸಿನ ಯೋಜನೆ ಪ್ರಾಜೆಕ್ಟ್ ಲೂನ್' ಮೂಲಕ 2017 ರಲ್ಲಿ ಗೂಗಲ್‌-ಸ್ಪೀಡ್ ಇಂಟರ್ನೆಟ್ ಪರೀಕ್ಷಿಸಲು ನಿಯೋಜಿಸಲಾಗಿದ್ದ 10 ಬಲೂನ್ ಗುಂಪುಗಳಲ್ಲಿ ಒಂದು ಬಲೂನ್ ನೆಲಕ್ಕಪ್ಪಳಿಸಿದೆ. ಉಡಾವಣೆಯಾಗಿದ್ದ ಬಲೂನ್ 100 ದಿನಗಳ ಒಳಗಾಗಿಯೇ ನೆಲಸೇರಿದ್ದು ಗೂಗಲ್ ಯೋಜನೆಗೆ ಹೊಡೆತಬಿದ್ದಿದೆ.!!

ಬಿದ್ದದ್ದು ಮೊದಲೇನಲ್ಲ.!!

ಬಿದ್ದದ್ದು ಮೊದಲೇನಲ್ಲ.!!

2014ರ ಮೇ ತಿಂಗಳಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಗೂಗಲ್‌ನ ಬಲೂನ್‌ ವಿದ್ಯುತ್ ಮಾರ್ಗದ ಮೇಲೆ ಬಿದ್ದಿತ್ತು. ದಕ್ಷಿಣ ಆಫ್ರಿಕಾದ ಕರೋ ಮರು ಭೂಮಿಯಲ್ಲಿ ಬಲೂನ್‌ ಕೆಳಗೆ ಬಿದ್ದಿತ್ತು. ಆದರ ನಂತರ ಮತ್ತೆ ಇದೀಗ ಬಲೂನ್ ಒಂದು ನೆಲಕ್ಕಪ್ಪಳಿಸಿದೆ. ಇಂತಹ ಘಟನೆಗಳು ಗೂಗಲ್‌ನ ಹೊಸ ಯೋಜನೆಗೆ ಬಹದೊಡ್ಡ ಹೊಡೆತ ನೀಡುತ್ತಿವೆ.!!

ಗೂಗಲ್‌ಗೆ ಈಗಲೂ ಹುರುಪಿದೆ.!!

ಗೂಗಲ್‌ಗೆ ಈಗಲೂ ಹುರುಪಿದೆ.!!

100 ದಿನ ಕಾರ್ಯನಿರ್ವಹಿಸಿದ ನಂತರ ಬಲೂನ್‌ಗಳ ಒಳಗಿರುವ ಅನಿಲ (ಗ್ಯಾಸ್‌) ತೆಗೆದು ಯಾವುದೇ ಅಪಾಯ ವಾಗದಂತೆ ಭೂಮಿಗೆ ಬೀಳಿಸಲಾಗುತ್ತದೆ. ಹಲವಾರು ಅವಘಡಗಳು ಸಂಭವಿಸಿದರೂ ತಂತ್ರಜ್ಞಾನದ ಅಭಿವೃದ್ದಿಯಿಂದ ವಿಶ್ವದ ಎಲ್ಲೆಡೆ ಇಂಟರ್‌ನೆಟ್ ನೀಡಲು ಸಾಧ್ಯವಾಗಲಿದೆ ಎಂದು ಗೂಗಲ್ ಹೇಳಿದೆ.!!

ನಾಳೆಯಿಂದ ಫ್ಲಿಪ್‌ಕಾರ್ಟ್ 'ಮೊಬೈಲ್ಸ್ ಬೊನಾನ್ಜ ಸೇಲ್'!..ಎಲ್ಲರೂ ಆನ್‌ಲೈನ್‌ನಲ್ಲಿ ಕ್ಯೂ ನಿಲ್ಲೋದು ಖಂಡಿತ!!ನಾಳೆಯಿಂದ ಫ್ಲಿಪ್‌ಕಾರ್ಟ್ 'ಮೊಬೈಲ್ಸ್ ಬೊನಾನ್ಜ ಸೇಲ್'!..ಎಲ್ಲರೂ ಆನ್‌ಲೈನ್‌ನಲ್ಲಿ ಕ್ಯೂ ನಿಲ್ಲೋದು ಖಂಡಿತ!!

Best Mobiles in India

English summary
Balloon was launched to provide high-speed Internet. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X